ಕಿಡ್ನಿಯಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂಬ ತೊಂದರೆ ದು ಅಸಾಧಾರಣ ನೋವನ್ನು ಕೊಡುವ ಸಮಸ್ಯೆ. ಆಗಾಗ, ಕಿಡ್ನಿಯ ಈ ಕಲ್ಲುಗಳು ಕಿಡ್ನಿಯಿಂದ ಮೂತ್ರನಾಳಕ್ಕೆ ಪ್ರವಹಿಸುವಾಗ ತಡೆಯಲಾಗದ ನೋವನ್ನು ಕೊಡುತ್ತದಂತೆ. ಆಗಾಗ ಕೆಳಹೊಟ್ಟೆಯಲ್ಲಿ ಸಹಿಸಲಸಾಧ್ಯ ನೋವು, ತಲೆನೋವು, ಸುಸ್ತು, ತಲೆಸುತ್ತು, ವಾಂತಿ ಇತ್ಯಾದಿಗಳು ಕಿಡ್ನಿಯಲ್ಲಿ ಕಲ್ಲಿನ ಲಕ್ಷಣಗಳು. ಇಂಥ ಸಮಸ್ಯೆ ಕಂಡುಬಂದಾಗ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಹಾಗಾದರೆ ಬನ್ನಿ, ಕಿಡ್ನಿ ಕಲ್ಲಿನ ಸಮಸ್ಯೆಗೆ ಪರಿಹಾರಗಳೇನು ಎಂಬುದನ್ನು ನೋಡೋಣ.
1. ನೀರು ಕುಡಿಯಿರಿ: ಕಿಡ್ನಿಯಲ್ಲಿ ಕಲ್ಲು ಎಂಬ ಸಮಸ್ಯೆಗೆ ನೀರು ಕುಡಿಯುವುದು ಅತ್ಯಂತ ಪ್ರಮುಖವಾದ ಹಾಗೂ ನೈಸರ್ಗಿಕವಾದ ವಿಧಾನ. ನೀವು ಹೆಚ್ಚು ನೀರು ಕುಡಿಯದಿದ್ದರೆ ಸಹಜವಾಗಿಯೇ ಮೂತ್ರ ಕಡಿಮೆಯಾಗುತ್ತದೆ. ಕಡಿಮೆ ಮೂತ್ರ ಎಂದರೆ ಮೂತ್ರ ಹೆಚ್ಚು ಉಪ್ಪಾಗಿಯೂ ಇರುವಿದರಿಂದ ಕಲ್ಲುಗಳ ಸಾಧ್ಯತೆ ಹೆಚ್ಚು. ಹಾಗಾಘಿ ನಿತ್ಯವೂ ಎಂಟು ಲೋಟಗಳಷ್ಟಾದರೂ ನೀರು ಕುಡಿಯಿರಿ. ಇದರ ಪರಿಣಾಮ ದಿನಕ್ಕೆ ಎರಡು ಲೀಟರ್‌ಗಳಷ್ಟಾದರೂ ಮೂತ್ರ ಹೊರ ಹೋಗುವಂತಾಗಬೇಕು. ನಿಮ್ಮ ಮೂಕ್ರದ ಕಲ್ಲುಗಳು ಗಡ್ಡೆಗಳಾದಂತೆ ಆಗಿದೆಯಾದಲ್ಲಿ, ಇನ್ನೂ ಹೆಚ್ಚು ನೀರು ಕುಡಿವ ಅವಶ್ಯಕತೆಯಿದೆ. ಮೂತ್ರ ಯಾವ ಬಣ್ಣದಲ್ಲಿದೆ ಎಂಬುದರ ಮೇಲೆ ನೀವು ತೆಗೆದುಕೊಳ್ಳುತ್ತಿರುವ ನೀರಿನ ಪ್ರಮಾಣ ಸರಿಯಾಗಿದೆಯೇ ಎಂದು ಹೇಳಬಹುದು. ಮೂತ್ರ ನೀರಿನಂತೆ ಬಣ್ಣರಹಿತವಾಗಿದ್ದರೆ ಸರಿಯಾಗಿ ನೀರು ಕುಡಿಯುತ್ತಿರುವಿರೆಂದೂ, ಹಳದಿ ಬಣ್ಣದಲ್ಲಿ ಅಥವಾ ತೆಳು ಹಳದಿ ಬಣ್ಣದಲ್ಲಿದ್ದರೆ ಇನ್ನೂ ನೀರು ಕುಡಿವ ಅವಶ್ಯಕತೆ ಇದೆ ಎಂದೂ ಅರ್ಥ.
2. ಸಿಟ್ರಿಕ್ ಹಣ್ಣುಗಳನ್ನು ತಿನ್ನಿ: ನಿಂಬೆಹಣ್ಣು, ಕಿತ್ತಳೆ, ಮೂಸಂಬಿಯಂಥ ಹಣ್ಣುಗಳ ರಸ ತೆಗೆದು ಕುಡಿಯಿರಿ. ಇದು ಕಲ್ಲುಗಳಾಗದಂತೆ ತಡೆಯುತ್ತದೆ. ಆದರೆ, ವಿಟಮಿನ್ ಸಿ ಸಪ್ಲಿಮೆಂಟ್ ತಿನ್ನುವುದನ್ನು ತಪ್ಪಿಸಿಕೊಳ್ಳಿ.
