Site icon Vistara News

Friendship Day 2023: ಫ್ರೆಂಡ್‌ಶಿಪ್ ದಿನ‌ ನಿಮ್ಮ ಸ್ನೇಹಿತರಿಗೆ ಏನು ಗಿಫ್ಟ್‌ ಕೊಡಬಹುದು?

Friendship Day gifts

ಇನ್ನೇನು ಸ್ನೇಹಿತರ ದಿನ (Friendship Day 2023) ಬಂದೇ (ಆಗಸ್ಟ್‌ 6) ಬಿಟ್ಟಿತು. ಎಲ್ಲರೂ ತಮ್ಮ ಅಚ್ಚುಮೆಚ್ಚಿನ ಸ್ನೇಹಿತರಿಗೆ ಏನಾದರೂ ಉಡುಗೊರೆ ನೀಡಿ, ತಮ್ಮ ಸ್ನೇಹ ಎಷ್ಟು ಆಳವಾಗಿದೆ ಎನ್ನುವುದನ್ನು ಹೇಳಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿರುತ್ತಾರೆ. ಹಾಗಾದರೆ ನಿಮ್ಮ ಸ್ನೇಹಿತರಿಗೆ ಈ ವರ್ಷದ ಸ್ನೇಹಿತರ ದಿನದಂದು ಏನು ಉಡುಗೊರೆ ನೀಡಬಹುದು (Friendship Day gift ideas) ಎನ್ನುವುದಕ್ಕೆ ನಾವಿಲ್ಲಿ ಕೆಲವು ಉದಾಹರಣೆಗಳನ್ನು ನೀಡಿದ್ದೇವೆ.

ಫ್ರೆಂಡ್‌ಶಿಪ್‌ ಡೇ ಕಾರ್ಡ್‌:

ಫ್ರೆಂಡ್‌ಶಿಪ್‌ ಡೇಗೆಂದೇ ಮಾರುಕಟ್ಟೆಯಲ್ಲಿ ಹಲವಾರು ಗ್ರೀಟಿಂಗ್‌ ಕಾರ್ಡ್‌ಗಳು ಮಾರಾಟಕ್ಕೆ ಬರುತ್ತವೆ. ಅದರಲ್ಲಿ ಸ್ನೇಹದ ಬಗ್ಗೆ ಹಲವು ಸಂದೇಶಗಳನ್ನೂ ಮುದ್ರಿಸಲಾಗಿರುತ್ತದೆ. ತರಹೇವಾರಿ ಗ್ರೀಟಿಂಗ್‌ ಕಾರ್ಡ್‌ಗಳು ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ನೀವು ಅದರಲ್ಲಿ ನಿಮ್ಮ ಸ್ನೇಹಿತರಿಗೆ ಸೂಕ್ತ ಎನಿಸುವಂತಹ ಕಾರ್ಡ್‌ ಅನ್ನು ಆಯ್ಕೆ ಮಾಡಿ ಅದನ್ನೇ ಗಿಫ್ಟ್‌ ಆಗಿ ಕೊಡಬಹುದು. ಅದರ ಜತೆ ನೀವೂ ಏನಾದರೂ ಸಂದೇಶವನ್ನು ಬರೆದಿಟ್ಟುಕೊಡಬಹುದು.

ಹೂವು ಅಥವಾ ಬೊಕ್ಕೆ:


ಹೂವು ಯಾವಾಗಲೂ ಮನುಷ್ಯರ ಮುಖದಲ್ಲಿ ನಗು ತರಿಸುವ ವಸ್ತು. ಅದು ಪ್ರೀತಿಯೇ ಆಗಿರಲಿ ಅಥವಾ ಸ್ನೇಹವೇ ಆಗಿರಲಿ. ಒಂದು ಹೂವು ಅಥವಾ ಹೂವಿನ ಬೊಕ್ಕೆ ಕೊಡುವ ಮೂಲಕ ನೀವು ನಿಮ್ಮ ಸ್ನೇಹಿತರ ಮುಖದಲ್ಲಿ ನಗುವನ್ನು ಅರಳಿಸಬಹುದು. ಇದು ನೀವು ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎನ್ನುವುದನ್ನು ತೋರಿಸುತ್ತದೆ. ಹೂವು ಮತ್ತು ಹೂವಿನ ಬೊಕ್ಕೆಗಳಂತೂ ಎಲ್ಲ ನಗರಗಳಲ್ಲಿ ಲಭ್ಯವಿರುವುದರಿಂದ ನೀವು ಅದನ್ನು ಸುಲಭವಾಗಿ ಖರೀದಿಸಿ ಉಡುಗೊರೆಯಾಗಿ ನೀಡಬಹುದು.

