ಅಧಿಕ ರಕ್ತದೊತ್ತಡ (high Blood Pressure) ಸಮಸ್ಯೆಯಿಂದ ತಲೆಬಿಸಿ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಕೆಲವು ಸರಳ ಪೇಯಗಳನ್ನು (drinks to lower blood pressure) ನಿಮ್ಮ ನಿತ್ಯದ ಆಹಾರದ ದಿನಚರಿಯಲ್ಲಿ ಸೇರಿಸಿಕೊಳ್ಳಿ. ನಿತ್ಯವೂ ಒಂದಿಷ್ಟು ಯೋಗವೋ ವ್ಯಾಯಾಮವೋ, ನಡಿಗೆಯನ್ನೋ ನಿಯಮಿತವಾಗಿ ಮಾಡುತ್ತಾ, ಹಿತಮಿತವಾದ ಆಹಾರ ಸೇವನೆ ಮಾಡುತ್ತಾ, ತರಕಾರಿಗಳನ್ನು ತಿನ್ನುತ್ತಾ ಸರಿಯಾದ ಆಹಾರಕ್ರಮವನ್ನೂ ಪಾಲನೆ ಮಾಡುತ್ತಾ ಬಂದಲ್ಲಿ (health tips) ಖಂಡಿತ ನೀವು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ (blood pressure tips) ಮಾಡಬಹುದು, ಸಮತೋಲನಕ್ಕೆ ತರಬಹುದು.
ನಿಮ್ಮ ಈ ಆರೋಗ್ಯ ಸಮಸ್ಯೆಯ ಬಗ್ಗೆ ನೀವು ಗಂಭೀರರಾಗಿದ್ದಲ್ಲಿ ಖಂಡಿತವಾಗಿಯೂ ನಿಮಗೆ ಅಧಿಕ ಸೋಡಿಯಂ ಇರುವ ಆಹಾರ ಪದಾರ್ಥಗಳಿಗೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ತಿಳಿದಿರಬಹುದು. ರೆಡಿಮೇಡ್ ಆಹಾರಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳು, ಪಿಜ್ಜಾ ಬರ್ಗರ್‌ನಂತಹ ಜಂಕ್‌ಗಳು, ಸಕ್ಕರೆಯಿಂದ ತುಂಬಿರುವ ಸೋಡಾ ಹಾಗೂ ಕ್ಯಾನ್‌ನಲ್ಲಿರುವ ಪೇಯಗಳು ಇತ್ಯಾದಿಗಳನ್ನೆಲ್ಲ ತಿನ್ನದೆ ಆರೋಗ್ಯಕರ ಆಹಾರದ ಸೇವನೆಯತ್ತ ನೀವು ಗಮನ ಹರಿಸುತ್ತಿರಬಹುದು. ಇವುಗಳ ಜೊತೆಗೆ ಈ ಕೆಲವು ಪೇಯಗಳನ್ನೂ ಸೇವಿಸಿದರೆ, ಅಧಿಕ ರಕ್ತದೊತ್ತಡ ಇಳಿಕೆಯತ್ತ ಮುಖ ಮಾಡುತ್ತದೆ. ಬನ್ನಿ, ಆ ಪೇಯಗಳು ಯಾವುವು ಎಂಬುದನ್ನು ನೋಡೋಣ.
