ಒಳ್ಳೆಯತನ ಎಂದರೇನು ಎನ್ನುವುದಕ್ಕೆ ಇದು ಹೀಗೇ ಎಂಬ ವಿವರಣೆಗಳಿಲ್ಲ. ಒಬ್ಬರಿಗೆ ಒಳ್ಳೆಯವರಾಗಿ ಕಂಡವರು ಇನ್ನೊಬ್ಬರಿಗೆ ಕಾಣಬೇಕಿಲ್ಲ. ಹಾಗಂತ ಎಲ್ಲರಿಗೂ ಏಕಕಾಲಕ್ಕೆ ಒಳ್ಳೆಯವರಾಗಿ ಇರಲೂ ಸಾಧ್ಯವಿಲ್ಲ. ಒಳ್ಳೆಯವರಲ್ಲ ಅಂತ ಅನಿಸಿದವರೆಲ್ಲ ಕೆಟ್ಟವರೇ ಆಗಿರಬೇಕೆಂದೇನೂ ಇಲ್ಲ. ಹಾಗಾದರೆ ಒಳ್ಳೆಯತನ ಎಂದರೇನು? ನಾವು ಒಳ್ಳೆಯವರೆಂದು ನಮಗೆ ನಾವೇ ಅಂದುಕೊಂಡರೆ ಒಳ್ಳೆಯವರಾಗಿಬಿಡುತ್ತೇವಾ? ಇಂತಹ ಜಿಜ್ಞಾಸೆಗಳೆಲ್ಲ ನಿಮ್ಮ ತಲೆಯನ್ನು ಹೊಕ್ಕರೆ, ನೀವು ಒಳ್ಳೆಯವರಾ ಕೆಟ್ಟವರಾ ಅಂತ ನಿಮಗೆ ನೀವೇ ಪರೀಕ್ಷೆ ಮಾಡಬೇಕೆಂದು ಅನಿಸಿದರೆ, ಇಲ್ಲಿದೆ ಸರಳ ಸೂತ್ರಗಳು. ಈ 15 ಗುಣಗಳು ನಿಮ್ಮಲ್ಲಿ ಪರ್ಫೆಕ್ಟ್ ಆಗಿ ಇದ್ದರೆ ನೀವು ಖಂಡಿತಾ ಒಳ್ಳೆಯವರು!
1. ಇವರು ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಸಂಬಂಧ ಎಂಬುದು ಪ್ರತಿಯೊಬ್ಬ ಮನುಷ್ಯನ ಜೀವನದ ಅತ್ಯಾವಶ್ಯಕ ಅಗತ್ಯಗಳಲ್ಲಿ ಒಂದು. ಇದು ಗಂಡಹೆಂಡತಿಯ ಸಂಬಂಧವೇ ಆಗಬೇಕಿಲ್ಲ. ಗೆಳೆತನದಿಂದ ಹಿಡಿದು ಒಲವಿನವರೆಗೆ ಇತರರ ಜೊತೆ ನೀವು ಸಂಬಂಧದಲ್ಲಿ ಪ್ರಾಮಾಣಿಕರಾಗಿರುತ್ತೀರಿ ಹಾಗೂ ಆ ಸಂಬಂಧಕ್ಕೆ ನ್ಯಾಯ ಒದಗಿಸುವ ಗುಣ ನಿಮ್ಮಲ್ಲಿದೆಯೆಂದಾದರೆ ನೀವು ಒಳ್ಳೆಯವರು.
2. ಇವರು ಇನ್ನೊಬ್ಬರನ್ನು ಮನಸಾರೆ ಹೊಗಳುತ್ತಾರೆ. ಒಳ್ಳೆಯ ಮನುಷ್ಯರು ಬೇರೆಯವರಿಗೆ ಎಲ್ಲಿ ಹೊಗಳುವಿಕೆ ಅಗತ್ಯವಿದೆ ಎನಿಸುತ್ತದೋ ಅಲ್ಲಿ ಹೊಗಳಲು ಹಿಂದೆ ಮುಂದೆ ನೋಡುವುದಿಲ್ಲ. ತನ್ನ ಪ್ರತಿಸ್ಪರ್ಧಿಯೇ ಇರಬಹುದು, ವಾವ್ ಎನಿಸುವಂತೆ ಮಾಡಿದ ಕೆಲಸಕ್ಕೆ ಹೊಗಳುವಲ್ಲಿ ತನ್ನ ಅಹಂ ಅನ್ನು ಪರಿಗಣಿಸದೆ ಮನಸಾರೆ ಹೊಗಳುತ್ತಾರೆ.
3. ಇವರು ತಮ್ಮ ಹೆತ್ತವರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಅವರಿಗೆ ಆಗಾಗ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ.
4. ಒಳ್ಳೆಯವರು ಯಾವಾಗಲೂ ವಿನಯವಂತರಾಗಿರುತ್ತಾರೆ. ಹಿರಿಕಿರಿಯರೆನ್ನದೆ ಎಲ್ಲರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಾರೆ.
5. ಎಲ್ಲರೂ ಇಷ್ಟವಾಗಬೇಕೆಂದೇನೂ ಇಲ್ಲ. ಆದರೆ, ಎಲ್ಲರ ಮೇಲೆ ದಯೆ ಕರುಣೆ ಇರುತ್ತದೆ.
6. ತಮ್ಮ ವಸ್ತುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಲ್ಲಿ ಇವರು ಹಿಂದೆಮುಂದೆ ನೋಡುವುದಿಲ್ಲ. ಇವರಿಗೆ ಹುಟ್ಟುವಾಗ ಖಾಲಿ ಕೈಯಲ್ಲಿ ಬಂದಂತೆ ವಾಪಾಸ್ ಹೋಗುವಾಗಲೂ ಖಾಲಿ ಕೈಯಲ್ಲೇ ಹೋಗುತ್ತೇವೆ ಎಂಬ ಸತ್ಯ ತಿಳಿದಿರುತ್ತದೆ.