ಸುಗಂಧ ದ್ರವ್ಯಗಳು:

ಸುಗಂಧ ದ್ರವ್ಯಗಳನ್ನು ಇಷ್ಟಪಡುವವರು ಹೆಚ್ಚು ಜನರಿರುತ್ತಾರೆ. ಅಂತವರಿಗೆ ನೀವು ಯಾವುದಾದರೂ ವಿಶೇಷ ಸುಗಂಧ ದ್ರವ್ಯವನ್ನೇ ಉಡುಗೊರೆಯನ್ನಾಗಿ ಕೊಡಬಹುದು. ನಿಮ್ಮ ಮೊದಲ ಭೇಟಿಯಲ್ಲಿ ನೀವು ಧರಿಸಿದ್ದ ಸುಗಂಧ ದ್ರವ್ಯವಾಗಲಿ ಅಥವಾ ಇಬ್ಬರಿಗೂ ಹೆಚ್ಚಾಗಿ ಇಷ್ಟವಾಗುವ ದ್ರವ್ಯವಾಗಲಿ, ಒಟ್ಟಿನಲ್ಲಿ ಯಾವುದಾದರೂ ರೀತಿಯಲ್ಲಿ ವಿಶೇಷವೆನಿಸುವಂತಹ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ಕೊಡಿ.

ಎಲೆಕ್ಟ್ರಾನಿಕ್‌ ಉಪಕರಣ:

ಎಲ್ಲಕ್ಕಿಂತ ಸ್ವಲ್ಪ ದುಬಾರಿ ಉಡುಗೊರೆಯನ್ನೇ ಕೊಡಬೇಕು ಎಂದು ನೀವು ಆಲೋಚಿಸುತ್ತಿದ್ದರೆ ಯಾವುದಾದರೂ ಎಲೆಕ್ಟ್ರಾನಿಕ್‌ ಉಪಕರಣ ಕೊಡಬಹುದು. ಸ್ಮಾರ್ಟ್‌ ವಾಚ್‌ ಆಗಲಿ, ಮೊಬೈಲ್‌ ಫೋನ್‌ ಆಗಲಿ ಅಥವಾ ಇಯರ್‌ಬಡ್‌ ಅನ್ನಾಗಲೀ ಕೊಡಬಹುದು. ನಿಮ್ಮ ಸ್ನೇಹಿತರು ಸಂಗೀತವನ್ನು ಹೆಚ್ಚು ಇಷ್ಟಪಡುವವರಾದರೆ ಸ್ಪೀಕರ್‌ನ್ನೂ ಉಡುಗೊರೆಯಾಗಿ ನೀಡಿ ಅವರ ಮುಖದಲ್ಲಿ ನಗು ನೋಡಬಹುದು.

ಚಾಕೋಲೇಟ್‌:


ಸಾಮಾನ್ಯವಾಗಿ ಹೆಣ್ಣು ಮಕ್ಕಳು ಚಾಕೋಲೇಟ್‌ ಅನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾಗಿ ನಿಮ್ಮ ಬೆಸ್ಟ್‌ ಫ್ರೆಂಡ್‌ ಹುಡುಗಿಯಾಗಿದ್ದರೆ ನೀವು ಚಾಕೋಲೇಟ್‌ಗಳನ್ನೂ ಅವರಿಗೆ ಗಿಫ್ಟ್‌ ಆಗಿ ಕೊಡಬಹುದು. ಅವರಿಗೆ ಇಷ್ಟವಾಗುವ ಚಾಕೋಲೇಟ್‌ ಅನ್ನು ಕೊಡಬಹುದು. ಅಥವಾ ಚಾಕೋಲೇಟ್‌ನಲ್ಲೇ ಬೊಕ್ಕೆ ತಯಾರಿಸಿಯೂ ಉಡುಗೊರೆ ಮಾಡಬಹುದು. ಮಾಮೂಲಿಯಾಗಿ ಚಾಕೋಲೇಟ್‌ ಕೊಡುವುದಕ್ಕಿಂತ ಈ ರೀತಿ ವಿಶೇಷವಾಗಿ ಕೊಡುವುದು ಅವರಿಗೆ ಹೆಚ್ಚು ಇಷ್ಟವಾಗಬಹುದು.

ಬಿಯರ್ ಗ್ಲಾಸ್:

ಈಗೆಲ್ಲ ಡ್ರಿಂಕ್‌ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ನಿಮ್ಮ ಸ್ನೇಹಿತರಿಗೆ ಕೂಡ ಡ್ರಿಂಕ್‌ ಮಾಡುವ ಅಭ್ಯಾಸವಿತ್ತೆಂದರೆ ಬಿಯರ್‌ ಗ್ಲಾಸ್‌ ಅವರಿಗೆ ಕೊಡಬಹುದಾದ ಉತ್ತಮ ಉಡುಗೊರೆಯಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಬಿಯರ್‌ ಗ್ಲಾಸ್‌ಗಳು ಲಭ್ಯವಿವೆಯಾದ್ದರಿಂದ ಅವುಗಳಲ್ಲಿ ವಿಶೇಷ ಎನಿಸುವಂತಹ ಗ್ಲಾಸ್‌ ಅನ್ನು ಆಯ್ಕೆ ಮಾಡಿ ಗಿಫ್ಟ್‌ ಮಾಡಿ.

