Site icon Vistara News

Fruit Jams: ರುಚಿಕರ ಹಣ್ಣಿನ ಜ್ಯಾಮ್‌ ಮನೆಯಲ್ಲೇ ಮಾಡಲು ಈ ಟಿಪ್ಸ್‌ ನೆನಪಿಡಿ!

fruit jams

ಮಕ್ಕಳಿರುವ ಮನೆಗಳಲ್ಲಿ ಹಣ್ಣಿನ ಜ್ಯಾಮ್‌ (fruit jams) ಬಾಟಲಿಯೊಂದು ಇಲ್ಲದಿದ್ದರೆ ಅದು ಮನೆಯೇ ಅಲ್ಲ. ಬಹುತೇಕ ಮಕ್ಕಳಿಗೆ ಜ್ಯಾಮ್‌ ಬೇಕೇ ಬೇಕು. ಬ್ರೆಡ್‌ಗೆ, ದೋಸೆಗೆ, ರೋಟಿ, ಚಪಾತಿ, ಪರಾಠಾಕ್ಕೆ ಸವರಿ ತಿನ್ನಲು, ಮಧ್ಯಾಹ್ನದ ಲಂಚ್‌ ಬಾಕ್ಸ್‌ಗೆ ರೋಲ್‌ ಮಾಡಿ ತೆಗೆದುಕೊಂಡು ಹೋಗಲು ಹೀಗೆ ಜ್ಯಾಮ್‌ ನಿತ್ಯವೂ ಬಳಕೆಯಾಗುತ್ತಲೇ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಹಣ್ಣಿನ ಜ್ಯಾಮ್‌ನಲ್ಲಿ, ಎಷ್ಟು ಹಣ್ಣಿದ್ದೀತು ಹೇಳಿ! ಆರೋಗ್ಯದ ದೃಷ್ಟಿಯಿಂದ (healthy food) ಇತ್ತೀಚೆಗೆ ಹಲವು ಅಮ್ಮಂದಿರು ತಾವೇ ಮನೆಯಲ್ಲಿ ಜ್ಯಾಮ್‌ ಮಾಡಿ (home made jam) ಮಕ್ಕಳಿಗಾಗಿ ಶೇಖರಿಸಿಡಲೂ ಆರಂಭಿಸಿದ್ದಾರೆ. ಅದು ಒಳ್ಳೆಯದೂ ಕೂಡಾ. ಬೇಕಾದ ಹಣ್ಣಿನ ಜ್ಯಾಮ್‌ ನಾವೇ ಮಾಡಿಕೊಂಡು ಇಟ್ಟರೆ ನಮ್ಮ ಮಕ್ಕಳಿಗೆ ನಾವು ಆರೋಗ್ಯಕರವಾದ ಆಹಾರವನ್ನೇ (health tips) ಕೊಡುತ್ತಿದ್ದೇವೆ ಎಂಬ ತೃಪ್ತಿಯೂ ಕೂಡಾ ದಕ್ಕುತ್ತದೆ. ಆದರೆ, ಬಹಳಷ್ಟು ಮಂದಿ ಜ್ಯಾಮ್‌ ಮಾಡುವಾಗ ಆಗುವ ಸಣ್ಣಪುಟ್ಟ ತಪ್ಪುಗಳಿಂದ, ಹೊರಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಮಾದರಿಯಲ್ಲಿ ನಾವು ಜ್ಯಾಮ್‌ ಮಾಡಲು ಸಾಧ್ಯವಾಗುವುದಿಲ್ಲ ಎಂದು ದೂರುವುದುಂಟು. ಆದರೆ, ಜ್ಯಾಮ್‌ ಮಾಡುವ ಸಂದರ್ಭ ಈ ಕೆಲವು ಸಣ್ಣಪುಟ್ಟ್‌ ಎಚ್ಚರಿಕೆಗಳನ್ನು ವಹಿಸಿಕೊಂಡರೆ, ಅತ್ಯಂತ ಸುಲಭ ಹಾಗೂ ಸರಳವಾಗಿ ಮನೆಯಲ್ಲೇ (food tips) ಮಾಡಬಹುದು. ಬನ್ನಿ, ಜ್ಯಾಮ್‌ ಮಾಡುವಾಗ ಈ ಟಿಪ್ಸ್‌ಗಳನ್ನು ಓದಿ ನೆನೆಪಿಟ್ಟುಕೊಳ್ಳಿ!

1. ಹಣ್ಣಿನ ಜ್ಯಾಮ್‌ಗೆ ಬಹುತೇಕ ಎಲ್ಲ ಹಣ್ಣುಗಳನ್ನು ಹಾಕಿ ಮಾಡಬಹುದಾದರೂ ಸರಿಯಾದ ಹಣ್ಣಿನ ಆಯ್ಕೆ ಬಹಳ ಮುಖ್ಯ. ಯಾಕೆಂದರೆ, ಯಾವ ಹಣ್ಣನ್ನು ಎಷ್ಟು ಬಳಸುತ್ತೇವೆ ಎಂಬುದರ ಮೇಲೆ ನಿಮ್ಮ ಜ್ಯಾಮ್‌ನ ರುಚಿ ನಿಂತಿರುತ್ತದೆ. ಅತಿಯಾಗಿ ಹಣ್ಣಾಗದ, ಕೊಳೆತಿರದ, ಸರಿಯಾಗಿ ಹಣ್ಣಾಗಿರುವಂಥವುಗಳನ್ನು ಬಳಸುವುದು ಬಳಸುವುದು ಮುಖ್ಯ. ಆದಷ್ಟೂ ತಾಜಾ ಹಣ್ಣುಗಳನ್ನೇ ಜ್ಯಾಮ್‌ಗೆ ಬಳಸಿ. ಆದರೆ ಹಣ್ಣುಗಳು ಹೆಚ್ಚು ಮೆದುವಾಗದೆ ಇರಲಿ. ಹಾಗೆ ನೋಡಿದರೆ, ಜ್ಯಾಮ್‌ಗೆ ಹೆಚ್ಚು ಹಣ್ಣಾಗದ ಹಣ್ಣುಗಳಿದ್ದರೆ ಪರ್ಫೆಕ್ಟ್‌.

