Site icon Vistara News

Health Tips: ಈ ನಿಮ್ಮ ಕೆಟ್ಟ ಅಭ್ಯಾಸಗಳಿಂದಾಗಿಯೇ ಶಕ್ತಿಗುಂದಿ ಉದಾಸೀನತೆ ಆವರಿಸುತ್ತದೆ ಗೊತ್ತೇ?

jogging

ಕೆಲವೊಮ್ಮೆ ನಮಗೆ ಎಷ್ಟೇ ಕೆಲಸ ಮಾಡಬೇಕೆಂದರೂ ಶಕ್ತಿ, ಸಾಮರ್ಥ್ಯ ಪುಟಿದೇಳುವಂತಿರುತ್ತದೆ. ಆದರೆ, ಇನ್ನೂ ಕೆಲವೊಮ್ಮೆ, ಅದೇನಾಯಿತೋ ಗೊತ್ತಿಲ್ಲ ಎಂಬಂತೆ ಶಕ್ತಿಹೀನರಾಗಿಬಿಡುತ್ತೇವೆ. ಯಾವ ಕೆಲಸ ಮಾಡಲೂ ಶಕ್ತಿಯಿಲ್ಲ, ಸುಮ್ಮನೆ ಮಲಗಿ ಬಿಡೋಣ ಎಂಬಷ್ಟು ಉದಾಸೀನತೆ, ಶಕ್ತಿಹೀನತೆ (lack of energy) ನಮ್ಮನ್ನು ಕಾಡುತ್ತದೆ. ಎಷ್ಟೆಂದರೆ, ತೀರಾ ನಮ್ಮ ನಿತ್ಯದ ಕೆಲಸವೂ ಬೇಸರ ತರಿಸುವಷ್ಟು ಸುಸ್ತು, ಮುಖ್ಯವಾಗಿ ಮಾನಸಿಕ ಸುಸ್ತು (mental fatigue) ನಮ್ಮನ್ನು ಕಾಡುತ್ತದೆ. ಹೀಗೇಕೆ ಎಂದು ಅನಿಸಬಹುದು. ಅಷ್ಟಕ್ಕೂ ಯಾವ ಕ್ಲಿಷ್ಟಕರ ಕೆಲಸವನ್ನು ನಾವು ಮಾಡಿದ್ದೇವೆ ಅಂತ ಹೀಗೂ ಸುಸ್ತಾಗುತ್ತಿದೆ ಅನಿಸಬಹುದು. ಆದರೆ, ನಿಮ್ಮದೇ ಕೆಲವು ಕೆಟ್ಟ ಅಭ್ಯಾಸಗಳು (bad health habits) ನಿಮ್ಮ ಶಕ್ತಿಯನ್ನೆಲ್ಲ ಹಿಂಡಿ ತೆಗೆದು ನಿಮ್ಮನ್ನು ಶಕ್ತಿಹೀನರನ್ನಾಗಿ ಮಾಡಿಬಿಟ್ಟಿರುತ್ತದೆ. ಬನ್ನಿ, ಯಾವ ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಶಕ್ತಿಯನ್ನೇ ಬಸಿದು ತೆಗೆದುಬಿಡುತ್ತದೆ ಎಂಬುದನ್ನು ತಿಳಿಯುವ ಮೂಲಕ ಆದಷ್ಟೂ ಒಳ್ಳೆಯ ದಿನಚರಿಯ (good health habits) ಅಭ್ಯಾಸದತ್ತ ಮುಖ ಮಾಡಬಹುದು (Health Tips) ಎಂಬುದನ್ನು ತಿಳಿಯೋಣ.

1. ತಡವಾಗಿ ಮಲಗುವ ಅಭ್ಯಾಸ: ಹೌದು. ಬಹಳಷ್ಟು ಮಂದಿ ಕಚೇರಿ ಕೆಲಸ, ತಡವಾಗಿ ಕಚೇರಿಯಿಂದ ಮರಳುವುದು, ಡಿಜಿಟಲ್‌ ದಾಸನಾಗಿರುವುದು, ತಡರಾತ್ರಿ ಸಿನಿಮಾ ನೋಡುತ್ತಾ ಮಲಗುವುದು ಇತ್ಯಾದಿ ಇತ್ಯಾದಿ ಕೆಲಸಗಳಿಂದಾಗಿ ತಡವಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರ ಫಲವಾಗಿ ಬೆಳಗ್ಗೆ ಬೇಗ ಏಳುವುದೂ ಸಾಧ್ಯವಾಗುವುದಿಲ್ಲ. ನಿದ್ದೆ ನಿತ್ಯವೂ ಕೆಟ್ಟಿರುವುದರಿಂದ ಬೇರೆ ಸಮಯಗಳಲ್ಲಿ ಮಲಗುವುದೂ ಕೂಡಾ ಅಭ್ಯಾಸವಾಗಿಬಿಟ್ಟಿರುತ್ತದೆ. ಇನ್ನೂ ಕೆಲವರಿಗೆ ಬೇಗ ಮಲಗೊದರೂ ಅಭ್ಯಾಸ ಬಲದಿಂದ ನಿದ್ದೆ ಬರುವುದೂ ಇಲ್ಲ. ಆದರೆ, ಈ ಎಲ್ಲವುಗಳೂ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಗಲಿನ ಕೆಲಸ ಕಾರ್ಯಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಚುರುಕಾಗಿರಲು ಸಾಧ್ಯವಾಗುವುದಿಲ್ಲ.

