ಚಳಿಗಾಲ ಬಂತೆಂದರೆ ಸಾಕು, ಅನೇಕ ಮಹಿಳೆಯರಿಗೆ ಕೈಕಾಲು ನಡುಗಲು ಆರಂಭವಾಗುತ್ತದೆ. ಕಾರಣ ಪೀರಿಯಡ್ ಕ್ರ್ಯಾಂಪ್ಸ್. ಅಂದರೆ, ಋತುಚಕ್ರದ ಸಮಸ್ಯೆ. ಬಹಳಷ್ಟು ಮಂದಿ, ಈ ವ್ಯತ್ಯಾಸವನ್ನು ಗಮನಿಸಿಯೇ ಇರುವುದಿಲ್ಲ. ಕೆಲವು ಕಾಲ ಮುಟ್ಟಿನ ಸಂದರ್ಭದಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಆರಾಮವಾಗಿದ್ದರೆ, ಕೆಲವು ಸಮಯಗಳಲ್ಲಿ ಮಾತ್ರ ಮುಟ್ಟಿನ ಸಂಬಂಧೀ ಹೊಟ್ಟೆನೋವು, ಕೈಕಾಲು ನೋವು, ಕೆಟ್ಟ ಮೂಡಿನ ತೊಂದರೆಗಳು ಉಲ್ಬಣಿಸುತ್ತದೆ. ಸರಿಯಾಗಿ ಗಮನಿಸಿದರೆ, ಇವೆಲ್ಲ ಹೆಚ್ಚಾಗುವುದು ಚಳಿಗಾಲದಲ್ಲೇ ಆಗಿರುತ್ತದೆ!
ಹಾಗಾದರೆ, ಚಳಿಗಾಲದಲ್ಲೇ ಯಾಕೆ ಈ ಸಮಸ್ಯೆ ಬರುತ್ತದೆ ಎಂದು ಅನಿಸಿದೆಯಾ? ಇದಕ್ಕೆ ಕಾರಣವಾದರೂ ಏನು ಎಂದು ಪ್ರಶ್ನೆ ಹಾಕಿಕೊಂಡರೆ ಉತ್ತರ ಸರಳ. ಚಳಿಗಾಲದಲ್ಲಿ ಜನರು ಮನೆಯ ಒಳಗೇ ಹೆಚ್ಚು ಕಾಲ ಕಳೆಯುವುದರಿಂದ, ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಅವಕಾಶ ಕಡಿಮೆ ಸಿಗುವುದರಿಂದ, ಸೂರ್ಯನೇ ಕಡಿಮೆ ಮುಖ ತೋರಿಸುವುದರಿಂದ ಬಿಸಿಲೇ ಕಡಿಮೆ ಇರುವುದರಿಂದ ವಿಟಮಿನ್ ಡಿ ದೇಹದಲ್ಲಿ ಇಳಿಯುವುದರಿಂದ ಚಳಿಗಾಲದಲ್ಲಿ ಬಹಳಷ್ಟು ಹೆಣ್ಣುಮಕ್ಕಳನ್ನು ಈ ಮುಟ್ಟಿನ ನೋವಿನ ಸಮಸ್ಯೆ ಕಾಡುತ್ತದೆ. ಹಾಗಾಗಿಯೇ ಪ್ರತಿ ತಿಂಗಳ ಮುಟ್ಟಿನ ನಾಲ್ಕೈದು ದಿನಗಳು ಯಾತನಾಮಯವಾಗಿ ಬದಲಾಗಿ, ಕೆಟ್ಟ ಮೂಡು, ಕಿರಿಕಿರಿಯ ಮನಸ್ಥಿತಿಯಷ್ಟೇ ಅಲ್ಲ, ವಿಪರೀತ ಹೊಟ್ಟೆನೋವು, ಚಳಿಗಾಲದಲ್ಲಿ ಇನ್ನೂ ಹೆಚ್ಚು ಕಷ್ಟ ಪಡುತ್ತಾರೆ. ಮುಖ್ಯವಾಗಿ ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗುವುದರಿಂದ ರಕ್ತ ಪರಿಚಲನೆಯ ಗತಿ ಚುರುಕಾಗಿಲ್ಲದಿರುವುದರಿಂದ ಹೃದಯಕ್ಕೆ ರಕ್ತಪೂರಣಕ್ಕೆ ಹೆಚ್ಚು ಕಷ್ಟ ಪಡಬೇಕಾಗುತ್ತದೆ. ಹೀಗಾಗಿಯೇ ಚಳಿಗಾಲದಲ್ಲಿ ಅನೇಕ ಮಹಿಳೆಯರು ಚಳಿಗಾಲದಲ್ಲಿ ಮುಟ್ಟಿನ ಸಂದರ್ಭ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ. ಬಿಸಿ ನೀರಿನ ಬ್ಯಾಗ್ ಹೊಟ್ಟೆಯ ಮೇಲಿಟ್ಟುಕೊಂಡು ಬೆಡ್‌ನಲ್ಲಿ ಉರುಳಾಡುತ್ತಾ, ನೋವಿನಿಂದ ಹಿಂಸೆ ಪಡುತ್ತಾ ಇರುವುದು ಸಾಮಾನ್ಯವಾಗಿ ಬಿಡುತ್ತದೆ.
ಹಾಗಾದರೆ, ಇಂಥ ಸಮಯದಲ್ಲಿ ಮನೆಯಲ್ಲೇ ಏನು ಮಾಡಬಹುದು? ಕೆಟ್ಟ ಮೂಡಿಗೆ ಯಾವುದು ಔಷಧಿಯಾಗಬಹುದು? ತಡೆಯಲಾರದ ನೋವನ್ನು ಹೇಗೆ ಶಮನಗೊಳಿಸಬಹುದು ಎಂದು ನೋಡೋಣ.
೧. ಬೆಚ್ಚಗಿರಿ. ದೇಹವನ್ನು ಬೆಚ್ಚಗಿಡುವುದು ಬಹಳ ಮುಖ್ಯ. ಮುಟ್ಟಿನ ಹೊಟ್ಟೆನೋವು ಸೊಂಟನೋವು ಬಂದಾಗ, ಬಿಸಿನೀರಿನ ಬ್ಯಾಗ್ ಅಥವಾ ಪ್ಯಾಡನ್ನು ಹೊಟ್ಟೆಯ ಮೇಲಿಟ್ಟುಕೊಂಡು ಅಥವಾ ನೋವಿರುವ ಜಾಗಕ್ಕೆ ಒತ್ತಿ ಹಿಡಿದುಕೊಂಡು ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಹುದು. ಇದು ನೋವನ್ನು ಕೊಂಚ ಸಮಾಧಾನಗೊಳಿಸುವುದಲ್ಲದೆ, ಮೂಡನ್ನು ಸರಿಪಡಿಸುತ್ತದೆ. ಮಾಂಸಖಂಡಗಳಿಗೆ ಕೊಂಚ ಆರಾಮವನ್ನೂ ನೀಡುತ್ತದೆ.
