Site icon Vistara News

Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!

Cinnamon health benefits

ದಾಲ್ಚಿನ್ನಿ ಅಥವಾ ಚಕ್ಕೆ (Cinnamon) ಎಲ್ಲರ ಅಡುಗೆಮನೆಯಲ್ಲಿರುತ್ತದೆ. ಆದರೆ ಇದನ್ನು ಬಿರಿಯಾನಿ ಹಾಗೂ ಪಲಾವ್‌ ಮಾಡುವಾಗ ಉಪಯೋಗಿಸುವುದು (Cinnamon uses) ಬಿಟ್ಟರೆ ಇದರ ಇತರ ಆರೋಗ್ಯ ಲಾಭಗಳನ್ನು (Cinnamon benefits) ತಿಳಿದವರು ವಿರಳ. ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಸಾಂಪ್ರದಾಯಿಕ ಚೈನೀಸ್‌ ಔಷಧ ಹಾಗೂ ಆಯುರ್ವೇದದಲ್ಲೂ ವಿವಿಧ ರೀತಿಯ ರೋಗಗಳನ್ನು ನಿವಾರಿಸಲು ಬಳಸಲಾಗುತ್ತದೆ. ಒಣ ದಾಲ್ಚಿನ್ನಿ ಎಲೆಗಳು ಮತ್ತು ತೊಗಟೆ ಮಸಾಲೆಗಳ ರೂಪದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ದಾಲ್ಚಿನ್ನಿ ಬಳಕೆಯು ರಕ್ತವನ್ನು ಸ್ವಚ್ಛಗೊಳಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇಷ್ಟೇ ಅಲ್ಲದೆ ಮೈಗ್ರೇನ್​ನಂತಹ ತಲೆನೋವಿಗೂ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು (Cinnamon Health Benefits) ದಾಲ್ಚಿನ್ನಿ ಮೂಲಕ ಪಡೆಯಬಹುದು. ಅವು ಯಾವುವು ಅಂತ ನೋಡೋಣ ಬನ್ನಿ.

ನೆನಪಿನ ಶಕ್ತಿ ಹೆಚ್ಚಳ

ಚಕ್ಕೆ ಅಥವಾ ದಾಲ್ಚಿನ್ನಿಯ ಪರಿಮಳ ನಮ್ಮ ಜ್ಞಾನಗ್ರಹಣ ಕ್ರಿಯೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ ಎಂದು ಸೈಂಟಿಫಿಕ್‌ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಮ್ಯಾಂಗನೀಸ್‌, ಫೈಬರ್, ಐರನ್‌ ಹಾಗೂ ಕ್ಯಾಲ್ಶಿಯಂ ಅಂಶವನ್ನು ದಾಲ್ಚಿನ್ನಿ ಅಥವಾ ಚಕ್ಕೆ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ.

ಸಂಧಿವಾತದ ನೋವಿಗೆ ಔಷಧ

ಪ್ರತಿದಿನ ಅರ್ಧ ಟೀ ಸ್ಪೂನ್‌ ಚಕ್ಕೆಯನ್ನು ಒಂದು ಟೇಬಲ್‌ ಸ್ಪೂನ್‌ ಜೇನುತುಪ್ಪದ ಜತೆಗೆ ಸೇರಿಸಿ ಪ್ರತಿದಿನ ಬೆಳಗ್ಗೆ ತಿಂಡಿಗೂ ಮುನ್ನ ಸೇವಿಸಿದರೆ ಒಂದು ವಾರದ ಬಳಿಕ ಆರ್ಥೈಟಿಸ್‌ ನೋವಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ ಎಂದು ಕೋಪೆನ್‌ಹೇಗನ್‌ ವಿವಿಯಲ್ಲಿ ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿ ಇಡಬೇಕಾದರೆ ದಾಲ್ಚಿನ್ನಿ ಎಣ್ಣೆ ಬಳಕೆ ಮಾಡಬಹುದು. ಇದರಲ್ಲಿರುವ ಹಲವಾರು ಅಂಶಗಳು ಮಧುಮೇಹ ನಿಯಂತ್ರಿಸಲು ಸಹಕಾರಿ. ದಾಲ್ಚಿನ್ನಿ ಎಣ್ಣೆಯು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಣೆ ಮಾಡುತ್ತದೆ. ಟೈಪ್ 2 ಮಧುಮೇಹಕ್ಕೆ ಇದು ಒಳ್ಳೆಯದು.

ಜೀರ್ಣ ಸಮಸ್ಯೆ

ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿರಿ. ಇದರಿಂದ ಹೊಟ್ಟೆಯ ಆಮ್ಲೀಯತೆ ನಿವಾರಣೆಯಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ತೂಕ ಇಳಿಕೆ

ದಾಲ್ಚಿನ್ನಿ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಉಪಾಹಾರಕ್ಕೆ ಅರ್ಧ ಘಂಟೆಯ ಮೊದಲು ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಅದನ್ನು ಒಂದು ಕಪ್‌ನಲ್ಲಿ ಹಾಕಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ರಾತ್ರಿಯಲ್ಲಿ ಮಲಗುವ ಮೊದಲೇ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ದಾಲ್ಚಿನ್ನಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ದಾಲ್ಚಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ ಮತ್ತು ಜೇನು ಪೇಸ್ಟ್ ತಯಾರಿಸಿ ರೊಟ್ಟಿ ಜೊತೆ ತಿನ್ನಿರಿ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸುವುದಿಲ್ಲ. ಹಾಗೆಯೇ ಇದು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಹೊಂದಿರುವ ಜನರಿಗೆ, ಈ ಪರಿಹಾರ ರಾಮಬಾಣವಾಗಿದೆ.

ಚರ್ಮದ ಸಮಸ್ಯೆ ನಿವಾರಣೆ

ಚರ್ಮದಲ್ಲಿ ತುರಿಕೆ ಮುಂತಾದ ಸಮಸ್ಯೆಗಳು ಉಂಟಾದರೆ, ದಾಲ್ಚಿನ್ನಿ ಪುಡಿಯಲ್ಲಿ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ ತುರಿಕೆ ಇರುವಲ್ಲಿ ಹಚ್ಚಿ. ಒಣಗಿದ ಬಳಿಕ ತೊಳೆಯಿರಿ.

ಇದನ್ನೂ ಓದಿ: Clove Health Benefits: ಲವಂಗದಲ್ಲಿ ನಿಮ್ಮ ದೇಹದ ಪ್ರತಿ ಅಂಗಕ್ಕೂ ಆರೋಗ್ಯವಿದೆ!

Exit mobile version