ಹಾಲು ಸಂಜೀವಿನಿ ಇದ್ದಂತೆ. ಏನೂ ಆಹಾರ ಸೇವಿಸದೆ ಕೇವಲ ಹಾಲು ಸೇವಿಸಿ ಬದುಕಬಹುದು. World Milk Day ಸಂದರ್ಭದಲ್ಲಿ ಹಾಲಿನ ವಿಶಿಷ್ಟ ಸಂಗತಿಗಳನ್ನು ತಿಳಿಯೋಣ.
1. ಹಾಲು ದೇವರ ಕೊಡುಗೆ: ಪ್ರಾಚೀನ ಕೃತಿಗಳು ಹಾಲನ್ನು ‘ದೇವರ ಕೊಡುಗೆ’ ಎಂದು ಪರಿಗಣಿಸಿವೆ. ಹಿಂದೂ ಪುರಾಣಗಳ ಪ್ರಕಾರ: ಸಮುದ್ರ ಮಂಥನದ ವೇಳೆ ಹುಟ್ಟಿ ಬಂದ ಅಮೂಲ್ಯ ವಸ್ತುಗಳಲ್ಲಿ ಕಾಮಧೇನುವೂ ಸೇರಿದೆ. ಅಂತಿಮವಾಗಿ ಸೃಷ್ಟಿಯಾದ ಅಮೃತವನ್ನು ದೇವತೆಗಳು ಸೇವಿಸಿದರು. ಅಮೃತ ಸಮಾನವಾದ ಹಾಲನ್ನು ಮಾನವರಿಗೆ ದೇವತೆಗಳು ವರವಾಗಿ ನೀಡಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಹಿಂದೂಗಳು ಅದರ ಶುದ್ಧೀಕರಣ ಗುಣಗಳಿಗಾಗಿ ಧಾರ್ಮಿಕ ಸಮಾರಂಭಗಳಲ್ಲಿ ಹಾಲು ಅಥವಾ ಅದರ ಉತ್ಪನ್ನಗಳನ್ನು ಬಳಸುತ್ತಾರೆ. ಪ್ರಾಚೀನ ಗ್ರೀಕರು, ಈಜಿಪ್ಟಿನವರು ಮತ್ತು ರೋಮನ್ನರು ಸಹ ಹಾಲನ್ನು ಹೆಚ್ಚು ಗೌರವಿಸುತ್ತಾರೆ.
2. ಇದು ಅತ್ಯಂತ ಪೌಷ್ಟಿಕಾಂಶಯುಕ್ತ ಆಹಾರ: ಭೂಮಿಯ ಮೇಲೆ ಲಭ್ಯವಿರುವ ಅತ್ಯಂತ ಪೌಷ್ಟಿಕಾಂಶದ ಆಹಾರವೆಂದರೆ ಹಾಲು ಎಂದು ಪರಿಗಣಿಸಲಾಗಿದೆ. ಇದು ಹಲವಾರು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಬೇರೆ ಆಹಾರದ ಅಗತ್ಯವಿಲ್ಲದೆ ಬರಿಯ ಹಾಲನ್ನೇ ಸೇವಿಸಿ ಇಡೀ ದಿನವನ್ನು ಸಂಪೂರ್ಣವಾಗಿ ಕಳೆಯಬಹುದು. ಹಾಲು ಪ್ರೋಟೀನ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ನಿಯಾಸಿನ್, ಪೊಟ್ಯಾಸಿಯಮ್, ರಂಜಕ ಮತ್ತು ಹಲವಾರು ಪ್ರಮುಖ ಜೀವಸತ್ವಗಳಿಂದ ತುಂಬಿರುತ್ತದೆ. ಯಾವುದೇ ಒಂದು ತರಕಾರಿ, ಕಾಳುಗಳು, ಕಾರ್ಬೋಹೈಡ್ರೇಟ್ ಅಥವಾ ಮಾಂಸವು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಆದರೆ ಹಾಲಿನಲ್ಲಿ ಅವೆಲ್ಲವೂ ಇವೆ.
