ಬಾಲಿವುಡ್ ಸೆಲೆಬ್ರಿಟಿಗಳು (Bollywood Actress) ನಲವತ್ತು ದಾಟಿದರೂ ಅದ್ಹೇಗೆ ಬಳುಕುವ ಬಳ್ಳಿಗಳಂತಿರುತ್ತಾರೆ ಎಂಬುದು ಎಲ್ಲ ಸಾಮಾನ್ಯ ಮಹಿಳೆಯರಿಗೂ, ಪುರುಷರಿಗೂ ಇರುವ ಏಕೈಕ ಪ್ರಶ್ನೆ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ನಲುವತ್ತು ದಾಟಿದ ನಟೀಮಣಿಯರ ಮಿರಮಿರ ಮಿಂಚುವ ಚರ್ಮ, ತೆಳ್ಳನೆಯ ಬಳುಕುವ ಶರೀರ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ, ನಲುವತ್ತಾಗುವ ಸಂದರ್ಭ ಎಲ್ಲ ಮಧ್ಯಮ ವರ್ಗದ ಸಾಮಾನ್ಯರೂ ಒಂದು ರೌಂಡು ಹೊಟ್ಟೆ ಹೆಚ್ಚಿಸಿಕೊಂಡು ತೂಕ ಇಳಿಸಿವುದು ಹೇಗೆ ಎಂದು ಗೂಗಲ್ ಜಾಲಾಡಲು ಶುರು ಮಾಡಿರುತ್ತಾರೆ. ಹಾಗಾದರೆ ಬನ್ನಿ, ಬಾಲಿವುವ್ ಬಳುಕುವ ಬಳ್ಳಿಗಳ ಫಿಟ್‌ನೆಸ್ (Bollywood Actress Fitness) ಹಿಂದಿರುವ ಮೂಲಮಂತ್ರ ಏನು ಎಂಬುದನ್ನು ನೋಡೋಣ.
1. ಶಿಲ್ಪಾ ಶೆಟ್ಟಿ: ಬಾಲಿವುಡ್ ನಟಿಯಾಗಿ ಮಿಂಚಿದ್ದಕ್ಕಿಂತಲೂ ಹೆಚ್ಚು ತನ್ನ ಫಿಟ್‌ನೆಸ್ ಹಾಗೂ ಯೋಗದ ಮೂಲಕ ಸಂಚಲನ ಸೃಷ್ಟಿಸಿದಾಕೆ ಶಿಲ್ಪಾ ಶೆಟ್ಟಿ. ಶಿಲ್ಪಾ ಶಿಟ್ಟಿಯ ಫಿಟ್ ದೇಹದ ಮೂಲ ಮಂತ್ರ ಆಕೆ ಹೇಳುವಂತೆ ನಿತ್ಯದ ಯೋಗಾಭ್ಯಾಸ. ೪೭ರ ಹರೆಯದ ಶಿಲ್ಪಾ ಶೆಟ್ಟಿಯ ಕೈಯಲ್ಲಿ ಈಗಲೂ ಕೈತುಂಬಾ ಪ್ರಾಜೆಕ್ಟುಗಳಿವೆ. ನಿತ್ಯವೂ ಜಿಮ್ ಹಾಗೂ ಯೋಗವನ್ನು ತಪ್ಪಿಸದ ಶಿಲ್ಪಾ ಶೆಟ್ಟಿ ಭೋಜನಪ್ರಿಯೆಯಾದರೂ ಆರೋಗ್ಯಕರ ಆಹಾರದ ಮೂಲಕವೂ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಾರಂತೆ.
2. ಮಲೈಕಾ ಅರೋರಾ: ಬಾಲಿವುಡ್ ತಾರೆಯರ ಪೈಕಿ ತನ್ನ ಫಿಟ್ ಅಂಗಸೌಷ್ಠವದ ಮೂಲಕ ನಿತ್ಯವೂ ಸುದ್ದಿಯಲ್ಲಿರುವ ಮಂದಿಯ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಹೆಸರುಗಳ ಪೈಕಿ ಮಲೈಕಾ ಅರೋರಾ ಕೂಡಾ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಜಿಮ್ ದಿರಿಸುಗಳಲ್ಲಿಯೇ ಸದಾ ಹವಾ ಸೃಷ್ಟಿಸುವಾಕೆ. ೪೯ ವರ್ಷದ ಮಲೈಕಾ ನಿತ್ಯವೂ ಯೋಗ, ಕಾರ್ಡಿಯೋ, ವೈಟ್ ಲಿಫ್ಟಿಂಗ್, ಪೈಲೇಟ್ಸ್ ಮತ್ತಿತರ ಹಲವು ವ್ಯಾಯಾಮಗಳನ್ನು ಮಾಡುತ್ತಾರಂತೆ. ಆರೋಗ್ಯಕರ ಆಹಾರ ಸೇವನೆಯೂ ಕೂಡಾ ಮಲೈಕಾ ಮೂಲಮಂತ್ರ.