3. ಕ್ಯಾಲ್ಶಿಯಂ ಹೆಚ್ಚಾಗಿರುವ ಆಹಾರವನ್ನು ಸೇವಿಸಿ: ಬಹುತೇಕ ಕಿಡ್ನಿ ಕಲ್ಲುಗಳು ಕ್ಯಾಲ್ಶಿಯಂ ಆಕ್ಸಲೇಟ್ ಸ್ಟೋನ್‌ಗಳೆಂದು ಹೇಳುವುದರಿಂದ ಬಹುತೇಕರು ಕ್ಯಾಲ್ಶಿಯಂ ಸೇವಿಸಬಾರದು ಅಂದುಕೊಳ್ಳುತ್ತಾರೆ. ಆದರೆ, ಇದು ತಪ್ಪು ಭಾವನೆ. ಕ್ಯಾಲ್ಶಿಯಂ ಕಡಿಮೆ ಆದಷ್ಟೂ, ಕಿಡ್ನಿ ಕಲ್ಲು ಹೆಚ್ಚಾಗುವ ಹಾಗೂ ನೀವು ಮೂಳೆ ಸವಕಳಿಯಂತಹ ತೊಂದರೆಗೀಡಾಗುವ ಅಪಾಯ ಹೆಚ್ಚು. ಆದರೆ, ಕ್ಯಾಲ್ಶಿಯಂ ಸಪ್ಲಿಮೆಂಟ್‌ಗಳ ಮುಖಾಂತರ ಕ್ಯಾಲ್ಶಿಯಂ ಕೊರತೆ ನೀಗಿಸಲು ಹೊರಟರೆ ಅದು ಕಿಡ್ನಿ ಕಲ್ಲಿನ ಅಪಾಯವನ್ನು ಹೆಚ್ಚು ಮಾಡೀತು. ಊಟದಲ್ಲಿ ಕ್ಯಾಲ್ಶಿಯಂ ಇರುವಂತೆ ನೋಡಿಕೊಳ್ಳುವುದು ಸರಳ ಉಪಾಯ. ಕಡಿಮೆ ಕೊಬ್ಬಿನ ಹಾಲು, ಕಡಿಮೆ ಕೊಬ್ಬಿನ ಮೊಸರು ಇತ್ಯಾದಿಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿ.
4. ಸೋಡಿಯಂ ಕಡಿಮೆ ಸೇವಿಸಿ: ಹೆಚ್ಚು ಉಪ್ಪಿನ ಸೇವನೆ ಕ್ಯಾಲ್ಶಿಯಂ ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ತಿನ್ನುವ ಆಹಾರದಲ್ಲಿ ಮುದ್ರಿಸಲಾದ ಸೋಡಿಯಂ ಪ್ರಮಾಣವನ್ನು ಗಮನಿಸಿ. ಅಡುಗೆಗೆ ಕಡಿಮೆ ಉಪ್ಪನ್ನು ಹಾಕಿ.
5. ಆಕ್ಸಲೇಟ್ ಹೆಚ್ಚಿರುವ ಆಹಾರ ತಿನ್ನುವುದನ್ನು ಕಡಿಮೆ ಮಾಡಿ: ಕೆಲವು ಕಿಡ್ನಿ ಸ್ಟೋನ್ ಆಕ್ಸಲೇಟ್‌ನಿಂದ ಮಾಡಲ್ಪಟ್ಟಿರುವುದರಿಂದ ನೈಸರ್ಗಿಕವಾಗಿ ಆಕ್ಸಲೇಟ್ ಹೆಚ್ಚಿರುವ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ. ಬಸಳೆ, ಪಾಲಕ್, ಚಾಕೋಲೇಟ್, ಸಿಹಿ ಗೆಣಸು, ಕಾಫಿ, ಬೀಟ್‌ರೂಟ್, ನೆಲಗಡಲೆ, ಸೋಯಾ, ಗೋಧಿ ತವಡು ಇತ್ಯಾದಿ ತಿನ್ನುವುದನ್ನು ಕಡಿಮೆ ಮಾಡಿ.
6. ಪ್ರಾಣಿಜನ್ಯ ಪ್ರೊಟೀನ್ ಕಡಿಮೆ ಮಾಡಿ: ಬೀಫ್, ಚಿಕನ್, ಮೀನು, ಹಂದಿ ಮಾಂಸಗಳು ಕಿಡ್ನಿ ಸ್ಟೋನ್‌ಗೆ ಒಳ್ಳೆಯದಲ್ಲ. ಇದು ಮೂತ್ರದಲ್ಲಿ ಅಸಿಡಿಕ್ ಅಂಶಗಳನ್ನು ಹೆಚ್ಚು ಮಾಡುತ್ತದೆ. ಇದರಿಂದ ಆಕ್ಸಲೇಟ್ ಹಾಗೂ ಯೂರಿಕ್ ಬಗೆಯ ಕಿಡ್ನಿ ಸ್ಟೋನ್ ಹೆಚ್ಚಾಗುವ ಸಂಭವ ಇರುತ್ತದೆ.
7. ನೈಸರ್ಗಿಕ ವಿಧಾನಗಳು: ಕಿಡ್ನಿ ಕಲ್ಲು ಕರಗಿಸುವ ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಬಹುದು. ಉದಾಹರಣೆಗೆ ಬಾಳೆದಿಂಡಿನ ರಸವನ್ನು ನಿತ್ಯವೂ ಸೇವನೆ ಮಾಡುವುದು, ಗೋಧಿ ಹುಲ್ಲಿನ ರಸ ಇತ್ಯಾದಿ ಗಳ ಸೇವನೆಯಿಂದ ಕಡಿಮೆ ಮಾಡಲು ಪ್ರಯತ್ನಿಸಬಹುದು. ಮುಖ್ಯವಾಗಿ ಹೆಚ್ಚು ನೀರುವು ಕುಡಿಯುವುದು ಅತೀ ಅವಶ್ಯಕ ಎಂಬುದು ನೆನಪಿನಲ್ಲಿರಲಿ.