Site icon Vistara News

Health Tips: ಸೆರೆಲ್ಸ್‌, ಜ್ಯೂಸ್‌ಗಳೂ ಹೃದಯ ಕಾಯಿಲೆ ತರಬಲ್ಲವು; ಯಾವುದಕ್ಕೂ ಸೇವನೆ ಮಿತವಾಗಿರಲಿ

The young man who was dancing at the marriage house suddenly collapsed and died!

ಈಗೀಗ ಜನರು ಆಹಾರ ಕ್ರಮದ ಬಗ್ಗೆ ಜಾಸ್ತಿ ಗಮನಹರಿಸುತ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಪ್ರತಿಯೊಬ್ಬರೂ ಡಯೆಟ್‌ ಮಾಡುತ್ತಾರೆ. ಆರೋಗ್ಯದಲ್ಲಿ ಏನೇ ಸಮಸ್ಯೆ ಇಲ್ಲದೆ ಇದ್ದರೂ, ತಾವು ಸದಾ ಆರೋಗ್ಯವಾಗಿರಬೇಕು, ಫಿಟ್‌ ಆಗಿರಬೇಕು ಎಂಬ ಕಾರಣಕ್ಕಾದರೂ ಒಂದಷ್ಟು ಸಭ್ಯ ಆಹಾರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಹುತೇಕ ಜನರು ಉಪ್ಪು, ಸಕ್ಕರೆ, ಎಣ್ಣೆಗಳ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ. ಇವೆಲ್ಲ ಹೃದಯ ರಕ್ತನಾಳದ ಕಾಯಿಲೆ (Cardiovascular Diseases)ಗಳನ್ನು ತರುತ್ತವೆ ಎಂಬ ಕಾರಣಕ್ಕೇ ಜನರು ವಿಮುಖರಾಗುತ್ತಿದ್ದಾರೆ. ಇವುಗಳ ಹೊರತಾಗಿಯೂ ಕೆಲವು ಆಹಾರಗಳ ವಿಪರೀತ ಸೇವನೆಯಿಂದ ಹೃದಯ ಮತ್ತು ರಕ್ತನಾಳಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರಬಹುದು. ಅದರಲ್ಲಿ ಕೆಲವನ್ನು ನಾವಿಲ್ಲಿ ತಿಳಿಸಿದ್ದೇವೆ ನೋಡಿ..

