Site icon Vistara News

Eco-Friendly Period Products : ಬಳಸಿ ಎಸೆಯುವ ಪ್ಯಾಡ್‌ಗೆ ಟಾಟಾ ಹೇಳಿ: ಪರಿಸರಸ್ನೇಹಿ ಋತುಚಕ್ರದ ಮಾರ್ಗಗಳಿವು!

Eco-Friendly Menstrual Products

ಬೆಂಗಳೂರು: ಮಹಿಳೆಯರ ಜೀವನದಲ್ಲಿ ಋತುಚಕ್ರ (Eco-Friendly Period Products) ಎಂಬುದು ಸಹಜ ಹಾಗೂ ನೈಸರ್ಗಿಕ ಕ್ರಿಯೆ. ಈ ಸಮಯದಲ್ಲಿ ಮಹಿಳೆ ಅನುಭವಿಸುವ ಹಲವಾರು ಸಮಸ್ಯೆಗಳು ಹಾಗೂ ಮುಜುಗರಕ್ಕೆ ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಉತ್ತರ ಸಿಕ್ಕಿವೆ. ಆದರೆ, ಹೆಚ್ಚುತ್ತಿರುವ ಮಾಲಿನ್ಯ ಇತ್ಯಾದಿಗಳನ್ನು ಗಮನಿಸಿದಾಗ, ಪ್ರತಿನಿತ್ಯ ಲಕ್ಷಗಟ್ಟಲೆ ಮಹಿಳೆಯರು ಬಳಸಿ ಎಸೆಯುವ ಪ್ಯಾಡ್‌ಗಳು ಭೂಮಿಯ ಮೇಲಿನ ತ್ಯಾಜ್ಯವನ್ನು ಹೆಚ್ಚಿಸುತ್ತಿವೆ ಎಂಬ ಕಳಕಳ ಪರಿಸರಪ್ರಿಯರದ್ದು. ಒಂದು ಪ್ಯಾಡ್‌ ಭೂಮಿಯಲ್ಲಿ ಮಣ್ಣಿನಲ್ಲಿ ಪೂರ್ತಿಯಾಗಿ ಕರಗಲು 500ರಿಂದ 800 ವರ್ಷಗಳು ಬೇಕು ಎಂದ ಸತ್ಯ ಅರಗಿಸಿಸಕೊಳ್ಳಲು ಕಷ್ಟವಾಗುತ್ತಿರುವಾಗ ಹಲವರು ಪರಿಸರ ಸ್ನೇಹಿ ಮಾರ್ಗಗಳತ್ತ ಮುಖ ಮಾಡುತ್ತಿದ್ದಾರೆ. ಈ ಕಳಕಳಿಯ ಹಿನ್ನೆಲೆಯಲ್ಲಿ ಬಳಸಿ ಎಸೆಯುವ ಪ್ಯಾಡ್‌ಗಳಿಗೆ ಪರ್ಯಾಯಾಗಿ ಇಂದು ಸಾಕಷ್ಟು ಪರ್ಯಾಯ ಮಾರ್ಗಗಳೂ ಲಭ್ಯವಿದ್ದು ಮಹಿಳೆಯರಿಗೆ ಋತುಚಕ್ರದ ದಿನಗಳು ಇನ್ನಷ್ಟು ಆರಾಮದಾಯಕ ಹಾಗೂ ಸಹಜವಾಗಿರುವಂತೆ ನೋಡಿಕೊಳ್ಳುವಲ್ಲಿಯೂ ಮುಂಚೂಣಿಯಲ್ಲಿದೆ. ಹಾಗಾದರೆ ಬನ್ನಿ, ಬಳಸಿ ಎಸೆಯುವ ಪ್ಯಾಡ್‌ಗಳಿಗೆ ಬದಲಾಗಿ ಇಂದು ಮಹಿಳೆ ತನ್ನ ಆ ದಿನಗಳಲ್ಲಿ ಯಾವೆಲ್ಲ ಪರಿಸರ ಸ್ನೇಹಿ ಮಾರ್ಗಗಳಿಗೆ ಮೊರೆ ಹೋಗಬಹುದು ಹಾಗೂ ಪ್ರಕೃತಿಯ ಉಳಿವಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬಹುದು ಎಂಬುದನ್ನು ನೋಡೋಣ.

