Site icon Vistara News

Health Tips: ಶೃಂಗಾರದ ಹೊಂಗೆಮರ ಹೂಬಿಡಬೇಕೆ? ಇವುಗಳನ್ನು ಮರೆಯದೆ ಸೇವಿಸಿ!

libido food

ಮನುಷ್ಯನಷ್ಟೇ ಅಲ್ಲ ಸಕಲ ಜೀವರಾಶಿಗಳಿಗೂ, ಊಟ, ನಿದ್ದೆಯಂತೆಯೇ ಮೈಥುನವೂ ಅತ್ಯಂತ ಸಹಜ ಹಾಗೂ ಅಗತ್ಯ ಕೂಡಾ. ಆದರೆ ಇತ್ತೀಚೆಗಿನ ದಿನಗಳಲ್ಲಿ, ಕೋವಿಡ್‌ ಕಾಲಘಟ್ಟದ ನಂತರ ಇದ್ದಕ್ಕಿದ್ದಂತೆ ಲೈಂಗಿಕ ಸಂಪರ್ಕದಲ್ಲಿ ಆಸಕ್ತಿ (sexual interest) ಕಳೆದುಕೊಂಡು ಮಾನಸಿಕವಾಗಿ, ಕೌಟುಂಬಿಕವಾಗಿ ಸಮಸ್ಯೆಗಳನ್ನು ಹುಟ್ಟುಹಾಕಿ ವೈದ್ಯರಿಗೆ ಎಡತಾಕುವುದು ಹೆಚ್ಚಾಗುತ್ತಿದೆ ಎಂದು ವೈದ್ಯ ಜಗತ್ತು ಹೇಳುತ್ತಿದೆ. ಹಾಗಾದರೆ, ಹೀಗೆ ಕಳೆಗುಂದಿದ ಆಸಕ್ತಿಯನ್ನು, ಯಾವುದೇ ವೈದ್ಯಕೀಯ ನೆರವಿಲ್ಲದೆ, ಹೆಚ್ಚುವರಿ ಮಾತ್ರೆಗಳ ಅಗತ್ಯವಿಲ್ಲದೆ, ನೀವೇ ನೀವಾಗಿ ನೈಸರ್ಗಿಕವಾಗಿ ಸಹಜವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದು (health tips) ಎಂಬುದನ್ನು ನೋಡೋಣ.

ದಾಳಿಂಬೆ, ಸೇಬು: ಲೈಂಗಿಕಾಸಕ್ತಿಯನ್ನು ಉದ್ದೀಪನಗೊಳಿಸುವ ತಾಕತ್ತಿರುವ ಹಣ್ಣೆಂದರೆ ಅದು ದಾಳಿಂಬೆ (pomegranate). ಈ ಹಣ್ಣನ್ನು ದಿನವೂ ಸೇವಿಸುತ್ತಿದ್ದರೆ, ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚುತ್ತದೆ. ಮಕ್ಕಳನ್ನು ಮಾಡಿಕೊಳ್ಳಲು ಪ್ರಯತ್ನ ಪಡುವ ಮಹಿಳೆಯರಿಗೂ ಕೂಡಾ ಇದು ಒಳ್ಳೆಯದು. ದಾಳಿಂಬೆಯಲ್ಲದೆ, ಇದಕ್ಕೆ ನೆರವಾಗುವ ಇತರ ಹಣ್ಣುಗಳೆಂದರೆ, ಸೇಬು, ಅಂಜೂರ, ಬಾಳೆಹಣ್ಣು, ಅವಕಾಡೋ (ಬೆಣ್ಣೆ ಹಣ್ಣು). ಈ ಹಣ್ಣುಗಳಲ್ಲಿರುವ ಜೀವಸತ್ವ ಹಾಗೂ ಖನಿಜಾಂಶಗಳು ಸ್ತ್ರೀ ಹಾಗೂ ಪುರುಷ ಜನನಾಂಗಗಳಲ್ಲಿ ರಕ್ತ ಪರಿಚಲನೆಯನ್ನೂ ಹೆಚ್ಚು ಮಾಡುತ್ತದೆ. ದಿನಕ್ಕೊಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬ ಮಾತಿದೆ. ಇಲ್ಲೂ ಅಷ್ಟೇ, ದಿನಕ್ಕೊಂದು ದಾಳಿಂಬೆ ಅಥವಾ ಸೇಬು (apple benefits) ತಿನ್ನುವುದರಿಂದ ಲೈಂಗಿಕ ತಜ್ಞರಿಂದಲೂ ದೂರವಿರಬಹುದು.

