Site icon Vistara News

Benefits of Chia Seeds : ಚಿಯಾ ಬೀಜಗಳ ಗಾತ್ರ ಚಿಕ್ಕದು, ಪ್ರಯೋಜನ ದೊಡ್ಡದು!

benefits of chia seeds

ಪುದಿನಾ ಜಾತಿಯ ಗಿಡಗಳಿಂದ ದೊರೆಯುವ ಚಿಯಾ ಬೀಜಗಳು (benefits of chia seeds) ನೋಡಲು ಚಿಕ್ಕವಾದರೂ, ಸಾಮರ್ಥ್ಯ ದೊಡ್ಡದು. ಕಪ್ಪು ಮತ್ತು ಬಿಳುಪು ಬಣ್ಣಗಳಲ್ಲಿ ಸಾಸಿವೆಗಿಂತಲೂ ಸಣ್ಣದಾದ ಈ ಬೀಜಗಳನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು. ಏಕೆಂದರೆ ಆರೋಗ್ಯಕ್ಕೆ ಇದರಿಂದಾಗುವ ಲಾಭಗಳು ಬಹಳಷ್ಟಿವೆ. ಏನೇನು ಎಂಬುದನ್ನು ನೋಡೋಣ.

ಸಂಪೂರ್ಣ ಪ್ರೊಟೀನ್

ನಮ್ಮ ಶರೀರದಿಂದ ತಯಾರಿಸಿಕೊಳ್ಳಲಾಗದಂಥ ಎಲ್ಲಾ ಒಂಬತ್ತು ಅಮೈನೊ ಆಮ್ಲಗಳು ಚಿಯಾ ಬೀಜದಲ್ಲಿ (benefits of chia seeds) ದೊರೆಯುತ್ತವೆ. ಉಳಿದಂತೆ ಸೋಯಾಬೀನ್‌ ಮತ್ತು ಕಿನೊವಾದಲ್ಲಿ ಮಾತ್ರವೇ ಇಷ್ಟು ಪ್ರಮಾಣದಲ್ಲಿ ಸಂಪೂರ್ಣ ಪ್ರೊಟೀನ್‌ ಸಸ್ಯಜನ್ಯವಾಗಿ ದೊರೆಯುವುದಕ್ಕೆ ಸಾಧ್ಯ. ಪ್ರಾಣಿಜನ್ಯ ಮೂಲದಲ್ಲಿ ಡೈರಿ ಉತ್ಪನ್ನಗಳು, ಮೊಟ್ಟೆ, ಮೀನು ಹಾಗೂ ಚಿಕನ್‌ ಆಹಾರಗಳಲ್ಲಿ ಈ ಪ್ರೊಟೀನ್‌ ಲಭ್ಯವಿದೆ

ಅಮೈನೊ ಆಮ್ಲಗಳು

ದೇಹದ ಶಕ್ತಿ ವರ್ಧನೆಗೆ, ಮೆದುಳಿನ ಕ್ಷಮತೆಗೆ, ರೋಗನಿರೋಧಕ ಶಕ್ತಿಗೆ- ಹೀಗೆ ಹತ್ತಾರು ಕೆಲಸಗಳಿಗೆ ಅಮೈನೊ ಆಮ್ಲಗಳು ಬೇಕು. ಆಲನಿನ್‌, ಸೆರೀನ್‌, ಗ್ಲೈಸಿನ್‌ ಮುಂತಾದ ಹಲವಾರು ರೀತಿಯ ಅಮೈನೊ ಆಮ್ಲಗಳು ಇದರಲ್ಲಿ ದೊರೆಯುತ್ತವೆ.

ನಾರು

ಸುಮಾರು 28 ಗ್ರಾಂ, ಅಂದರೆ 2 ಟೇಬಲ್‌ ಚಮಚ ಚಿಯಾ ಬೀಜಗಳಿಂದ 10 ಗ್ರಾಂ ನಾರು ದೊರೆಯುತ್ತದೆ. ಪದೇಪದೆ ಕಾಡುವ ಕಳ್ಳ ಹಸಿವೆ ಇದು ಒಳ್ಳೆಯ ಮದ್ದು. ಒಮ್ಮೆ ತಿಂದರೆ ದೀರ್ಘಕಾಲದ ವರೆಗೆ ಹಸಿವೆ ಕಾಡದೆ, ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ತೂಕ ಇಳಿಸುವವರು… ಕೇಳಿಸಿಕೊಂಡಿರಾ?

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಪಾಲಿಫೆನೋಲ್‌ಗಳು ಮತ್ತು ರೋಗ ನಿರೋಧಕಗಳು ಇದರಲ್ಲಿವೆ. ಕ್ವಾರ್ಸೆಂಟಿನ್‌, ಕೆಫೆಯಿಕ್‌ ಆಮ್ಲ, ರೋಸ್ಮಾರಿನಿಕ್‌ ಆಮ್ಲ ಮುಂತಾದ ಅತ್ತ್ಯುತ್ತಮ ಪಾಲಿಫೆನೋಲ್‌ಗಳು ಹೃದಯದ ತೊಂದರೆ, ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸುತ್ತವೆ.

