ನಾವು ನಮ್ಮ ನಿತ್ಯದ ಕೆಲಸಗಳನ್ನು ಸರಾಗವಾಗಿ ಮಾಡಲು ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆದರೆ, ಬೇಸಗೆ ಬಂತೆಂದರೆ ಸಾಕು ಬಹಳ ಮಂದಿಗೆ, ಶಕ್ತಿ ಕುಂದುತ್ತದೆ. ತಲೆಸುತ್ತು, ನಿಃಶಕ್ತಿ ಸಾಮಾನ್ಯ. ಬಿಸಿಲಿನ ಝಳವೂ ಇದಕ್ಕೆ ಕಾರಣವೂ ಆಗಿರುವುದು ಹೌದಾದರೂ, ಬೇಸಿಗೆಯಲ್ಲಿ ದೇಹದ ಕಾರ್ಯ ನಿರ್ವಹಣೆ ಎಲ್ಲ ಕಾಲದಂತೆ ಇರುವುದಿಲ್ಲ. ದೇಹದ ಈ ಪರಿಸ್ಥಿತಿಯನ್ನು ನಾವು ಅರಿತುಕೊಂಡು, ಆರೋಗ್ಯಕರ ಆಹಾರ ಇಂತಹ ಸಮಯದಲ್ಲಿ ಅತ್ಯಂತ ಅಗತ್ಯ. ಮುಖ್ಯವಾಗಿ ದೇಹಕ್ಕೆ ಶಕ್ತಿಯನ್ನು, ಚೈತನ್ಯವನ್ನು ನೀಡುವ ಆಹಾರ ಪೂರೈಕೆ ಮಾಡುವುದು ನಮ್ಮ ಅಗತ್ಯ. ನಮ್ಮ ದೇಹಕ್ಕೆ ಬೇಕಾದ ಶಕ್ತಿವರ್ಧಕ ಆಹಾರಗಳ ವಿವರ ಇಲ್ಲಿದೆ.
೧. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್, ನಾರಿನಂಶ, ಪೊಟಾಶಿಯಂಗಳಿಂದ ಶ್ರೀಮಂತವಾಗಿದೆ. ಇದರಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶ ಗ್ಲುಕೋಸ್ ಹಾಗೂ ಫ್ರಕ್ಟೋಸ್ ಕೂಡಾ ಇದೆ. ಹಾಗಾಗಿ ಗಿಇದನ್ನು ದೇಹ ಬೇಗ ಹೀರಿಕೊಳ್ಳುವುದರಿಂದ ಇದನ್ನು ಬೇಗನೆ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ದೇಹಕ್ಕೆ ಸಹಾಯವಾಗುತ್ತದೆ. ಇದರ ಜೊತೆಗೆ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ೬, ಇರುವುದರಿಂದ ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
೨. ಬೀಜಗಳು: ಬೀಜಗಳು ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬಿನ ಆಗರ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ಸಮತೋಲನಗೊಳಿಸುತ್ತದೆ. ಜೊತೆಗೆ ಥಟ್ಟನೆ ಶಕ್ತಿಯನ್ನು ನೀಡುತ್ತದೆ. ಬೀಜಗಳಲ್ಲಿ ಕಬ್ಬಿಣಾಂಶ, ವಿಟಮಿನ್ ಇ ಇದ್ದು ಇವು ರೋಗ ನಿರೋಧಕಶಕ್ತಿಯನ್ನೂ ಹೆಚ್ಚಿಸುತ್ತವೆ.
೩. ಹರ್ಬಲ್ ಚಹಾ: ಗ್ರೀನ್ ಟೀ, ಶುಂಠಿ ಟೀ, ಕ್ಯಾಮೋಮೈಲ್ ಟೀ ಮತ್ತಿತರ ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ಚಹಾಗಳು ಶಕ್ತಿವರ್ಧಕಗಳು. ಇವು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಯನ್ನು ನೀಡುತ್ತವೆ. ಹರ್ಬಲ್ ಚಹಾದಲ್ಲಿ ನಮ್ಮನ್ನು ರಿಲ್ಯಾಕ್ಸ್ ಮಾಡುವ ಗುಣಗಳಿದ್ದು, ಇವುಗಳು ನಮ್ಮ ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.
