Site icon Vistara News

Mint Leaves Benefits: ತಾಜಾತನಕ್ಕೆ ಇನ್ನೊಂದು ಹೆಸರಾದ ಪುದಿನದ ದಶಗುಣಗಳು ಇಲ್ಲಿವೆ!

mint leaves

ಪುದಿನ (mint leaves) ಎಂಬ ಗಾಢ ಪರಿಮಳ ಬೀರುವ ಸಾಮಾನ್ಯ ಸಸ್ಯ. ನಮ್ಮ ಮನೆಗಳಲ್ಲಿ, ಪುಟ್ಟ ಕುಂಡಗಳಲ್ಲಿ ಬೆಳೆಸಬಹುದಾದ ಈ ಸಸ್ಯ ತನ್ನ ಔಷಧೀಯ ಗುಣಗಳಿಂದಾಗಿ (medicinal values) ಅಷ್ಟೇ ಅಲ್ಲ ಸಾಕಷ್ಟು ವೈವಿಧ್ಯಮಯ ಅಡುಗೆ ತಯಾರಿಯಲ್ಲೂ (kitchen tips) ಮುಖ್ಯ ಪಾತ್ರ ವಹಿಸುತ್ತದೆ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಪುದಿನವನ್ನು ನಿತ್ಯೋಪಯೋಗಿ ಸಸ್ಯವಾಗಿ ಬಳಸುತ್ತಲೇ ಬಂದಿದ್ದು, ತನ್ನ ತಾಜಾತನದ ಗುಣದಿಂದಾಗಿ ಹಾಗೂ ವಿಶೇಷ ಘಮದಿಂದಾಗಿ ಎಲ್ಲರ ಹೃದಯ ಗೆಲ್ಲುವ ಸಸ್ಯವಿದು. ತಾಜಾತನದ ಅನುಭೂತಿ ನೀಡುವ ಬೆಳಗಿನ ಅತ್ಯಗತ್ಯ ಹಲ್ಲುಜ್ಜುವ ಪೇಸ್ಟ್‌ನಿಂದ ಹಿಡಿದು, ಬಗೆಬಗೆಯ ಚ್ಯೂಯಿಂಗಂ, ಪೆಪ್ಪರವಿಂಟುಗಳ ಫ್ಲೇವರ್‌ಗಳಲ್ಲಿಂದು ಪುದಿನಕ್ಕೆ ರಾಜ ಮರ್ಯಾದೆ.

ಅಷ್ಟೇ ಏಕೆ, ಪುದಿನ ರೈಸ್‌, ಪುದಿನ ಜ್ಯೂಸ್‌, ಪುದಿನ ಚಹಾ, ಪುದಿನ ಚಟ್ನಿ, ಪುದಿನ ದೋಸೆ ಸೇರಿದಂತೆ ಹಲವು ಬಗೆಯ ಅಡುಗೆಗಳನ್ನು ನಾವು ಮನೆಗಳಲ್ಲಿ ಮಾಡುವ ಮೂಲಕ ಪುದಿನ ಸಾಧ್ಯತೆಗಳನ್ನೂ (mint uses) ನಾವು ಸಾಕಷ್ಟು ವಿಸ್ತರಿಸಿಕೊಂಡಿದ್ದೇವೆ. ಆ ಮೂಲಕ ಅದು ನಮ್ಮ ಹೊಟ್ಟೆ ಸೇರಿ ಅದರ ಪ್ರಭಾವವನ್ನು ಬೀರುವುದೇನೋ ಸತ್ಯವೇ ಆದರೂ, ಸರಳವಾಗಿ ನಮ್ಮ ನಿತ್ಯ ಜೀವನಕ್ಕೆ ಕೆಲವು ಎಲೆ ಪುದಿನವನ್ನು ಸೇರಿಸುವ ಮೂಲಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು (health tips) ಕಾಣಬಹುದು. ಪುದಿನದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ (anti oxidants) ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳ ಜೊತೆಗೆ ವಿಟಮಿನ್‌ ಎ, ವಿಟಮಿನ್‌ ಸಿ ಹಾಗೂ ಬಿ ಕಾಂಪ್ಲೆಕ್ಸ್‌ ಇದೆ. ಪಾಸ್ಪರಸ್‌, ಕ್ಯಾಲ್ಶಿಯಂ, ಕಬ್ಬಿಣಾಂಶ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಮತ್ತಿತರ ಖನಿಜಾಂಶಗಳೂ (minerals) ಇವೆ. ಬನ್ನಿ, ಪುದಿನದ ಸೇವನೆಯಿಂದ ನಮಗಿರುವ ಆರೋಗ್ಯಕರ ಉಪಯೋಗಗಳನ್ನು (Mint Leaves Benefits) ನೋಡೋಣ ಬನ್ನಿ.