drumstick

ಬಾರ್ಲಿ ಸೂಪು: ಬಾರ್ಲಿ ದೇಹಕ್ಕೆ ತಂಪಾದರೂ, ಲೈಂಗಿಕತೆಯ ವಿಚಾರದಲ್ಲಿ ನಿಮ್ಮನ್ನು ಬಿಸಿ ಮಾಡುತ್ತದೆ. ಇದು ದೇಹದಲ್ಲಿ ಮುಖ್ಯವಾಗಿ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಚುರುಕುಗೊಳಿಸುವಲ್ಲಿ ಸಹಾಯ ಮಾಡುವುದರಿಂದ, ಉದ್ರೇಕಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಪುರುಷರಿಗೆ ಇದರಿಂದ ಲಾಭ ಹೆಚ್ಚು. ಇದರ ನಿಯಮಿತ ಬಳಕೆಯಿಂದ ಲೈಂಗಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರುತ್ತದೆ.

ಖರ್ಜೂರ: ಸಂತಾನೋತ್ಪತ್ತಿಗೆಂದೇ ಹೇಳಿ ಮಾಡಿಸಿದ ಹಣ್ಣಿದು. ಅನಾದಿ ಕಾಲದಿಂದಲೂ, ಖರ್ಜೂರವನ್ನು (dates) ಲೈಂಗಿಕಾಸಕ್ತಿ ವೃದ್ಧಿಗೆಂದೇ ಮನೆಮದ್ದಾಗಿ ಬಳಸುತ್ತಿದ್ದರು. ಇದರ ನಿಯಮಿತ ಸೇವನೆಯಿಂದ ದೇಹವೂ ಕಬ್ಬಿಣಾಂಶವನ್ನು ಪಡೆದುಕೊಂಡು ಗಟ್ಟಿಮುಟ್ಟಾಗಿ ಸಾಮರ್ಥ್ಯ ಪಡೆಯುವುದಲ್ಲದೆ, ಮಿಲನದಲ್ಲಿಯೂ ಸಾಮರ್ಥ್ಯ ಹೆಚ್ಚುತ್ತದೆ. ಶಕ್ತಿಹೀನರು ಖಂಡಿತವಾಗಿಯೂ ಖರ್ಜೂರವನ್ನು ನಿಯಮಿತವಾಗಿ ಸೇವಿಸಬೇಕು.

ಕರಿ ಉದ್ದು: ಸಿಪ್ಪೆ ತೆಗೆಯದ ಉದ್ದು ಅಂದರೆ ಕರಿಉದ್ದು ಲೈಂಗಿಕ ಶಕ್ತಿ ಸಾಮರ್ಥ್ಯ ವರ್ಧನೆಗೆ ಪುರಾತನ ಕಾಲದಿಂದಲೂ ಜಾರಿಯಲ್ಲಿರುವ ಇನ್ನೊಂದು ಮನೆ ಮದ್ದು. ಲೈಂಗಿಕಾಸಕ್ತಿ ವೃದ್ಧಿಯ ಬಗೆಗೆ ಇದರ ಉಪಯೋಗದ ಕುರಿತು ಚರಕ ಸಂಹಿತೆಯಲ್ಲೂ ಹೇಳಲಾಗಿದೆ. ಆದರೆ, ಪಿತ್ತ ಹೆಚ್ಚಿರುವ ಮಂದಿ ಮಾತ್ರ ಇದರ ಬಳಕೆಯನ್ನು ಮಾಡದೆ ಇರುವುದು ಒಳ್ಳೆಯದು.

