Site icon Vistara News

Kidney Stone: ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿವೆ ಸುಲಭ ಸರಳ ಮನೆ ಮದ್ದು!

stomach pain

ಕಿಡ್ನಿ ಸ್ಟೋನ್‌ (Kidney Stone) ಇಂದು ಜೀವನಶೈಲಿ ಸಮಸ್ಯೆ. ಕೆಳ ಹೊಟ್ಟೆಯ ಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಾಗ ಇದು ಬಂದಿದೆ ಅಂತ ಗೊತ್ತಾಗುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗಬೇಕಾಗಬಹುದು. ಮೂತ್ರ ಮಾಡಿದ ಮೇಲೂ ನಿರಾಳತೆಯ ಅನುಭವ ಆಗುವುದಿಲ್ಲ. ನಿರ್ಲಕ್ಷ್ಯ ಮಾಡಿದರೆ ಕಲ್ಲು ದೊಡ್ಡದಾಗಿ ಶಸ್ತ್ರಚಿಕಿತ್ಸೆಯ ಮೂಲಕವೇ ಹೊರತೆಗೆಯಬೇಕಾದೀತು. ಹೀಗಾಗಿ ಕಲ್ಲು ಕಾಣಿಸಿಕೊಳ್ಳುವ ಮುನ್ನವೇ ಆಹಾರ ಹಾಗೂ ಪೇಯದಲ್ಲಿ (health tips) ಕೆಲವು ವ್ಯತ್ಯಾಸ, ರೂಢಿಗಳನ್ನು ಮಾಡಿಕೊಂಡರೆ ಒಳ್ಳೆಯದು. ಹಾಗಾದರೆ ಕಿಡ್ನಿ ಸ್ಟೋನ್‌ಗೆ ಯಾವ ರೀತಿಯಲ್ಲಿ ಮನೆಮದ್ದು (home remedies for Kidney Stone) ಮಾಡಬಹುದು? ಕೆಲವು ಇಲ್ಲಿವೆ.

ನೀರು, ಎಳನೀರು, ಕಷಾಯ

ದೇಹದಲ್ಲಿನ ಅನುಪಯುಕ್ತ ದ್ರವ್ಯಗಳನ್ನು ದೇಹದಿಂದ ಹೊರಹಾಕಲು ಮೂತ್ರಪಿಂಡಗಳು ಸತತವಾಗಿ ಕೆಲಸ ಮಾಡುತ್ತವೆ. ಮೂತ್ರ ಪಿಂಡದ ಕೆಲಸ ಸರಿಯಾಗಿ ಆಗದಿದ್ದರೆ ಕಿಡ್ನಿಸ್ಟೋನ್‌ನಂತಹ ಸಮಸ್ಯೆ ಕಾಡುತ್ತದೆ. ಮೂತ್ರ ಪಿಂಡಗಳ ಕೆಲಸ ಸರಿಯಾಗಿ ಆಗಬೇಕೆಂದರೆ ನೀರು, ಎಳನೀರು, ಕಷಾಯದಂತಹ ದ್ರವ ಪದಾರ್ಥಗಳ ಸೇವನೆ ಹೆಚ್ಚಿಗೆ ಇರಬೇಕು. ಆಗ ಮೂತ್ರಪಿಂಡಗಳು ದೇಹದಲ್ಲಿರುವ ಬೇಡದ ವಸ್ತುಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಪ್ರತಿನಿತ್ಯ ಸುಮಾರು 3 ಲೀಟರ್ ನೀರು‌, ದಿನಕ್ಕೆ ಒಂದು ಅಥವಾ ಎರಡು ಎಳನೀರಿನ ಸೇವನೆ ಮಾಡುತ್ತಿರಿ.

Lemon juice

​ಬೀನ್ಸ್‌ ಕಾಳು

ಆಯುರ್ವೇದದ ಪ್ರಕಾರ, ಕಿಡ್ನಿಯನ್ನೇ ಹೋಲುವ ಈ ತರಕಾರಿ ಕಿಡ್ನಿಯ ಅನಾರೋಗ್ಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಆಕಾರವಿರುವ ಬೀನ್ಸ್‌ಗಳ ಸೇವನೆ ಒಳ್ಳೆಯದು ಯಾಕೆಂದರೆ ಈ ಬೀನ್ಸ್‌ಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಖನಿಜ. ಬೀನ್ಸ್ ಮೃದುವಾಗುವವರೆಗೆ ಬೇಯಿಸಿ ತಿನ್ನಬಹುದು ಅಥವಾ ಸಾಂಬಾರ್‌, ಕಾಳಿನ ಪಲ್ಯವನ್ನು ಮಾಡಿ ಸೇವಿಸಬಹುದು.

ಬಾಳೆ ತಿರುಳು

ಬಾಳೆ ಗಿಡದ ತಿರುಳು ಅಥವಾ ದಿಂಡುಗಳು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿವೆ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮೂತ್ರಪಿಂಡದ ಕಲ್ಲುಗಳನ್ನು ಯಶಸ್ವಿಯಾಗಿ ತಡೆಯುತ್ತದೆ. ಬಾಳೆದಿಂಡುಗಳಲ್ಲಿರುವ ಮೆಗ್ನೀಸಿಯಮ್ ಹೆಚ್ಚುವರಿ ಆಕ್ಸಲೇಟ್‌ಗಳೊಂದಿಗೆ ಸುಲಭವಾಗಿ ಸಂಯೋಜಿಸುತ್ತವೆ. ಇದರಿಂದಾಗಿ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳ ರಚನೆಯನ್ನು ತಡೆಯುತ್ತದೆ.

ನಿಂಬೆ ರಸ

ನಿಂಬೆ ರಸದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಗೇ ಸಿಟ್ರೇಟ್‌ ಕೂಡ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಕಾರಣವಾಗುತ್ತದೆ. ಲಿಂಬೆ ರಸವು ಹೇರಳವಾದ ಸಿಟ್ರೇಟ್ ಅನ್ನು ಹೊಂದಿದೆ. ಹೀಗಾಗಿ ಇದು ಮೂತ್ರಪಿಂಡದ ಕಲ್ಲುಗಳಿಗೆ ಉತ್ತಮ ಮನೆಮದ್ದು. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಸೇವನೆ ಮಾಡಿ. ಆದಷ್ಟು ತಾಜಾ ನಿಂಬೆ ರಸ ಬಳಸಿ.

Lemon juice

ದಾಳಿಂಬೆ ಹಣ್ಣು

ದಿನಕ್ಕೆ ಒಂದು ದಾಳಿಂಬೆ ಹಣ್ಣು ಅಥವಾ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದಾಗಿದೆ. ದಾಳಿಂಬೆಯ ಪೋಷಕಾಂಶಗಳು ಹಾಗೂ ನಿರೋಧಕ ಗುಣಲಕ್ಷಣಗಳು ಕಿಡ್ನಿಗೆ ಬೇಕಾದ ದ್ರವಾಂಶವನ್ನು ಪೂರೈಸಿ ಕಾರ್ಯ ಚಟುವಟಿಕೆಯನ್ನು ಸರಾಗಗೊಳಿಸುತ್ತದೆ.

ಇದನ್ನೂ ಓದಿ: Kidney Stones: ಕಿಡ್ನಿಯಲ್ಲಿ ಕಲ್ಲು ಎಂಬ ಅತೀವ ನೋವಿಗೆ ಪರಿಹಾರಗಳು ಇಲ್ಲಿವೆ!

Exit mobile version