ಕೆಲವರಿಗೆ ಅಧಿಕ ರಕ್ತದೊತ್ತಡವಾದರೆ, ಇನ್ನೂ ಕೆಲವರಿಗೆ ಕಡಿಮೆ ರಕ್ತದೊತ್ತಡದ (Low BP) ಸಮಸ್ಯೆ. ಆದರೆ ಬಹಳಷ್ಟು ಕೇಸ್‌ಗಳಲ್ಲಿ ಕಡಿಮೆ ರಕ್ತದೊತ್ತಡದಲ್ಲಿ ಯಾವ ಲಕ್ಷಣಗಳೂ ಅಷ್ಟಾಗಿ ಕಾಣುವುದಿಲ್ಲವಾದ್ದರಿಂದ ಕಡಿಮೆ ರಕ್ತದೊತ್ತಡ ಗಮನಕ್ಕೆ ಬರುವುದು ಕಡಿಮೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಕಡಿಮೆ ರಕ್ತದೊತ್ತಡವೇ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ.
ಹಾಗೆ ನೋಡಿದರೆ, ಕಡಿಮೆ ರಕ್ತದೊತ್ತಡವನ್ನು ಬಹಳಷ್ಟು ಸಾರಿ ಆರಂಭದ ಹಂತದಲ್ಲೇ, ಸರಿಯಾದ ಆಹಾರ ಕ್ರಮ ಹಾಗೂ ಜೀವನಕ್ರಮದ ಮೂಲಕವೂ ಸರಿಪಡಿಸಿಕೊಳ್ಳಬಹುದು. ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಸೂಪರ್ ಫುಡ್ (super food) ಆಗಿ ಕೆಲಸ ಮಾಡುವ ಈ ಕೆಳಗಿನ ಕೆಲವು ಆಹಾರವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು (health tips) ಪ್ರಯತ್ನಿಸಬಹುದು.
1. ಕಾಫಿ: ಕಾಫಿ ಹಲವು ಒಳ್ಳೆಯ ಗುಣಗಳನ್ನೂ ಹೊತ್ತು ತರುತ್ತದೆ. ಕಾಫಿಯಿಂದ ರಕ್ತದೊತ್ತಡದಲ್ಲಿ ಏರಿಕೆ ಕಾಣುತ್ತದೆ. ಕೂಡಲೇ ರಕ್ತದೊತ್ತಡವನ್ನು ಏರುವಂತೆ ಮಾಡಲು ಕಾಫಿ ಕುಡಿಯಬಹುದು.
2. ಮೊಟ್ಟೆ: ಮೊಟ್ಟೆಯಲ್ಲಿ ಫೋಲೋಟ್, ವಿಟಮಿನ್ ಬಿ೧೨, ಕಬ್ಬಿಣಾಂಶ, ಪ್ರೊಟೀನ್ ಹಾಘೂ ವಿವಿಧ ಪೋಷಕಾಂಶಗಳೂ ಇರುವುದರಿಂದ ಇದು ಕಡಿಮೆ ರಕ್ತದೊತ್ತಡ ಇರುವ ಮಂದಿಯಲ್ಲಿ ರಕ್ತದೊತ್ತಡವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ. ಹೃದಯ ಸಂಬಂಧೀ ತೊಂದರೆಗಳಾದ ರಕ್ತಹೀನತೆಗೂ ಇದು ಒಳ್ಳೆಯ ಆಹಾರ.
3. ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಬಿ೧೨, ಫೋಲೇಟ್ ಹಾಗೂ ಪ್ರೊಟೀನ್ ಇರುವುದರಿಂದ ಮೊಟ್ಟೆ ತಿನ್ನದ ಸಸ್ಯಾಹಾರಿಗಳಿಗೆ ಉತ್ತಮ ಆಹಾರ.
4. ಒಣದ್ರಾಕ್ಷಿ: ಒಣದ್ರಾಕ್ಷಿ ಅಧಿಕ ರಕ್ತದೊತ್ತಡದ ಮಂದಿಗೂ ಕಡಿಮೆ ರಕ್ತದೊತ್ತಡದ ಮಂದಿಗೂ ಅತ್ಯುತ್ತಮವಾದ ಆಯ್ಕೆ. ಇದರಲ್ಲಿ ಪೊಟಾಶಿಯಂ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಎರಡೂ ತೊಂದರೆಯ ಮಂದಿಗೆ ಒಳ್ಳೆಯದು.
