Site icon Vistara News

Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ambulance-booking

ಬೆಂಗಳೂರು: ತಂತ್ರಜ್ಞಾನ ಆಧಾರಿತ ವಿಮಾ ಸಂಸ್ಥೆಯಾದ ಆಕ್ಕೊ (ACKO), ತನ್ನ ಅನೇಕ ಕೊಡುಗೆಗಳ ಪೋರ್ಟ್‌ಫೋಲಿಯೋಗೆ ತನ್ನ ಮೊಬೈಲ್ ಆ್ಯಪ್‌ನಲ್ಲಿ ಆಂಬುಲೆನ್ಸ್ ಬುಕ್ ಮಾಡುವ ಹೊಸ ಸೇವೆಯೊಂದನ್ನು ಸೇರಿಸಿದೆ. ತನ್ನ ಸೇವೆಗಳನ್ನು ವಿಮಾ ಪರಿಹಾರಗಳಾಚೆ ವಿಸ್ತರಿಸುವ ಮೂಲಕ ಎಲ್ಲಾ ಆರೋಗ್ಯ ಸುರಕ್ಷತಾ ಅಗತ್ಯಗಳಿಗೆ ಒಂದೇ ಸೂರಿನಡಿ ಸೇವೆ ಸಲ್ಲಿಸುವ ದೂರದೃಷ್ಟಿಯನ್ನು ಹೊಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಲಭ್ಯವಿರುವ ಸೇವೆಯು ಮುಂಬರುವ ವಾರಗಳಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಕೋಲ್ಕತ್ತಾದಲ್ಲೂ ಸಿಗಲಿದೆ ಎಂದು ಕಂಪನಿ ಹೇಳಿದೆ.

ದೇಶದ ಮುಂಚೂಣಿ ತುರ್ತು ಸೇವಾ ಸಂಸ್ಥೆಗಳ ಪೈಕಿ ಒಂದಾದ Red.Healthನ ಸಹಭಾಗಿತ್ವದೊಂದಿಗೆ ಈ ಸೇವೆಯನ್ನು ಆರಂಭಿಸಲಾಗಿದ್ದು ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಎಲ್ಲರಿಗೂ ನೆರವು ಒದಗಿಸುವ ಗುರಿ ಹೊಂದಿದೆ. ಈ ಸೇವೆಯನ್ನು ನೀಡವುದಕ್ಕಾಗಿ ಬಳಸಲಾದ ಆಕ್ಕೊದ ಅತ್ಯಾಧುನಿಕ ತಂತ್ರಜ್ಞಾನವು, ಜನರು ಆಂಬುಲೆನ್ಸ್‌ಅನ್ನು ಶೀಘ್ರವಾಗಿಯೂ ತಡೆರಹಿತವಾಗಿಯೂ ಪಡೆದುಕೊಳ್ಳಲು ನೆರವು ನೀಡುತ್ತದೆ. 3000 ವಾಹನಗಳ ಪ್ರಬಲ ಕಾರ್ಯಜಾಲದಿಂದ ಹತ್ತಿರದ ಆಂಬುಲೆನ್ಸ್ ಪಡೆದುಕೊಳ್ಳಲು ನೆರವಾಗುವ ಈ ಆ್ಯಪ್, ಕೇವಲ ಮೂರು ನಿಮಿಷಗಳೊಳಗೆ ಚಾಲಕರ ವಿವರಗಳನ್ನು ತಿಳಿಸುತ್ತದೆ. ಮೇಲಾಗಿ, ರಿಯಲ್ ಟೈಮ್​ ಟ್ರ್ಯಾಕಿಂಗ್​ನ ವಿಶಿಷ್ಟ ಅನುಕೂಲವನ್ನು ನೀಡಿದೆ. ಗ್ರಾಹಕರು ಆಂಬುಲೆನ್ಸ್‌ನ ನಿಖರ ಲೊಕೇಶನ್‌ಅನ್ನು ಮ್ಯಾಪ್ ಮೇಲೆ ನೋಡಿ ಅದರ ಆಗಮನದ ಅಂದಾಜು ಸಮಯವನ್ನು ಲೆಕ್ಕ ಹಾಕಬಹುದು. ಆತಂಕದ ಸಮಯದಲ್ಲಿ ಅವರಿಗೆ ಅದು ನೆಮ್ಮದಿ ಒದಗಿಸಬಹುದು. ತಮ್ಮ ಪ್ರೀತಿಪಾತ್ರರ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ. ಈ ಆವಿಷ್ಕಾರವು ತುರ್ತುಸ್ಥಿತಿಗಳಲ್ಲಿ ತಡೆಯಿಲ್ಲದ ಮತ್ತು ತೊಂದರೆಯಿಲ್ಲದ ಅನುಭವ ಒದಗಿಸುತ್ತದೆ.

