Site icon Vistara News

Custard Apple Benefits: ಕ್ಯಾನ್ಸರ್‌ ನಿರೋಧಕ ಗುಣವಿರುವ ಸೀತಾಫಲದಿಂದ ಎಷ್ಟೊಂದು ಆರೋಗ್ಯ ಲಾಭ!

Custard Apple

ತನ್ನ ವಿಶೇಷವಾದ ಘಮ ಹಾಗೂ ಸಿಹಿಯಾದ ರುಚಿಯಿಂದ ಗಮನ ಸೆಳೆಯುವ ಸೀತಾಫಲ (Custard Apple) ಎಂಬ ಹಣ್ಣು ಕೇವಲ ವಿಶೇಷ ಘಮದಿಂದಷ್ಟೇ ಅಲ್ಲ, ಅನೇಕ ಆರೋಗ್ಯಕರ ಲಾಭಗಳಿಂದಲೂ ಗಮನ ಸೆಳೆದಿರುವ ಹಣ್ಣೇ ಆಗಿದೆ. ವಿಟಮಿನ್‌ ಸಿ (vitamin c) ಹಾಗೂ ಪೊಟಾಶಿಯಂ ಹೇರಳವಾಗಿರುವ ಜೊತೆಗೆ ಅನೇಕ ಪೋಷಕಾಂಶಗಳಿಂದ (nutrients) ಸಮೃದ್ಧವಾಗಿರುವ ಸೀತಾಫಲ ಹಣ್ಣು ಐಸ್‌ಕ್ರೀಂನಂತೆ ಬಾಯಲ್ಲಿಟ್ಟರೆ ಕರಗುವ ಗುಣವನ್ನೂ ಹೊಂದಿದೆ. ಬನ್ನಿ, ಸೀತಾಫಲ ಹಣ್ಣನ್ನು ಸೇವಿಸುವ ಮೂಲಕ ಯಾವೆಲ್ಲ ರೋಗಗಳಿಂದ ನಾವು ದೂರವಿರಬಹುದು (Custard Apple benefits) ಎಂಬುದನ್ನು ನೋಡೋಣ ಬನ್ನಿ.

1. ಸೀತಾಫಲದಲ್ಲಿ ವಿಟಮಿನ್‌ ಸಿ ಸೇರಿದಂತೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಚರ್ಮಕ್ಕೆ ರಕ್ಷಣೆಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಚರ್ಮಕ್ಕೆ ಫ್ರೀ ರ್ಯಾಡಿಕಲ್ಸ್‌ನಿಂದಾಗುವ ಹಾನಿಯನ್ನು ತಪ್ಪಿಸಿ, ಬಹುಬೇಗ ಚರ್ಮ ಸುಕ್ಕಾಗದಂತೆ ನೋಡಿಕೊಳ್ಳುತ್ತದೆ. ಈ ಆಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್‌ ಹಾಗೂ ಹೃದಯದ ಕಾಯಿಲೆಗಳಿಂದಲೂ ರಕ್ಷಿಸುತ್ತವೆ.

2. ಸೀತಾಫಲವು ನಿಮ್ಮ ಕೆಟ್ಟ ಮೂಡನ್ನೂ ಸರಿಪಡಿಸುವ ಶಕ್ತಿ ಹೊಂದಿದೆ. ಅಂದರೆ, ಇದರಲಲ್ಲಿ ವಿಟಮಿನ್‌ ಬಿ೬ ಹೇರಳವಾಗಿದ್ದು, ಇವು ನ್ಯೂರೋ ಟ್ರಾನ್ಸ್‌ಮಿಟರ್‌ಗಳ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಸೆರಟೋನಿನ್‌ ಹಾಗೂ ಡೋಪಮೈನ್ ಉತ್ಪತ್ತಿಯಾಗಿ ನಿಮ್ಮ ಮೂಡ್‌ ಉಲ್ಲಾಸದಾಯಕವಾಗಿಸುತ್ತದೆ. ಖಿನ್ನತೆಯಂತ ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು.

3. ಕಣ್ಣಿನ ಆರೋಗ್ಯಕ್ಕೂ ಸೀತಾಫಲ ಅತ್ಯಂತ ಉತ್ತಮ. ಇದರಲ್ಲಿ ಲುಟೈನ್‌ ಎಂಬ ಕೆರೋಟಿನಾಯ್ಡ್‌ ಇರುವುದರಿಂದ ಇದು ಕಣ್ಣನ್ನು ಆರೋಗ್ಯವಾಗಿರಿಸುತ್ತದೆ. ಕಣ್ಣಿನ ಪೊರೆ, ಮಂದ ದೃಷ್ಠಿ ಮತ್ತಿತರ ಸಮಸ್ಯೆ ಬಹುಬೇಗ ಬಾರದಂತೆ ಇದು ತಡೆಯುತ್ತದೆ.