೧. ಪುದಿನಕ್ಕೆ ಇರುವ ವಿಶೇಷ ಗುಣ ಎಂದರೆ ಇದಕ್ಕೆ ನಮ್ಮ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವ ತಾಕತ್ತಿದೆ. ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುವ ಸಮಸ್ಯೆಯನ್ನೂ ನೀಗಿಸುತ್ತದೆ. ಹೆಚ್ಚು ಊಟ ಮಾಡಿದಾಗ, ಹೊಟ್ಟೆ ಭಾರವೆನಿಸಿದಾಗ ಒಂದು ಲೋಟ ನೀರಿನಲ್ಲಿ ಕೆಲವು ಪುದಿನ ಎಲೆಗಳನ್ನು ಕುದಿಸಿ, ಸೋಸಿ ಕುಡಿಯಿರಿ. ಕೆಲವೇ ನಿಮಿಷಗಳಲ್ಲಿ ಹೊಟ್ಟೆ ಹಗುರಾಗುತ್ತದೆ!

೨. ಪುದಿನದಲ್ಲಿ ಮೆಂಥಾಲ್‌ ಇರುವುದರಿಂದ ಇದು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳು ಹಾಗೂ ಜೀರ್ಣರಸ ಉತ್ಪತ್ತಿಗೆ ಪ್ರಚೋದಿಸುತ್ತದೆ. ಆ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

೩. ಹಲವರಿಗೆ ಆಗಾಗ ನೀರು ದೇಹದಲ್ಲಿ ನಿಲ್ಲುವಂತಹ ಸಮಸ್ಯೆಗಳಿರುತ್ತವೆ. ಇಂಥ ಸಮಸ್ಯೆಯನ್ನೂ ಇದು ಕಡಿಮೆ ಮಾಡಿ, ಆ ಮೂಲಕ ತೂಕ ಹೆಚ್ಚಾಗುವುದನ್ನು ತಪ್ಪಿಸುತ್ತದೆ.

೪. ಎಲ್ಲಕ್ಕಿಂತ ಮುಖ್ಯವಾಗಿ ಪುದಿನ ಚಹಾ ಕಡಿಮೆ ಕ್ಯಾಲರಿಯ ಪೇಯವಾಗಿದ್ದು, ಇತರ ಪೇಯಗಳಂತೆ ದೇಹಕ್ಕೆ ಯಾವುದೇ ಬಗೆಯ ಸಕ್ಕರೆಯ ಅಂಶವನ್ನು ಸೇರಿಸದೆ, ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ. ಬೊಜ್ಜು ಇಳಿಯುವಂತೆ ಮಾಡುತ್ತದೆ. ತೂಕ ಕಡಿಮೆಯಾಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗುವಂತೆ ಮಾಡುವ ಪೇಯ ಇದು.

೫. ಕೆಲವು ಪುದಿನ ಎಲೆಗಳನ್ನು ಕೊಂಚ ಹಿಸುಕಿ, ನಿಮ್ಮ ಕುಡಿಯುವ ನೀರಿಗೆ ಹಾಕಿ ಇಡೀ ದಿನ ಬಾಯಾರಿದಾಗಲೆಲ್ಲ ಕುಡಿಯುತ್ತಲೇ ಇರುವುದರಿಂದ ತೂಕ ಇಳಿಕೆಯಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು. ಅಷ್ಟೇ ಅಲ್ಲ, ಪುದಿನದ ನಿತ್ಯ ಸೇವನೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಪರಿಹಾಋವಾಗಿ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಾಣಬಹುದು.

