Site icon Vistara News

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Dengue Fever

ಡಾ. ಪದ್ಮಕುಮಾರ್ ಎವಿ, ಹಿರಿಯ ನಿರ್ದೇಶಕರು, ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಡೆಂಗ್ಯೂ ನಿರೋಧಕ ಲಸಿಕೆ ಇನ್ನಷ್ಟೇ ಪ್ರಯೋಗದ ಹಂತದಲ್ಲಿದೆ. ದೇಶದ ವಿವಿಧ ಭಾಗದಲ್ಲಿ ಸೊಳ್ಳೆಯಿಂದ ಉಂಟಾಗುವ ಡೆಂಗ್ಯೂ ಮಾರಣಾಂತಿಕ. ಕೆಲವರ ಜೀವವನ್ನು ಸಹ ಬಲಿಪಡೆದುಬಿಡುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿ ಡೆಂಗ್ಯೂಗೆ ಬಲಿಯಾಗುತ್ತಾರೆ. ಡೆಂಗ್ಯೂನಲ್ಲಿ ಪ್ರಮುಖವಾಗಿ ಸ್ಪೆಕ್ಟ್ರಮ್ ಡೆಂಗ್ಯೂನಿಂದ ಎಚ್ಚರಿಕೆ ವಹಿಸುವುದು ಅವಶ್ಯಕ. ಕಡಿಮೆ ತೀವ್ರತೆ, ಮಧ್ಯಮ ಹಾಗೂ ಅತಿ ಹೆಚ್ಚು ತೀವ್ರತೆಯ ಡೆಂಗ್ಯೂ ಹರಡುತ್ತದೆ. ಕಡಿಮೆ ಲಕ್ಷಣವಿರುವ ಡೆಂಗ್ಯೂ ಬಂದರೆ ಕೆಲವೇ ದಿನಗಳಲ್ಲಿ ಜ್ವರದ ಬಳಿಕ ಕಡಿಮೆಯಾಗಲಿದೆ. ಮಧ್ಯಮದ ತೀವ್ರತೆಯ ಡೆಂಗ್ಯೂ ಸಹ, ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯಿಂದ ಗುಣವಾಗಲಿದೆ. ಆದರೆ, ಅತಿಹೆಚ್ಚು ತೀವ್ರತೆಯ ಲಕ್ಷಣ ಹೊಂದಿರುವ ಡೆಂಗ್ಯೂ ಮನುಷ್ಯನನ್ನೇ ಬಲಿ ತೆಗೆದುಕೊಳ್ಳಬಹುದು. ದೇಹದಲ್ಲಿನ ಬಿಳಿರಕ್ತಕಣವನ್ನು ಕಡಿಮೆಗೊಳಿಸಿ ಮನುಷ್ಯರನ್ನು ಅಸ್ವಸ್ಥಗೊಳಿಸುತ್ತದೆ, ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ (Dengue Fever) ಬದುಕುವುದು ಕಷ್ಟ.

ಲಸಿಕೆಗಳು

ಡೆಂಗ್ಯೂ ನಿಯಂತ್ರಣಕ್ಕೆ ಲಸಿಕೆ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ, ಇದನ್ನು ಪಡೆದುಕೊಳ್ಳಲು ಪರ ವಿರೊಧ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸನೋಫಿ ಗ್ಲೋಬಲ್‌ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿ, ಪರವಾನಗಿ ಪಡೆದ “ಡೆಂಗ್‌ವಾಕ್ಸಿಯಾ” ಎಂಬ ಲಸಿಕೆಯು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಆಶಾದಾಯಕ ಬೆಳವಣಿಗೆಗಳು

ಡೆಂಗ್‌ವಾಕ್ಸಿಯಾದ ಹಿನ್ನಡೆಯ ಹೊರತಾಗಿಯೂ, ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿಯ ದಿಗಂತದಲ್ಲಿ ಭರವಸೆಯ ಬೆಳವಣಿಗೆಗಳಿವೆ. ಕನಿಷ್ಠ ಎರಡು ಸ್ಥಳೀಯ ಡೆಂಗ್ಯೂ ಲಸಿಕೆ ಅಭಿವೃದ್ಧಿಪಡಿಸಲು ಸಂಶೋಧನಾ ಸಂಸ್ಥೆಗಳ ನೇತೃತ್ವದಲ್ಲಿ ಸ್ಥಳೀಯ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿವೆ. ಹೆಚ್ಚುವರಿಯಾಗಿ, ಡೆಂಗ್ಯೂ ವಿರುದ್ಧ ಹೋರಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವ ಬದ್ಧತೆಯನ್ನು ಪ್ರದರ್ಶಿಸುವ ಲೈವ್-ಅಟೆನ್ಯೂಯೇಟೆಡ್ ಟೆಟ್ರಾವೆಲೆಂಟ್ ಲಸಿಕೆಯಂತಹ ಭರವಸೆಗೆ ಭಾರತವು ಅಂತರರಾಷ್ಟ್ರೀಯ ಪ್ರಯೋಗಗಳಲ್ಲಿ ಸಹಕರಿಸುತ್ತಿದೆ. ಹೀಗಾಗಿ ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭವಿಷ್ಯದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆ ಇದೆ, ಒಂದು ವೇಳೆ ಡೆಂಗ್ಯೂ ಲಸಿಕೆ ಜನರಿಗೆ ಸಿಕ್ಕರೆ, ಸಾಕಷ್ಟು ಸಾವು ನೋವುಗಳನ್ನು ತಡೆಯಬಹುದು.

Exit mobile version