ಬೆಂಗಳೂರು: ನೋಡಲು ಭೀಕರವಾಗಿರುವ ಹಾಗೂ ಸತ್ತ ಪ್ರಾಣಿಗಳ ಮಾಂಸವನ್ನು ಕಿತ್ತು ತಿನ್ನುವ ರಣ ಹದ್ದುಗಳು ಮಾನವನ ಜೀವ ರಕ್ಷಕ ಎಂದರೆ ನಂಬುವಿರಾ? ನಂಬಲೇಬೇಕು. ಯಾಕೆಂದರೆ ಈ ಮಾತು ಸತ್ಯ ಎಂಬುದನ್ನು ಅಮೆರಿಕದ ಅಧ್ಯಯನವೊಂದು ಹೇಳಿದೆ. ಅಲ್ಲದೆ, ಭಾರತದಲ್ಲಿ ರಣ ಹದ್ದುಗಳು (Indian Vultures ) ಸಂಖ್ಯೆ ಗಣನೀಯವಾಗಿ ಕುಸಿದ ಕಾರಣ 2000 ಮತ್ತು 2005ರ ನಡುವೆ ಸುಮಾರು 5,00,000 ಮಂದಿಯ ಪ್ರಾಣ ಹಾನಿಯಾಗಿದೆ ಎಂಬುದನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಿದೆ. ಅಮೆರಿಕನ್ ಎಕನಾಮಿಕ್ ರಿವ್ಯೂನ (American Economic Association) ಅಧ್ಯಯನ ನಡೆಸಿದ್ದು ರಣ ಹದ್ದುಗಳು ಹೇಗೆ ಮನುಷ್ಯನ ಪ್ರಾಣ ಕಾಪಾಡಬಲ್ಲುದು ಎಂಬುದನ್ನು ತಿಳಿಸಿದೆ.
Snapped this beautiful Egyptian Vulture, enjoying the view of open landscapes on the outskirts of #Bengaluru. #WildlifeWednesday pic.twitter.com/03gRVymDBR
— Anil Kumble (@anilkumble1074) July 17, 2019
ಭಾರತದಲ್ಲಿ ರಣಹದ್ದುಗಳ ಸಾವು ಆತಂಕಕಾರಿಯಾಗಿದೆ. 1990ರ ದಶಕದ ಮಧ್ಯಭಾಗದಿಂದ ಈ ಪಕ್ಷಿಗಳ ಸಂಖ್ಯೆಯಲ್ಲಿ ಕುಸಿತ ಕಂಡು ಆರಂಭಗೊಂಡಿದೆ. ಬಳಿಕ ಇದು ಸಂರಕ್ಷಣಾಕಾರರು ಸೇರಿದಂತೆ ಅನೇಕರು ಕಾಳಜಿ ವ್ಯಕ್ತಪಡಿಸಿದ್ದರು. ಹಾಗಾದರೆ ರಣ ಹದ್ದುಗಳು ಸಾಯುವುದಕ್ಕೆ ಕಾರಣವೇನು ಎಂಬುದನ್ನು ನೋಡೋಣ.
ರಣಹದ್ದುಗಳ ಸಾವಿಗೆ ಕಾರಣ?
ಜಾನುವಾರುಗಳ ಚಿಕಿತ್ಸೆಗೆ ಬಳಸುವ ಪಶುವೈದ್ಯಕೀಯ ನೋವು ನಿವಾರಕ ಔಷಧ ಡಿಕ್ಲೋಫೆನಾಕ್ ಈ ಪಕ್ಷಿಗಳಿಗೆ ಮಾರಕವಾಗಿದೆ ಎಂಬುದೇ ಅಧ್ಯಯನ ಪತ್ತೆ. 1994ರಲ್ಲಿ ಈ ಔಷಧವನ್ನು ಕಂಡುಹಿಡಿದ ಬಳಿಕ ರಣಹದ್ದುಗಳ ಅವನತಿಯ ಅಂಚಿಗೆ ಹೊರಟಿತು ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಈ ಔಷಧವು ಪಕ್ಷಿಗಳಿಗೆ ಮೂತ್ರಪಿಂಡದ ಹಾನಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿದೆ.
