ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಗಸ್ಟ್ ಮೊದಲನೇ ಭಾನುವಾರ ಸ್ನೇಹಿತರ ದಿನಾಚಾರಣೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಾನಾ ವಿನ್ಯಾಸದ ಡಿಸೈನರ್ ಫಂಕಿ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಹೊಸ ವಿನ್ಯಾಸದ ಬ್ಯಾಂಡ್‌ಗಳು
ಟಾಕಿಂಗ್ ಬ್ಯಾಂಡ್ಸ್, ಟೆಕ್ಸ್ಟ್ ಬ್ಯಾಂಡ್, ಸ್ಮಾರ್ಟ್ ಬ್ಯಾಂಡ್ಸ್ ವಿಶೇಷವಾಗಿ ಈ ಬಾರಿ ಮಾರುಕಟ್ಟೆಗೆ ಆಗಮಿಸಿದ್ದು, ಎಂದಿನಂತೆ ಇವುಗಳೊಂದಿಗೆ ಕ್ರಿಸ್ಟಲ್, ಉಲ್ಲನ್, ಜರಿ, ಮಣಿ , ಕಾರ್ಟೂನ್, ಸೇರಿದಂತೆ ರಬ್ಬರ್‌ನ ಯೂನಿಸೆಕ್ಸ್ ಬ್ಯಾಂಡ್‌ಗಳು ಸ್ನೇಹಿತರ ಕೈ ಸೇರಲು ಕಾಯುತ್ತಿವೆ. ಇನ್ನು ಹುಡುಗಿಯರಿಗೆ ಪ್ರಿಯವಾಗುವ ಕಲರ್‌ಫುಲ್ ಆಗಿರುವಂತಹ ಫ್ಲೋರಲ್, ಟ್ರಾಪಿಕಲ್ ಹಾಗೂ ಚಿತ್ರ-ವಿಚಿತ್ರ ಅನಿಮಲ್ ಪ್ರಿಂಟ್ಸ್ ಇರುವಂತಹ ಡಿಸೈನ್‌ನವು ಬಂದಿವೆ.
ಫಂಕಿ ಫ್ರೆಂಡ್‌ಶಿಪ್ ಬ್ಯಾಂಡ್ಸ್
ಬ್ರೆಸ್‌ಲೆಟ್‌ನಂತೆ ಕಾಣುವ ಬ್ಲಾಕ್ ಮತ್ತು ವೈಟ್ ಮೆಟಲ್‌ನಲ್ಲಿ ದೊರೆಯುವ ಕ್ರಿಸ್ಟಲ್‌ನವು, ಎಲಾಸ್ಟಿಕ್‌ನ ಜಂಕ್ ಜುವೆಲ್ ಬ್ಯಾಂಡ್‌ಗಳು ಮತ್ತು ಅಲ್ಫಾಬಿಟ್ಸ್(ಆಂಗ್ಲ ಅಕ್ಷರಗಳು) ಇರುವಂತಹ ಫಂಕಿ ಲುಕ್ ನೀಡುವ ಬ್ರೆಸ್‌ಲೇಟ್ ಮಾದರಿಯ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಆಗಮಿಸಿವೆ.
ವರ್ಚುವಲ್ ಫ್ರೆಂಡ್‌ಶಿಪ್ ಬ್ಯಾಂಡ್
ಇವೆಲ್ಲವನ್ನು ಹೊರತುಪಡಿಸಿದಲ್ಲಿ, ಆನ್‌ಲೈನ್‌ನಲ್ಲೂ ಕಳುಹಿಸಬಹುದಾದ ವರ್ಚುವಲ್ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಇದೀಗ ಈ ಜನರೇಷನ್‌ನ ಯುವಕ-ಯುವತಿಯರನ್ನು ಸೆಳೆಯುತ್ತಿವೆ. ೩ಡಿ ಡಿಸೈನ್, ಫ್ರೆಂಡ್‌ಶಿಪ್ ಕೋಟ್ಸ್ ಇರುವಂತವು ಈಗಾಗಲೇ ಸಾಕಷ್ಟು ರವಾನೆಯಾಗಲು ಕಾದಿವೆ. ಸೋಷಿಯಲ್ ಮೀಡಿಯಾದಲ್ಲಿಇವುಗಳನ್ನು ರವಾನಿಸುವುದು ಸೆಲೆಬ್ರೇಷನ್‌ಗೆ ಸುಲಭ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ಟಿಕ್ಕಿಗಳಾದ ರೀಟಾ ಹಾಗೂ ರಿಯಾ.
