Site icon Vistara News

Home Remedies for Loose Motions : ಭೇದಿ ತಡೆಗೆ ಸಿಂಪಲ್ ಮನೆಮದ್ದುಗಳು

ಭೇದಿ ಎಂಬ ಸಮಸ್ಯೆ ಸಾಮಾನ್ಯದ್ದಲ್ಲ. ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಭೇದಿಯ ಸಮಸ್ಯೆ ಬಂದರೆ ದೇಹ ನಿತ್ರಾಣವಾಗುತ್ತದೆ. ನೀರು, ಒಆರ್‌ಎಸ್‌, ಎಳನೀರು ಇತ್ಯಾದಿಗಳನ್ನು ಕುಡಿದಷ್ಟೂ ದೇಹಕ್ಕೆ ಚೈತನ್ಯ ಬರುವುದು ಕಷ್ಟವಾಗುತ್ತದೆ. ಬಹಳಷ್ಟು ಸಾರಿ ಭೇದಿಯನ್ನು ಆರಂಭದಲ್ಲಿ ನಿರ್ಲಕ್ಷಿಸಿ ಆಮೇಲೆ ಕಷ್ಟಪಡುವುದೂ ಉಂಟು. ಆದರೆ, ಭೇದಿಯ ಸಮಸ್ಯೆ ಕಂಡುಬಂದಾಗಲೇ, ಮನೆಯಲ್ಲಿಯೇ ಆಹಾರಕ್ರಮದ ಮೂಲಕ ಕೆಲವೊಂದು ಸರಳ ಮನೆಮದ್ದುಗಳ (Home Remedies for Loose Motions) ಮೂಲಕ ಹತೋಟಿ ತರಬಹುದು. ಕೆಲವೊಮ್ಮೆ ಇವು ಮ್ಯಾಜಿಕ್‌ನಂತೆ ವರ್ತಿಸಲೂ ಬಹುದು. ಭೇದಿಯನ್ನು ಕಡಿಮೆ ಮಾಡುವ ಅಂತಹ ಮನೆಮದ್ದುಗಳ ವಿವರ ಇಲ್ಲಿದೆ.

Cumin water for Loose Motions

ಮಜ್ಜಿಗೆ

ಮಜ್ಜಿಗೆಯು ಭೇದಿಗೆ ಒಳ್ಳೆಯ ಮನೆಮದ್ದು. ಮಜ್ಜಿಗೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಾಂಗವ್ಯೂಹವನ್ನು ಸರಿಯಾಗಿ ಇರಿಸಿಕೊಳ್ಳುವುದಲ್ಲದೆ, ಜೀರ್ಣ ಸಂಬಂಧಿ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸುತ್ತದೆ. ಮಜ್ಜಿಗೆ ಎಂದರೆ, ಮೊಸರನ್ನು ಕಡೆದು ಮಾಡಿದ ಹಾಗೂ ಅದರಿಂದ ಬೆಣ್ಣೆ ತೆಗೆದುದು ಆಗಿದ್ದರೆ ಮಾತ್ರ ಇದರ ಪರಿಣಾಮಗಳನ್ನು ಪಡೆಯಬಹುದು. ಮೊಸರಿಗೆ ನೀರು ಹಾಕಿ ಮಿಕ್ಸಿಯಲ್ಲಿ ತಿರುಗಿಸಿ ತಂದ ದ್ರವ ಮಜ್ಜಿಗೆಯಾಗದು ಎಂಬುದನ್ನು ನೆನಪಿಡಿ.

