Site icon Vistara News

Tulsi Seeds benefits: ತಂಪುಕಾರಕ ತುಳಸಿ ಬೀಜಗಳ ಸೇವನೆಯಿಂದ ಇವೆಲ್ಲ ಲಾಭಗಳಿವೆ ನೋಡಿ!

tulsi seeds

ಸಬ್ಜಾ ಬೀಜಗಳು (sabja seeds) ಎಂದು ಕರೆಯಲ್ಪಡುವ ತುಳಸಿ ಬೀಜಗಳು (Tulsi seeds) ಭಾರತ ಹಾಗೂ ಮೆಡಿಟರೇನಿಯನ್‌ ಪ್ರದೇಶಗಳಲ್ಲಿ ಸಾಕಷ್ಟು ಚಾಲ್ತಿಯಲ್ಲಿರುವ ಬೀಜಗಳು. ಇವುಗಳಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ (health benefits) ಇವೆ. ಆಯುರ್ವೇದ (ayurveda) ಹಾಗೂ ಚೀನೀ ದೇಸೀ ವೈದ್ಯಪದ್ಧತಿಯಲ್ಲೂ ಈ ಬೀಜಗಳ ಬಳಕೆಯ ಬಗೆಗೆ ಉಲ್ಲೇಖವಿದೆ. ಇವು ತಂಪುಕಾರಕ ಗುಣಗಳನ್ನು ಹೊಂದಿರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ. ಉಷ್ಣ ಪ್ರಕೃತಿಯ ದೇಹವಿರುವ ಮಂದಿಗೂ ಇದು ಲಾಭದಾಯಕ (Tulsi Seeds benefits). ಇವು ದೇಹದಲ್ಲಿರುವ ಆಮ್ಲೀಯತೆಯನ್ನು (Acidity) ಹೋಗಲಾಡಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯಕ್ಕೆ, ಕೂದಲ ಸಮೃದ್ಧಿಗೆ, ದೇಹದಲ್ಲಿರುವ ಕಶ್ಮಲಗಳನ್ನು ತೆಗೆದುಹಾಕಲು, ಮಲಬದ್ಧತೆಗೆ (constipation) ಹೀಗೆ ಸಬ್ಜಾ ಬೀಜಗಳಿಂದ ಆರೋಗ್ಯಕ್ಕೆ (Health tips) ನಾನಾ ಬಗೆಯ ಲಾಭಗಳಿವೆ. ಬನ್ನಿ ಅವು ಯಾವುವೆಂದು ತಿಳಿಯೋಣ.

1. ಸಬ್ಜಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖನಿಜಾಂಶಗಳಿವೆ. ಹಾಗಾಗಿ, ಎಲುಬನ್ನು ಗಟ್ಟಿಗೊಳಿಸುವಲ್ಲಿ ಈ ಬೀಜ ನೆರವಾಗುತ್ತದೆ. ಇದರಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ ಸೇರಿದಂತೆ ಹಲವು ಖನಿಜಾಂಶಗಳಿದ್ದು ಇವುಗಳನ್ನು ಆಹಾರವಾಗಿ ಸೇವಿಸುವ ಮೂಲಕ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

2. ತುಳಸಿಯ ಬೀಜಗಳಲ್ಲಿ ಸಾಕಷ್ಟು ನಾರಿನಂಶವಿದೆ. ಇದರಲ್ಲಿರುವ ಪೆಕ್ಟಿನ್‌ ಅಂಶವು ಹೊಟ್ಟೆಯನ್ನು ಖಾಲಿಯಾಗಿಡಲು ಸುಲಭವಾಗಿ ಬಿಡದ ಕಾರಣ ಬಹಳ ಹೊತ್ತು ಹಸಿವಾಗುವುದಿಲ್ಲ. ಹೀಗಾಗಿ ಹೆಚ್ಚು ತಿನ್ನುವುದನ್ನು ಇದು ತಡೆಯುವ ಕಾರಣ ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ.

3. ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವುದನ್ನು ಇದು ತಡೆಯುತ್ತದೆ. ಮಧುಮೇಹಿಗಳಿಗೆ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಾಯವಾಗುತ್ತದೆ. ಆಹಾರದ ಜೊತೆ ಈ ಸಬ್ಜಾ ಬೀಜಗಳನ್ನು ಸೇವಿಸುವುದರಿಂದ ಊಟದ ನಂತರ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಶೇ.೧೭ರಷ್ಟು ಕಡಿಮೆಯಾಗಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.

4. ತುಳಸಿ ಬೀಜಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಾಲಿಫಿನಾಲ್‌ ಹಾಗೂ ಫ್ಲೇವನಾಯ್ಡ್‌ಗಳೆಂದ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಅವು ಅಗಾಂಶ ಹಾನಿಯನ್ನು ತಡೆಗಟ್ಟುತ್ತವೆ. ಇದರಲ್ಲಿ ಆಂಟಿ ಕ್ಯಾನ್ಸರ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳೂ ಇವೆ.

5. ಕೆಲವು ಅಧ್ಯಯನಗಳ ಪ್ರಕಾರ ಪೆಕ್ಟಿನ್‌ನಲ್ಲಿ ಪ್ರಿಬಯಾಟಿಕ್‌ ಗುಣಗಳಿರುವುದರಿಂದ ನಮ್ಮ ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಇದು ಪೂರಕವಾಗಿದೆ.