೨. ದಾಲ್ಚಿನಿ (ಚೆಕ್ಕೆ)ಯ ಚಹಾ ಮಾಡಿ ಕುಡಿಯುವುದರಿಂದ ಕೊಂಚ ಆರಾಮ ಕಾಣಬಹುದು. ದೇಹವನ್ನು ಬೆಚ್ಚಗಿಡಲು ದಾಲ್ಚಿನಿಯನ್ನು ಚಳಿಗಾಲದಲ್ಲಿ ಬಳಸಲಾಗುವುದರಿಂದ ಋತುಚಕ್ರದ ಸಮಸ್ಯೆಗಳಿಗೂ ಇದು ಪರಿಣಾಮಕಾರಿ ಮನೆಮದ್ದು. ಮುಖ್ಯವಾಗಿ ಮುಟ್ಟಿನ ಸಂಬಂಧೀ ನೋವುಗಳಿಗೆ ದಾಲ್ಚಿನಿ ಉತ್ತಮ ಔಷಧವೂ ಕೂಡಾ. ಹಾಗಾಗಿ, ಆ ದಿನಗಳಲ್ಲಿ ಬಿಸಿಬಿಸಿಯಾಗಿ ಇದರ ಚಹಾ ಮಾಡುಡಿ ಸೇವಿಸುವುದರಿಂದ ಅಥವಾ ಚಹಾಕ್ಕೆ ದಾಲ್ಚಿನಿ ಪುಡಿ ಸೇರಿಸಿ ಕುಡಿಯುವುದರಿಂದ ಚೈತನ್ಯ ಕಾಣಬಹುದು.
ಇದನ್ನೂ ಓದಿ | Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!
೩. ಶುಂಠಿಯೂ ಕೂಡಾ ಮುಟ್ಟಿನ ಸಂಬಂಧೀ ತೊಂದರೆಗಳಿಗೆ ದಿವ್ಯೌಷಧ. ಶುಂಠಿ ಮುಟ್ಟಿನ ಸಂದರ್ಭ ಉಂಟಾಗುವ ಆರಾಮವಾಗಿರದಂತೆ ಮಾಡುವ ಪ್ರೊಸ್ಟಾಗ್ಲಾಂಡಿನ್ಸ್ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಮುಟ್ಟಿನ ಏರುಪೇರನ್ನೂ ಸಹ ಸರಿಯಾಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಮುಟ್ಟಿಗೆ ಮೊದಲು ಮಾನಸಿಕವಾಗಿ ಇದು ಸದೃಢರನ್ನಾಗಿಯೂ ಆಡುವ ಗುಣವನ್ನು ಪಡೆದಿದೆ.
೪. ಹೆಚ್ಚು ನೀರು ಕುಡಿಯಿರಿ. ಚಳಿಗಾಲದಲ್ಲಿ ದೇಹಕ್ಕೆ ಆಯಾಸವಾಗುವುದರಿಂದ, ಬಾಯಾರಿಕೆ ಆಗುವುದಿಲ್ಲ. ಹಾಗಾಗಿ ಸಹಜವಾಗಿಯೇ ನೀರು ಕಡಿಮೆ ಸೇವಿಸುವುದು ಮುಟ್ಟಿನ ಸಂದರ್ಭ ಹೊಟ್ಟೆನೋವಿನಂಥ ಸಮಸ್ಯೆಗೀಡುಮಾಡುತ್ತದೆ. ಹಾಗಾಗಿ, ದೇಹಕ್ಕೆ ಅವಶ್ಯಕತೆ ಇರುವ ನೀರನ್ನು ಯಾವುದೇ ಕಾಲವಾದರೂ ನಾವು ಮಾಡಲೇಬೇಕು. ಮುಟ್ಟಿನ ದಿನಗಳಲ್ಲಿ ನೀರು ಕುಡಿಯುವುದು ಬಹಳ ಅವಶ್ಯಕ.
೫. ಹರ್ಬಲ್ ಚಹಾ ಕುಡಿಯಿರಿ. ಸೋಂಪು, ಶುಂಠಿ, ಕೊತ್ತಂಬರಿ-ಜೀರಿಗೆ, ಚಾಮೋಮೈಲ್ ಮತ್ತಿತರ ಚಹಾ ಕುಡಿಯುವುದು ಒಳ್ಳೆಯದು. ಮಸಾಜ್ ಮಾಡಿಸಿಕೊಂಡು ಗ್ರೀನ್ ಟೀ ಕೂಡಾ ಕುಡಿಯಬಹುದು. ಇದು ನೋವಿಗೆ ಹಿತವಾದ ಅನುಭವ ಕೊಡುತ್ತದೆ.
ಇದನ್ನೂ ಓದಿ | Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!|