ಬಾದಾಮಿ: ಬಾದಾಮಿ ಪ್ರತಿನಿತ್ಯ ತಿನ್ನುತ್ತಾ ಬರುವುದರಿಂದ ಲೈಂಗಿಕಾಸಕ್ತಿ ವೃದ್ಧಿಸಿಕೊಳ್ಳಬಹುದು. ಐದಾರು ಬಾದಾಮಿಯನ್ನು ಮೊದಲ ದಿನವೇ ನೆನೆಹಾಕಿ ಬೆಳಗ್ಗೆ ಎದ್ದು ಸಿಪ್ಪೆ ಸುಲಿದು ತಿನ್ನುವುದು ಉತ್ತಮ. ಅಥವಾ ಹಾಲಿನೊಂದಿಗೆ ಸೇರಿಸಿ ಬಾದಾಮಿ ಹಾಲು ಮಾಡಿ ಕುಡಿಯಬಹುದು. ಬಾದಾಮಿಯನ್ನು ಅತಿಯಾಗಿ ಸೇವಿಸಲೂಬಾರದು. ಒಂದು ಮಿತಿಯಲ್ಲಿ ಸೇವಿಸಿದರೆ ಉತ್ತಮ.

drumstick

ಇದನ್ನೂ ಓದಿ: Health Tips: ನಿಮ್ಮ ಬಾಯಿಚಪಲದ ನಿಗ್ರಹ ನಿಮ್ಮ ಕೈಯಲ್ಲಿದೆಯಾ?

ನುಗ್ಗೆ ಕಾಯಿ/ಸೊಪ್ಪು: ಇದೊಂದು ಅತ್ಯುತ್ತಮ ಮನೆಮದ್ದು. ಪ್ರತಿದಿನದ ಆಹಾರದಲ್ಲಿ ನುಗ್ಗೆ ಸೊಪ್ಪು, ಕಾಯಿ ಹೂವನ್ನು ಬಳಸುತ್ತಾ ಬಂದಲ್ಲಿ, ವೀರ್ಯವೃದ್ಧಿಯಾಗುತ್ತದೆ. ಪುರುಷರಿಗಾಗಲಿ, ಮಹಿಳೆಯರಿಗಾಗಲಿ, ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ, ಉತ್ತಮ ಸಂಬಂಧ ವೃದ್ಧಿ ಮಾಡುವಲ್ಲಿ, ಅನಾದಿಕಾಲದಿಂದಲೂ ನುಗ್ಗೆಕಾಯಿಯ ಕಾಣಿಕೆ ಅಮೂಲ್ಯ!

drumstick

ಈ ಎಲ್ಲ ತರಕಾರಿ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಂಡರೂ, ಯಾವಾಗಲೂ ಆರೋಗ್ಯಕರ ಜೀವನಶೈಲಿಯನ್ನೇ ರೂಪಿಸಿಕೊಳ್ಳಿ. ಅತಿಯಾದ ಜಂಕ್‌ ತಿನ್ನುವುದು, ಕರಿದ ಪದಾರ್ಥಗಳನ್ನು ಮೆಲ್ಲುತ್ತಾ ಇರುವುದು, ಯಾವಾಗಲೂ ಹೊರಗಿನ ಊಟವನ್ನೇ ನೆಚ್ಚಿಕೊಂಡಿರುವುದು ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಹಿತಮಿತ ಆಹಾರ, ಒಳ್ಳೆಯ ನಿದ್ದೆ, ಒತ್ತಡರಹಿತ ಜೀವನಶೈಲಿ ಎಲ್ಲವುಗಳ ಪಾತ್ರವೂ ಇವೆ.

ಇದನ್ನೂ ಓದಿ: Women Health tips: ಮಹಿಳೆಯರೇ, ಹಾರ್ಮೋನಿನ ತೊಂದರೆಗಳಿಗೆ ನಿಮ್ಮ ಆಹಾರಕ್ರಮದಲ್ಲೇ ಇದೆ ಮದ್ದು!

Exit mobile version