Site icon Vistara News

Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ

Deepawali eco friendly crackers

ಶೀಲಾ ಸಿ. ಶೆಟ್ಟಿ, ಬೆಂಗಳೂರು


ಪಟಾಕಿ ಪ್ರಿಯರಿಗೆಂದೇ ಇದೀಗ ಇಕೋ ಫ್ರೆಂಡ್ಲಿ ಪ್ಲಾಂಟಬಲ್ ಪಟಾಕಿಗಳು ಎಂಟ್ರಿ ನೀಡಿವೆ. ಹೌದು. ಇನ್ಮುಂದೆ ಪಟಾಕಿ ಹೊಡೆದು ಪರಿಸರಕ್ಕೆ ಧಕ್ಕೆ ಮಾಡಿದೆವಲ್ಲ! ಪರಿಸರ ಹಾಳು ಮಾಡಿದೆವಲ್ಲ ಎಂದು ಪರಿತಪಿಸಬೇಕಾಗಿಲ್ಲ! ಬದಲಿಗೆ ಸಂತಸಪಡಬಹುದು. ಪರಿಸರಕ್ಕೆ ಪೂರಕವಾಗುವಂತಹ ಇಕೋ ಫ್ರೆಂಡ್ಲಿ ಪಟಾಕಿಗಳು ದೀಪಾವಳಿಗೆ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.


ಏನಿದು ಪರಿಸರಸ್ನೇಹಿ ಸೀಡ್ ಪಟಾಕಿ
ಪ್ಲಾಂಟಬಲ್ ಸೀಡ್ ಪಟಾಕಿಗಳು ಪರಿಸರಸ್ನೇಹಿಯಾಗಿದ್ದು, ಅವುಗಳು ಪಟ್ ಅಂದಾಗ ಅದರಲ್ಲಿ ತುಂಬಲಾಗಿದ್ದ ಮಿಶ್ರಣದಲ್ಲಿ ಅನೇಕ ಬಗೆಯ ಗಿಡಗಳ ಬೀಜಗಳು ಚದುರುತ್ತವೆ. ಇವು ಕಸದಲ್ಲಿ ಸೇರಿದರೂ ಕೂಡ ಮಣ್ಣಿನ ಸಂಪರ್ಕ ಪಡೆದ ತಕ್ಷಣ ಮೊಳಕೆಯೊಡೆದು ಸಸಿಗಳಾಗುತ್ತವೆ. ಪಟಾಕಿಯ ಒಳಗೆ ತುಂಬಲಾಗುವ ಸ್ಟಫ್ನಲ್ಲಿ ಕೆಮಿಕಲ್‌ಗಳ ಬದಲು ಅರ್ಗಾನಿಕ್ ಸಾಮಗ್ರಿಗಳನ್ನು ಬಳಸಲಾಗಿರುತ್ತದೆ. ಹಾಗಾಗಿ ಪಟಾಕಿ ಹೊಡೆದ ನಂತರ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎನ್ನುತ್ತಾರೆ ಸೀಡ್ ಪೇಪರ್ ಇಂಡಿಯಾ ಕಂಪನಿಯ ಸಂಸ್ಥಾಪಕರು.


