Site icon Vistara News

ಅಕ್ಕರೆಯಿಂದ ಆರೈಕೆ ಮಾಡುವ ಅಕ್ಕಂದಿರಿಗೆ ಅಂತಾರಾಷ್ಟ್ರೀಯ ದಾದಿಯರ ದಿನದ ನಮನ

ಪ್ರತಿ ವರ್ಷ ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೋಗಪೀಡಿತರು, ಸಂಕಷ್ಟದಲ್ಲಿರುವವರ ಚಿಕಿತ್ಸೆಗೆ, ನೆರವಿಗೆ ನಿಲ್ಲುವ ದಾದಿಯರ ಸಮರ್ಪಣಾ ಭಾವವನ್ನು ಗೌರವಿಸಲು ಈಗ ದಿನವನ್ನು ಗುರುತಿಸಲಾಗಿದೆ. ಈ ದಿನ ಆಧುನಿಕ ಶುಶ್ರೂಷೆಯ ಆದ್ಯ ಪ್ರವರ್ತಕಿ ಎಂದೇ ಹೇಳಲಾಗುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವೂ ಆಗಿದೆ.

ಮೇ 12, 1820 ರಂದು ಜನಿಸಿದ ಬ್ರಿಟಿಷ್ ನರ್ಸ್ ಮತ್ತು ಸಂಖ್ಯಾಶಾಸ್ತ್ರಜ್ಞೆಯೂ ಆಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಎಂದು ಕರೆಯಲಾಗುತ್ತದೆ. ಈ ವರ್ಷ ಅವರ 202ನೇ ಜನ್ಮ ದಿನೋತ್ಸವ. ಟರ್ಕಿಯಲ್ಲಿ ನಡೆದ ಯುದ್ಧದಲ್ಲಿ ಗಾಯಾಳುಗಳಾದವರಿಗೆ ಫ್ಲಾರೆನ್ಸ್‌ ಅತ್ಯಂತ ಜತನದಿಂದ ಆರೈಕೆ ಮಾಡಿದವರು ಫ್ಲಾರೆನ್ಸ್‌ ನೈಟಿಂಗೇಲ್‌.

ಕ್ರಿಮಿಯನ್ ಯುದ್ಧದ ಸಮಯದಲ್ಲಿ (1854-1856), ಅವರು ಗಾಯಗೊಂಡ ಸೈನಿಕರಿಗೆ ಸೇವೆ ಸಲ್ಲಿಸಲು ದಾದಿಯಾಗಿ ನೇಮಕಗೊಳ್ಳಲು ಸ್ವಯಂಪ್ರೇರಿತರಾದರು. ಬ್ರಿಟಿಷ್ ನ್ಯಾಷನಲ್ ಆರ್ಮಿ ಮ್ಯೂಸಿಯಂ ವೆಬ್‌ಸೈಟ್‌ನ ಪ್ರಕಾರ ಅವರು ‘ಪೂರ್ವದ ಆಸ್ಪತ್ರೆಗಳಲ್ಲಿ ಮಹಿಳಾ ದಾದಿಯರ ಸೂಪರಿಂಟೆಂಡೆಂಟ್’ ಆಗಿ ಸೇರಿಕೊಂಡರು. ತಮ್ಮ ಜೀವನದುದ್ದಕ್ಕೂ, ನೈರ್ಮಲ್ಯದ ಬಗ್ಗೆ ಮತ್ತು ಶುಶ್ರೂಷೆಯ ಸುಧಾರಣೆಗಳಿಗಾಗಿ ಅವರು ಪ್ರಚಾರ ಮಾಡಿದರು ಮತ್ತು ತರಬೇತಿ ಪಡೆದ ದಾದಿಯರು ಮತ್ತು ಉತ್ತಮ ಶುಶ್ರೂಷಾ ಸೌಲಭ್ಯಗಳಿಗಾಗಿ ನಿಧಿಗಳ ಅಗತ್ಯವನ್ನು ತನ್ನ ಮೇಲಧಿಕಾರಿಗಳಿಗೆ ಎತ್ತಿ ತೋರಿಸಿದರು.

ತಮ್ಮ ರೋಗಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕೆಲಸ ಮಾಡುವ ದಾದಿಯರನ್ನು ಗೌರವಿಸಲು ಈ ದಿನವನ್ನು ಸಮರ್ಪಿಸಲಾಗಿದೆ. ದಾದಿಯರು ಸಾಂಪ್ರದಾಯಿಕವಾಗಿ ಸಮಾಜದ ಬೆನ್ನೆಲುಬಾಗಿದ್ದಾರೆ, ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೋಗ್ಯವನ್ನು ತಲುಪಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ | Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

Exit mobile version