1. ಹಾಲು: ಪ್ಯಾಶ್ಚರೀಕರಿಸಿದ, ಕಡಿಮೆ ಕೊಬ್ಬು ಇರುವ ಹಾಲು ಬೆಳಗ್ಗೆ ದಿನವೂ ಕುಡಿಯುವುದು ಅಧಿಕ ರಕ್ತದೊತ್ತಡ ಇರುವ ಮಂದಿಗೆ ಬಹಳ ಒಳ್ಳೆಯದು. ದರಲ್ಲಿ ಪಾಸ್ಪರಸ್, ಪೊಟಾಶಿಯಂ, ಹಾಗೂ ಕ್ಯಾಲ್ಶಿಯಂಗಳೆಂಬ ಪೋಷಕಾಂಶಗಳು ಇರುವುದರಿಂದ ಹಾಗೂ ಮುಖ್ಯವಾಗಿ ವಿಟಮಿನ್ ಡಿ ಕೂಡಾ ಸಿಗುವುದರಿಂದ ಇದು ಆರೋಗ್ಯಕರ ರಕ್ತದೊತ್ತಡ ಹೊಂದುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಇದು ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಆದ ಪಾಲ್ಮಿಟಿಕ್ ಆಸಿಡ್ ಉತ್ಪಾದನೆಯಾಗದಂತೆ ತಡೆಗಟ್ಟಿ ಕ್ಯಾನ್ಸರ್‌ನಂತಹ ರೋಗಗಳಿಂದಲೂ ರಕ್ಷಿಸುತ್ತದೆ.
3. ದಾಸವಾಳದ ಚಹಾ: ದಾಸವಾಳದಲ್ಲಿ (hibiscus) ಆಂಥೋ ಸಯನಿನ್, ಆಂಜಿಯೋಟೆನ್ಸಿನ್ ಮೊದಲಾದ ಆಂಟಿ ಆಕ್ಸಿಡೆಂಟ್‌ಗಳಿದ್ದು, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಎಲ್ಲಕ್ಕಿಂತ ಕೆಂಪು ದಾಸವಾಳದ ಹೂವಿನ ಚಹಾ ಅತ್ಯಂತ ಒಳ್ಳೆಯದು. ೨೦೧೯ರಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ, ದಿನವೂ ಎರಡು ಕಪ್ ದಾಸವಾಳದ ಜ್ಯೂಸ್ ಅನ್ನು ಒಂದು ತಿಂಗಳ ಕಾಲ ದಿನವೂ ಬೆಳಗ್ಗೆ ಕುಡಿದ ಮಂದಿಯ ರಕ್ತದೊತ್ತಡದಲ್ಲಿ ಗಮನಾರ್ಹ ಬದಲಾವಣೆಗಳಾಗಿತ್ತು. ಇಲ್ಲಿ ಕೇವಲ ದಾಸವಾಳದ ಜ್ಯೂಸ್ ಕುಡಿಯುವುದರ ಜೊತೆಗೆ, ಸರಿಯಾದ ಆಹಾರ ಕ್ರಮವನ್ನೂ ಪಾಲಿಸಲಾಗಿತ್ತು.
4. ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್‌ನಲ್ಲಿ (Pomegranate juice) ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿದೆ. ದಾಳಿಂಬೆಯಲ್ಲಿ ಪೊಟಾಶಿಯಂ ಹಾಗೂ ಹೃದಯ ಸ್ನೇಹಿ ಪೋಷಕಾಂಶಗಳಿರುವುದರಿಂದ ಇದು ಅಧಿಕ ರಕ್ತದೊತ್ತಡದ ಮಂದಿಗೆ ಅತ್ಯಂತ ಒಳ್ಳೆಯದು. ೨೦೧೮ರಲ್ಲಿ ನಡೆದ ಸಂಶೋಧನೆಯೊಂದರಲ್ಲಿ ನಿತ್ಯವೂ ಆರು ಔನ್ಸ್‌ಗಳಷ್ಟು ದಾಳಿಂಬೆ ರಸವನ್ನು ಆರು ವಾರಗಳ ಕಾಲ ಕುಡಿದ ಟೈಪ್ ೨ ಮಧುಮೇಹವೂ ಇರುವ ಮಂದಿಯಲ್ಲಿ ರಕ್ತದೊತ್ತಡ ಸಾಕಷ್ಟು ಸಮತೋಲನಕ್ಕೆ ಬಂದಿತ್ತು.
ಇದನ್ನೂ ಓದಿ: ಹೃದಯಾಘಾತ ಭೀತಿ; ಕೊರೊನಾದಿಂದ ಪಾರಾದವರು ಹೆಚ್ಚು ಕೆಲಸ ಮಾಡದಂತೆ ಕೇಂದ್ರ ಸೂಚನೆ!