Site icon Vistara News

Clove Health Benefits: ಲವಂಗದಲ್ಲಿ ನಿಮ್ಮ ದೇಹದ ಪ್ರತಿ ಅಂಗಕ್ಕೂ ಆರೋಗ್ಯವಿದೆ!

cloves

ಲವಂಗ ಎಂಬುದು ನಮ್ಮ ಅಡುಗೆ ಮನೆಯ ಡಬ್ಬದಲ್ಲಿ ಬೆಚ್ಚಗೆ ಕುಳಿತಿರುವ ಪುಟ್ಟ ಸಂಬಾರ ಪದಾರ್ಥ. ಆದರೆ ಇದು ಬೆಸ್ಟ್‌ ಮನೆಮದ್ದು (home medicine) ಕೂಡ ಎಂಬುದು ನಿಮಗೆ ನೆನಪಿರಲಿ. ಎಲ್ಲೋ ಕೆಲವೊಮ್ಮೆ ಹಲ್ಲು ನೋಯತೊಡಗಿದಾಗ ಒಂದು ಲವಂಗದ ಎಸಳು ಹಲ್ಲಿನ ನಡುವೆ ಇಟ್ಟುಕೊಂಡು ನೋವಿನಿಂದ ರಿಲೀಫ್‌ ಅನುಭವಿಸುವಂತೆ ನಿಮ್ಮ ಅಮ್ಮನೋ, ಅಜ್ಜಿಯೋ ಮಾಡಿರಬಹುದು. ಆದರೆ ಲವಂಗದ ಆರೋಗ್ಯಕಾರಿ ಪ್ರಯೋಜನಗಳು (Heath tips) ಇದಷ್ಟೇ ಅಲ್ಲ, ನೂರೆಂಟು. ವಾಸ್ತವವಾಗಿ ಇದರ ಆರೋಗ್ಯ ಲಾಭಗಳು (Health guide) ನೂರೆಂಟು. ಲವಂಗದ ಎಣ್ಣೆಯನ್ನು ನೋವು ನಿವಾರಣೆ, ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುವುದು ಮತ್ತು ಉಸಿರಾಟದ ಸಮಸ್ಯೆಗೆ ಔಷಧಿ ತಯಾರಿಸುವ ಉದ್ದೇಶಕ್ಕಾಗಿಯೂ ಬಳಸಲಾಗುತ್ತದೆ. ಲವಂಗ ಮರದ ಒಣಗಿದ ಹೂವಿನ ಮೊಗ್ಗುಗಳು, ಕಾಂಡ ಮತ್ತು ಎಲೆಗಳಂತಹ ವಿವಿಧ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ (Ayurveda medicines) ಬಳಸಲಾಗುತ್ತದೆ. ಹಾಗಿದ್ದರೆ ಬನ್ನಿ, ಇದನ್ನು ಯಾವ್ಯಾವ ಆರೋಗ್ಯ ಲಾಭಕ್ಕಾಗಿ (Clove health benefits) ಹೇಗೆ ಹೇಗೆ ಬಳಸಬಹುದು ಅಂತ ನೋಡೋಣ.

ಜೀರ್ಣಕ್ರಿಯೆಗೆ ಸಹಕಾರಿ: ಲವಂಗವು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ. ಬೆಳಗ್ಗೆ ಅವುಗಳನ್ನು ಅಗಿಯುವುದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದಿನದ ಪ್ರಾರಂಭದಲ್ಲಿ ಜೀರ್ಣಕ್ರಿಯೆಗೆ ಬೇಕಾದ ವ್ಯವಸ್ಥೆಯನ್ನು ಹೊಂದಿಸುತ್ತದೆ. ಮಲಬದ್ಧತೆ ಕಡಿಮೆ ಮಾಡುವುದರ ಜೊತೆಗೆ, ಲವಂಗವು ವಾಕರಿಕೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತ ಕಡಿಮೆಗೊಳಿಸುತ್ತದೆ: ಲವಂಗವು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಉರಿಯೂತದ ಮತ್ತು ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಂಧಿವಾತದಂತಹ ಕಾಯಿಲೆಗಳಿಂದ ಉಂಟಾಗುವ ಉರಿಯೂತವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ನಿಮ್ಮ ದೇಹವು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹಲ್ಲು ನೋವು (pain relief) ನಿವಾರಣೆ: ಲವಂಗವನ್ನು ಹಲ್ಲಿನ ನೋವು ನಿವಾರಕವಾಗಿ ಹಿಂದಿನಿಂದಲೂ ಬಳಸಲಾಗುತ್ತಿದೆ. ನೋವು ನಿವಾರಕ ಗುಣಲಕ್ಷಣಗಳ ಜೊತೆಗೆ, ಇದು ಬಾಯಿಯ ಉರಿಯೂತ, ಪ್ಲೇಕ್, ಜಿಂಗೈವಿಟಿಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿಮ್ಮ ಹಲ್ಲಿನ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೆ, ಜೀರ್ಣಕ್ರಿಯೆ ಬಲವಾಗುತ್ತದೆ.