5. ಬೀಜಗಳು: ಒಣ ಬೀಜಗಳಲ್ಲಿ ಫೋಲೇಟ್, ಕಬ್ಬಿಣಾಂಶ, ಪೊಟಾಶಿಯಂ ಹಾಗೂ ಇತರ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಇವು ರಕ್ತದೊತ್ತಡವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.
6. ಹಸಿರು ತರಕಾರಿ: ಬ್ರೊಕೋಲಿ, ಬಸಳೆ, ಲೆಟ್ಯೂಸ್, ಹೂಕೋಸು, ಕ್ಯಾಬೇಜ್ ಮತ್ತಿತರ ಹಸಿರು ತರಕಾರಿಗಳು ಕಬ್ಬಿಣಾಂಶ, ಫೋಲೇಟ್‌ಗಳನ್ನು ಹೊಂದಿರುವುದರಿಂದ ಅತ್ಯುತ್ತಮ ಆಹಾರ.
7. ಬೇಳೆಕಾಳುಗಳು: ಬೇಳೆ ಕಾಳುಗಳಾದ, ಹೆಸರು, ಕಡಲೆ, ಅಲಸಂಡೆ ಕಾಳು, ಅವರೆಕಾಳು ಮತ್ತಿತರ ಬೇಳೆ ಕಾಳುಗಳೂ ಕೂಡಾ ಒಳ್ಳೆಯದೇ.
ಇದನ್ನೂ ಓದಿ: Health Tips: ಒಗ್ಗರಣೆಗೆ ಹಾಕುವ ಕರಿಬೇವನ್ನು ನಾವು ನಿತ್ಯವೂ ಏಕೆ ತಿನ್ನಬೇಕು ಗೊತ್ತೇ?
8. ಮಾಂಸ (ಅಂಗಗಳು): ಮಾಂಸದಲ್ಲಿ ಮುಖ್ಯವಾಗಿ ಪಿತ್ತಕೋಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳಿರುವುದರಿಂದ ಇಂತಹ ಮಾಂಸಾಹಾರವನ್ನು ಪರಿಗಣಿಸಬಹುದು.
9. ಮೀನು: ಸಾಲ್ಮನ್, ಟೂನಾ ಮತ್ತಿತರ ಮೀನುಗಳಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಇವು ಹೃದಯದ ಆರೋಗ್ಯಕ್ಕೂ ಅತ್ಯುತ್ತಮ ಆಹಾರ. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು ಇವು ವಿಟಮಿನ್ ಬಿ೧೨ ಹೀರಿಕೊಳ್ಳಲು ಸಹಾಯ ಮಾಡುತ್ತವೆ.
10. ಚಿಕನ್: ಚಿಕನ್‌ನಲ್ಲಿ ಸಾಕಷ್ಟು ವಿಟಮಿನ್ ಬಿ೧ ಹಾಗೂ ಪ್ರೊಟೀನ್ ಇರುವುದರಿಂದ ಇದು ರಕ್ತದೊತ್ತಡವನ್ನು ಚುರುಕಾಗಿಸುತ್ತದೆ. ಕಡಿಮೆ ರಕ್ತದೊತ್ತಡ ಇರುವ ಮಂದಿಗೆ ಇದೂ ಕೂಡಾ ಒಳ್ಳೆಯ ಆಹಾರ.
11. ಆಲಿವ್: ವಿಟಮಿನ್ ಇ, ಕಾಪರ್, ಕಬ್ಬಿಣಾಂಶ ಹಾಗೂ ಸಾಕಷ್ಟು ಖನಿಜಾಂಶಗಳೂ, ಪೋಷಕಾಂಶಗಳನ್ನೂ ಆಲಿವ್ ಹೊಂದಿರುವುದರಿಂದ ಇದೂ ಕೂಡಾ ರಕ್ತದೊತ್ತಡವನ್ನು ಚುರುಕುಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಈ ಎಲ್ಲ ಆಹಾರಗಳ ಜೊತೆಗೆ ನಿಯಮಿತ ಲಘು ವ್ಯಾಯಾಮ ದೇಹವನ್ನು ಚುರುಕಾಗಿಸುತ್ತದೆ. ಜೊತೆಗೆ ಆಲ್ಕೋಹಾಲ್, ಧೂಮಪಾನಗಳನ್ನು ದೂರ ಇಡುವಂತಹ ಶಿಸ್ತುಬದ್ಧ ಜೀವನಕ್ರಮವೂ ಕೂಡಾ ಈ ಸಮಸ್ಯೆಗೆ ಪರಿಹಾರವಾಗಬಲ್ಲದು.
ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!