ಹೊಸಪೇಟೆ: ನಗರದ 27ನೇ ವಾರ್ಡ್‌ನ ಚಪ್ಪರದಳ್ಳಿ ಪ್ರದೇಶದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ್ ಮೇಟಿ) ಬಣದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಅವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ (Vijayanagara News) ಹಮ್ಮಿಕೊಳ್ಳಲಾಗಿತ್ತು.
ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಕ್ತದಾನವು ಶ್ರೇಷ್ಠ ದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿ ಇರುವ ಅಮೂಲ್ಯ ಜೀವವನ್ನು ಉಳಿಸಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Election Commission of India: “64 ಕೋಟಿ ಜನರಿಂದ ಮತದಾನ; ವಿಶ್ವದಾಖಲೆ ಬರೆದ ಭಾರತ”- ಚು.ಆಯೋಗ ಶ್ಲಾಘನೆ
ಹೊಸಪೇಟೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡ ಮಾತನಾಡಿದರು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ್ ಮೇಟಿ) ಬಣದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿದರು.
ರಕ್ತದಾನ ಶಿಬಿರದಲ್ಲಿ 25ಕ್ಕೂ ಅಧಿಕ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಶಿಬಿರದಲ್ಲಿ ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿಎಲ್, ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡ ಅವರು, ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ವಿತರಿಸಿದರು.
ಇದನ್ನೂ ಓದಿ: Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ
ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಸದಸ್ಯ ಹುಲಗಪ್ಪ, ಮುಖಂಡರಾದ ಪ್ರಕಾಶ್, ವೆಂಕಟೇಶ, ಪರಂಗಟ್ಟಿ ಶೇಖರ್, ನಾಗರಾಜ್, ಸೋಮಣ್ಣ, ಮರುಳಸಿದ್ದಪ್ಪ, ಬಸಪ್ಪ, ಚೇತನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.