ಕಪ್‌ಗಳು

ಇಂದು ಯುವ ಮಂದಿಯಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿ ಬಹಳಷ್ಟು ಮಂದಿ ಪ್ಯಾಡ್‌ಗೆ ಗುಡ್‌ಬೈ ಹೇಳಿ ಪರಿಸರ ಸ್ನೇಹಿ ಮಾರ್ಗವನ್ನು ಅಪ್ಪಿಕೊಂಡಿರುವುದಕ್ಕೆ ಪ್ರಮುಖ ಕಾರಣ ಈ ಕಪ್‌ಗಳು. ವ್ಯದ್ಯಕೀಯ ಗುಣಮಟ್ಟದ ಸಿಲಿಕಾನ್‌ನಿಂದ ಮಾಡಲ್ಪಟ್ಟಿರುವ ಮೆನ್‌ಸ್ಟ್ರುವಲ್‌ ಕಪ್‌ಗಳನ್ನು ಬಹಳಷ್ಟು ವರ್ಷಗಳ ಕಾಲ ಬಳಸಬಹುದಾಗಿದೆ. ಋತುಚಕ್ರದ ಸಂದರ್ಭದ ಸ್ರಾವವನ್ನು ಹಿಡಿದಿಟ್ಟುಕೊಳ್ಳಬಹುದಾದ ಕಪ್‌ಗಳಂತಹ ರಚನೆಯ ಇವು ಬಹಳ ಸುಲಭ ಹಾಗೂ ಸರಳವಾದಂಥವು ಎಂಬ ಮೆಚ್ಚುಗೆಗೂ ಪಾತ್ರವಾಗಿವೆ. ಆರಾಮದಾಯಕವೂ ಆಗಿರುವ ಇವನ್ನು ಹದಿಹರೆಯದ ಹುಡುಗಿಯರಿಂದ ವಯಸ್ಸಾದವರವರೆಗೂ ಎಲ್ಲರೂ ಬಳಸಬಹುದಾಗಿದ್ದು, ಬೇರೆ ಬೇರೆ ಗಾತ್ರಗಳಲ್ಲೂ ಲಭ್ಯವಿವೆ. ಪ್ಯಾಡ್‌ಗೆ ಪರ್ಯಾಯವಾಗಿ ಚಾಲ್ತಿಯಲ್ಲಿರುವ ಪರಿಸರ ಸ್ನೇಹಿ ಹಾಗೂ ಅತ್ಯಂತ ಯಶಸ್ವೀ ಉತ್ಪನ್ನ ಇದಾಗಿದ್ದು ಮಹಿಳೆಯರಿಂದ ಮುಖ್ಯವಾಗಿ ಯುವತಿಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: Menstruation: ಋತುಚಕ್ರದ ಸಂದರ್ಭ ಈ ಆಹಾರಗಳಿಂದ ದೂರವಿರಿ!