ಕೇವಲ ಒಂದು ದಶಕದಲ್ಲಿ ರಣಹದ್ದುಗಳ ಸಂಖ್ಯೆಯು 5 ಕೋಟಿಯಿಂದ ಕೆಲವೇ ಸಾವಿರಕ್ಕೆ ಇಳಿದಿದೆ. ಅತಿ ಹೆಚ್ಚು ಹಾನಿಗೊಳಗಾದ ಜಾತಿಯ ಬಿಳಿ ರಂಪ್ಡ್ ರಣಹದ್ದು ಪ್ರಮಾಣ 1992 ಮತ್ತು 2007 ರ ನಡುವೆ ಶೇ. 99.9ರಷ್ಟು ಕುಸಿದಿದೆ. ಅಂತಿಮವಾಗಿ ಭಾರತದಲ್ಲಿ 2006 ರಲ್ಲಿ ಡಿಕ್ಲೋಫೆನಾಕ್ ಅನ್ನು ನಿಷೇಧಿಸಲಾಗಿದೆ.
ಕೆಲವು ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ವೃದ್ಧಿಗೆ ಕ್ರಮ ಕೈಗೊಂಡರೂ ಈ ಔಷಧದ ಪರಿಣಾಮ ರಣಹದ್ದುಗಳ ಸಂಖ್ಯೆ ಹೆಚ್ಚಳದ ಮೇಲೆ ದೀರ್ಘಾವಧಿಯ ಬೀರಿದೆ. ಮುಖ್ಯವಾಗಿ ಮೂರು ರಣಹದ್ದುಗಳ ಜಾತಿಗಳು ತಮ್ಮ ಪ್ರಮಾಣದಲ್ಲಿ ಶೇ. 91 ರಿಂದ 98 ರಷ್ಟನ್ನು ನಷ್ಟ ಮಾಡಿಕೊಂಡಿದೆ ಎಂದು ಇತ್ತೀಚಿನ ಸ್ಟೇಟ್ ಆಫ್ ಇಂಡಿಯಾದ ಪಕ್ಷಿಗಳ ವರದಿ ತಿಳಿಸಿದೆ.
ಮಾನವರ ಸಾವಿಗೆ ಹೇಗೆ ಕಾರಣ?
ಹದ್ದುಗಳ ಅವನತಿಯಿಂದ 2000 ಮತ್ತು 2005ರ ನಡುವೆ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂಬುದೇ ಅಚ್ಚರಿಯ ವಿಷಯ ಎಂಬುದಾಗಿ ಅಧ್ಯಯನದ ಸಹ-ಲೇಖಕರಾದ ಐಯಲ್ ಫ್ರಾಂಕ್ ಅವರು ತಿಳಿಸಿದ್ದಾರೆ.
ಚಿಕಾಗೋ ವಿಶ್ವವಿದ್ಯಾಲಯದ ಹ್ಯಾರಿಸ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು, ರಣಹದ್ದುಗಳು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತವೆ. ಅದು ನಮ್ಮ ಪರಿಸರದಿಂದ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳನ್ನು ಒಳಗೊಂಡಿರುವ ಸತ್ತ ಪ್ರಾಣಿಗಳನ್ನು ಶುಚಿಗೊಳಿಸುತ್ತವೆ. ಅವುಗಳಿಲ್ಲದ ಕಾರಣ ರೋಗವು ಮನುಷ್ಯನಿಗೆ ಹರಡುವುದು ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾನವನ ಆರೋಗ್ಯದಲ್ಲಿ ರಣಹದ್ದುಗಳು ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಹುಮುಖ್ಯ. ಇದು ವನ್ಯಜೀವಿಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ವನ್ಯಜೀವಿಗಳು ಪರಿಸರ ಸಂರಕ್ಷಣೆಯ ಕೆಲಸವನ್ನು ನಿರ್ವಹಿಸುತ್ತದೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಾಕೆ ರೋಗ ಹರಡುವಿಕೆ ಹೆಚ್ಚಳವಾಯಿತು?
