Site icon Vistara News

Jennifer Lopez | ಎರಡನೇ ಬಾರಿ ಮದುವೆಯಾದ ಜೆನಿಫರ್‌ ಲೋಪೆಜ್- ಬೆನ್‌ ಅಫ್ಲೆಕ್‌ ಜೋಡಿ

Jennifer Lopez

ಬೆಂಗಳೂರು : ಹಾಲಿವುಡ್‌ ನಟಿ ಜೆನಿಫರ್ ಲೋಫೆಜ್‌ ತನ್ನ ಹೊಸ ಪ್ರಿಯತಮ ಬೆನ್‌ ಅಫ್ಲೆಕ್‌ ಅವರನ್ನು ಎರಡನೇ ಬಾರಿ ಮದುವೆಯಾಗಿದ್ದಾರೆ. ಅವರ ಐಷಾರಾಮಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೆನಿಫರ್‌ ಹಾಗೂ ಬೆನ್‌ ಜುಲೈನಲ್ಲಿ ಒಂದು ಬಾರಿ ಮದುವೆಯಾಗಿದ್ದರು. ಇದೀಗ ಆತ್ಮೀಯ ಬಂಧುಗಳು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮತ್ತೊಂದು ಬಾರಿ ಮದುವೆಯಾಗಿದ್ದಾರೆ. ಈ ಇಬ್ಬರು ಹಾಲಿವುಡ್‌ ಸ್ಟಾರ್‌ಗಳು ಶ್ವೇತ ವರ್ಣದ ದಿರಿಸಿನಲ್ಲಿ ಮಿಂಚುತ್ತಿರುವ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬ್ಯಾಟ್‌ಮನ್‌ ವರ್ಸಸ್‌ ಸೂಪರ್‌ಮನ್‌ ಸಿನಿಮಾದ ನಟರಾಗಿರುವ ಬೆನ್‌ ಬೆನ್‌ ಅಫ್ಲೆಕ್ಸ್‌ ಅವರ ತಾಯಿ, ಈ ಸಂಭ್ರಮದ ಮದುವೆಯ ಮೊದಲ ದಿನ ಆಸ್ಪತ್ರೆ ಸೇರಿದ್ದರು.

೪೯ ವರ್ಷದ ಬೆನ್‌ ಅಫ್ಲೆಕ್ಸ್‌ ಹಾಗೂ ೫೩ ವರ್ಷದ ಜೆನಿಫರ್‌ ಲಾಸ್‌ವೇಗಾಸ್‌ನ ಚಾಪೆಲ್‌ ಒಂದರಲ್ಲಿ ವಿವಾಹವಾಗಿದ್ದರು. ಆ ವೇಳೆ ಮದುವೆಯ ಚಿತ್ರಗಳನ್ನು ಹರಿಬಿಟ್ಟಿದ್ದರು. ಅಲ್ಲದೆ, ಜೆನಿಫರ್‌ ಅಭಿಮಾನಿಗಳಿಗಾಗಿ ದೀರ್ಘ ಪತ್ರವನ್ನು ಬರೆದಿದ್ದರು.

೨೦೦೧ರಿಂದ ಪ್ರೇಮ ಕತೆ ಆರಂಭ

ಈ ಜೋಡಿ ಮೊದಲು ಭೇಟಿಯಾಗಿದ್ದು ೨೦೦೧ರಲ್ಲಿ. ಅಂದರೆ ಗಿಗ್ಲಿ (Gigli) ಸಿನೆಮಾದಲ್ಲಿ ಜತೆಯಾಟಿ ನಟಿಸಿದ ವೇಳೆ. ಸಿನೆಮಾದ ಬಳಿಕ ಅವರಿಬ್ಬರ ರೊಮ್ಯಾನ್ಸ್‌ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಹಾಗಾದರೆ ಅವರಿಬ್ಬರು ಪ್ರೀತಿ ಮೊಳಕೆಯೊಡೆದ ೨೧ ವರ್ಷಗಳ ಮದುವೆ ಆಗಿರುವುದೇ ಎಂಬು ಪ್ರಶ್ನೆ ಮೂಡುತ್ತದೆ. ಅಲ್ಲ, ಅವರಿಬ್ಬರು ಅಷ್ಟು ವರ್ಷಗಳ ನಡುವೆ ಬೇರೆಯವರನ್ನು ಮದುವೆಯಾಗಿದ್ದರು.