ಸೆರೆಲ್ಸ್‌
ಬೆಳಗ್ಗೆಯ ತಿಂಡಿಗೆ ಸಾಮಾನ್ಯವಾಗಿ ಅವಲಕ್ಕಿ, ದೋಸೆ, ಉಪ್ಪಿಟ್ಟು, ಶಾವಿಗೆ, ಇಡ್ಲಿಗಳಂಥ ತಿನಿಸುಗಳನ್ನು ತಿನ್ನಲಾಗುತ್ತದೆ. ಆದರೆ ಈಗೀಗ ಜನರು ಡಯೆಟ್‌ ನೆಪದಲ್ಲಿ ಬೆಳಗ್ಗೆಯ ಬ್ರೇಕ್‌ಫಾಸ್ಟ್‌ಗೆ ಓಟ್ಸ್‌, ಕಾರ್ನ್‌ಫ್ಲೆಕ್ಸ್‌ಗಳಂಥ ಸೆರೆಲ್ಸ್‌ಗಳನ್ನು ತಿನ್ನುತ್ತಿದ್ದಾರೆ. ಇದು ಸಮಯ ಉಳಿಸುವ ಮಾರ್ಗವೂ ಹೌದು. ಹೊಟ್ಟೆಯೂ ತುಂಬಬೇಕು, ಡಯೆಟ್‌ಗೂ ಸಹಾಯವಾಗಬೇಕು ಮತ್ತು ಸಮಯವೂ ಉಳಿಯಬೇಕು ಎಂದು ಇಂಥ ಆಹಾರಗಳನ್ನೇ ತಿನ್ನುತ್ತಿದ್ದಾರೆ. ಸೆರೆಲ್ಸ್‌ ಸೇವನೆ ಒಳ್ಳೆಯದಲ್ಲ ಎಂದಲ್ಲ. ಆದರೆ ಇವುಗಳನ್ನು ತುಂಬ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಸೆರೆಲ್ಸ್‌ಗಳ ವಿಚಾರಕ್ಕೆ ಬರುವುದಾದರೆ, ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ತಿನ್ನಲಾಗುತ್ತದೆ. ಪ್ರತಿದಿನ ಬೆಳಗ್ಗೆ ಈ ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆ ಮಿಶ್ರಣವನ್ನು ಸೇವಿಸುತ್ತ ಬಂದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ನಿಮ್ಮಲ್ಲಿ ಉರಿಯೂತ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಜ್ಯೂಸ್‌ಗಳು
ಹಣ್ಣುಗಳಿಂದ ಮಾಡುವ ಈ ಪಾನೀಯಗಳನ್ನು ಇಷ್ಟಪಡದೆ ಇರುವವರು ತುಂಬ ಕಡಿಮೆ. ಅದರಲ್ಲೂ ಬೇಸಿಗೆಯಲ್ಲಂತೂ ದಿನಕ್ಕೆ ಎಷ್ಟು ಜ್ಯೂಸ್‌ ಕೊಟ್ಟರೂ ಅದು ತಾನಾಗೇ ಹೊಟ್ಟೆಗೆ ಹೋಗುತ್ತಿರುತ್ತದೆ. ಬಿಸಿಲಿನ ಬೇಗೆಯಿಂದ ಪಾರಾಗಲು, ನಮ್ಮ ದೇಹವನ್ನು ಹೈಡ್ರೇಟ್‌ ಮಾಡಿಟ್ಟುಕೊಳ್ಳಲು ಜ್ಯೂಸ್‌ಗಳಷ್ಟು ಸಹಕಾರಿ ಇನ್ಯಾವುದೂ ಇಲ್ಲ. ಹೀಗಾಗಿ ಪದೇಪದೆ ಅಂಗಡಿಗೆ ಹೋಗುವುದು, ಬೇಕಾದ ಜ್ಯೂಸ್‌ ಮಾಡಿಸಿಕೊಂಡು ಕುಡಿಯುವುದು ಮಾಡುತ್ತೇವೆ. ಆದರೆ ಸಕ್ಕರೆ ಮಿಶ್ರಿತ ಜ್ಯೂಸ್‌ಗಳ ಅತಿಯಾದ ಸೇವನೆಯಿಂದ ಹೃದಯಕ್ಕೆ ತೊಂದರೆಯಾಗಬಹುದು. ದೇಹದಲ್ಲಿ ಸಕ್ಕರೆ ಅಂಶ ಮಿತಿಮೀರಿ ರಕ್ತನಾಳದ ಮತ್ತು ಹೃದಯದ ಕಾಯಿಎಲ ತರಬಲ್ಲದು. ಹೀಗಾಗಿ ನೀವು ಜ್ಯೂಸ್‌ ಪ್ರಿಯರೇ ಆಗಿದ್ದರೆ ಸಾಧ್ಯವಾದಷ್ಟು ಮನೆಯಲ್ಲೇ, ಸಕ್ಕರೆ ಹಾಕದೆ ಜ್ಯೂಸ್‌ ತಯಾರಿಸಿಕೊಳ್ಳಿ. ಯಾಕೆಂದರೆ ನೀವು ಅಂಗಡಿಗಳಿಗೆ ಹೋದಾಗ ಎಷ್ಟಿಲ್ಲವೆಂದರೂ ರುಚಿಗಾಗಿಯಾದರೂ ಅವರು ಸ್ವಲ್ಪ ಸಕ್ಕರೆ ಹಾಕಿಯೇ ಹಾಕುತ್ತಾರೆ.

ಚೈನೀಸ್‌ ಫುಡ್‌ಗಳು
ಚೈನೀಸ್‌ ತಿನಿಸುಗಳು ಬಾಯಲ್ಲಿ ನೀರೂರಿಸುವುದು ಸಹಜ. ಸ್ಪೈಸಿ, ಟೇಸ್ಟಿ ಫುಡ್‌ಗಳನ್ನು ಇಷ್ಟಪಡದವರು ಕಡಿಮೆ. ಅದರಲ್ಲೂ ಯಾರಾದರೂ ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಹೊರಗೆ ಹೋದರೆ ನಿಮ್ಮ ಆಯ್ಕೆ ಚೈನೀಸ್‌ ರೆಸ್ಟೋರೆಂಟ್‌ ಹೋಗಿ, ಊಟ ಮಾಡುವುದೇ ಆಗಿರುತ್ತದೆ. ನಾನ್‌ವೆಜ್‌, ಫ್ರೈಡ್‌ರೈಸ್‌ಗಳಂಥ ಆಹಾರಗಳು ತಿನ್ನೋಕೇನೋ ಸಖತ್‌ ಖುಷಿಕೊಡುತ್ತವೆ. ಆದರೆ ಇವುಗಳ ಸೇವನೆ ಅಪರೂಪಕ್ಕೊಮ್ಮೆ ಎಂಬಂತೆ ಇರಲಿ. ಯಾಕೆಂದರೆ ಚೈನೀಸ್‌ ಆಹಾರದಲ್ಲಿ ಉಪ್ಪು, ಮಸಾಲೆ ಅಂಶ ಜಾಸ್ತಿ ಇರುತ್ತದೆ. ಹಾಗೇ, ಕೊಬ್ಬಿನ ಪ್ರಮಾಣವೂ ಅಧಿಕ. ಹೀಗಾಗಿ ಪದೇಪದೆ ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಲ್ಲವು.