ಡೈರಿ:

ಕೆಲವರಿಗೆ ಜೀವನದ ನೆನಪುಳಿಯುವಂತಹ ಕ್ಷಣಗಳನ್ನು ಬರೆದಿಡುವ ಅಭ್ಯಾಸವಿರುತ್ತದೆ. ಅಂತವರಿಗೆ ನೀವು ವಿಶೇಷವಾಗಿ ಡೈರಿಯನ್ನು ಅಥವಾ ಜರ್ನಲ್‌ ಅನ್ನು ಉಡುಗೊರೆಯಾಗಿ ನೀಡಬಹುದು. ತುಂಬಾ ಸುಂದರವಾಗಿರುವ ಡೈರಿಗಳು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಈ ರೀತಿ ಗಿಫ್ಟ್‌ ನೀಡಿದಾಗ ಅವರು ಅದನ್ನು ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಬ್ಯೂಟಿ ಕಿಟ್‌:


ನಿಮ್ಮ ಸ್ನೇಹಿತೆಗೆ ಗಿಫ್ಟ್‌ ನೀಡಬೇಕಾಗಿದ್ದರೆ ಬ್ಯೂಟಿ ಕಿಟ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಹೆಣ್ಣು ಮಕ್ಕಳು ಹೆಚ್ಚಾಗಿ ಸೌಂದರ್ಯದತ್ತ ಒಲವು ಹೊಂದಿರುತ್ತಾರೆ. ಹಾಗೆಯೇ ಬ್ರ್ಯಾಂಡೆಡ್‌ ಬ್ಯೂಟಿ ಕಿಟ್‌ ದುಬಾರಿ ಆಗಿರುತ್ತದೆ ಕೂಡ. ಅವರು ಬಹಳ ದಿನಗಳಿಂದ ಕೊಂಡುಕೊಳ್ಳಬೇಕು ಎಂದುಕೊಂಡಿದ್ದ ಬ್ರ್ಯಾಂಡೆಡ್‌ ಬ್ಯೂಟಿ ಕಿಟ್‌ ಅನ್ನು ನೀವು ಗಿಫ್ಟ್‌ ನೀಡಿದಲ್ಲಿ ಅವರು ಸಂತಸದಿಂದ ಕುಣಿದಾಡುವುದು ಗ್ಯಾರೆಂಟಿ.

ಗ್ರೂಮಿಂಗ್‌ ಕಿಟ್‌:

ಹೆಣ್ಣು ಮಕ್ಕಳಿಗೆ ಮೇಕಪ್‌ ಕಿಟ್‌ ಬಗ್ಗೆ ಆಸಕ್ತಿ ಇರುವಂತೆ ಗಂಡು ಮಕ್ಕಳಿಗೆ ಗ್ರೂಮಿಂಗ್‌ ಕಿಟ್‌ ಬಗ್ಗೆಯೂ ಆಸಕ್ತಿ ಇರುತ್ತದೆ. ನಾವೂ ಹೆಣ್ಣು ಮಕ್ಕಳ ಎದುರು ಚೆನ್ನಾಗಿ ಕಾಣಿಸಿಕೊಂಡು ಅವರ ಮನಸ್ಸು ಗೆಲ್ಲಬೇಕು ಎಂದುಕೊಳ್ಳುತ್ತಿರುವ ಹುಡುಗರಿಗೆ ಗ್ರೂಮಿಂಗ್‌ ಕಿಟ್‌ ಬೆಸ್ಟ್‌ ಗಿಫ್ಟ್‌ ಆಗಿದೆ. ನಿಮ್ಮ ಸ್ನೇಹಿತನಿಗೆ ಈ ಫ್ರೆಂಡ್‌ಶಿಪ್‌ ದಿನದಂದು ನೀವು ಗ್ರೂಮಿಂಗ್‌ ಕಿಟ್‌ ಕೊಡಬಹುದು.

ಕೇಕ್‌:

ಅನೇಕರಿಗೆ ಗಿಫ್ಟ್‌ಗಳಿಗಿಂತ ಜಾಸ್ತಿ ಸೆಲೆಬ್ರೇಷನ್‌ ಬಗ್ಗೆ ಆಸಕ್ತಿಯಿರುತ್ತದೆ. ಅಂತಹ ಸ್ನೇಹಿತರಿಗೆ ನೀವು ಸರ್‌ಪ್ರೈಸ್‌ ಆಗಿ ಕೇಕ್‌ ತರಿಸಿ, ಕತ್ತರಿಸಿದರೆ ಅದೇ ದೊಡ್ಡ ಗಿಫ್ಟ್‌ ಆಗುತ್ತದೆ. ಆನ್‌ಲೈನ್‌ನಲ್ಲಿ ಫ್ರೆಂಡ್‌ಶಿಪ್‌ ಡೇಗೆಂದೇ ವಿಶೇಷವಾಗಿ ನೀವು ಕೇಕ್‌ ಆರ್ಡರ್‌ ಮಾಡಬಹುದಾಗಿದೆ. ಸ್ನೇಹಿತರೊಂದಿಗೆ ಕೇಕ್‌ ಕತ್ತರಿಸಿ ಫ್ರೆಂಡ್‌ಶಿಪ್‌ ಡೇ ಅನ್ನು ವಿಶೇಷವಾಗಿಸಬಹುದು.

Exit mobile version