ಸೌಂದರ್ಯವರ್ಧನೆಗೆ ಹಲವು ನೈಸರ್ಗಿಕ ಮಾರ್ಗಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಆಯುರ್ವೇದ ಪ್ರಾಚೀನ ವಿಜ್ಞಾನವೆಂದೇ ಪ್ರಪಂಚದಾದ್ಯಂತ ಅಂಗೀಕೃತವಾಗಿದೆ. ಕೊರಿಯಾದ ಹಲವು ಸೌಂದರ್ಯ ಉತ್ಪನ್ನಗಳು ಕೂಡ ಆಯುರ್ವೇದದಲ್ಲಿ ಹೇಳಿದ ಸೌಂದರ್ಯವರ್ಧಕ ಸಾಮಗ್ರಿಗಳಿಂದ ಮಾಡಲ್ಪಟ್ಟಿವೆ. ಒಟ್ಟಾರೆ ಆರೋಗ್ಯ ಹೆಚ್ಚಿಸುವ ಅದರ ಸಮಗ್ರ ವಿಧಾನಗಳ ಉಪಯೋಗಗಳು ನಿಮ್ಮನ್ನು ಆಶ್ಚರ್ಯಚಕಿತಗೊಳಿಸದೇ ಇರಲಾರವು. ಮುಖಕ್ಕೆ ವಯಸ್ಸಾಗುವುದನ್ನು (anti ageing) ತಡೆಯಲು (Face Care) ನೀವು ಈ ಐದು ಆಯುರ್ವೇದ (ayurveda) ಸೂತ್ರ ಅಥವಾ ಸಾಧನಗಳನ್ನು ಪ್ರಯತ್ನಿಸಬಹುದು.
ಶ್ರೀಗಂಧ
ಅರ್ಧ ಚಮಚ ಶ್ರೀಗಂಧದ ಪುಡಿಗೆ ಕೆಲವು ಹನಿ ನೀರು ಸೇರಿಸಿ. ಈ ಪೇಸ್ಟ್ ಅನ್ನು ಮುಖ, ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಇದು ಮೊಡವೆಗಳನ್ನು ನಿರೋಧಿಸುತ್ತದೆ. ಎಣ್ಣೆಯುಕ್ತ ಚರ್ಮವನ್ನು ಕಾಪಾಡುತ್ತದೆ. ಮುಖದಲ್ಲಿ ಬೀಳುವ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸ, ಗೋಧಿ ಹಿಟ್ಟು, ಅರಿಶಿನ ಪುಡಿ
ಈ ಮೂರೂ ಪದಾರ್ಥಗಳನ್ನು ಮಿಶ್ರಣ ಮಾಡಿ. ನಿಂಬೆ ರಸದ ಬದಲಿಗೆ ಮೊಸರು ಬಳಸಬಹುದು. ಮುಖದ ಮೇಲೆಲ್ಲಾ ಹಚ್ಚಿ ಒಣಗಲು ಬಿಡಿ. ನಿಂಬೆ ರಸದಲ್ಲಿರುವ ಆಮ್ಲಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಿ ಮೈಬಣ್ಣವನ್ನು ಹೊಳಪುಗೊಳಿಸುತ್ತದೆ. ಅರಿಶಿನವು ನಿಮ್ಮ ಮುಖವನ್ನು ಕಾಂತಿಯುತವಾಗಿಸುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಅಗತ್ಯವಾದ ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ.
ಹಾಲು
ಹಾಲು ಅತ್ಯುತ್ತಮವಾದ ತೈಲಮುಕ್ತ ಕ್ಲೆನ್ಸರ್ ಆಗಿದೆ ಮತ್ತು ಇದು ಚರ್ಮವನ್ನು ಒಣಗಿಸುವುದಿಲ್ಲ. ನಿಮ್ಮ ಮುಖವನ್ನು ಹಾಲಿನಿಂದ ತೊಳೆಯಿರಿ, ಇದರಿಂದ ರೋಮದ ಸೂಕ್ಷ್ಮ ರಂಧ್ರಗಳು ಮೇದೋಗ್ರಂಥಿಗಳ ಸ್ರಾವ ಅಥವಾ ಎಣ್ಣೆಯಿಂದ ಮುಚ್ಚಿಹೋಗುವುದಿಲ್ಲ.
ಜೇನುತುಪ್ಪ
ಒಣ ತ್ವಚೆ ಮಾತ್ರವಲ್ಲ, ಎಣ್ಣೆಯುಕ್ತ ಚರ್ಮಕ್ಕೂ ಮಾಯಿಶ್ಚರೈಸಿಂಗ್ ಅಗತ್ಯವಿದೆ. ಜೇನುತುಪ್ಪವು ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಜೇನುತುಪ್ಪದ ತೆಳುವಾದ ಪದರವನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ.
ಮುಲ್ತಾನಿ ಮಿಟ್ಟಿ
ಒಂದು ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ. ಸುಮಾರು ಮೂರು ಟೇಬಲ್ ಸ್ಪೂನ್‌ಗಳನ್ನು ರೋಸ್ ವಾಟರ್‌ನೊಂದಿಗೆ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ಮುಖವನ್ನು ತೊಳೆಯಿರಿ. ಇದು ನಿಮಗೆ ತೈಲ ಮುಕ್ತ, ನಯವಾದ ಮತ್ತು ಸ್ಪಷ್ಟವಾದ ಚರ್ಮವನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿ ಅಮೂಲ್ಯವಾದ ಗಿಡಮೂಲಿಕೆಗಳ ಅಂಶಗಳಿರುತ್ತವೆ.
ಇದನ್ನೂ ಓದಿ: ಗೋ ಸಂಪತ್ತು: ಆಯುರ್ವೇದದಲ್ಲಿ ತುಪ್ಪಕ್ಕಿದೆ ಮಹತ್ವ; ಯಾವೆಲ್ಲಾ ಔಷಧಿಗೆ ಬಳಸುತ್ತಾರೆ ನೋಡಿ!