Site icon Vistara News

Health Tips: ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಆಹಾರ ಶೇಖರಣೆ ಮಾಡಬೇಡಿ, ಯಾಕೆ ಗೊತ್ತೇ?

aluminium foil

ಮನೆಯಲ್ಲಿ ಎಷ್ಟೇ ಹಿತಮಿತವಾಗಿ ಅಡುಗೆ ಮಾಡಿದರೂ, ಏನಾದರೊಂದು ಆಹಾರ ಸ್ವಲ್ಪವಾದರೂ ಉಳಿದುಬಿಡುತ್ತದೆ. ಕೆಲವೊಂದು ಅಡುಗೆಯನ್ನು ಪಾತ್ರೆಯಲ್ಲಿಯೋ, ಬಾಕ್ಸ್‌ನಲ್ಲಿಯೋ ಹಾಕಿಟ್ಟು ಫ್ರಿಡ್ಜ್‌ನಲ್ಲಿಟ್ಟು ಮಾರನೇ ದಿನ ಬಳಸುತ್ತೇವೆ.  ಆದರೆ ಕೆಲವನ್ನು ಆಗುವುದಿಲ್ಲ. ಆಗ ಮಾಡಿ ಆಗ ತಿಂದರಷ್ಟೇ ರುಚಿ. ಆದರೆ ಬಹಳಷ್ಟು ಮಂದಿಗೆ ಉಳಿದ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ (aluminium foil) ಸುತ್ತಿಡುವ ಅಭ್ಯಾಸವಿದೆ. ಇನ್ನೂ ಕೆಲವರು ಸ್ಯಾಂಡ್‌ವಿಚ್‌, ಪರಾಠಾ, ಚಪಾತಿ ರೋಲ್‌ ಇತ್ಯಾದಿಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ನಿತ್ಯವೂ ಸುತ್ತಿ ಮಕ್ಕಳಿಗೆ, ತಮ್ಮ ಮನೆಯವರಿಗೆ ತೆಗೆದುಕೊಂಡು ಹೋಗಲು ಬಾಕ್ಸ್‌ನಲ್ಲಿ ಹಾಕಿ ಕೊಡುವುದುಂಟು. ಇನ್ನೂ ಕೆಲವರು ಮಾರುಕಟ್ಟೆಯಲ್ಲಿ ಬಳಸಿ ಎಸೆಯಬಹುದಾದ ಅಲ್ಯುಮಿನಿಯಂ ಫಾಯಿಲ್‌ ಬಾಕ್ಸ್‌ಗಳಲ್ಲಿ ಹಾಕಿ ತೆಗೆದಿಡುವುದೂ ಉಂಟು. ಎಷ್ಟೋ ಬಾರಿ ನಾವು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಆಹಾರ ಇಂಥದ್ದೇ ಅಲ್ಯೂಮಿನಿಯಂ ಫಾಯಿಲ್‌ ಡಬ್ಬಿಯಲ್ಲಿ ನೀಟಾಗಿ ಪ್ಯಾಕ್‌ ಆಗಿ ಬರುವುದುಂಟು. ಆಹಾರವನ್ನು ಸುಲಭವಾಗಿ ಶೇಖರಿಸಿ ಇಡಲು ಅಲ್ಯೂಮಿನಿಯಂ ಪಾಯಿಲ್‌ ಸಹಾಯವಾಗುತ್ತದೆ ಎಂಬುದು ಅಕ್ಷರಶಃ ನಿಜವಾದರೂ, ಇದು ಆರೋಗ್ಯಕ್ಕೆ (health tips) ಒಳ್ಳೆಯದಲ್ಲ. ಇದರಿಂದ ದೇಹದ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳೂ ಉಂಟಾಗುತ್ತವೆ.

