Site icon Vistara News

Health Tips: ಕಿತ್ತಳೆ ಹಣ್ಣಿನ ಸಿಪ್ಪೆಯಿಂದಲೂ ಇಷ್ಟೆಲ್ಲಾ ಲಾಭವಿದೆ, ಮತ್ಯಾಕೆ ಎಸೀತೀರಾ!

orange peel

ನೀವು ಕಿತ್ತಳೆ ಹಣ್ಣು (orange) ತಿಂದು ಅದೇ ಕ್ಷಣ ಸಿಪ್ಪೆ ಎಸೆದುಬಿಡುವವರಾದರೆ ಸ್ವಲ್ಪ ತಡೆಯಿರಿ. ಕಿತ್ತಳೆ ಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು (orange peel benefits) ನೀಡುತ್ತದೆ. ಎಸೆದರೆ ಬಹಳ ಜೀವಸತ್ವಗಳನ್ನು (Nutrients) ಕಳೆದುಕೊಳ್ಳುತ್ತೀರಿ. ಅದನ್ನು ಹಾಗೇ ತಿನ್ನುವುದಕ್ಕಾಗುವುದಿಲ್ಲ ಎನ್ನುವುದೇನೋ ನಿಜವೇ. ಆದರೆ ಅಡುಗೆಯಲ್ಲಿ ಸೇರಿಸಿ, ಒಣಗಿಸಿ, ಪುಡಿ ಮಾಡಿ, ಹೀಗೆ ನಾನಾ ಬಗೆಯಲ್ಲಿ ಉಪಯೋಗಿಸಿದರೆ ಇದು ಆರೋಗ್ಯವರ್ಧಕ (Health tips). ಇದರಿಂದ ಏನೆಲ್ಲಾ ಆರೋಗ್ಯ ಲಾಭಗಳಿವೆ (Health guide) ಅಂತ ಇಲ್ಲಿ ನೋಡಿ.

​ಜೀರ್ಣಕ್ರಿಯೆ ಸುಗಮ: ಕಿತ್ತಳೆ ಸಿಪ್ಪೆಗಳು ಇನ್‌ಫ್ಲಮೇಷನ್‌ (inflammation) ಅಥವಾ ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಜೀರ್ಣಕ್ರಿಯೆಗಳು (digestion) , ಅತಿಸಾರ, ಎದೆಯುರಿ ಮತ್ತು ಆಮ್ಲೀಯತೆಯಂತಹ ಜಠರಗರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಹೊಟ್ಟೆ ಕೆಟ್ಟಂತಾದರೆ ಕಿತ್ತಲೆ ಸಿಪ್ಪೆಯ ಟೀ ಮಾಡಿ ಕುಡಿಯಿರಿ.

​ಬಾಯಿಯ ದುರ್ವಾಸನೆಗೆ ತಡೆ: ಕಿತ್ತಳೆ ಸಿಪ್ಪೆ ವಿಭಿನ್ನ ರೀತಿಯ ಟೇಸ್ಟ್‌ ಹೊಂದಿರುತ್ತದೆ. ಹೀಗಾಗಿ ಬಾಯಿಯನ್ನು ಸ್ವಚ್ಛಗೊಳಿಸಿ ದುರ್ವಾಸನೆಯನ್ನು ನಿವಾರಿಸುತ್ತದೆ. ಅಲ್ಲದೆ ಬಾಯಿಯಲ್ಲಿನ ಸೋಂಕನ್ನು ನಿವಾರಿಸುತ್ತದೆ. ಫ್ರೆಶ್‌ ಕಿತ್ತಳೆ ಸಿಪ್ಪೆಯ ಒಂದು ತುಣುಕು ತುಸು ಹೊತ್ತು ಬಾಯಿಯಲ್ಲಿಟ್ಟುಕೊಂಡರೆ ಬಾಯಿ ಫ್ರೆಶ್.‌ ಪುಡಿ ಮಾಡಿಯೂ ಬಳಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ಹೊಟ್ಟೆಯಿಂದ ಬರುವ ವಾಸನೆಯುಕ್ತ ಉಸಿರನ್ನು ತಡೆಯುತ್ತದೆ. ಆದ್ದರಿಂದ ಕಿತ್ತಳೆ ಸಿಪ್ಪೆಯನ್ನು ಸಲಾಡ್‌ನೊಂದಿಗೆ ಸೇರಿಸಿ ಸೇವನೆ ಮಾಡಬಹುದು.

ರಕ್ತದೊತ್ತಡ ನಿಯಂತ್ರಣ: ಕಿತ್ತಳೆ ಸಿಪ್ಪೆಗಳು ಹೆಸ್ಪೆರಿಡಿನ್ ಅನ್ನು ಒಳಗೊಂಡಿರುತ್ತವೆ, ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಸಿಪ್ಪೆಯಲ್ಲಿ ಕಂಡುಬರುವ ಪಾಲಿಮೆಥಾಕ್ಸಿಲೇಟೆಡ್ ಫ್ಲೇವೊನ್‌ಗಳು ಕೊಲೆಸ್ಟ್ರಾಲ್ ಅನ್ನು ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಡುಗೆಯಲ್ಲಿ ಕಿತ್ತಳೆ ಸಿಪ್ಪೆಯ ಚಟ್ನಿಯನ್ನು ಮಾಡಿ ಸೇವಿಸುತ್ತಿರಬಹುದು.

​ಅಲರ್ಜಿಯ ನಿವಾರಣೆ: ಹಿಸ್ಟಮೈನ್‌ಗಳೆಂಬ ಹಾರ್ಮೋನ್‌ಗಳು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುವ ರಾಸಾಯನಿಕಗಳು. ಕಿತ್ತಳೆ ಸಿಪ್ಪೆಗಳು ಹಿಸ್ಟಮೈನ್ ಬಿಡುಗಡೆಯನ್ನು ತಡೆಯಲು ಸಹಾಯ ಮಾಡುವ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತವೆ. ಈ ಮೂಲಕ ಅಲರ್ಜಿಯನ್ನು ತಡೆಯುತ್ತದೆ. ಅಲ್ಲದೆ ಚರ್ಮವನ್ನು ಕೂಡ ಕಾಂತಿಯುತವಾಗಿ ಮಾಡುತ್ತದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ಫೇಸ್‌ ಪ್ಯಾಕ್‌ ರೀತಿಯಲ್ಲಿಯೂ ಬಳಸಬಹುದಾಗಿದೆ.

​ಕ್ಯಾನ್ಸರ್‌ ತಡೆಗಟ್ಟಿ: ಕಿತ್ತಳೆ ಹಣ್ಣಿನ ಸಿಪ್ಪೆಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತವೆ. ಇದು ಮಾರಣಾಂತಿಕ ರೀತಿಯ ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನಿಯಮಿತವಾಗಿ ಸೇವಿಸುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್‌ ಅಪಾಯದ ಸಾಧ್ಯತೆ ಕಡಿಮೆ ಎನ್ನುತ್ತದೆ ವೈದ್ಯಕೀಯ ಲೋಕ.

ಇದನ್ನೂ ಓದಿ: Weight Loss Guide: 40ರ ನಂತರ ತೂಕ ಇಳಿಕೆಯ ಸಂದರ್ಭ ಇವಿಷ್ಟು ಕಾಳಜಿ ವಹಿಸಿ!

Exit mobile version