ಮಣ್ಣಿನಲ್ಲಿ ಕರಗಬಲ್ಲ ಪ್ಯಾಡ್‌ಗಳು

ಸಾಮಾನ್ಯ ಪ್ಯಾಡ್‌ನಂತೆಯೇ ಇದೂ ಕೂಡಾ ಪ್ಯಾಡ್‌ ಆಗಿದ್ದರೂ ಇದರಲ್ಲಿ ಬಳಸಿರುವ ವಸ್ತುಗಳೆಲ್ಲವೂ ಮಣ್ಣಿನಲ್ಲಿ ಕರಗಬಹುದಾದ ಪರಿಸರ ಸ್ನೇಹಿ ಪ್ಯಾಡ್‌. ಇದರಲ್ಲಿ ಪ್ಲಾಸ್ಟಿಕ್‌ ಮೂಲಗಳನ್ನು ಬಳಸದೆ, ಸುಲಭವಾಗಿ ಮಣ್ಣಿನಲ್ಲಿ ಕರಗಬಹುದಾದ ವಸ್ತುಗಳನ್ನು ಬಳಸಲಾಗಿದೆ. ಇದು ಸಾಮಾನ್ಯ ಮಹಿಳೆಯರವರೆಗೆ ತಲುಪಿಲ್ಲವಾದರೂ, ಹಲವರು ಇದನ್ನು ಬಳಸುವ ಮನಸ್ಸು ಮಾಡುತ್ತಿದ್ದಾರೆ. ಆದರೆ, ಸಾಮಾನ್ಯ ಪ್ಯಾಡ್‌ಗಿಂತ ಇದರ ದರ ಹೆಚ್ಚಿರುವುದರಿಂದ ಎಲ್ಲರಿಗೂ ಇದು ಕೈಗೆಟಕುವಂತಿಲ್ಲ ಎಂಬುದು ವಿಪರ್ಯಾಸ.

ಮರುಮಳಕೆ ಮಾಡಬಹುದಾದ ಬಟ್ಟೆಯ ಪ್ಯಾಡ್‌ಗಳು

ಬಳಸಿ ಎಸೆಯುವ ಬದಲು ತೊಳೆದು ಒಣಗಿಸಿ ಮತ್ತೆ ಬಳಸಬಹುದಾದಂತಹ ಪ್ಯಾಡ್‌ಗಳಿವು. ಇವು ಸಾಮಾನ್ಯವಾಗಿ ಬಟ್ಟೆಯಿಂದ ಮಾಡಲ್ಪಟ್ಟಿದ್ದು, ಇದರಿಂದ ತೇವ ಹೊರಹೋಗದಂತೆ ಹೊರಮೈಯಲ್ಲಿ ಬೇರೆ ಬಗೆಯ ಬಟ್ಟೆಯನ್ನು ಬಳಸಲಾಗಿದೆ. ಹತ್ತಿಬಟ್ಟೆ, ಬಿದಿರಿನ ಬಟ್ಟೆ ಮತ್ತಿತರ ನೈಸರ್ಗಿಕ ವಸ್ತ್ರಗಳನ್ನೇ ಬಳಸಿ ಇವುಗಳನ್ನು ಮಾಡಿದ್ದು ಇವು ಕೇವಲ ಪ್ರಕೃತಿ ಸ್ಣೇಹಿಯಷ್ಟೇ ಅಲ್ಲ, ಚರ್ಮ ಸ್ನೇಹಿ ಕೂಡಾ ಹೌದು.

ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್‌ ಡ್ರಿಂಕ್‌!

ಪೀರಿಯಡ್‌ ಪ್ಯಾಂಟಿ

ಇತ್ತೀಚೆಗೆ ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ಪೀರಿಯಡ್‌ ಪ್ಯಾಂಟಿ ಹೆಸರಿನ ಒಳಚಡ್ಡಿಗಳು ಕೇವಲ ಋತುಚಕ್ರದ ದಿನಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಒಳಮೈಯಲ್ಲಿ ಪ್ಯಾಡ್‌ನಂತಹ ಬಟ್ಟೆ ಮೊದಲೇ ಹೊಲಿಯಲಾಗಿದ್ದು, ಇದು ಸ್ರಾವ ಹೊರಗೆ ಸೋರದಂತೆ ತಡೆಯುತ್ತದೆ. ತೊಳೆದು ಮತ್ತೆ ಬಳಸಬಹುದಾದ ಈ ಪ್ಯಾಡ್‌ಗಳೂ ಕೂಡಾ ಯುವ ಮಂದಿಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Exit mobile version