Site icon Vistara News

Super Food | ನೆನೆಸಿ ತಿನ್ನುವ ಸೂಪರ್‌ಫುಡ್‌ಗಳಿಂದ ಆಗುವ ಪ್ರಯೋಜನ ತಿಳಿದಿದೆಯೇ?

Super Food

ಬೆಂಗಳೂರು: ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು (Super Food) ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಾಗುತ್ತದೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

ನಮ್ಮ ಅಹಾರದಲ್ಲಿ ಮಾಡುವ ಸಣ್ಣ ಬದಲಾವಣೆಗಳೂ ಕೆಲವೊಮ್ಮೆ ದೊಡ್ಡ ಲಾಭವನ್ನು ತರಬಹುದು. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಿದೆ. ಅಂಥ ಆಹಾರಗಳು ಯಾವುವು ಮತ್ತು ಅವುಗಳ ಪ್ರಯೋಜನವೇನು ಎಂಬುದನ್ನು ನೋಡೋಣ.

ಸೂಕ್ಷ್ಮ ಪೋಷಕಾಂಶಗಳ ಕೊರತೆ ಬಹಳಷ್ಟು ಜನರನ್ನು ಕಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಉದಾ, ಕಬ್ಬಿಣ, ಫೋಲೇಟ್‌, ವಿಟಮಿನ್‌ ಬಿ12 ಮುಂತಾದ ಕೊರತೆಗಳಿಂದ ಅನೀಮಿಯಾ ಉಂಟಾಗಬಹುದು. ವಿಟಮಿನ್‌ ಡಿ ಕೊರತೆಯಿಂದ ಮೂಳೆಗಳು ದುರ್ಬಲ ಆಗಬಹುದು. ಒಣದ್ರಾಕ್ಷಿ, ಬಾದಾಮಿ, ಶೇಂಗಾ, ವಾಲ್‌ನಟ್‌ ಮುಂತಾದವನ್ನು ರಾತ್ರಿಡೀ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಲಾಭಗಳು ಬಹಳಷ್ಟು. ವಿಟಮಿನ್‌ ಬಿ, ಫೋಲೇಟ್‌, ವಿಟಮಿನ್‌ ಇ ಮುಂತಾದ ಹಲವಾರು ಅಗತ್ಯ ಪೋಷಕಾಂಶಗಳನ್ನು ಇವುಗಳಿಂದ ಪಡೆಯಬಹುದು.

ಬಾದಾಮಿ
ನೆನೆಸಿದ ಬಾದಾಮಿಗಳು ಪಿಸಿಒಎಸ್‌ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್) ಸಮಸ್ಯೆ ದೂರ ಮಾಡಲು‌ ನೆರವಾಗುತ್ತವೆ. ಮಾತ್ರವಲ್ಲ, ಮುಖದ ಮೇಲಿನ ಮೊಡವೆ, ಕಪ್ಪುಕಲೆ ನಿವಾರಿಸಿ ಹೊಳೆಯುವ ತ್ವಚೆಯನ್ನು ನೀಡುತ್ತವೆ. ಏಳೆಂಟು ಬಾದಾಮಿಯನ್ನು ರಾತ್ರಿ ಚನ್ನಾಗಿ ತೊಳೆದು ಕುಡಿಯುವ ನೀರಿಗೆ ಹಾಕಿ, ಮಾರನೇದಿನ ಬೆಳಗ್ಗೆ ಖಾಲಿ ಹೊಟ್ಟೆಯನ್ನು ತಿನ್ನುವುದು ಕಷ್ಟವೇನಲ್ಲ.

ಇದನ್ನೂ ಓದಿ | Health Benefits Of Laughter | ಆರೋಗ್ಯ ಸುಧಾರಿಸಬೇಕೆ? ಹಾಗಾದರೆ ನಗುತ್ತಿರಿ!

ಒಣದ್ರಾಕ್ಷಿ ಮತ್ತು ಕೇಸರಿ
ಹತ್ತು ಒಣದ್ರಾಕ್ಷಿ ಮತ್ತು ಎರಡು ದಳ ಕೇಸರಿಯನ್ನು ರಾತ್ರಿ ನೆನೆಸಿ, ಬೆಳಗ್ಗೆ ತಿನ್ನುವುದರಿಂದ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಅನಿಯಮಿತ ಋತುಸ್ರಾವವನ್ನೂ ಸರಿಪಡಿಸಿಕೊಳ್ಳಲು ಇದು ನೆರವಾಗುತ್ತದೆ.

ಕಪ್ಪುದ್ರಾಕ್ಷಿ
ಕಪ್ಪುದ್ರಾಕ್ಷಿಯೂ ಮಾಮೂಲಿ ಒಣದ್ರಾಕ್ಷಿಯಂತೆಯೇ ದೊರೆಯುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೂದಲು ಉದುರುವುದನ್ನು ಕಡಿಮೆ ಮಾಡುವ ಸಾಮರ್ಥ್ಯ ನೆನೆಸಿದ ಕಪ್ಪುದ್ರಾಕ್ಷಿಗಳಲ್ಲಿ ಇದೆ.

ವಾಲ್‌ನಟ್‌
ಇದಂತೂ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಉಪಯುಕ್ತ. ಎರಡು ವಾಲ್‌ನಟ್‌ಗಳನ್ನು ನೀರಿಗೆ ಹಾಕಿದರೂ ಸಾಕಾಗುತ್ತದೆ. ಮೆದುಳನ್ನು ಚುರುಕಾಗಿಸಿ, ನೆನಪಿನ ಶಕ್ತಿ ಹೆಚ್ಚಿಸಿ ಏಕಾಗ್ರತೆಯನ್ನು ಉತ್ತಮಗೊಳಿಸುವ ಶಕ್ತಿ ವಾಲ್‌ನಟ್‌ಗಳಿಗಿದೆ.

ಹೆಸರುಕಾಳು
ಎರಡು ಚಮಚ ನೆನಸಿದ ಹೆಸರುಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದು ಅತ್ಯಂತ ಉಪಯುಕ್ತ. ಇದರಿಂದ ದೇಹದ ಮಾಂಸಖಂಡಗಳನ್ನು ಬಲಗೊಳಿಸಿ, ಕೂದಲು ಮತ್ತು ಚರ್ಮವನ್ನು ನಯಗೊಳಿಸುತ್ತದೆ. ಹದಿಹರೆಯದ ಮಕ್ಕಳಿಗೆ ಇದು ಅತ್ಯಂತ ಲಾಭದಾಯಕ

ಅಂಜೂರ
ನಮ್ಮ ಜೀರ್ಣಾಂಗಗಳ ಆರೋಗ್ಯ ವೃದ್ಧಿಗೆ ಬಲುದೊಡ್ಡ ಟಾನಿಕ್‌ ಅಂಜೂರ. ಎರಡು ಅಂಜೂರ ನೀರಿಗೆ ಹಾಕಿ ತಿಂದರೆ, ಮಲಬದ್ಧತೆಗೆ ಪರಿಣಾಮಕಾರಿ ಪರಿಹಾರ ನೀಡಬಲ್ಲದು.

ಇದನ್ನೂ ಓದಿ | World’s Oldest Person | ವಿಶ್ವದ ಹಿರಿಯ ವ್ಯಕ್ತಿ ಸಿಸ್ಟರ್‌ ಆ್ಯಂಡ್ರೆ 118ನೇ ವಯಸ್ಸಿನಲ್ಲಿ ನಿಧನ, ಇವರ ಆರೋಗ್ಯದ ಗುಟ್ಟೇನಾಗಿತ್ತು?

Exit mobile version