Site icon Vistara News

ಕೂದಲು ಉದುರುವುದನ್ನು ತಡೆಯಲು ಬೆಳ್ಳುಳ್ಳಿ ಪರಿಣಾಮಕಾರಿ; ಬಳಸುವುದು ಹೇಗೆ?

Benefits of Garlic for Hair Growth

ಯಾವುದೇ ಅಡುಗೆಯಾದರೂ ಸರಿ, ಅದಕ್ಕೆ ಬೆಳ್ಳುಳ್ಳಿಯ (Benefits of Garlic for Hair Growth) ಒಗ್ಗರಣೆ ಬಿದ್ದರೆ ಅದರ ರುಚಿಯೇ ಬೇರೆ. ಅಡುಗೆಯ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಕೇವಲ ಅಡುಗೆ ಮಾತ್ರವಲ್ಲ, ನಮ್ಮ ಕೂದಲಿಗೂ ಬೇರೆ ಬೇರೆ ರೀತಿಯಲ್ಲಿ ಪ್ರಯೋಜನಕಾರಿ. ಹಾಗಾದರೆ ಈ ಬೆಳ್ಳುಳ್ಳಿಯನ್ನು ಯಾವ ಯಾವ ಕಾರಣಗಳಿಗೆ ಬಳಸಬಹುದು ಎನ್ನುವುದನ್ನು ನೀವು ಯೋಚಿಸುತ್ತಿರಬಹುದು. ಅದಕ್ಕೆಂದೆ ಇಲ್ಲಿದೆ ನೋಡಿ ಈ ಕುರಿತ ಮಾಹಿತಿ.

ಆಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳು

ಬೆಳ್ಳುಳ್ಳಿ ಆಂಟಿವೈರಲ್‌ ಮತ್ತಯ ಆಂಟಿಫಂಗಲ್‌ ಗುಣಲಕ್ಷಣಗಳನ್ನು ಹೊಂದಿದೆ. ವೈರಲ್‌ ಅಥವಾ ಫಂಗಲ್‌ ಸೋಂಕಿನಿಂದ ತಲೆಯ ನೆತ್ತಿಯಲ್ಲಿ ಸಮಸ್ಯೆಗಳು ಉಂಟಾದರೆ ಅದನ್ನು ಪರಿಹರಿಸುವಲ್ಲಿ ಬೆಳ್ಳುಳ್ಳಿ ಪರಿಣಾಮಕಾರಿಯಾಗಿದೆ.

ಹೊಟ್ಟು ನಿವಾರಕ

ಬೆಳ್ಳುಳ್ಳಿಯನ್ನು ಪುಡಿ ಮಾಡಿ ಅದನ್ನು ನೆತ್ತಿಗೆ ಹಚ್ಚಿದರೆ ಅದು ತಲೆಯ ಚರ್ಮದ ಪರ್ಫ್ಯೂಷನ್‌ ಅನ್ನು ಹೆಚ್ಚು ಮಾಡುತ್ತದೆ. ಆಗ ನೆತ್ತಿಯ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಸುಧಾರಿತ ರಕ್ತದ ಹರಿವು ಮತ್ತು ಬೆಳ್ಳುಳ್ಳಿಯ ಆಂಟಿಫಂಗಲ್‌ ಲಕ್ಷಣದಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಹಾಗೆಯೇ ಕೂದಲ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ.

ಹೆಚ್ಚಿನ ಸಲ್ಫರ್

ತಲೆಗೆ ಕೆರಾಟಿನ್‌ ಉತ್ತಮ. ಈ ಕೆರಾಟಿನ್‌ ಉತ್ಪಾದನೆಗೆ ಸಲ್ಫರ್‌ ಬೇಕಾಗುತ್ತದೆ. ಬೆಳ್ಳುಳ್ಳಿಯಲ್ಲಿ ಸಲ್ಫರ್‌ ಹೆಚ್ಚಿರುತ್ತದೆಯಾದ್ದರಿಂದ ಇದು ಕೂದಲಲ್ಲಿ ಕೆರಾಟಿನ್‌ ಉತ್ಪಾದನೆ ಮಾಡುವುದಕ್ಕೆ ಸಹಾಯಕಾರಿ.