೬. ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಇರುವ ಮಂದಿಗೆ ಪುದಿನ ಬಹಳ ಒಳ್ಳೆಯದು. ಇದು ಎದೆಕಟ್ಟಿದಂತಾಗುವುದು ಉಸಿರಾಟ ಕಷ್ಟವಾಗುವುದು ಕಫ ಮತ್ತಿತರ ಸಮಸ್ಯೆಗಳಿಗೂ ಸಹಾಯ ಮಾಡುತ್ತದೆ. ಕಟ್ಟಿದ ಮೂಗನ್ನು ತಿಳಿಗೊಳಿಸಿ ಸರಾಗವಾಗಿ ಉಸಿರಾಡುವಂತೆ ಮಾಡುವ ಸಾಮರ್ಥ್ಯ ಇದಕ್ಕಿದೆ.

ಇದನ್ನೂ ಓದಿ: Kitchen Tips: ಶುಂಠಿಯ ಬೆಲೆಯೂ ಏರಿದೆ! ಹಾಳಾಗದಂತೆ ಹೀಗೆ ಸಂಗ್ರಹಿಸಿಡಿ!

೭. ಹಲ್ಲಿನ ಆರೋಗ್ಯಕ್ಕೂ ಕೂಡಾ ಪುದಿನ ಸಹಕಾರಿ. ಹಲ್ಲಿನ ಸಂದುಗಳಲ್ಲಿ ಇರುವ ಆಹಾರವನ್ನು ಶುಚಿಗೊಳಿಸಿ, ತಾಜಾತನದ ಅನುಭೂತಿ ನೀಡುತ್ತದೆ. ಬಾಯಿ ವಾಸನೆಗೆ ಮುಕ್ತಿ ನೀಡಿ, ಬಾಯಿಯನ್ನು ಸ್ವಚ್ಛವಾಗಿರಿಸುತ್ತದೆ.

೮.ಮಿದುಳಿನ ಆರೋಗ್ಯಕ್ಕೂ ಪುದಿನ ಒಳ್ಳೆಯದು. ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡಿ, ಮಾನಸಿಕವಾಗಿ ಚುರುಕಾಗಿಸುವ ಗುಣ ಇದಕ್ಕಿದೆ. ಮಾನಸಿಕ ಒತ್ತಡವನ್ನೂ ಕಡಿಮೆಗೊಳಿಸುತ್ತದೆ.

೯. ಎದೆಹಾಲು ಉಣಿಸುವ ಹೊಸ ತಾಯಂದಿರಿಗೂ ಇದು ಒಳ್ಳೆಯದು. ಬಿರಿದ ಮೊಲೆತೊಟ್ಟಿನಿಂದಾಗಿ ಎದೆಹಾಲು ಉಣಿಸುವಾಗ ನೋವು ಅನುಭವಿಸುವ ತಾಯಂದಿರು ಪುದಿನ ಎಣ್ಣೆಯನ್ನು ಹಚ್ಚುವ ಮೂಲಕ ನೋವು ಶಮನವಾಗುತ್ತದೆ.

೧೦. ಪುದಿನ ಎಲೆಗಳಲ್ಲಿ ಸಾಲಿಸಿಲಿಕ್‌ ಆಸಿಡ್‌ ಹೇರಳವಾಗಿದ್ದು, ವಿಟಮಿನ್‌ ಎ ಕೂಡಾ ಹೆಚ್ಚಿದೆ. ಇವೆರಡೂ ಮುಖದ ಮೊಡವೆ ಹಾಗೂ ಕಪ್ಪು ಕಲೆಗಳನ್ನು ತಡೆಗಟ್ಟಲು ನೆರವಾಗುತ್ತದೆ. ಇದರಲ್ಲಿರುವ ಮೆಂಥಾಲ್‌ ಹಾಗೂ ನೈರ್ಗಿಕ ಆಂಟಿ ಆಕ್ಸಿಡೆಂಟ್‌ಗಳು ಮುಖಕ್ಕೆ ನೈಸರ್ಗಿಕ ಕ್ಲೆನ್ಸರ್‌, ಟೋನರ್‌, ಮಾಯ್‌ಶ್ಚರೈಸರ್‌ ಆಗಿ ಕೆಲಸ ಮಾಡುವ ಕಾರಣ, ಮುಖದ ಚರ್ಮ ಆರೋಗ್ಯದಿಂದ ಕಂಗೊಳಿಸುತ್ತದೆ.

ಇದನ್ನೂ ಓದಿ: Cough Remedies: ಮಲಗುವಾಗ ಬಿಡದೆ ಕಾಡುವ ಕೆಮ್ಮು ಎಂಬ ದುಃಸ್ವಪ್ನ: ಪರಿಹಾರ ಇಲ್ಲಿದೆ!

Exit mobile version