7. ತಮ್ಮ ನಡತೆಯ ಬಗ್ಗೆ ಇವರಿಗೆ ಅರಿವಿರುತ್ತದೆ. ಇನ್ನೊಬ್ಬರ ಜೊತೆ ತಾನು ಹೇಗೆ ನಡೆದುಕೊಳ್ಳಬೇಕೆಂಬ ಅರಿವು ಇವರಿಗಿರುತ್ತದೆ.
8. ಬೇರೆಯವರ ಬಗೆಗೆ ಇವರಿಗೆ ಯೋಚನೆಯಿರುತ್ತದೆ. ತಮ್ಮ ಕೆಲಸಗಳು ಇನ್ನೊಬ್ಬರ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಇವರಿಗೆ ಅರಿವಿರುತ್ತದೆ. ಹಾಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇವರು ಬೇರೆಯವರ ಬಗ್ಗೆ ಯೋಚಿಸುತ್ತಾರೆ.
9. ಒಪ್ಪಿದ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಇವರು ಶ್ರಮ, ಸಮಯ ಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸವನ್ನು ಮುಗಿಸುತ್ತಾರೆ.
10. ತಮ್ಮ ಪ್ರೀತಿಪಾತ್ರರನ್ನು ಇವರು ಕಾಳಜಿ ಮಾಡುತ್ತಾರೆ. ತಮ್ಮನ್ನು ಪ್ರೀತಿಸುವ ಮಂದಿ ಏನೇ ತಪ್ಪು ಮಾಡಿದ್ದರೂ ಸಾರ್ವಜನಿಕವಾಗಿ ಕೆಟ್ಟದಾಗಿ ನಡೆಸಿಕೊಳ್ಳುವುದಿಲ್ಲ.
11. ಇವರ ಮುಖದಲ್ಲಿ ಮಂದಹಾಸವಿರುತ್ತದೆ. ಬೇರೆಯವರೆಡೆಗೆ ಒಂದು ಮಂದಹಾಸಭರಿತ ದೃಷ್ಟಿಯಿರುತ್ತದೆ.
12. ಯಾವುದೇ ಸಂದರ್ಭ ಬಂದರೂ ಇವರು ದೃತಿಗೆಡದೆ, ಅದರಲ್ಲಿರುವ ಪಾಸಿಟಿವ್ ಅಂಶವನ್ನು ಎತ್ತಿ ಹಿಡಿವ ಮನಸ್ಥಿತಿ ಹೊಂದಿರುತ್ತಾರೆ.
ಇದನ್ನೂ ಓದಿ: Love Marriage | ಹಂಪಿಯ ಆಟೋ ಚಾಲಕನ ಒಳ್ಳೆಯತನಕ್ಕೆ ಒಲಿದ ವಿದೇಶಿ ಕನ್ಯೆ: ಇಬ್ಬರೂ ನಡೆದರು ಸಪ್ತಪದಿ
13. ಬಹುಬೇಗನೆ ಬೇರೆಯವರೊಂದಿಗೆ ಸಹಜವಾಗಿ ಬೆರೆಯುತ್ತಾರೆ. ಗೆಳೆತನ ಸಂಪಾದಿಸುತ್ತಾರೆ. ಎಲ್ಲವನ್ನೂ ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದಿಲ್ಲ.
14. ಇವರು ವ್ಯಕ್ತಿಗಳ ಭೂತವನ್ನು ನೋಡಿ ವಿಷಯವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಭೂತದಿಂದಾಗಿ ಭವಿಷ್ಯವನ್ನು ಹಾಳು ಮಾಡಲು ಇವರು ಇಷ್ಟಪಡುವುದಿಲ್ಲ.
15. ಇವರು ಎಲ್ಲ ಸಮಯದಲ್ಲೂ ಸಮಚಿತ್ತರಾಗಿರುತ್ತಾರೆ. ಕೆಲಸದ ವಿಚಾರದಲ್ಲಿರಬಹುದು ಅಥವಾ ಖಾಸಗಿ ವಿಚಾರದಲ್ಲಿರಬಹುದು. ಇವರ ಮೇಲೆ ಮೊದಲು ಇದ್ದ ಅಭಿಪ್ರಾಯವನ್ನೇ ಇವರು ಕೊನೆಯವರೆಗೂ ಉಳಿವಂತೆ ಮಾಡುತ್ತಾರೆ.
ಒಳ್ಳೆಯವರಾಗುವುದು ಕಷ್ಟವಲ್ಲ. ಆದರೆ, ಒಳ್ಳೆಯವರಾಗಿದ್ದುಕೊಂಡು ಅದೇ ಒಳ್ಳೆಯತನವನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳುವುದಷ್ಟೇ ಕಷ್ಟ. ಈ ಮೇಳಿನ ಗುಣಗಳೆಲ್ಲ ನಿಮ್ಮಲ್ಲಿದ್ದರೆ ನೀವು ಸಕಲ ಸಂಪನ್ನ ಗುಣಭೂಷಿತರೆಂದು ಘಂಟಾಘೋಷವಾಗಿ ಹೇಳಿಬಿಡಬಹುದು.
ಇದನ್ನೂ ಓದಿ: Motivational story: ಒಳ್ಳೆಯತನ ದೌರ್ಬಲ್ಯ ಅಲ್ಲ, ಅದು ತಾಕತ್ತು ಅಂತ ಸದಾಶಿವ..