ಬೆನ್‌ ಹಾಗೂ ಜೆನಿಫರ್‌ ೨೦೦೪ರಲ್ಲಿ ಮದುವೆಯಾಗಲಿದ್ದಾರೆ ಎಂದು ಆ ವೇಳೆ ಸುದ್ದಿಯಾಗಿತ್ತು. ಆದರೆ, ಬೆನ್‌ ಅಫ್ಲೆಕ್ಸ್ ಅವರು ಅಲಿಯಾಸ್‌ (Alias) ಸಿನಿಮಾದ ನಟಿ ಜೆನಿಫರ್‌ ಗಾರ್ನರ್ ಅವರನ್ನು ಮದುವೆಯಾದರು. ಈ ಜೋಡಿಗೆ ಮೂರು ಮಕ್ಕಳಿವೆ. ೧೬ ವರ್ಷದ ವಾಯ್ಲೆಟ್‌, ೧೪ ವರ್ಷದ ಸೆರಾಫಿನಾ ಹಾಗೂ ೧೦ ವರ್ಷದ ಸ್ಯಾಮುಯೆಲ್‌. ೨೦೧೮ರಲ್ಲಿ ಅವರಿಬ್ಬರೂ ಬೆನ್‌ ಹಾಗೂ ಗಾರ್ನರ್ ಬೇರ್ಪಟ್ಟಿದ್ದರು. ಅದಾದ ಬಳಿಕ ಬೆನ್‌ ಎಸ್‌ಎಲ್‌ಎನ್‌ (Saturday Night Live) ಕಾರ್ಯಕ್ರಮದ ನಿರ್ಮಾಪಕಿ ಲಿಂಡ್ಸೆ ಶೂಕುಸ್ ಜತೆ ಡೆಟಿಂಗ್ ಮಾಡುತ್ತಿದ್ದರು. ಅದೂ ಅಲ್ಲದೆ, ಕ್ಯೂಬಾ ಮೂಲದ ಸ್ಟೇನ್ ನಟಿ ಅನಾ ಡಿ ಅರಾಮ್ಸ್‌ ಜತೆಯೂ ರೊಮ್ಯಾನ್ಸ್ ಮಾಡಿದ್ದರು. ಇವರಿಬ್ಬರು ಡೀಪ್‌ ವಾಟರ್‌ ಸಿನೆಮಾದಲ್ಲಿ ಪರಸ್ಪರ ಭೇಟಿಯಾಗಿದ್ದರು.

ಅತ್ತ ಜೆನಿಫರ್‌ ಕೂಡ ೨೦೦೪ರಲ್ಲಿ ಗಾಯಕ ಮಾರ್ಕ್‌ ಆಂಟನಿ ಜತೆ ವಿವಾಹವಾಗಿದ್ದರು. ಅವರಿಗೆ ಎಮ್ಮೆ ಹಾಗೂ ಮ್ಯಾಕ್ಸ್‌ ಎಂಬ ಅವಳಿ ಮಕ್ಕಳಿದ್ದಾರೆ. ೨೦೨೧ರಲ್ಲಿ ಮಾರ್ಕ್‌ ಮತ್ತು ಜೆನಿಫರ್‌ ಪ್ರತ್ಯೇಕವಾಗಿದ್ದರು. ಅದಾದ ಬಳಿಕ ಬೆನ್‌ ಮತ್ತು ಜೆನಿಫರ್‌ ಡೇಟಿಂಗ್‌ ಅರಂಭ ಮಾಡಿದ್ದರು.

Exit mobile version