Cumin water for Loose Motions

ಬಾಳೆಕಾಯಿ

ಬಾಳೆಕಾಯಿ ಕೂಡ ಭೇದಿಗೆ ಅತ್ಯುತ್ತಮ ಮನೆ ಮದ್ದು. ಬಾಳೆಕಾಯಿಯನ್ನು ಮೂರು ಭಾಗಗಳಾಗಿ ಕತ್ತರಿಸಿ ಅದನ್ನು ಮುಳುಗುವಂತೆ ನೀರು ಹಾಕಿ ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸಿ. ಬೆಂದ ಬಾಳೆಕಾಯಿಯಿಂದ ನೀರನ್ನು ಪ್ರತ್ಯೇಕಿಸಿ. ಸಿಪ್ಪೆಯನ್ನು ತೆಗೆಯಿರಿ. ಒಳಗಿನ ಬಾಳೆಕಾಯಿಯನ್ನು ಚೆನ್ನಾಗಿ ಹಿಸುಕಿ ಪೇಸ್ಟ್‌ನಂತೆ ಮಾಡಿ. ಸ್ವಲ್ಪ ಗಸಗಸೆಯನ್ನು ಒಂದು ಪಾತ್ರೆಯಲ್ಲಿ ಹುರಿದುಕೊಂಡು ಅದು ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಕೆಳಗಿಳಿಸಿ ತಣಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಈ ಪುಡಿಯನ್ನು ಜೊತೆಗೆ ರುಚಿಗೆ ತಕ್ಕಷ್ಟು ಚಿಟಿಕೆ ಉಪ್ಪನ್ನು ಹಿಸುಕಿ ಪೇಸ್ಟ್‌ನಂತೆ ಮಾಡಿದ ಬಾಳೆಕಾಯಿ ಜೊತೆಗೆ ಸೇರಿಸಿ ಮಿಕ್ಸ್‌ ಮಾಡಿ ತಿಂದರೆ ಭೇದಿ ಹತೋಟಿಗೆ ಬರುತ್ತದೆ.

Cumin water for Loose Motions

ದಾಳಿಂಬೆ

ದಾಳಿಂಬೆಯ ಒಣಗಿಸಿದ ಸಿಪ್ಪೆ ಭೇದಿಗೆ ಒಳ್ಳೆಯ ಔಷಧ. ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟು ಸಂಗ್ರಹಿಸಿಡಿ. ಭೇದಿಯ ಸಮಸ್ಯೆ ಉಂಟಾದಾಗ ಈ ಪುಡಿಯನ್ನು ಸೇವಿಸಿ. ಅಥವಾ ಪುಡಿಯನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಯಿರಿ. ಇದು ಭೇದಿಯನ್ನು ಕೂಡಲೇ ಹತೋಟಿಗೆ ತರುತ್ತದೆ.

Cumin water for Loose Motions

ಶುಂಠಿ

ಶುಂಠಿ ಹಾಗೂ ಜೇನುತುಪ್ಪ: ಶುಂಠಿಯನ್ನು ತುರಿದು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿಕೊಂಡು ತಿಂದರೆ ಭೇದಿ ಹತೋಟಿಗೆ ಬರುತ್ತದೆ. ಜೇನುತುಪ್ಪ ಹಾಗೂ ಶುಂಠಿಯ ಈ ಮಿಶ್ರಣ ತಿಂದ ಮೇಲೆ ೧೦ ನಿಮಿಷ ಬಿಟ್ಟು ನೀರು ಕುಡಿಯಿರಿ. ಕೇವಲ ಭೇದಿ ಮಾತ್ರವಲ್ಲ, ಜೊತೆಗೆ ವಾಂತಿಯೂ ಇದ್ದರೂ ಇದು ಉತ್ತಮ ಉಪಾಯ.

Cumin water for Loose Motions

ಜೀರಿಗೆ ನೀರು

ಜೀರಿಗೆಯನ್ನು ಹುರಿದುಕೊಂಡು ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಈ ಜೀರಿಗೆ ಪುಡಿಗೆ ಕೊಂಚ ಕಲ್ಲುಸಕ್ಕರೆ ಸೇರಿಸಿ ಒಂದು ಲೋಟ ಬಿಸಿ ನೀರನ್ನು ಹಾಕಿ ಹತ್ತು ನಿಮ್ಷ ಸೆಟ್‌ ಆಗಲು ಹಾಗೆಯೇ ಬಿಟ್ಟು ಆಮೇಲೆ ಕುಡಿಯಬಹುದು. ಇದು ಹೊಟ್ಟೆಯಲ್ಲಿ ಜೀರ್ಣದ ಸಮಸ್ಯೆಗಳು ಉಂಟಾದಾಗ ಅದನ್ನು ಸಮತೋಲನಕ್ಕೆ ತರಲು ಒಳ್ಳೆಯ ಔಷಧಿ. ನೆನಪಿಡಿ, ಆರಂಭದ ಹಂತದಲ್ಲಿ ಈ ಮನೆಮದ್ದುಗಳು ಸಹಾಯಕ್ಕೆ ಬಂದರೂ, ಭೇದಿ ಅತಿಯಾದರೆ, ವೈದ್ಯರನ್ನು ಸಂಪರ್ಕಿಸಲೇಬೇಕು.

ಇದನ್ನೂ ಓದಿ: Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!

Exit mobile version