ಇದನ್ನೂ ಓದಿ: Hair Care: ತಲೆಕೂದಲು ಉದುರುವಿಕೆಯಿಂದ ಮುಕ್ತಿ ಬೇಕಾದಲ್ಲಿ ಈ ಐದು ಹಣ್ಣುಗಳನ್ನು ತಿನ್ನಿ!

Benefits of Garlic for Hair Growth

DHT ತಡೆಯುವಿಕೆ

ಕೂದಲಿನಲ್ಲಿ ಇರುವ ಡೈಹೈಡ್ರೊಟೆಸ್ಟೋಸ್ಟೆರಾನ್‌ ಆಂಡ್ರೊಜೆನಿಕ್‌(DHT) ಕೂದಲು ಉದುರುವುದಕ್ಕೆ ಮುಖ್ಯ ಕಾರಣ. ಬೆಳ್ಳುಳ್ಳಿ ನೈಸರ್ಗಿಕವಾಗಿ DHT ತಡೆಯುವ ಅಂಶವನ್ನು ಹೊಂದಿರುತ್ತದೆ. ಇದರಿಂದಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

ಸೂರ್ಯನಿಂದ ರಕ್ಷಣೆ

ಸೂರ್ಯನ UV ಕಿರಣವು ಮನುಷ್ಯನ ಚರ್ಮವನ್ನು ಹಾಳು ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಇವೆ. ಹಾಗಾಗಿ ಸೂರ್ಯನ ಕಿರಣಗಳಿಂದ ರಕ್ಷಣೆಗೆ ಬೆಳ್ಳುಳ್ಳಿ ಪರಿಣಾಮಕಾರಿ.

ವಿಟಮಿನ್‌ ಸಿ

ಹಸಿ ಬೆಳ್ಳುಳ್ಳಿಯು ವಿಟಮಿನ್‌ ಸಿಯ ಉತ್ತಮ ಮೂಲ. ಇದು ಕೂದಲಿನ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಕೂದಲಿನ ಬೆಳವಣಿಗೆ ಉತ್ತೇಜಿಸುವಲ್ಲಿ ವಿಟಮಿನ್‌ ಸಿ ಮುಖ್ಯ ಪಾತ್ರ ವಹಿಸುತ್ತದೆ.

ಕೂದಲಿಗೆ ಬೆಳ್ಳುಳ್ಳಿ ಬಳಸುವುದು ಹೇಗೆ?

ಹಲವಾರು ರೀತಿಯಲ್ಲಿ ಬೆಳ್ಳುಳ್ಳಿಯನ್ನು ಕೂದಲಿಗೆ ಬಳಸಬಹುದು. ಅದರಲ್ಲಿ ಕೆಲವದರ ಬಗ್ಗೆ ಇಲ್ಲಿದೆ ಮಾಹಿತಿ.