ಆಕ್ಕೊದ ಸಮಗ್ರ ವೇದಿಕೆಯ ಮೇಲಿರುವ ಆಂಬುಲೆನ್ಸ್ ಬುಕಿಂಗ್ ಆರೋಗ್ಯ ಸೇವಾ ಪರಿಹಾರಗಳನ್ನು ಒದಗಿಸುವ ಮೂಲಕ ಬಳಕೆದಾರ-ಸುರಕ್ಷತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಈ ಕ್ರಮವು, ಹೊಸ ಯುಗದಲ್ಲಿ ತುರ್ತುಸ್ಥಿತಿ ಆರೋಗ್ಯ ಶುಶ್ರೂಷೆಯನ್ನು ಪರಿವರ್ತಿಸುವ ಗುರಿ ಹೊಂದಿದೆ.

ಆಕ್ಕೊದ ಆಂಬುಲೆನ್ಸ್ ಬುಕಿಂಗ್ ಸೇವೆಯ ವಿಶೇಷತೆಗಳು

● ವ್ಯಾಪಕ ಕಾರ್ಯಜಾಲ: ಈ ಯೋಜನೆಯಡಿ ಐದು ನಗರಗಳಾದ್ಯಂತ 3000 ಆಂಬುಲೆನ್ಸ್‌ಗಳು ಲಭ್ಯವಿರುತ್ತವೆ.
● ತಡೆರಹಿತ ಬುಕಿಂಗ್: ACKO ಆಪ್ ಮೂಲಕ ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳೊಂದಿಗೆ ಆಂಬುಲೆನ್ಸ್ ಪಡೆದುಕೊಳ್ಳಬಹುದು
● ನೈಜ -ಸಮಯ ಟ್ರ್ಯಾಕಿಂಗ್: ಗಂಭೀರ ಪರಿಸ್ಥಿತಿಗಳಲ್ಲಿ ನೆಮ್ಮದಿನೀಡುವಂಥ ಆಂಬುಲೆನ್ಸ್‌ನ ಆಗಮನದ ನೈಜ ಸಮಯವನ್ನು ಟ್ರ್ಯಾಕ್ ಮಾಡಬಹುದು.
● ಬಳಕೆದಾರ-ಕೇಂದ್ರಿತ ವಿನ್ಯಾಸ: ಸುಲಭವಾಗಿ ಬಳಸುವುದಕ್ಕಾಗಿಯೇ ಆಕ್ಕೊ ಆಪ್ ವಿನ್ಯಾಸಗೊಂಡಿದೆ.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ವೈದ್ಯಕೀಯ ತುರ್ತುಸ್ಥಿತಿಗಳು ತಕ್ಷಣ ಪ್ರತಿಕ್ರಿಯೆಯನ್ನು ಬೇಡುತ್ತದೆ. ಆದರೆ ಅದು ಎಲ್ಲರಿಗೂ ಪೂರಕವಾಗಿಲ್ಲ ಎಲ್ಲಕ್ಕಿಂತ ಮಿಗಿಲಾಗಿ, ಆಂಬುಲೆನ್ಸ್ ಸೇವೆಗಳು, ನಿರ್ಲಕ್ಷಿತ ಕ್ಷೇತ್ರವಾಗಿಯೇ ಉಳಿದು ಪರಿಸ್ಥಿತಿಗಳನ್ನು ಮೀರಲು ಜನರು ಬಹಳ ಕಷ್ಟಪಡಬೇಕಾಗುತ್ತದೆ. ತುರ್ತುಸ್ಥಿತಿಗಳಲ್ಲಿ ಗಂಭೀರ ನೆರವು ಒದಗಿಸಲು ತಂತ್ರಜ್ಞಾನವನ್ನು ವರ್ಧಿಸುವ ಮೂಲಕ ಆಕ್ಕೊ, ಬಳಕೆದಾರ ಸುರಕ್ಷತೆ ಹಾಗೂ ಸಂತೃಪ್ತಿಗೆ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದೆ.

ಆಂಬುಲೆನ್ಸ್-ಬುಕಿಂಗ್ ಅಂಶವು, ನಿಜಜೀವನದ ಸಮಸ್ಯೆಗಳಿಗೆ ವಾಸ್ತವ ಪರಿಹಾರ ಒದಗಿಸುತ್ತದೆ.

Exit mobile version