ನಿಮ್ಮ ಕೂದಲಿಗೆ ಇತ್ತೀಚೆಗಿನ ದಿನಗಳಲ್ಲಿ ನೀವು ಬಳಸಿದ ಶಾಂಪೂ, ಕ್ರೀಂ, ಸೀರಮ್ಮುಗಳ ಪ್ರಮಾಣ ನೆನಪಿಸಿಕೊಳ್ಳಿ. ಅದಕ್ಕಾಗಿ ಖರ್ಚು ಎಷ್ಟು ಮಾಡಿರಬಹುದು ಊಹಿಸಿ. ಹಾಗಾದರೆ ಇವೆಲ್ಲ ನಿಮ್ಮ ಕೂದಲಿಗೆ ಒಳ್ಳೆಯದನ್ನೇ ಮಾಡಬೇಕಿತ್ತಲ್ಲ? ಇಷ್ಟರಲ್ಲಿ ನಿಮ್ಮ ಕೂದಲು ಪಳಪಳನೆ ಹೊಳೆವ ರೇಷ್ಮೆಯಂತೆ ಕಾಣಬೇಕಿತ್ತಲ್ಲ, ಮಾಡಿಲ್ಲ ಯಾಕೆ? ಎಂದು ನಿಮಗನ್ನಿಸಿದೆಯಾ? ಹಾಗಾದರೆ, ಎಲ್ಲೋ ಏನೋ ತಪ್ಪಾಗಿದೆ ಎಂದು ನಿಮಗನ್ನಿಸಿದೆಯಾ? ಹಾಗಾದರೆ ಬನ್ನಿ, ನೀವು ಮಾಡುವ ನಿಮಗೇ ಗೊತ್ತಾಗದ ಕೆಲವು ತಪ್ಪುಗಳನ್ನು ಇಲ್ಲಿ ನೋಡೋಣ. ಅಂತಹ ತಪ್ಪನ್ನು ನೀವು ಮಾಡುವುದನ್ನು ನಿಲ್ಲಿಸಿದರೆ, ನಿಮಗೆ ಯಾವ ಅದ್ಭುತ ಹೇರ್ ಪ್ರಾಡಕ್ಟುಗಳೇ ಬೇಕಾಗುವುದಿಲ್ಲ.
೧. ನೀವು ನಿಮ್ಮ ಕೂದಲಿಗೆ ಹೊಂದುವ ಶಾಂಪೂ ಬಳಸುವುದಿಲ್ಲ!: ಹೌದು, ಕೂದಲಿಗೆ ಸೂಕ್ತ ಶಾಂಪೂ ಕೊಳ್ಳುವ ಭರದಲ್ಲಿ ಸಿಕ್ಕಿದ್ದಲ್ಲ ಟ್ರೈ ಮಾಡುವ ಮಂದಿಯಿದ್ದಾರೆ. ಇದರಿಂದ ಕೂದಲು ಹಾಳಾಗುತ್ತದೆ. ಕೂದಲನ್ನು ಸಿಲ್ಕೀಯಾಗಿ ಸೆಲೂನ್‌ನಲ್ಲಿ ಮಾಡಿದ ಹಾಗೆ ಮಾಡುವ ಶಾಂಪೂಗಳ ಜಾಹಿರಾತಿಗೆ ಮರುಳಾಗಿ ಹೆಚ್ಚು ರಾಸಾಯನಿಕಯುಕ್ತ ಶಾಂಪೂಗಳನ್ನು ಕೊಂಡು ಕೂದಲನ್ನು ಮತ್ತಷ್ಟು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳಿತ್ತೀರಿ. ಹಾಗಾಗಿ, ಮೆದುವಾದ, ಕೊಳೆಯನ್ನು ತೊಳೆಯುವ, ಹಾನಿಕಾರಕ ರಾಸಾಯನಿಕ ಮುಕ್ತ ಒಳ್ಳೆಯ ಶಾಂಪೂಗೆ ಹಣ ವಿನಿಯೋಗಿಸಿ.
೨. ನೀವು ಆಗಾಗ ಹೇರ್‌ಕಟ್ ಮಾಡಿಕೊಳ್ಳುವುದಿಲ್ಲ: ಹೌದು, ಇದೂ ತಪ್ಪೇ! ಪ್ರತಿದಿನವೂ ಕೂದಲು ೦.೩-೦.೪ ಎಂಎಂ ನಷ್ಟು ಪ್ರತಿನಿತ್ಯ ಬೆಳೆಯುತ್ತದಂತೆ. ಇದು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ, ಅವರವರ ಆರೋಗ್ಯ ಹಾಘೂ ದೇಹ ಪ್ರಕೃತಿಗೆ ಸಂಬಂಧಿಸಿದಂತೆ. ಅದೇನೇ ಇದ್ದರೂ, ಸಣ್ಣ ಕೂದಲು ಹೊಂದಿದ ಮಂದಿಗೆ ಆಗಾಗ ಹೇರ್‌ಕಟ್ ಅವಶ್ಯಕತೆಯಿದೆ.
