Site icon Vistara News

Tulsi Leaves benefits: ಈ ಗಿಡ ಮನೆಯಲ್ಲಿದ್ದರೆ ಆರೋಗ್ಯದ ಗಣಿ ಇದ್ದಂತೆ! ತುಳಸಿ ಎಲೆಗಳ 10 ಆರೋಗ್ಯ ಟಿಪ್ಸ್

10 health benefits of tulsi leaves

ಪವಿತ್ರ ಗಿಡವೆಂದೇ ಹಿಂದೂಗಳಿಂದ ಪೂಜೆಗೊಳ್ಳುವ ತುಳಸಿ, ಪ್ರತಿದಿನ ನಮ್ಮ ಮನೆಯ ಎದುರೇ ನಮಗೆ ದರ್ಶನ ನೀಡುತ್ತದೆ. ಮುಂಜಾನೆ ಎದ್ದು ಅದಕ್ಕೆ ಮೂರು ಪ್ರದಕ್ಷಿಣೆ ಬರುವುದರಿಂದ ಕೂಡ ತುಳಸಿಯ ಗಾಳಿಯನ್ನು ಆಘ್ರಾಣಿಸಿದಂತಾಗಿ ಆರೋಗ್ಯವನ್ನು (health tips) ನೀಡುತ್ತದೆ. ತುಳಸಿ ಪೂಜೆಗಿರುವುದು ಮಾತ್ರವಲ್ಲ, ಇದರ ಆರೋಗ್ಯ ಪ್ರಯೋಜನಗಳೂ ಬಹಳ. ಇದು ವಿಟಮಿನ್ ಎ, ಸಿ, ಕೆ, ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳ ಆಗರ. ಗಣನೀಯ ಪ್ರಮಾಣದ ಪ್ರೊಟೀನ್ ಮತ್ತು ಫೈಬರ್ ಅನ್ನು ಹೊಂದಿದೆ. ತುಳಸಿ ಎಲೆಗಳು ವ್ಯಾಪಕವಾದ ರೋಗಗಳಿಗೆ ಚಿಕಿತ್ಸೆ ನೀಡಲು ಮತ್ತು ತಡೆಗಟ್ಟಲು ನೈಸರ್ಗಿಕ ಮಾರ್ಗವಾಗಿವೆ. ಬನ್ನಿ, ಇದರ ಆರೋಗ್ಯ ಉಪಯೋಗಗಳ (Tulsi Leaves benefits) ಮೇಲೆ ಕಣ್ಣಾಡಿಸೋಣ.

ಒತ್ತಡವನ್ನು ನಿವಾರಿಸುವುದು

ತುಳಸಿ ಒತ್ತಡ ವಿರೋಧಿ ಗುಣ ಹೊಂದಿರುವ ಒಂದು ನೈಸರ್ಗಿಕ ಮೂಲಿಕೆ. ಒಂದು ಕಪ್ ತುಳಸಿ ಚಹಾವನ್ನು ಕುಡಿಯುವುದರಿಂದ ವ್ಯಕ್ತಿಯು ಒತ್ತಡ ಅಥವಾ ಆತಂಕವನ್ನು ನಿವಾರಿಸಿಕೊಳ್ಳಬಹುದು.

ಸೋಂಕಿನ ವಿರುದ್ಧ ರಕ್ಷಣೆ

ತುಳಸಿಯು ಉರಿಯೂತದ ಗುಣಲಕ್ಷಣಗಳನ್ನು ಉಪಶಮನಗೊಳಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.

ಜೀರ್ಣಾಂಗ ವ್ಯವಸ್ಥೆ ಸುಧಾರಣೆ

ತುಳಸಿ ಸಸ್ಯವು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ತೂಕ ಕಳೆದುಕೊಳ್ಳಲು ಸಹಾಯ

ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುವ ಮೂಲಕ, ನಿಮ್ಮ ದೇಹದಿಂದ ವಿಷಾಂಶವನ್ನು ಬಿಡುಗಡೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಲು ತುಳಸಿ ಸಹಾಯ ಮಾಡುತ್ತದೆ. ದೇಹದಲ್ಲಿನ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವುದು

ತುಳಸಿ ಒಂದು ಉತ್ತಮ ನಿರ್ವಿಷೀಕರಣ ಏಜೆಂಟ್. ಹೀಗಾಗಿ ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಲ್ಲುಗಳಿಗೆ ಪ್ರಮುಖ ಕಾರಣವಾದ ಯೂರಿಕ್ ಆಸಿಡ್ ಮಟ್ಟವನ್ನು ದೇಹದಲ್ಲಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ

ಮಧುಮೇಹದ ವಿರುದ್ಧ ಹೋರಾಟ

ತುಳಸಿ ಚಹಾವು ಟೈಪ್ 2 ಮಧುಮೇಹವನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ ಎಂದು ಗೊತ್ತಾಗಿದೆ. ಮಧುಮೇಹವನ್ನು ನಿರ್ವಹಿಸಲು ಇದು ಹೆಚ್ಚು ಆದ್ಯತೆಯ ಗಿಡಮೂಲಿಕೆ ಚಹಾಗಳಲ್ಲಿ ಒಂದು.

ದಂತ ಮತ್ತು ಬಾಯಿಯ ಆರೋಗ್ಯ

ಹಲ್ಲಿನ ಕುಳಿಯು ನಾವೆಲ್ಲ ಎದುರಿಸುವ ಸಾಮಾನ್ಯ ಸಮಸ್ಯೆ. ತುಳಸಿಯು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು ಅದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ.

ಚರ್ಮ ಮತ್ತು ಕೂದಲಿನ ಪ್ರಯೋಜನ

ತುಳಸಿಯು ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು ಮತ್ತು ವಿಟಮಿನ್‌ಗಳಿಂದ ಕೂಡಿದೆ. ಇದು ಬೇಗ ವಯಸ್ಸಾಗದಂತೆ ತಡೆಗಟ್ಟುತ್ತದೆ. ನೆತ್ತಿಯ ತುರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ.

ಚರ್ಮಕ್ಕೆ ಒಳ್ಳೆಯದು

ತುಳಸಿ ಎಲೆಯ ಹನಿಗಳು ಚರ್ಮದ ಕಲೆಗಳು ಮತ್ತು ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ. ಅಕಾಲಿಕ ವಯಸ್ಸಾಗುವಿಕೆ ತಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ

ತುಳಸಿಯಲ್ಲಿ ಸತು ಮತ್ತು ವಿಟಮಿನ್ ಸಿ ಇದೆ. ಇವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ತುಳಸಿ ಎಲೆಗಳು ಅಥವಾ ತುಳಸಿ ಚಹಾದ ದೈನಂದಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Vastu Tips : ಈ ಐದು ವಸ್ತುಗಳನ್ನು ತುಳಸಿ ಗಿಡದ ಬಳಿ ಇಡಲೇ ಬೇಡಿ!

Exit mobile version