ಬಾಯಿಯ ವಾಸನೆ: ಕೆಲವೊಬ್ಬರಿಗೆ ಬೆಳಗ್ಗೆ ಖಾಲಿ ಹೊಟ್ಟೆಗೆ ಲವಂಗವನ್ನು ಬಾಯಿಯಲ್ಲಿ ಹಾಕಿ ಅಗಿಯುವ ಅಭ್ಯಾಸವಿದೆ. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ನೈಸರ್ಗಿಕ ವಸ್ತುವಾಗಿ ಲವಂಗವನ್ನು ಬಳಸಲಾಗುತ್ತದೆ. ದುರ್ಗಂಧ ಶ್ವಾಸವನ್ನು ಕಡಿಮೆ ಮಾಡುತ್ತದೆ. ಹಲವಾರು ಗುಣಲಕ್ಷಣಗಳಿರುವ ಇದನ್ನು, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಅಗಿಯುವುದರಿಂದ ವಿವಿಧ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಯಕೃತ್ತಿಗೆ ಆರೋಗ್ಯಕಾರಿ: ಒಣಗಿದ ಲವಂಗ ಮೊಗ್ಗುಗಳು ಯಕೃತ್ತಿನ ಮೇಲೆ ಒಳ್ಳೆಯ ಆರೋಗ್ಯಕಾರಿ ಪರಿಣಾಮ ಬೀರುತ್ತವೆ. ಇದು ಹೊಸ ಕೋಶಗಳ ಬೆಳವಣಿಗೆ, ಯಕೃತ್ತಿನ ನಿರ್ವಿಷೀಕರಣವನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ರಕ್ತದ ಸಕ್ಕರೆಯ (blood pressure) ನಿಯಂತ್ರಣ: ಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ವಾಕರಿಕೆ ನಿಯಂತ್ರಣ: ಬೆಳಗ್ಗೆ ಉತ್ಸಾಹ ಕಳೆದುಕೊಳ್ಳುವವರು ಖಾಲಿ ಹೊಟ್ಟೆಯಲ್ಲಿ ಲವಂಗ ಅಗಿಯುವುದರಿಂದ ನಂಜುನಿರೋಧಕ ಲಕ್ಷಣಗಳಿಂದ ಪ್ರಯೋಜನ ಪಡೆಯಬಹುದು. ಇದು ಲಾಲಾರಸದೊಂದಿಗೆ ಬೆರೆತಾಗ, ಕೆಲವು ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇದು ವಾಕರಿಕೆ ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

ಕೀಲು ನೋವು ನಿವಾರಕ: ಲವಂಗವು ಮ್ಯಾಂಗನೀಸ್ ಮತ್ತು ಫ್ಲೇವನಾಯ್ಡ್‌ಗಳಂತಹ ಅಂಶಗಳನ್ನು ಹೊಂದಿರುತ್ತದೆ. ಇದು ಮೂಳೆಗಳ ಸಾಂದ್ರತೆ ಅಥವಾ ಗಟ್ಟಿತನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಅಂಶಗಳು ಮೂಳೆ ಅಂಗಾಂಶವನ್ನು ಸರಿಪಡಿಸಲು ನೆರವಾಗುತ್ತದೆ. ಈ ಮೂಲಕ ಕೀಲು ನೋವನ್ನು ಕಡಿಮೆ ಮಾಡುತ್ತದೆ. ಲವಂಗದ ಎಣ್ಣೆಯನ್ನು ಹಚ್ಚುವುದು ಕೀಲು ನೋವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ.

ಮಲಬದ್ಧತೆಗೆ ರಾಮಬಾಣ: ಲವಂಗವು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ. ಬೆಳಗ್ಗೆ ಅವುಗಳನ್ನು ಅಗಿಯುವುದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದಿನದ ಪ್ರಾರಂಭದಲ್ಲಿ ಜೀರ್ಣಕ್ರಿಯೆಗೆ ಬೇಕಾದ ವ್ಯವಸ್ಥೆಯನ್ನು ಹೊಂದಿಸುತ್ತದೆ. ಮಲಬದ್ಧತೆ ಕಡಿಮೆ ಮಾಡುವುದರ ಜೊತೆಗೆ, ಲವಂಗವು ವಾಕರಿಕೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ (immunity) ಶಕ್ತಿ: ಲವಂಗ ಸೇವನೆಯ ಮೂಲಕ ಜ್ವರ, ಶೀತ, ಬ್ರಾಂಕೈಟಿಸ್, ಸೈನಸ್, ವೈರಲ್ ಸೋಂಕನ್ನು ಕಡಿಮೆ ಮಾಡಬಹುದು. ಲವಂಗದ ಆಂಟಿವೈರಲ್ ಮತ್ತು ರಕ್ತ ಶುದ್ಧೀಕರಣ ಗುಣಲಕ್ಷಣಗಳು ರಕ್ತದಲ್ಲಿನ ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Bad Breath: ಬಾಯಿಯ ದುರ್ಗಂಧ ನಿವಾರಣೆಗೆ ಸರಳ ಉಪಾಯಗಳಿವು!

Exit mobile version