3. ಕರೀನಾ ಕಪೂರ್ ಖಾನ್: ಒಂದು ಕಾಲದಲ್ಲಿ ಸೈಜ್ ಝೀರೋ ಮೂಲಕ ಸುದ್ದಿ ಮಾಡಿದ್ದ ಕರೀನಾ ಕಪೂರ್ ಖಾನ್ ಈಗಲೂ 42ನೇ ವಯಸ್ಸಿನಲ್ಲೂ ಫಿಟ್ ದೇಹದಿಂದಾಗಿಯೂ ಪ್ರಸಿದ್ಧರು. ನಿತ್ಯವೂ ಫಿಟ್‌ನೆಸ್‌ಗಾಗಿ ಸ್ವಲ್ಪ ಕಾಲ ತೆಗೆದಿಡುವ ಕರೀನಾ, ಕಿಕ್ ಬಾಕ್ಸಿಂಗ್ ಪ್ರಿಯೆ. ಇದಲ್ಲದೆ, ಯೋಗ, ಪೈಲೇಟ್ಸ್ ಇತ್ಯಾದಿಗಳನ್ನೂ ಮಾಡುತ್ತಾರಂತೆ.
4. ಸುಶ್ಮಿತಾ ಸೇನ್: 47ರ ಹರೆಯದ ಸುಶ್ಮಿತಾ ಸೇನ್ ಸದಾ ಫಿಟ್ ಆಗಿರುವ ಮತ್ತೊಬ್ಬ ತಾರೆ. ನಿತ್ಯವೂ ಏರೋಬಿಕ್ಸ್, ಪೈಲೇಟ್ಸ್, ಯೋಗ ಇತ್ಯಾದಿಗಳ ಅಭ್ಯಾಸ ನಡೆಸುವ ಸೇನ್ ನಿಗದಿತ ಡಯಟ್ ಅನ್ನು ಚಾಚೂ ತಪ್ಪದೆ ಪಾಲಿಸುತ್ತಾರಂತೆ. ಪೋಷಕಾಂಶಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಇಚ್ಛಿಸದ ಸೇನ್, ಸಂಪೂರ್ಣ ಆಹಾರ ದೇಹಕ್ಕೆ ಸಿಗಬೇಕು ಎಂಬುದರಲ್ಲಿ ನಂಬಿಕೆ ಇಟ್ಟವರಂತೆ.
ಇದನ್ನೂ ಓದಿ: DGP Karnataka: ಪೊಲೀಸರ ಬೊಜ್ಜು ಕರಗಿಸಲು ಡಿಜಿಪಿ ಖಡಕ್ ಕ್ಲಾಸ್; ಫಿಟ್ನೆಸ್ ಮಂತ್ರ ಜಪಿಸಿದ ಅಲೋಕ್ ಮೋಹನ್
5. ಸನ್ನಿ ಲಿಯೋನ್: ಸನ್ನಿ ಲಿಯೋನ್ ಆರೋಗ್ಯಕರ ಆಹಾರದ ಮೇಲೆ ನಂಬಿಕೆ ಇಟ್ಟವರು. ಬೆಳಗಿನ ಉಪಹಾರ ಚೆನ್ನಾಗಿ ಮಾಡುವ ಸನ್ನಿ ರಾತ್ರಿ ಹಾಗೂ ಮಧ್ಯಾಹ್ನದೂಟಕ್ಕೆ ವೇಗನ್ ಆಹಾರಗಳನ್ನೇ ತಿನ್ನುತ್ತಾರಂತೆ. ೪೨ರ ಹರೆಯದ ಸನ್ನಿ ಏರಿಯಲ್ ಯೋಗ, ಈಜು, ಓಡುವುದು ಮತ್ತಿತರ ಬಗೆಬಗೆಯ ವ್ಯಾವಾಮಗಳನ್ನು ಮಾಡುತ್ತಾರಂತೆ.
6. ನರ್ಗಿಸ್ ಫಕ್ರಿ: 43ರ ಹರೆಯದ ನರ್ಗಿಸ್ ಫಕ್ರಿ 3೦ರ ಯುವತಿಯಂತೆ ಕಾಣುವದರ ಹಿಂದೆ ಆಕೆಯ ನಿರಂತರ ಶ್ರಮವಿದೆ. ನಿತ್ಯವೂ ಜಿಮ್, ಯೋಗ, ಎಂದು ಒಂದಷ್ಟು ಗಂಟೆಗಳನ್ನು ಈಗೆ ವ್ಯಾಯಾಮಕ್ಕೆ ಮೀಸಲಿಟ್ಟಿದ್ದಾರೆ. ವೈಟ್ ಲಿಫ್ಟಿಂಗ್ ಹಾಗೂ ಓಡುವುದು ಈಕೆಯ ಇಷ್ಟದ ವ್ಯಾಯಾಮಗಳು. ಬಾಕ್ಸಿಂಗ್ ಕೂಡಾ ಈಕೆಗೆ ಇಷ್ಟವಂತೆ. ಈಕೆ ಸದಾ ಕಡಿಮೆ ಕ್ಯಾಲರಿಯ ಡಯೆಟ್ ಪಾಲಿಸುತ್ತಿದ್ದು, ಕೆಲವೊಮ್ಮೆ ಇಷ್ಟದ ಆಹಾರಕ್ಕಾಗಿ ಚೀಟ್ ಮೀಲ್ ಡೇ ಕೂಡಾ ಮಾಡುತ್ತಾರಂತೆ!