ಇದನ್ನೂ ಓದಿ: No Tobacco Day: ಸ್ಮೋಕ್ ಮಾಡೋರ ಸಹವಾಸ ಮಾಡಲೇಬೇಡಿ!

ಚೈನೀಸ್‌ ಫುಡ್‌ಗಳು
ಚೈನೀಸ್‌ ತಿನಿಸುಗಳು ಬಾಯಲ್ಲಿ ನೀರೂರಿಸುವುದು ಸಹಜ. ಸ್ಪೈಸಿ, ಟೇಸ್ಟಿ ಫುಡ್‌ಗಳನ್ನು ಇಷ್ಟಪಡದವರು ಕಡಿಮೆ. ಅದರಲ್ಲೂ ಯಾರಾದರೂ ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಹೊರಗೆ ಹೋದರೆ ನಿಮ್ಮ ಆಯ್ಕೆ ಚೈನೀಸ್‌ ರೆಸ್ಟೋರೆಂಟ್‌ ಹೋಗಿ, ಊಟ ಮಾಡುವುದೇ ಆಗಿರುತ್ತದೆ. ನಾನ್‌ವೆಜ್‌, ಫ್ರೈಡ್‌ರೈಸ್‌ಗಳಂಥ ಆಹಾರಗಳು ತಿನ್ನೋಕೇನೋ ಸಖತ್‌ ಖುಷಿಕೊಡುತ್ತವೆ. ಆದರೆ ಇವುಗಳ ಸೇವನೆ ಅಪರೂಪಕ್ಕೊಮ್ಮೆ ಎಂಬಂತೆ ಇರಲಿ. ಯಾಕೆಂದರೆ ಚೈನೀಸ್‌ ಆಹಾರದಲ್ಲಿ ಉಪ್ಪು, ಮಸಾಲೆ ಅಂಶ ಜಾಸ್ತಿ ಇರುತ್ತದೆ. ಹಾಗೇ, ಕೊಬ್ಬಿನ ಪ್ರಮಾಣವೂ ಅಧಿಕ. ಹೀಗಾಗಿ ಪದೇಪದೆ ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಲ್ಲವು.

ಆಲೂಗಡ್ಡೆ ಚಿಪ್ಸ್‌
ಆಲೂಗಡ್ಡೆಯಿಂದ ಯಾವುದೇ ತಿನಿಸು ತಯಾರಿಸಿದರೂ ಅದರ ರುಚಿ ವಿಭಿನ್ನ. ಅದರಲ್ಲೂ ಚಿಪ್ಸ್‌, ಸ್ನ್ಯಾಕ್ಸ್‌, ಫ್ರೈನಂಥ ತಿಂಡಿಗಳು ಒಮ್ಮೆ ತಿಂದರೆ ಮತ್ತಷ್ಟು ತಿನ್ನಬೇಕು ಎಂಬ ಆಸೆಯನ್ನು ಹೆಚ್ಚಿಸುತ್ತವೆ. ನಾಲಿಗೆ ಮತ್ತೆಮತ್ತೆ ಅದನ್ನು ಬೇಡುತ್ತದೆ. ಆದರೆ ನಾಲಿಗೆಗೆ ಬುದ್ಧಿ ಹೇಳಿ, ಯಾಕೆಂದರೆ ಆಲೂಗಡ್ಡೆ ಚಿಪ್ಸ್‌, ಸ್ನ್ಯಾಕ್ಸ್‌ನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿ, ಸೋಡಿಯಂ, ಕೊಬ್ಬಿನಾಂಶ ಇದ್ದು, ಹೃದಯಕ್ಕೆ ಯೊಂದರೆ ತರಬಲ್ಲದು.

ಕೆಚಪ್‌
ಈಗಂತೂ ಪ್ರತಿ ಮನೆಯ ಅಡುಗೆ ಮನೆಯಲ್ಲಿ ಕೆಚಪ್‌ (ಗೊಜ್ಜು) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗೇ, ಹೊರಗೆ ಅಂಗಡಿಗಳಲ್ಲಿ ಸಮೋಸಾ, ಫ್ರೆಂಚ್‌ಫ್ರೈಸ್‌ ಮತ್ತಿತರ ತಿನಿಸು ತಿನ್ನುವಾಗಲೂ ಟೊಮ್ಯಾಟೊ ಕೆಚಪ್‌ ಇರಲೇಬೇಕು ಎಂಬಂತಾಂಗಿದೆ. ಯಾಕೆಂದರೆ ಕೆಚಪ್‌ಗಳು ಕೊಡುವ ಟೇಸ್ಟ್‌ ಅಂಥದ್ದು !. ಆದರೆ ಕೆಚಪ್‌ಗಳ ಸೇವನೆ ಮಿತವಾಗಿರಲಿ. ಯಾಕೆಂದರೆ ಇದರಲ್ಲಿ ಸೋಡಿಯಂ ಅಂಶ ಜಾಸ್ತಿಯಿದ್ದು, ಹೃದಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

Exit mobile version