೩. ಕೂದಲಿಗೆ ಬಣ್ಣ ಹಚ್ಚುವ ಮೊದಲೇ ಮೆಹೆಂದಿ ಹಚ್ಚಿಕೊಳ್ಳುವುದು: ಬಣ್ಣಕ್ಕಾಗಿ ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಕ್ರಮ ಇಂದು ನಿನ್ನೆಯದಲ್ಲ. ಅದಕ್ಕೆ ಪುರಾತನ ಕಾಲದ ಇತಿಹಾಸ ಇದೆ. ಮೊದಲೇ ಬ್ಲೀಚ್ ಮಾಡಿದ ಕಲರ್ ಮಾಡಿದ ಕೂದಲ ಮೇಲೆ ಮೆಹೆಂದಿಯ ಬಣ್ಣ ಹೇಗೆ ಕೂರುತ್ತದೆ ಎಂಬ ಬಗ್ಗೆ ಹೇಳಲಾಗದಿದ್ದರೂ, ನೀವು ರಾಸಾಯನಿಕವಾಗಿ ಕೂದಲಿಗೆ ಬಣ್ಣ ಹಾಕಿಸಿಕೊಳ್ಳಲು ನಿರ್ಧರಿಸಿದ್ದೀರಾದರೆ, ನೀವು ಹಚ್ಚಿದ ಮೆಹೆಂದಿ ಪೂರ್ಣ ಹೋಗುವವರೆಗೆ ಕಾಯಿರಿ.
೪. ನೀವು ಕೂದಲ ಗಂಟುಗಳನ್ನು ಸರಿಯಾಗಿ ಬಿಡಿಸಿಕೊಳ್ಳುವುದಿಲ್ಲ: ಕೂದಲು ಗಂಟುಗಳಾಗುತ್ತಿದ್ದರೆ ದಿನವೂ ಚೆನ್ನಾಗಿ ಬಾಚಿ ಬಿಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದನ್ನು ಹಾಗೆಯೇ ಬಿಟ್ಟರೆ ಕೂದಲು ಹಾಳಾಗುತ್ತದೆ.
೫. ಒದ್ದೆ ಕೂದಲನ್ನೇ ಬಾಚುತ್ತೀರಿ: ಬಹುತೇಕರು ಮಾಡುವ ದೊಡ್ಡ ತಪ್ಪು ಎಂದರೆ ಒದ್ದೆ ಕೂದಲನ್ನು ಬಾಚುವುದು. ಇದು ನಿಮಗೇ ಗೊತ್ತಿಲ್ಲದಂತೆ ಕೂದಲನ್ನು ಹಾಳು ಮಾಡುತ್ತದೆ. ಕೂದಲ ಕ್ಯುಟಿಕಲ್‌ಗೆ ನೀರಿನಂಶದಿಂದಾಗಿ ಬಾಚುವಾಗ ಹಾನಿಯಾಗಬಹುದು. ಇದರಿಂದ ಕೂದಲುದುರುವಿಕೆ ಹೆಚ್ಚಾಗಬಹುದು. ಒದ್ದೆಯಾಗಿರುವಾಗಲೇ ಬಾಚಬೇಕೆಂದು ನೀವು ಬಯಸಿದ್ದರೆ ಅಗಲ ಹಲ್ಲಿನ ಬಾಚಣಿಗೆಯಿಂದ ಬಾಚಿ.
೬. ಸೂಕ್ತವಲ್ಲದ ಉಪಕರಣಗಳನ್ನು ಕೂದಲಿಗೆ ಬಳಸುವುದು: ಕೂದಲನ್ನು ಬಾಚಿಕೊಳ್ಳಲು ಬಳಸುವ ಬಾಚಣಿಗೆ, ಹೇರ್ ಬ್ರಷ್ ನಿಮ್ಮ ಕೂದಲಿಗೆ ಹೊಂದುವಂತಿರಬೇಕು. ಹೆಚ್ಚು ಸುಕ್ಕಾಗುವ ಮಂದಿ ತಮ್ಮ ಕೂದಲಿಗೆ ಹೊಂದುವ ಮೆದುವಾಗಿ ಸುಕ್ಕನ್ನು ಬಿಡಿಸಿಕೊಳ್ಳವ ಬಾಚಣಿಗೆ ಬಳಸಬೇಕು.