೪. ಬೆರ್ರಿ ಹಣ್ಣುಗಳು: ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಸ್‌ಬೆರ್ರಿ ಮತ್ತಿತರ ಬೆರ್ರಿ ಹಣ್ಣುಗಳಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ದೇಹದ ಉರಿಯೂತವನ್ನು ಕಡಿಮೆ ಮಾಡಿ, ಒತ್ತಡವನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕ ಸಕ್ಕರೆಯ ಅಂಶವಿದ್ದು, ನಾರಿನಂಶವೂ ಹೇರಳವಾಗಿದೆ. ವಿಟಮಿನ್ ಸಿ ದೇಹಕ್ಕೆ ತತ್‌ಕ್ಷಣಕ್ಕೆ ಬೇಕಾದ ಶಕ್ತಿಯನ್ನು ನೀಡಿ, ತಲೆ ಸುತ್ತುವುದು ಹಾಗೂ ನಿಶಃಕ್ತಿಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!
೫. ಧಾನ್ಯಗಳು: ನಿತ್ಯವೂ ಧಾನ್ಯಗಳ ಬಳಕೆ ಚೈತನ್ಯದಾಯಕ. ಕೆಂಪಕ್ಕಿಯೂ ಸೇರಿದಂತೆ ಇಡಿ ಧಾನ್ಯಗಳು, ಓಟ್ಸ್ ಇತ್ಯಾದಿಗಳ ಬಳಕೆ ದೇಹಕ್ಕೆ ನಾರಿನಂಶ, ವಿಟಮಿನ್ ಬಿ ಹಾಗೂ ಕಬ್ಬಿಣಾಂಶವನ್ನು ನೀಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನೂ ಸಮತೋಲನದಲ್ಲಿರಿಸುವುದಲ್ಲದೆ, ದೇಹಕ್ಕೆ ಪೂರ್ಣಪ್ರಮಾಣದ ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.
೬. ಸೊಪ್ಪು ತರಕಾರಿ: ಹಸಿರು ಸೊಪ್ಪು ತರಕಾರಿಗಳಲ್ಲಿ ಹೇರಳವಾಗಿ ಕಬ್ಬಿಣಾಂಶವಿದ್ದು ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕ ಒದಗಿಸುವ ಮೂಲಕ ಚೈತನ್ಯವನ್ನೂ ನೀಡುತ್ತದೆ. ಇವುಗಳಲ್ಲಿ ಎಲ್ಲ ಬಗೆಯ ಖನಿಜಾಂಶಗಳೂ ಹೆಚ್ಚಿರುವುದರಿಂದ ಹಾಗೂ ವಿಟಮಿನ್ ಸಿ ಹಾಗೂ ಇ ಹೆಚ್ಚಿರುವುದರಿಂದ ಶಕ್ತಿವರ್ಧನೆಗೆ ಪೂರಕ ಆಹಾರವಾಗಿದೆ.
೭. ಮೀನು: ಸಾಲ್ಮನ್, ಟೂನಾ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿದ್ದು ಮಿದುಳಿನ ಬೆಳವಣಿಗೆಗೆ ಒಳ್ಳೆಯದು. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾಗಿರುವ ವಿಟಮಿನ್ ಡಿ ಕೂಡಾ ಇದರಲ್ಲಿ ಲಭ್ಯವಿರುವುದರಿಂದ ಇದೂ ಕೂಡಾ ಶಕ್ತಿ ವರ್ಧನೆಗೆ ಅತ್ಯಂತ ಒಳ್ಳೆಯದು.
ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!