2. ಸಕ್ಕರೆಯ ಆಯ್ಕೆಯಲ್ಲಿಯೂ ಜ್ಯಾಮ್‌ನ ರುಚಿ ಅಡಗಿದೆ. ಯಾವಾಗಲೂ ಜ್ಯಾಂಗೆ ಹರಳಾದ ಸಕ್ಕರೆ ಬಳಸಿ. ಯಾವಾಗಲೂ ಕುದಿ ಬರುವ ಮುಂಚೆಯೇ ಸಕ್ಕರೆ ಸೇರಿಸಿ ಅದು ಕರಗಲಿ. ಕರಗದಿದ್ದರೆ ಜ್ಯಾಮ್‌ ಕೂಡಾ ಹರಳಾಗಿಯೇ ಉಳಿದೀತು. ಹಾಗಾಗಿ ಸರಿಯಾಗಿ ಅದು ಕರಗಲು ತಾಳ್ಮೆ ವಹಿಸಿ.

3. ಜಾರ್‌ ಅಥವಾ ಬಾಟಲಿಗಳನ್ನು ಮೊದಲೇ ತೊಳೆದು ಒಣಗಿಸಿ ಇಟ್ಟುಕೊಳ್ಳಿ. ನೀರಿನ ತೇವ ಪೂರ್ತಿಯಾಗಿ ಹೋಗಿರಲಿ. ಅದಕ್ಕೇ ಒಂದು ದಿನ ಮುಂಚಿತವಾಗಿಯೇ ಬಾಟಲಿಗಳನ್ನು ಸೂರ್ಯನ ಬಿಸಿಲಲ್ಲಿ ಸ್ವಲ್ಪ ಹೊತ್ತು ಗಾಳಿಯಾಡಲು ಬಿಡಿ. ಆಮೇಲೆ, ಒಣ ವಸ್ತ್ರದಲ್ಲಿ ಒರೆಸಿಟ್ಟುಕೊಳ್ಳಿ.

ಇದನ್ನೂ ಓದಿ: Monsoon Food Tips: ಮಳೆಗಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ತಿನ್ನಲೇಬೇಕಾದ ತರಕಾರಿಗಳಿವು!

4. ಜ್ಯಾಮ್‌ಗೆ ಸರಿಯಾದ ಹದವೂ ಬಹಳ ಮುಖ್ಯ. ಜಾಸ್ತಿ ಗಟ್ಟಿಯೂ ಆಗದ, ಜಾಸ್ತಿ ತೆಳುವೂ ಆಗದ ಹದ ಜ್ಯಾಮ್‌ಗೆ ಬೇಕು. ಹಾಗಾಗಿ, ಜ್ಯಾಮ್‌ ಮಾಡುವಾಗ ಹಾಗೆಯೇ ಬಿಟ್ಟು ಹೋಗಬೇಡಿ. ಪ್ರತಿ ನಿಮಿಷವೂ ಇಲ್ಲಿ ಮುಖ್ಯವಾಗುತ್ತದೆ. ಹಾಗಾಗಿ, ಪಾತ್ರೆಯನ್ನು ಗಮನಿಸುತ್ತಲೇ ಇದ್ದು ಸರಿಯಾದ ಹದಕ್ಕೆ ಬರುವ ಸಂದರ್ಭ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ.

5. ಕೆಳಗಿಳಿಸಿದ ಜ್ಯಾಮ್‌ ಅನ್ನು ಸ್ವಲ್ಪ ಹೊತ್ತು ಸೆಟ್‌ ಆಗಲು ಬಿಡಿ. ತಣಿಯುವಾಗ ಇನ್ನೂ ಹೆಚ್ಚು ದಪ್ಪವಾಗುತ್ತದೆ ಎಂಬುದನ್ನು ಮರೆಯಬೇಡಿ. ಹಾಗಾಗಿ, ಕೆಳಗಿಳಿಸುವಾಗಲೇ ಈ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಹದ ಸರಿಯಾಗಿಲ್ಲ, ತುಂಬ ತೆಳುವಾಯಿತು ಅನಿಸಿದರೆ, ಮತ್ತೆ ಒಲೆಯಲ್ಲಿಟ್ಟು ಕೆಲ ನಿಮಿಷ ದಪ್ಪವಾಗಲು ಬಿಡಬಹುದು.

6. ತಣಿದ ಮೇಲೆ ದಪ್ಪ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು, ಬೇಕಾದಾಗ ಬಳಸಿಕೊಳ್ಳಬಹುದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

Exit mobile version