4. ಅಧಿಕ ರಕ್ತದೊತ್ತಡಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಹೆಚ್ಚಿರುವುದರಿಂದ ಇವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

5. ಸೀತಾಫಲ ಹಣ್ಣಿನಲ್ಲಿ ನಾರಿನಂಶ ಅತ್ಯಂತ ಹೆಚ್ಚಿರುವುದರಿಂದ ಇದು ಜೀರ್ಣಕ್ರಿಯೆಯನ್ನೂ ಉತ್ತೇಜಿಸುತ್ತದೆ. ಮಲಬದ್ಧತೆ ಮತ್ತಿತರ ಜೀರ್ಣಕ್ರಿಯೆಯ ಸಮಸ್ಯೆ ಇರುವ ಮಂದಿಗೆ ಇದು ಅತ್ಯಂತ ಒಳ್ಳೆಯ ಹಣ್ಣು. ಇದು ಜೀರ್ಣಾಂಗವ್ಯೂಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯದ ಉತ್ಪತ್ತಿಯನ್ನು ಪ್ರಚೋದಿಸಿ, ಜೀರ್ಣಾಂಗವ್ಯೂಹವನ್ನು ಆರೋಗ್ಯಯುತವಾಗಿಸುತ್ತದೆ.

6. ಸಂಶೋಧನೆಯ ಪ್ರಕಾರ, ಇದು ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಸ್ತನ ಕ್ಯಾನ್ಸರ್‌ಗೆ ಬಹಳ ಪರಿಣಾಮಕಾರಿ ಆಹಾರವಾಗಿದ್ದು, ಸ್ತನ ಕ್ಯಾನ್ಸರ್‌ನ ಗಡ್ಡೆಯ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಉದಾಹರಣೆಯಿದೆ. ಉಳಿದಂತೆ, ಜೀರ್ಣಾಂಗವ್ಯೂಹದ ಕೆಲವು ಕ್ಯಾನ್ಸರ್‌ಗಳಿಗೂ ಇದು ಅತ್ಯುತ್ತಮ ಹಣ್ಣು.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

7. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಇದರಲ್ಲಿ ಸಾಕಷ್ಟು ವಿಟಮಿನ್‌ ಸಿ ಇರುವುದರಿಂದ ದೇಹವನ್ನು ರೋಗಗಳಿಂದ ರಕ್ಷಿಸುವ ಹಾಗೂ ಬದಲಾಗುವ ಋತುಮಾನಗಳಲ್ಲಿ ಕಾಡುವ ಶೀತ, ನೆಗಡಿ ಕೆಮ್ಮುಗಳಂತ ತೊಂದರೆಗಳನ್ನು ಇವು ದೂರವಿರಿಸುತ್ತದೆ.

8. ಮಹಿಳೆಯರಲ್ಲಿ ಇತ್ತೀಚೆಗೆ ಸಾಮಾನ್ಯವಾದ ಪಿಸಿಒಎಸ್‌ ಮತ್ತಿತರ ಗರ್ಭಕೋಶದ ಸಮಸ್ಯೆಗೂ ಸೀತಾಫಲ ಅತ್ಯುತ್ತಮ. ಆದರೆ, ಇದರ ಈ ಎಲ್ಲ ಒಳ್ಳೆಯ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಯಾಕೆಂದರೆ, ಇದರಲ್ಲಿ ಕೆಲವು ಹಾನಿಕಾರಕ ಗುಣಗಳೂ ಇವೆ. ಮುಖ್ಯವಾಗಿ ನರವ್ಯೂಹದ ಸಮಸ್ಯೆಗಳಿಂದ ಬಳಲುತ್ತಿರುವ ಮಂದಿ, ಪರ್ಕಿಂಸನ್‌ ಕಾಯಿಲೆಯಿರುವ ಮಂದಿ ಇದರಿಂದ ದೂರವಿರುವುದು ಒಳ್ಳೆಯದು. ಇದರ ಸಿಪ್ಪೆಯಲ್ಲಿರುವ ಅನ್ನೋನಾಸಿನ್‌ ಎಂಬ ರಸಾಯನಿಕವು ಈ ನರಸಂಬಂಧೀ ಕಾಯಿಲೆಯಿರುವ ಮಂದಿಗೆ ಒಳ್ಳೆಯದಲ್ಲ. ಹಾಗಾಗಿ, ಯಾರೇ ಆದರೂ ಇದರ ಸಿಪ್ಪೆಯನ್ನು ತೆಗೆದೆಸೆದು, ಕೇವಲ ಹಣ್ಣನ್ನು ಮಾತ್ರ ತಿನ್ನಬೇಕು.

ಇದನ್ನೂ ಓದಿ: Health Tips: ಈ ನಿಮ್ಮ ಕೆಟ್ಟ ಅಭ್ಯಾಸಗಳಿಂದಾಗಿಯೇ ಶಕ್ತಿಗುಂದಿ ಉದಾಸೀನತೆ ಆವರಿಸುತ್ತದೆ ಗೊತ್ತೇ?

Exit mobile version