ಈ ಪಟಾಕಿ ಪರಿಸರಸ್ನೇಹಿ ಹೇಗೆ?
ಪರಿಸರಸ್ನೇಹಿ ಪ್ಲಾಂಟಬಲ್ ಪಟಾಕಿಗಳಿಂದ ಮಾಲಿನ್ಯ ಉಂಟಾಗುವ ಬದಲು ಹೊಸ ಸಸಿ ಬೆಳೆಯಲು ಆಸ್ಪದವಾಗುತ್ತದೆ. ಒಂದಿಷ್ಟು ದಿನ ಕಳೆದ ನಂತರ ಹೊಡೆದ ಪಟಾಕಿಯಲ್ಲೆ ಹೊಸ ಸಸಿಯೊಂದು ಬೆಳೆಯುತ್ತದೆ. ಅಚ್ಚರಿಯಾಗುತ್ತಿದೆಯಾ! ಅಚ್ಚರಿಯಾದರೂ ಇದು ಸತ್ಯ. ಹಾಗೆನ್ನುತ್ತಾರೆ ಈ ಕಾನ್ಸೆಪ್ಟನ್ನು ಯಶಸ್ವಿಗೊಳಿಸಿರುವ ಸೀಡ್ ಪೇಪರ್ ಇಂಡಿಯಾ ಸಂಸ್ಥೆಯ ರೋಷನ್. ಅವರು ಹೇಳುವಂತೆ, ಈ ಪಟಾಕಿಗಳು ಪರಿಸರಸ್ನೇಹಿ ಮಾತ್ರವಲ್ಲ, ಮಕ್ಕಳು ಸುರಕ್ಷತೆಯಿಂದ ಬಳಸಬಹುದಾದ ಪಟಾಕಿಗಳು.

ಉದಾಹರಣೆಗೆ ಲಕ್ಷ್ಮಿ ಬಾಂಬ್, ರಾಕೆಟ್, ಭೂಮಿ ಚಕ್ರ, ಹೂವಿನ ಕುಂಡ ಸೇರಿದಂತೆ ನಾನಾ ಪಟಾಕಿಗಳನ್ನು ಪ್ಲಾಂಟಬಲ್ ಸೀಡ್‌ವನ್ನೊಳಗೊಂಡ ಇಕೋ ಫ್ರೆಂಡ್ಲಿ ಪಟಾಕಿಗಳನ್ನಾಗಿ ಪರಿವರ್ತಿಸಲಾಗಿದೆ. ಇವನ್ನು ಸಿಡಿಸುವುದರಿಂದ ಮುಂದೆ ಪಶ್ಶ್ಚಾತ್ತಾಪವೂ ಆಗದು. ಬೇಸರವೂ ಮೂಡದು. ಬದಲಿಗೆ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ದೀಪಾವಳಿಯ ಸಂತಸವು ಇಮ್ಮಡಿಯಾಗುತ್ತದೆ ಎನ್ನುತ್ತಾರೆ ಅವರು. ಅವರ ಪ್ರಕಾರ, ಸೀಡ್ ಇಂಡಿಯಾ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಈ ಕಾನ್ಸೆಪ್ಟ್ ಜನರ ಮುಂದೆ ತಂದಿದೆ. ಪರಿಸರ ಕಾಪಾಡುವುದರೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಯನ್ನು ಬಿಡದಂತೆ ಆಚರಿಸುವುದು ಉದ್ದೇಶ ಎನ್ನುತ್ತಾರೆ ಅವರು.


ಆನ್‌ಲೈನ್‌ನಲ್ಲಿ ಪಟಾಕಿ ಲಭ್ಯ
ಆಫ್‌ಲೈನ್‌ ಹಾಗೂ ಆನ್‌ಲೈನ್‌ನಲ್ಲಿ ಈಗಾಗಲೇ ಇಂತಹ ಸಾಕಷ್ಟು ಇಕೋ ಫ್ರೆಂಡ್ಲಿ ಪಟಾಕಿಗಳು ಲಭ್ಯ. ಸೀಡ್ ಇಂಡಿಯಾ ಮಾತ್ರವಲ್ಲ, ಬಹಳಷ್ಟು ಸಂಸ್ಥೆಗಳು ಈಗಾಗಲೇ ಪರಿಸರಸ್ನೇಹಿ ಪಟಾಕಿಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಪಟಾಕಿ ಪ್ರೇಮಿಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Deepawali 2022 | ಪಟಾಕಿ ಹೊಡೆಯಲು ‌ದಿನಕ್ಕೆ 2 ಗಂಟೆ ಟೈಂ ಫಿಕ್ಸ್‌; ಗ್ರೀನ್‌ ಪಟಾಕಿಗಷ್ಟೇ ಗ್ರೀನ್‌ ಸಿಗ್ನಲ್!

Exit mobile version