2. ಬ್ರೇಕ್‌ ತೆಗೆದುಕೊಳ್ಳದೆ ಇರುವುದು: ನಿರಂತರ ಕೆಲಸ ಮಾಡುತ್ತಲೇ ಇರುವಾಗ ಮಧ್ಯಮಧ್ಯದಲ್ಲಿ ಬ್ರೇಕ್‌ನ ಅವಶ್ಯಕತೆ ಇರುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಬ್ರೇಕ್‌ ಇಲ್ಲದೆ ಕೆಲಸ ಮಾಡುವುದರಿಂದ ಖಂಡಿತವಾಗಿಯೂ ಮತ್ತೆ ಕೆಲಸ ಮಾಡಲು ಚೈತನ್ಯ ಇರುವುದಿಲ್ಲ. ಒಂದು ಕೆಲಸದ ನಂತರ ಮತ್ತೊಂದು ಕೆಲಸವನ್ನು ನಿರಾಯಾಸವಾಗಿ ಮಾಡಲು ಮಧ್ಯದಲ್ಲಿ ಬ್ರೇಕ್‌ ಬೇಕೇ ಬೇಕು.

binge eating

3. ಅನಾರೋಗ್ಯಕರ ಆಹಾರ ಸೇವನೆ: ಆರೋಗ್ಯಕರವಾದ ಆಹಾರ ಸೇವಿಸದೆ ಇರುವುದೂ ಕೂಡಾ ಕಾರಣವಾಗಿರಬಹುದು. ಸಕ್ಕರೆ ಸೇರಿಸಿದ ಆಹಾರಗಳು, ಜ್ಯೂಸ್‌, ಕಾರ್ಬೋನೇಟೆಡ್‌ ಡ್ರಿಂಕ್‌ಗಳು, ಜಂಕ್‌ ತಿನಿಸುಗಳಾದ ಪಿಜ್ಜಾ, ಫ್ರೆಂಚ್‌ಫ್ರೈಗಳು, ಡೀಪ್‌ ಫ್ರೈಡ್‌ ಆಹಾರಗಳು ಇತ್ಯಾದಿಗಳ ಸೇವನೆಯಿಂದ ಆ ಕ್ಷಣಕ್ಕೆ ಶಕ್ತಿ ಬಂದಂತೆ ಅನಿಸಿದರೂ, ಆಮೇಲೆ ಉದಾಸೀನತೆ, ಶಕ್ತಿಗುಂದಿದ ಅನುಭವವಾಗುತ್ತದೆ.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

4. ಸರಿಯಾಗಿ ನೀರು ಕುಡಿಯದೇ ಇರುವುದು: ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದೇ ಇದ್ದರೂ ಶಕ್ತಿಗುಂದಿದ ಅನುಭವವಾಗುತ್ತದೆ. ಹಾಗಾಗಿ, ನೀರು ಆಗಾಗ ಕುಡಿಯುತ್ತಿರುವುದು ಬಹಳ ಮುಖ್ಯ.

5. ಬ್ರೇಕ್‌ಫಾಸ್ಟ್‌ ತಪ್ಪಿಸುವುದು: ಬ್ರೇಕ್‌ಫಾಸ್ಟ್‌ ತಪ್ಪಿಸುವುದರಿಂದಲೂ ಸಾಕಷ್ಟು ಸಮಸ್ಯೆಗಳಾಗುತ್ತವೆ. ಬೆಳಗಿನ ಉಪಹಾರ, ಆ ಇಡೀ ದಿನಕ್ಕೆ ಬೇಕಾದ ಶಕ್ತಿಯನ್ನು ಪೂರೈಸುವುದರಿಂದ ಹಾಗೂ ಬೆಳಗ್ಗೆ ಕೆಲಸ ಆರಂಭಿಸಲು ಉಲ್ಲಾಸ, ಚೈತನ್ಯ ನೀಡುವುದರಿಂದ ಉಪಹಾರವನ್ನು ಯಾವತ್ತೂ ತಪ್ಪಿಸಬೇಡಿ.

ಇದನ್ನೂ ಓದಿ: Health Tips: ಹಬ್ಬದ ಸಂದರ್ಭ ಅತಿಯಾಗಿ ತಿನ್ನದೆ ಆರೋಗ್ಯ ಕಾಪಾಡಲು ಈ ಟಿಪ್ಸ್‌ ನೆನಪಿಡಿ!

Exit mobile version