ಬೆಳ್ಳುಳ್ಳಿ ಎಣ್ಣೆ

ಬೆಳ್ಳುಳ್ಳಿ ಎಣ್ಣೆ ಹಸಿ ಬೆಳ್ಳುಳ್ಳಿಯಲ್ಲಿರುವ ಎಲ್ಲ ಪ್ರಯೋಜನಕಾರಿ ಸಂಯುಕ್ತವನ್ನು ಹೊಂದಿರುತ್ತದೆ. ಮನೆಯಲ್ಲಿಯೇ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಮೊದಲಿಗೆ ಬೆಳ್ಳುಳ್ಳಿಯನ್ನು ಪೇಸ್ಟ್‌ ಮಾಡಿಕೊಳ್ಳಿ. ಅದನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ. ಅದಕ್ಕೆ ಒಂದು ಕಪ್‌ ತೆಂಗಿನ ಎಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಸೇರಿಸಿ. ಐದು ನಿಮಿಷಗಳ ಕಾಲ ಆ ಎಣ್ಣೆಯನ್ನು ಬಿಸಿ ಮಾಡಿ. ನಂತರ ಗ್ಯಾಸ್‌ ಆಫ್‌ ಮಾಡಿ. ಎಣ್ಣೆ ತಣ್ಣಗಾದ ನಂತರ ಅದನ್ನು ಬಾಟೆಲ್‌ ಒಂದರಲ್ಲಿ ಸಂಗ್ರಹಿಸಿಡಿ. ಒಂದೆರೆಡು ಟೇಬಲ್‌ ಸ್ಪೂನ್‌ನಷ್ಟು ಬೆಳ್ಳುಳ್ಳಿ ಎಣ್ಣೆಯನ್ನು ನೆತ್ತಿಗೆ ಹಾಕಿಕೊಂಡು ಮಸಾಜ್‌ ಮಾಡಿ. ಮಸಾಜ್‌ ಮಾಡಿದ ನಂತರ 20-30 ನಿಮಿಷ ಬಿಟ್ಟು ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶ ಬೇಕೆಂದರೆ ವಾರಕ್ಕೆ ಎರಡು ಬಾರಿ ಈ ರೀತಿ ಬೆಳ್ಳುಳ್ಳಿ ಎಣ್ಣೆ ಬಳಸಿ. ಬೆಳ್ಳುಳ್ಳಿ ಅಲರ್ಜಿ ಇರುವವರು ಬೆಳ್ಳುಳ್ಳಿ ಎಣ್ಣೆ ಬಳಸದಿರುವುದು ಒಳಿತು.

Benefits of Garlic for Hair Growth

ಬೆಳ್ಳುಳ್ಳಿ ಶಾಂಪೂ

ಬೆಳ್ಳುಳ್ಳಿಯನ್ನು ಶಾಂಪೂ ರೂಪದಲ್ಲೂ ಕೂದಲಿಗೆ ಬಳಸಬಹುದು. 15 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅವುಗಳ ಸಿಪ್ಪೆ ಸುಲಿದು, ಸ್ವಚ್ಛ ಮಾಡಿ. ಅದನ್ನು ಪೇಸ್ಟ್‌ ಮಾಡಿಕೊಳ್ಳಿ. ಅದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಸ್ವಲ್ಪ ಆಲಿವ್‌ ಎಣ್ಣೆ ಅಥವಾ ಪುದೀನಾ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್‌ ಅನ್ನು ನಿಮ್ಮ ಸಾಮಾನ್ಯ ಶಾಂಪೂಗೆ ಸೇರಿಸಿ. ಅದನ್ನು ತಲೆಗೆ ಶಾಂಪೂವಿನಂತೆ ಹಾಕಿ ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಬಳಸಿ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ, ಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲ ಬೆಳವಣಿಗೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ತಲೆ ಕೂದಲು ಉದುರಿದ್ದರಿಂದ ನೊಂದ ಯುವತಿ ನೇಣಿಗೆ ಶರಣು

ಹೇರ್‌ ಮಾಸ್ಕ್‌

ನಿಮ್ಮ ಕೂದಲು ತೆಳುವಾಗಿದೆ ಎನ್ನುವ ಚಿಂತೆಯಿದ್ದರೆ ನೆತ್ತಿಗೆ ಬೆಳ್ಳುಳ್ಳಿ ಮಾಸ್ಕ್‌ ಮಾಡಿ ಹಚ್ಚಿಕೊಳ್ಳಿ. ಸುಮಾರು 10 ನಿಮಿಷಗಳ ಕಾಲ ಅದನ್ನು ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಬೆಳ್ಳುಳ್ಳಿ ಎಣ್ಣೆ ಬಳಸಿ ಪೇಸ್ಟ್‌ ಮಾಡಿದರೆ ಇನ್ನೂ ಒಳ್ಳೆಯದು.

ಬೆಳ್ಳುಳ್ಳಿ ಹೇರ್ ಮಾಸ್ಕ್‌ಗಳನ್ನು ತಯಾರಿಸಲು ಪ್ರಮುಖ 3 ವಿಧಾನಗಳು ಇಲ್ಲಿವೆ.