ಇದನ್ನೂ ಓದಿ: Hair Care: ಕೂದಲು ಬೆಳ್ಳಗಾಗುತ್ತಿದೆಯೇ? ಈ ಆಹಾರಗಳು ನೆರವಾಗಬಹುದು!
೭. ಅತಿಯಾದ ಬಿಸಿನೀರಿನಿಂದ ತಲೆಗೆ ಸ್ನಾನ ಮಾಡಿಕೊಳ್ಳುವುದು: ಕೂದಲ ಕೊಳೆ ತೊಳೆಯಲು ಉಗುರು ಬೆಚ್ಚಗಿನ ನೀರಿನಿಂದ ಹೆಚ್ಚು ಬೆಚ್ಚಗೆ ಬಳಸಬಾರದು. ಹೆಚ್ಚು ಬಿಸಿನೀರಿನ ಸ್ನಾನದಿಂದ ಕೂದಲು ಒಣಕಲಾಗುತ್ತದೆ, ನಿಸ್ತೇಜವಾಗುತ್ತದೆ. ಸರಿಯಾಗಿ ಕೂರದೆ, ಆರಾಡುತ್ತಿರುತ್ತದೆ. ತಲೆಹೊಟ್ಟು, ತುರಿಕೆ ಇತ್ಯಾದಿಗಳೂ ಬಾಧಿಸಬಹುದು.
೮. ಕೂದಲಿಗೆ ಬ್ಲೀಚ್, ಕಲರ್ ಮಾಡಿಸಿಕೊಳ್ಳುವುದು: ಕೂದಲಿಗೆ ಬೇರೆ ಬಣ್ಣಗಳನ್ನು ಟ್ರೈ ಮಾಡುವುದು, ಟ್ರೆಂಡಿಯಾಗಿ ಕಾಣಿಸಿಕೊಳ್ಳುವುದ ತಪ್ಪೇನಲ್ಲ. ಅದು ಆಕರ್ಷಿಸುತ್ತದೆ ನಿಜ. ಆದರೆ, ಇವು ಕೂದಲನ್ನು ಹಾಳು ಮಾಡುತ್ತವೆ. ಇದರಿಂದ ಕೂದಲು ಸವಕಲಾಗಿ, ಕಳಾಹೀನವಾಗಿ ಬದಲಾಗುತ್ತದೆ.ಮ್ಮೆ ಇವು ಚಂದ ಕಾಣುತ್ತವೆ ನಿಜ, ಆದರೆ, ಇದರಿಂದಾದ ಹಾನಿ ನಿಮ್ಮನ್ನು ಪಶ್ಚಾತಾಪ ಪಡುವಂತೆ ಮಾಡುತ್ತದೆ. ಹಾಗಾಗಿ ಅಪರೂಪಕೊಮ್ ಕಲರ್ ಮಾಡಿಕೊಳ್ಳಿ, ಮಾಡಿಸಿಕೊಂಡರೂ ಕೂದಲನ್ನು ಸರಿಯಾಗಿ ಕಾಳಜಿ ಮಾಡಿ.
೯. ನೀವು ಬ್ಯೂಟಿ ಪಾರ್ಲರ್/ ಸೆಲೂನ್ ಆಗಾಗ ಬದಲಾಯಿಸುವುದು: ಕೂದಲು, ಚರ್ಮದ ಸಂದರ್ಯಕ್ಕಾಗಿ ಪಾರ್ಲರ್ ಭೇಟಿ ಸಾಮಾನ್ಯ. ಆದರೆ, ಆಗಾಗ ಪಾರ್ಲರ್ ಬದಲಾವಣೆ ಮಾಡುತ್ತಿದ್ದರೆ, ಇದರ ಪರಿಣಾಮ ನೀವು ಕಾಣುತ್ತೀರಿ. ಹಾಗಾಗಿ, ಆದಷ್ಟೂ ಒಂದೇ ಪಾರ್ಲರ್‌ಗೆ ವಿಧೇಯರಾಗಿರಿ.
ಇದನ್ನೂ ಓದಿ: Hair care | ಕಾಫಿ, ಚಹಾ, ಕೋಲಾಗಳಿಗೆ ಗುಡ್ ಬೈ ಹೇಳಿ: ಇಲ್ಲಿವೆ ಬೊಕ್ಕತಲೆಗೆ ಐದು ಸೂಪರ್‌ಫುಡ್!