ಈ ಬಗ್ಗೆ ನಡೆದಿರುವ ಸಾಕಷ್ಟು ಸಂಶೋಧನೆಗಳು ಬಹಿರಂಗಪಡಿಸಿದ ಸತ್ಯ ಏನೆಂದರೆ ಅಲ್ಯೂಮಿನಿಯಂ ಫಾಯಿಲ್‌ ಅಸಿಡಿಕ್‌ ಆಹಾರಗಳ ಜೊತೆ ವ್ಯತಿರಿಕ್ತವಾಗಿ ವರ್ತಿಸುತ್ತದೆ. ಅಷ್ಟೇ ಅಲ್ಲ, ಡೈರಿ ಉತ್ಪನ್ನಗಳು, ಮಾಂಸ ಇತ್ಯಾದಿ ಆಹಾರಗಳಿಗೂ ಅಲ್ಯುಮಿನಿಯಂ ಫಾಯಿಲ್‌ ಒಳ್ಳೆಯದಲ್ಲ. ಇದು ಆಹಾರ ಚೆಲ್ಲದಂತೆ, ಒಂದೇ ಜಾಗದಲ್ಲಿ ಹಾಗೆಯೇ ಇರುವಂತೆ, ಬಾಕ್ಸ್‌ನಲ್ಲಿ ಒಪ್ಪ ಓರಣವಾಗಿ ಇಡಲು ನೆರವಾಗುತ್ತದೆ ಎಂಬುದು ನಿಜವೇ ಆದರೂ ಇದು ಸಾಕಷ್ಟು ಕೆಟ್ಟ ಪರಿಣಾಮಗಳನ್ನೇ ಉಂಟು ಮಾಡಬಲ್ಲದು. ಅಷ್ಟೇ ಅಲ್ಲ, ಸರಿಯಾಗಿ ಸಂಗ್ರಹ ಮಾಡದಿದ್ದರೆ, ಹೀಗೆ ಮಾಡಿದ ಆಹಾರ ಬೇಗ ಕೆಡುವ ಸಂಭವವೂ ಇದೆ. ಇದಕ್ಕೆ ಬದಲಾಗಿ ಆಹಾರವನ್ನು ಯಾವಾಗಲೂ ಗ್ಲಾಸ್‌ ಡಬ್ಬಗಳಲ್ಲಿ ಹಾಕಿಡುವುದು ಅತ್ಯಂತ ಆರೋಗ್ಯಕರ ಹಾಗೂ ಸರಳ ಉಪಾಯ.

ಹಾಗಾದರೆ ಯಾವೆಲ್ಲ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಶೇಖರಿಸಿಡಲೇಬಾರದು ಎಂಬುದನ್ನು ನೋಡೋಣ.

1. ಅಸಿಡಿಕ್‌ ಆಹಾರಗಳಾದ ಟೊಮೆಟೋ, ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ, ಮುಸಂಬಿ, ನಿಂಬೆ ಇತ್ಯಾದಿಗಳು

2 ಮಸಾಲೆ ಪದಾರ್ಥಗಳಾದ ಗರಂ ಮಸಾಲೆ, ಜೀರಿಗೆ ಹಾಗೂ ಅರಿಶಿನ

3. ಕರಿಗಳು ಹಾಗೂ ಉಪ್ಪಿನಕಾಯಿಗಳು

4. ಚೀಸ್‌ ಹಾಗೂ ಬೆಣ್ಣೆ

ಈ ನಾಲ್ಕು ಬಗೆಯ ಆಹಾರ ಪದಾರ್ಥಗಳನ್ನು ಯಾವ ಕಾರಣಕ್ಕೂ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಕೂಡಿಡುವ ಪ್ರಯತ್ನ ಮಾಡಬೇಡಿ.

ಉಳಿದಂತೆ, ಸ್ಯಾಂಡ್‌ವಿಚ್‌, ಬ್ರೆಡ್‌, ಕೇಕ್‌, ಮಫಿನ್‌ ಇತ್ಯಾದಿಗಳನ್ನು ಅಲ್ಯೂಮಿನಿಯಂ ಫಾಯಿಲ್‌ ಒಳಗೆ ಕೆಲ ಕಾಲ ಶೇಖರಿಸಿಡಬಹುದು. ಆದರೂ ಅಲ್ಯುಮಿನಿಯಂ ಫಾಯಿಲ್‌ನಲ್ಲಿರುವ ಋಸಾಯನಿಕಗಳು ಆರೋಗ್ಯಕ್ಕೆ ಮಾರಕವಾಗಿರುವುದರಿಂದ, ಆಹಾರ ಪದಾರ್ಥಗಳನ್ನು ಆಲ್ಯೂಮಿನಿಯಂ ಫಾಯಿಲ್‌ಗಳಲ್ಲಿ ಹಾಕಿ ಸಂಗ್ರಹಿಸಿಡುವ ಅಭ್ಯಾಸವನ್ನು ಬಿಟ್ಟು, ಸ್ಟೀಲ್‌, ಗ್ಲಾಸ್‌ ಡಬ್ಬಗಳ ಬಳಕೆ ಮಾಡುವುದು ಅತ್ಯುತ್ತಮ ವಿಧಾನ ಹಾಘೂ ಆರೋಗ್ಯಕರ ಕೂಡಾ.

ಇದನ್ನೂ ಓದಿ: Health tips: ಬಾಯಿಯ ದುರ್ವಾಸನೆಯೇ? ನಿಮ್ಮಲ್ಲೇ ಇವೆ ಪರಿಹಾರಗಳು!

Exit mobile version