ಸ್ನೇಹದ ಸಂಕೇತ
“ಅಮೆರಿಕಾದಲ್ಲಿ ಪ್ರಾರಂಭವಾದ ಫ್ರೆಂಡ್‌ಶಿಪ್ ಡೇ ಇಂದು ವಿಶ್ವ ವ್ಯಾಪಿ ಆಚರಿಸಲ್ಪಡುತ್ತಿದೆ. ಸ್ನೇಹದ ಮಹತ್ವ ತಿಳಿಸುವ ಈ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಸಿಕ್ಕಸಿಕ್ಕವರಿಗೆಲ್ಲಾ ಕಟ್ಟುವುದು ಸರಿಯಲ್ಲ. ಸ್ನೇಹದ ಸಂಕೇತವಾಗಿ ಕಟ್ಟುವುದು ಉತ್ತಮ. ನಾನು ಕೂಡ ಸ್ನೇಹಿತರಿಗೆ ಪ್ರತಿ ಬಾರಿ ಹೊಸ ಬಗೆಯ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟುತ್ತೇನೆ” ಎನ್ನುತ್ತಾರೆ ಬಿಎಂಎಸ್ ಕಾಲೇಜಿನ ದೀಪಿಕಾ.
ಇನ್ನು ಕ್ರೈಸ್ಟ್ ಕಾಲೇಜಿನ ದಿಕ್ಷಾ, ಜಾನ್ ಹಾಗೂ ದಿಗಂತ್ ಪ್ರತಿ ಬಾರಿಯೂ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ಗೆ ತೆರಳಿ ವಿನೂತನ ಬಗೆಯ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಖರೀದಿಸುತ್ತಾರಂತೆ.
ಇನ್ನು ಪ್ರತಿಬಾರಿಯೂ ಹೊಸ ಜನರೇಷನ್‌ನ ಅಭಿರುಚಿಗೆ ತಕ್ಕಂತೆ ಸಿದ್ಧವಾಗುವ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಇಂದಿಗೂ ಯುವ ಜನಾಂಗದವರನ್ನು ಆಕರ್ಷಿಸುವುದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುತ್ತಾರೆ ಮಾರಾಟಗಾರರು.
ಫ್ರೆಂಡ್‌ಶಿಪ್ ಬ್ಯಾಂಡ್ ಆಯ್ಕೆ ಹೀಗಿರಲಿ:
- ವ್ಯಕ್ತಿತ್ವಕ್ಕೆ ತಕ್ಕಂತೆ ಬ್ಯಾಂಡ್ ಖರೀದಿಸಿ.
- ಸ ಟ್ರೆಂಡಿ ಡಿಸೈನ್ ಮೇಲೆ ಸ್ನೇಹ ಅಳೆಯಬೇಡಿ.
- ಚಿಕ್ಕದಾಗಿದ್ದರೂ ಅರ್ಥಪೂರ್ಣವಾಗಿರುವುದನ್ನು ಆಯ್ಕೆ ಮಾಡಿ.
- ಸ್ನೇಹಿತರ ಅಭಿರುಚಿಗೆ ತಕ್ಕಂತೆ ಬ್ಯಾಂಡ್ ಚೂಸ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: ಫ್ರೆಂಡ್‌ಶಿಪ್ ಬ್ಯಾಂಡ್‌ಗಾಗಿಯೇ ಬದುಕಿತ್ತು ಆ ಜೀವ: ಕೊಪ್ಪಳದಲ್ಲೊಂದು ಮನಕಲಕುವ ಘಟನೆ