Site icon Vistara News

World Spine Day : ಬೆನ್ನು ಮೂಳೆ ಮುರಿಯುವ ಮುನ್ನ ಇರಲಿ ಕಾಳಜಿ!

World Spine Day

ಸಾರ್ವಜನಿಕರಲ್ಲಿ ಬೆನ್ನು ಮೂಳೆಯ ಆರೋಗ್ಯದ ಪ್ರಾಮುಖ್ಯತೆ, ಅರಿವು ಮೂಡಿಸಲು ಹಾಗೂ ಬೆನ್ನು ಮೂಳೆಯ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಅವಶ್ಯಕತೆ ಇದೆ. ಹೀಗಾಗಿ ವೈದ್ಯಕೀಯ ಕ್ಷೇತದ ಅನೇಕ ತಜ್ಞರ ಸಲಹೆ, ಅಭಿಪ್ರಾಯ ಆಲಿಸಲು 2004 ರಿಂದ ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಬೆನ್ನುಮೂಳೆ ದಿನ (World Spine Day) ಆಚರಿಸಲಾಗುತ್ತಿದೆ. ಇತ್ತೀಚೆಗೆ ಎಲ್ಲಾ ವಯೋಮಾನದವರಲ್ಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದರಿಂದ ಪಾರಾಗಲು ಅನುಸರಿಸಬೇಕಾದ ಮಾರ್ಗಗಳು ಮತ್ತು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಚಿರೋಪ್ರಾಕ್ಷನರ್ಸ್ ಸೊಸೈಟಿ, ವಿಶ್ವ ಸ್ಪೇನ್ ಡೇ ಆಚರಿಸಲು ನಿರ್ಧರಿಸಿತು.

ಬೆನ್ನು ಮೂಳೆ ಸಮಸ್ಯೆ ಎಷ್ಟು ಸಾಮಾನ್ಯ?

ಕಡಿಮೆ ಬೆನ್ನು ನೋವು (ಎಲ್‌ಬಿಪಿ) ಇತ್ತೀಚಿನ ದಿನಗಳಲ್ಲಿ ತಲೆ ನೋವಿನಂತೆ ಸಾಮಾನ್ಯವಾಗಿದೆ. ಇದರಿಂದ ಪಾರಾಗಲು ಅನೇಕರು ನಾನಾ ಕಸರತ್ತು ಮಾಡುತ್ತಾರೆ. 11 ವರ್ಷ ಒಳಗಿನ ಶೇಕಡಾ 80ಕ್ಕಿಂತ ಹೆಚ್ಚು ಮಂದಿ ವಯಸ್ಕರು ಒಂದಲ್ಲ ಒಂದು ಸಲ ಬೆನ್ನುನೋವು ಸಮಸ್ಯೆಯನ್ನು ಎದುರಿಸುತ್ತಾರೆ. ಈ ಪೈಕಿ ಶೇಕಡ 20 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ, ಇನ್ನೂ ಕೆಲವರು ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಬೆಡ್ ರೆಸ್ಟ್‌ ತೆಗೆದುಕೊಳ್ಳುತ್ತಾರೆ ಎಂದು ವರದಿ ಆಗಿದೆ. ಬೆನ್ನು ನೋವು ಅಥವಾ ಬೆನ್ನು ಹುರಿ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ದೇಹದ ಅಂಗಾಂಗಗಳ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಪದೇಪದೆ ಬೆನ್ನು ನೋವಿಗೆ ಕಾರಣವೇನು?

ಬೆನ್ನುಮೂಳೆಗೆ ಜೋಡಿಸಲಾದ ಸ್ನಾಯುಗಳು ಮತ್ತು ಅಸ್ಥಿರಜ್ಜುಗಳಿಗೆ ಆದ ಗಾಯ ಸಾಮಾನ್ಯವಾಗಿ ಬೆನ್ನು ಮತ್ತು ಕುತ್ತಿಗೆ ನೋವಿಗೆ ಸಾಮಾನ್ಯ ಕಾರಣವಾಗಿದೆ. ರಕ್ತಹೀನತೆ, ವಿಟಮಿನ್ ಕೊರತೆ, ಹಾರ್ಮೋನ್ ಅಸಮತೋಲನ, ಸಂಧಿವಾತ ಸಮಸ್ಯೆಗಳಿಂದ ಬೆನ್ನುನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳಲಿದೆ.

ನೋವಿನಿಂದ ಪಾರಾಗುವುದು ಹೇಗೆ?

ಮೂಳೆಗಳು, ಕೀಲುಗಳು ಆಸ್ಥಿರಜ್ಜುಗಳು, ಡಿಸ್ಕ್‌ಗಳು ಮತ್ತು ಸ್ನಾಯುಗಳು ಯಾವಾಗಲೂ ಕಾರ್ಯನಿರ್ವಹಿಸುವುದರಿಂದ ಅವುಗಳಿಗೆ ಉತ್ತಮ ಪೋಷಣೆ ಅಗತ್ಯವಿರುತ್ತದೆ. ವಿಶೇಷವಾಗಿ ಕ್ಯಾಲ್ಸಿಯಂ, ಮೆಗ್ನೆಸಿಯಮ್, ಕಬ್ಬಿಣ, ವಿಟಮಿನ್ ಡಿ ಮತ್ತು ಬಿ. ಕಾಂಪ್ಲೆಕ್ಸ್ ನಂತಹ ಪೋಷಕಾಂಶಗಳು, ಪ್ರೋಟೀನ್ ಹೊರತುಪಡಿಸಿ. ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವುದು ಮತ್ತು ಸರಿಪಡಿಸಲು ಸಹಕಾರಿಯಾಗಲಿದೆ.

ಪೋಷಣೆ ಹೊರತಾಗಿ ದೈನಂದಿನ ವ್ಯಾಯಾಮಗಳು ಮತ್ತು ಸಮತೋಲಿತ ಚಟುವಟಿಕೆಗಳು ಮತ್ತು ವಿಶ್ರಾಂತಿ ವ್ಯಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಅಧಿಕ ತೂಕದಿಂದ ಬೆನ್ನುಮೂಳೆಯ ಮೇಲೆ ಮಾತ್ರವಲ್ಲದೆ ಇಡೀ ದೇಹದ ವ್ಯವಸ್ಥೆ ಹೆಚ್ಚಿಸುತ್ತದೆ. ಹೃದಯದ ಮೇಲೆ ಹೆಚ್ಚು ಭಾರ ಬಿದ್ದು ಒತ್ತಡಕ್ಕೆ ಒಳಗಾಗುವ ಸ್ಥಿತಿಯೂ ಕೂಡ ನಿರ್ಮಾಣವಾಗಲಿದೆ. ಆದ್ದರಿಂದ ಸರಿಯಾದ ದೇಹ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅತಿಯಾದ ಧೂಮಪಾನ ಸೇವನೆ ಬೆನ್ನುಮೂಳೆಯ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೀವನ ಶೈಲಿಯ ಬದಲಾವಣೆಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಪ್ರತಿವರ್ಷ ಜಾಗತಿಕವಾಗಿ ಸುಮಾರು 1.5 ರಿಂದ 2 ಶತಕೋಟಿ ಜನರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಸೇರಿದಂತೆ ಚಿಕಿತ್ಸೆಗಾಗಿ ಸುಮಾರು 300 ಶತಕೋಟಿ ಡಾಲರ್‌ಗಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ.
ಡಾ. ಕೆ.ಎನ್. ಕೃಷ್ಣ, ಹಿರಿಯ ಸಲಹೆಗಾರರು, ಅಪೋಲೋ ಆಸ್ಪತ್ರೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version