ಒಮೇಗಾ 3 ಫ್ಯಾಟಿ ಆಮ್ಲ

ಹೃದಯವನ್ನು ಸ್ವಚ್ಛವಾಗಿಟ್ಟು, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ತೊಂದರೆಗಳನ್ನು ದೂರ ಅಟ್ಟಲು ಒಮೇಗಾ 3 ಫ್ಯಾಟಿ ಆಮ್ಲ ಅಗತ್ಯ. ಇದಲ್ಲದೆ, ಎಕ್ಸಿಮಾ, ಲೂಪಸ್‌, ರುಮೆಟಾಯ್ಡ್‌ ಆರ್ಥರೈಟಿಸ್‌ಗಳ ನಿರ್ವಹಣೆಗೂ ಇದು ನೆರವಾಗುತ್ತದೆ

ಆರೋಗ್ಯಕರ ಕೊಬ್ಬು

ಚಿಯಾ ಬೀಜಗಳ ಒಂದು ಸರ್ವಿಂಗ್‌ನಲ್ಲಿ ಸುಮಾರು 8 ಗ್ರಾಂಗಳಷ್ಟು ಆರೋಗ್ಯಕರ ಕೊಬ್ಬು ದೇಹ ಸೇರುತ್ತದೆ. ಈ ಕೊಬ್ಬು ಹೃದಯದ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕು. 28 ಗ್ರಾಂನಿಂದ ಕೇವಲ 130 ಕ್ಯಾಲರಿಗಳು ದೊರೆತರೂ, ಪೌಷ್ಟಿಕಾಂಶಗಳು ಮಾತ್ರ ಬಹಳವೇ ದೇಹ ಸೇರುತ್ತವೆ.

ಇದನ್ನೂ ಓದಿ : Blood pressure : 17- 40ರ ವಯಸ್ಸಿಗೇ High Bp! ಡಾ. ಮಂಜುನಾಥ್‌ ಪರಿಹಾರ ಸೂತ್ರ ಹೀಗಿದೆ…

ಖನಿಜಗಳು

ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಜಿಂಕ್‌ ಇದರಲ್ಲಿರುವ ಮುಖ್ಯ ಖನಿಜಗಳಾದರೆ ಹಲವು ರೀತಿಯ ಜೀವಸತ್ವಗಳೂ ಚಿಯಾ ಸೇವನೆಯಿಂದ ದೊರೆಯುತ್ತವೆ. ಮೂಳೆಗಳ ಬಲವರ್ಧನೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ, ಬೆಳವಣಿಗೆಗೆ- ಹೀಗೆ ಹಲವಾರು ಉಪಯುಕ್ತ ಸತ್ವಗಳು ಈ ಸಣ್ಣ ಬೀಜಗಳಿಂದ ದೊರೆಯುತ್ತವೆ

ಹೃದಯಾರೋಗ್ಯ

ಚಿಯಾ ಬೀಜಗಳ ನಿಯಮಿತ ಉಪಯೋಗದಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಅಂದರೆ, ರಕ್ತದೊತ್ತಡ, ಕೊಲೆಸ್ಟ್ರಾಲ್‌, ಟ್ರೈಗ್ಲಿಸರೈಡ್‌ ಮಟ್ಟವನ್ನು ನಿಯಂತ್ರಿಸಲು ಇದರಿಂದ ಸಾಧ್ಯವಿದೆ. ಮಾತ್ರವಲ್ಲ, ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನೂ ಕಡಿಮೆ ಮಾಡಲು ಇದು ಉಪಯುಕ್ತ.

ಮಧುಮೇಹ

ಇದರಲ್ಲಿರುವ ಕರಗಬಲ್ಲ ನಾರು ಮತ್ತು ಮ್ಯೂಸಿಲೇಜ್‌ ಅಥವಾ ಲೋಳೆಯಂಥ ಪದಾರ್ಥದಿಂದಾಗಿ, ಊಟದ ನಂತರ ಏರುವ ರಕ್ತದ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಅದರಲ್ಲೂ ಮಧುಮೇಹ-ಪೂರ್ವದ ಸ್ಥಿತಿಯಲ್ಲಿರುವವರಿಗೆ ಇದು ಅತಿ ಉಪಯುಕ್ತವಾಗಿದೆ.

ಮೂಳೆಗಳಿಗೆ ಉಪಯೋಗ

ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಫರಸ್‌ ಮತ್ತು ಮೆಗ್ನೀಶಿಯಂ ಸತ್ವಗಳು ಮೂಳೆಗಳನ್ನು ಬಲಗೊಳಿಸಲು ಅಗತ್ಯವಾದವು. ಆಸ್ಟಿಯೊಪೊರೊಸಿ ತಡೆಗಟ್ಟಿ, ಎಲುಬುಗಳಲ್ಲಿರುವ ಖನಿಜಗಳ ಸಾಂದ್ರತೆ ಕಾಪಾಡಲು ಈ ಮೂರು ಅಂಶಗಳು ಇದ್ದರೆ ಮಾತ್ರವೇ ಸಾಧ್ಯ.

ಮಲಬದ್ಧತೆ

ಇದರಲ್ಲಿ ಹೇರಳವಾಗಿರುವ ನಾರಿನಂಶದಿಂದಾಗಿ, ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇದು ಮದ್ದಾಗಬಲ್ಲದು. ಇದರ ನಿಯಮಿತ ಬಳಕೆಯಿಂದ ಹೊಟ್ಟೆ ಖಾಲಿ ಮಾಡಿಸಲು ಅನುಕೂಲ ಎನ್ನುತ್ತವೆ ಅಧ್ಯಯನಗಳು. ಹಾಗೆಂದು ಉಳಿದೆಲ್ಲಾ ನಾರಿನ ಆಹಾರಗಳನ್ನು ಕಡಿಮೆ ಮಾಡದೆಯೇ ಇದ್ದರೆ ಫಲಿತಾಂಶ ಇನ್ನೂ ಹೆಚ್ಚು.

ಚಿಯಾ ಬೀಜಗಳನ್ನು ದಿನವೂ ಬಳಸಬಹುದೇ?

ಚಿಯಾ ಬೀಜಗಳನ್ನು ಹೇಗೆ ಸೇವಿಸಬೇಕು?

Exit mobile version