ಜೇನುತುಪ್ಪ ಮತ್ತು ಬೆಳ್ಳುಳ್ಳಿ

ಜೇನುತುಪ್ಪವು ಅದ್ಭುತವಾದ ನೈಸರ್ಗಿಕ ಕಂಡೀಷನರ್‌. ನಿಮ್ಮ ಕೂದಲನ್ನು ಮೃದುವಾಗಿಸಲು ಇದು ಸಹಾಯಕಾರಿ. ಹಾಗೆಯೇ ಜೇನುತುಪ್ಪದಲ್ಲಿ ವಿಟಮಿನ್‌, ಖನಿಜ, ಅಮೈನೋ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚಿರುತ್ತದೆ. ಆರರಿಂದ ಎಂಟು ಟೇಬಲ್‌ ಸ್ಪೂನ್‌ ಜೇನುತುಪ್ಪದೊಂದಿಗೆ ಮನೆಯಲ್ಲಿ ತಯಾರಿಸಿರುವ ಬೆಳ್ಳುಳ್ಳಿ ಎಣ್ಣೆಯನ್ನು ಆರರಿಂದ ಎಂಟು ಟೇಬಲ್‌ ಸ್ಪೂನ್‌ನಷ್ಟು ಸೇರಿಸಿ. ಅದರ ಮಿಶ್ರಣವನ್ನು ಕೂದಲಿಗೆ ಹಾಕಿ. 10-15 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

Benefits of Garlic for Hair Growth

ಈರುಳ್ಳಿ ಮತ್ತು ಬೆಳ್ಳುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳಿಯ ಮಿಶ್ರಣವು ಅನೇಕ ಕೂದಲಿನ ಸಮಸ್ಯೆಗಳನ್ನು ನಿಭಾಯಿಸುವ ಪುರಾತನ ಪರಿಹಾರವಾಗಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡೂ ಅಲಿಯೇಸಿ ಎಂಬ ಒಂದೇ ಸಸ್ಯ ಕುಟುಂಬಕ್ಕೆ ಸೇರಿದೆ. ಇವೆರೆಡೂ ಸಾಕಷ್ಟು ಉತ್ಕರ್ಷಣ ನಿರೋಧಕಗಳು ಮತ್ತು ಕೆಲವು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಎರಡು ಈರುಳ್ಳಿ ಮತ್ತು ಎರಡು ಬೆಳ್ಳುಳ್ಳಿಯನ್ನು ಒಟ್ಟು ಸೇರಿಸಿ ಪೇಸ್ಟ್‌ ಮಾಡಿ. ಅದರ ರಸ ತೆಗೆದು ಅದನ್ನು ನೆತ್ತಿಯ ಮೇಲೆ ಹಚ್ಚಿ ಮಸಾಜ್‌ ಮಾಡಿ. 15-20 ನಿಮಿಷ ಬಿಟ್ಟು ಕೂದಲು ತೊಳೆಯಿರಿ.

ಮೊಸರು ಮತ್ತು ಬೆಳ್ಳುಳ್ಳಿ

ಮೊಸರು ಮತ್ತು ಬೆಳ್ಳುಳ್ಳಿಯ ಮಿಶ್ರಣ ಕೂದಲಿಗೆ ನೈಸರ್ಗಿಕ ಮಾಯಿಶ್ಚರೈಸರ್‌ ರೀತಿ. ನಾಲ್ಕೈದು ಬೆಳ್ಳುಳ್ಳಿ ಎಸೆಳುಗಳನ್ನು ಪೇಸ್ಟ್‌ ಮಾಡಿ ಅದರೊಂದಿಗೆ ಸುಮಾರು ಅರ್ಧ ಕಪ್‌ನಷ್ಟು ಮೊಸರನ್ನು ಮಿಶ್ರಣ ಮಾಡಿ. ಅದನ್ನು ನೆತ್ತಿಗೆ ಹಚ್ಚಿ. 30 ನಿಮಿಷಗಳಾದ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

Exit mobile version