ಹದ್ದುಗಳ ಸಂಖ್ಯೆಯಲ್ಲಿ ಕುಸಿತ ಭಾರತದಲ್ಲಿ ಮಾನವನ ಸಾವಿನ ಹೆಚ್ಚಳಕ್ಕೆ ಕಾರಣವಾಯಿತು ಎನ್ನುವ ಐಯಲ್ ಫ್ರಾಂಕ್ ಮತ್ತು ಅವರ ಸಹ-ಲೇಖಕ ಅನಂತ್ ಸುದರ್ಶನ್ ಅವರು ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಸತ್ತ ಜೀವಿಗಳನ್ನು ಇಲಿ, ನಾಯಿಗಳು ತಿನ್ನಲು ಪ್ರಾರಂಭಿಸಿದ್ದರಿಂದ ದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣ ಹೆಚ್ಚಳವಾಗಿದೆ. ದೇಶಾದ್ಯಂತ ರೇಬೀಸ್ ಲಸಿಕೆ ಮಾರಾಟವೂ ಹೆಚ್ಚಳವಾಗಿದೆ. ರೇಬೀಸ್ ಸೋಂಕಿತ ನಾಯಿಗಳು ಮಾನವರನ್ನು ಕಚ್ಚುತ್ತಿರುವುದರಿಂದ ಹಲವು ಸಾವು ಸಂಭವಿಸಿದೆ ಎಂಬುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ.
ರೋಗಕಾರಕ ವ್ಯಕ್ತಿಯ ಶವಗಳನ್ನು ತಿನ್ನುವ ರಣಹದ್ದುಗಳು ಉಳಿದ ಪ್ರಾಣಿಗಳಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡುತ್ತದೆ. ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತದಿಂದ ರೈತರು ತಮ್ಮ ಜಾನುವಾರುಗಳ ಶವಗಳನ್ನು ನದಿಗಳಿಗೆ ಹಾಕುತ್ತಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಜನರ ಆರೋಗ್ಯ ಹದಗೆಡಿಸುತ್ತಿದೆ.
ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ರಾಸಾಯನಿಕಗಳನ್ನು ಬಳಸುವಂತೆ ಭಾರತ ಸರ್ಕಾರವು ಹೇಳಿದೆ. ಇದರಿಂದಲೂ ಜಲಮಾರ್ಗಗಳನ್ನು ಕಲುಷಿತಗೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ
ಭಾರತದ 600 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಕಸ ಸುರಿಯುವುದು, ಶವದ ರಾಶಿಗಳು ಹೆಚ್ಚಾಗಿರುವ ನಗರ ಪ್ರದೇಶಗಳಲ್ಲಿ 2000 ಮತ್ತು 2005 ರ ನಡುವಿನ ರಣಹದ್ದುಗಳ ನಷ್ಟವು ವಾರ್ಷಿಕವಾಗಿ ಸುಮಾರು 1,00,000 ಹೆಚ್ಚುವರಿ ಮಾನವ ಸಾವುಗಳಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 70 ಶತಕೋಟಿ ಡಾಲರ್ ಗಿಂತ ಹೆಚ್ಚು ನಷ್ಟವಾಗಿದೆ. ರಣಹದ್ದುಗಳ ಸಂಖ್ಯೆಯು ಕ್ಷೀಣಿಸಿದ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ಶೇ. 4ಕ್ಕಿಂತ ಹೆಚ್ಚಾಗಿದೆ ಎನ್ನುತ್ತಾರೆ ಸಂಶೋಧಕರು.