6. ತುಳಸಿ ಬೀಜಗಳು ಬಾಯಿಹುಣ್ಣಿಗೂ ಅತ್ಯಂತ ಒಳ್ಳೆಯ ಮನೆಮದ್ದು. ಬಾಯಿಹುಣ್ಣಿನ ಸಮಯದಲ್ಲಿ ಇದನ್ನು ಸೇರಿಸುವ ಮೂಲಕ ನೋವಿನ ಬಾಯಿಹುಣ್ಣಿನಿಂದ ಮುಕ್ತಿ ಪಡೆಯಬಹುದು. ಉರಿಮೂತ್ರದಂತಹ ಸಮಸ್ಯೆಗಳ ಸಂದರ್ಭವೂ ಇದು ಈ ಸಮಸ್ಯೆಯಿಂದ ಸಾಕಷ್ಟು ಆರಾಮವನ್ನು ನೀಡುತ್ತದೆ.

7. ಸಬ್ಜಾ ಬೀಜಗಳು ಕೊಲೆಸ್ಟೆರಾಲ್‌ (cholesterol) ಮಟ್ಟವನ್ನು ಸಮತೋಲನದಲ್ಲಿಡಲೂ ಕೂಡಾ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಗೆ ಇದು ಸಹಕಾರಿ. ಹೆಚ್ಚಿನ ಲಿಪಿಡ್‌ ಮಟ್ಟವನ್ನು ಸಮತೋಲನಕ್ಕೆ ತರಲೂ ಇದು ಸಹಾಯ ಮಾಡುತ್ತದೆ.

8. ತುಳಸಿ ಬೀಜಗಳು ಮಾನಸಿಕ ಆರೋಗ್ಯಕ್ಕೂ (mental health) ಸಹಕಾರಿ. ಇವು ಒತ್ತಡವನ್ನು ಕಡಿಮೆ ಮಾಡಿ ಶಾಂತಿ, ನೆಮ್ಮದಿಯನ್ನೂ ನೀಡುವಲ್ಲಿ ಸಹಾಯ ಮಾಡುತ್ತದೆ. ಮಾನಸಿಕ ದಣಿವು, ಖಿನ್ನತೆಗೂ ಇವು ಒಳ್ಳೆಯದು.

9. ಇವು ನೆಗಡಿ, ಶೀತ, ಕೆಮ್ಮು, ದಮ್ಮು ಮತ್ತಿತರ ಸಮಸ್ಯೆಗಳಿಗೂ ಉತ್ತಮ ಫಲ ನೀಡುತ್ತದೆ. ಜ್ವರದ ಸಂದರ್ಭವೂ ಇದನ್ನು ಬಳಸಿದರೆ ಉಷ್ಣತೆ ಹತೋಟಿಗೆ ಬರಲು ನೆರವಾಗುತ್ತದೆ.

ಸಬ್ಜಾ ಬೀಜಗಳನ್ನು ಸೇವಿಸುವ ಮೂಲಕ ಆರೋಗ್ಯಕರ ಪ್ರಯೋಜನಗಳನ್ನು ಕಾಣಬೇಕಾದರೆ, ನೀರಿನಲ್ಲಿ ಒಂದೆರಡು ಸಮಚ ಬೀಜಗಳನ್ನು ಸ್ವಲ್ಪಹೊತ್ತು ನೆನೆ ಹಾಕಿ ಸೇವಿಸಬೇಕು. ನೀರಿನಲ್ಲಿ ನೆನೆಸುವುದರಿಂದ ಅವು ಉಬ್ಬಿಕೊಂಡು ಜಾರುವ ಗುಣವನ್ನು ಪಡೆಯುತ್ತವೆ. ಇದರಿಂದ ಸ್ಮೂದಿ, ಶೇಕ್‌ಗಳು, ನಿಂಬೆ ಪಾನಕಗಳು, ಮಜ್ಜಿಗೆ ಅಥವಾ ಮೊಸರಿನ ಜೊತೆಗೆ, ಸಲಾಡ್‌ ಮತ್ತಿತರ ಬಗೆಯಲ್ಲೂ ಬಳಕೆ ಮಾಡಬಹುದು. ತೂಕ ಇಳಿಕೆ ನಿಮ್ಮ ಉದ್ದೇಶವಾಗಿದ್ದರೆ, ಬೆಚ್ಚಗಿನ ನೀರಿನಲ್ಲಿ ಇವನ್ನು ನೆನೆಹಾಕಿ ಸೇವಿಸಬಹುದು. ಆದರೆ ಸಬ್ಜಾವನ್ನು ವಿಪರೀತ ಸೇವನೆ ಮಾಡುವುದೂ ಒಳ್ಳೆಯದಲ್ಲ. ಅವರವರ ದೇಹಕ್ಕೆ ಹೊಂದಿಕೆಯಾಗುತ್ತದೋ ಎಂಬುದನ್ನು ನೋಡಿಕೊಂಡು ಬಳಸುವುದು ಉತ್ತಮ. ಗರ್ಭಿಣಿಯರು, ಮಕ್ಕಳು ಹಾಗೂ ಈಗಷ್ಟೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಇದರಿಂದ ದೂರವಿರುವುದು ಒಳ್ಳೆಯದು.

ಇದನ್ನೂ ಓದಿ: Tulsi Leaves benefits: ಈ ಗಿಡ ಮನೆಯಲ್ಲಿದ್ದರೆ ಆರೋಗ್ಯದ ಗಣಿ ಇದ್ದಂತೆ! ತುಳಸಿ ಎಲೆಗಳ 10 ಆರೋಗ್ಯ ಟಿಪ್ಸ್

Exit mobile version