3. ಹಾಲನ್ನು ಬಯೋಪ್ಲಾಸ್ಟಿಕ್ ಆಗಿ ಪರಿವರ್ತಿಸಬಹುದು ಜೈವಿಕವಾಗಿ ವಿಘಟನೆಯಾಗಬಲ್ಲ, ಸುವಾಸನೆಯಿಲ್ಲದ ಮತ್ತು ಯಾವುದೇ ರೀತಿ ಬೆಂಕಿ ಹಿಡಿಯದ ಮತ್ತು ನೀರಿನಲ್ಲಿ ಸಂಪೂರ್ಣವಾಗಿ ಕರಗದ ಆ್ಯಂಟಿ-ಸ್ಟಾಟಿಕ್ ಪ್ಲಾಸ್ಟಿಕ್ ಅನ್ನು ಹಾಲಿನಿಂದ ತಯಾರಿಸಲು ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ? ಹಾಲಿನಲ್ಲಿ ಕಂಡುಬರುವ ಕ್ಯಾಸೀನ್ ಪ್ರೋಟೀನ್‌ನಿಂದ ಇದು ಸಾಧ್ಯವಿದೆ ಮತ್ತು ಇದು ಹಾಲಿಗೆ ಬಿಳಿ ಬಣ್ಣವನ್ನು ನೀಡುತ್ತದೆ. ಸಿಂಥೆಟಿಕ್ ಪ್ಲಾಸ್ಟಿಕ್‌ಗಳನ್ನು ಪರಿಚಯಿಸುವ ಮೊದಲು 100 ವರ್ಷಗಳಿಗಿಂತ ಹೆಚ್ಚು ಕಾಲ ಈ ಸರಳ ಮತ್ತು ಬಜೆಟ್ ಸ್ನೇಹಿ ಜೈವಿಕ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿತ್ತು.
4. ಕೆಲವು ಹಸುಗಳು ದಿನಕ್ಕೆ 60 ಲೀಟರ್ ಹಾಲು ನೀಡಬಲ್ಲವು!ಒಂದು ಹಸು ದಿನಕ್ಕೆ ಸರಾಸರಿ 5ರಿಂದ 25 ಲೀಟರ್ ಹಾಲು ನೀಡುತ್ತದೆ. ಆದರೆ ಹೆಚ್ಚಿನ ಇಳುವರಿ ನೀಡುವ ಹಸುಗಳ ಕೆಲವು ತಳಿಗಳು ದಿನಕ್ಕೆ 60 ಲೀಟರ್ ಹಾಲು ಉತ್ಪಾದಿಸುತ್ತವೆ. ಹಸುಗಳು ತಮ್ಮ ಕರಾವಿನ (ಹಾಲು ನೀಡುವ) ಅವಧಿಯಲ್ಲಿ ಒಟ್ಟಾರೆಯಾಗಿ 12,000 ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ನೀಡುತ್ತದೆ. ಬ್ರೆಜಿಲ್‌ನ ಹಸು ಒಂದೇ ದಿನದಲ್ಲಿ 1,27,570 ಕೆಜಿ ಹಾಲು ಉತ್ಪಾದಿಸುವ ಮೂಲಕ 2019 ರ ಗಿನ್ನಿಸ್ ದಾಖಲೆಯನ್ನು ಮುರಿದಿದೆ.
5. ಹಾಲು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ!ಹಾಲು ಸೇವಿಸಿದರೆ ತೂಕ ಹೆಚ್ಚಿಸುತ್ತದೆ ಎನ್ನುವುದು ಸಂಪೂರ್ಣ ಸುಳ್ಳಲ್ಲ. ಸಂಪೂರ್ಣ ಕೊಬ್ಬಿನ ಹಾಲನ್ನು ಕುಡಿಯುವುದು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಕಡಿಮೆ ಕೊಬ್ಬಿನ ಹಾಲಿಗೆ ಹೋಲಿಸಿದರೆ ಹೆಚ್ಚು ಆರೋಗ್ಯಕರವಾಗಿದೆ. ಸಂಪೂರ್ಣ ಕೊಬ್ಬಿನ ಹಾಲಿನಲ್ಲಿರುವ ಜೈವಿಕ ಸಕ್ರಿಯ ಪದಾರ್ಥಗಳು ನಮ್ಮ ಚಯಾಪಚಯವನ್ನು ವೃದ್ಧಿಸಿ ಹೆಚ್ಚು ಕೊಬ್ಬನ್ನು ಸುಡಲು ಮತ್ತು ಆ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಪರಿಪೂರ್ಣ ಹಾಲು ಹೆಚ್ಚು ನೈಸರ್ಗಿಕವಾಗಿದ್ದು, ಆರೋಗ್ಯಕರವಾಗಿದೆ.
World Milk Day : ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ! ಹೇಗೆ ಗೊತ್ತೆ?