Site icon Vistara News

ರಾಷ್ಟ್ರೀಯ ನೇಲ್ ಪಾಲಿಷ್ ದಿನ: ಯಾವ ಬ್ರ್ಯಾಂಡ್‌ ಉತ್ತಮ? ಇಲ್ಲಿದೆ ಮಾಹಿತಿ

ನೇಲ್ ಪಾಲಿಷ್

ನೇಲ್‌ ಪಾಲಿಷ್‌ ಯಾರಿಗೆ ಇಷ್ಟವಿಲ್ಲ? ಸುಂದರ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವುದೇ ನೇಲ್‌ ಪಾಲಿಷ್‌. ಮೊದಲೆಲ್ಲ ಒಂದೆರಡು ಬಣ್ಣದ, ಕೆಲವೇ ಬ್ರ್ಯಾಂಡ್‌ ಹೊಂದಿದ್ದ ನೇಲ್‌ ಪಾಲಿಷ್‌ ಈಗ ಅದೆಷ್ಟೋ ಬಣ್ಣ ಪಡೆದಿದೆ. ಮದುವೆ ಕಾರ್ಯಕ್ರಮಕ್ಕೆ ಒಂದು, ಪಾರ್ಟಿಗೆ ಇನ್ನೊಂದು ಎಂಬಂತೆ ಸಂದರ್ಭಕ್ಕೆ ತಕ್ಕಂತೆ ನೇಲ್‌ ಪಾಲಿಷ್‌. ಬಟ್ಟೆಗೆ ಹೊಂದಿಕೊಳ್ಳುವ ಬಣ್ಣದ ನೇಲ್‌ ಪಾಲಿಷ್‌ ಸಹ.

ಪ್ರತಿಯೊಂದು ಸಂದರ್ಭದಲ್ಲಿ ಬಟ್ಟೆಗೆ ಹೊಂದಾಣಿಕೆ ಆಗುವಂತಹ ನೇಲ್ ಪಾಲಿಷ್ ಹಾಕಿಕೊಳ್ಳುವುದು ಇಂದಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಕೈ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಅದನ್ನು ಸುಂದರವಾಗಿ ಕಂಗೊಳಿಸಲು ಬಣ್ಣ ಬಣ್ಣದ ನೇಲ್ ಪಾಲಿಷ್ ಹಾಕುವುದನ್ನು ನಾವೆಲ್ಲರೂ ನೋಡಿರುತ್ತೀವಿ. ಮದುವೆ ಅಥವಾ ಇನ್ನಿತರ ಶುಭ ಕಾರ್ಯಗಳ ಸಮಾರಂಭಗಳಲ್ಲಂತೂ ವಿಧ ವಿಧವಾದ ನೇಲ್ ಪಾಲಿಷ್ ಬಳಕೆ ಸಾಮಾನ್ಯವಾದದ್ದು.

ಮೊದಲೆಲ್ಲ ಒಮ್ಮೆ ನೇಲ್ ಪಾಲಿಷ್ ಹಾಕಿದರೆ ಅದಾಗಿಯೇ ಅಳಿಸಿಹೋಗುವವರೆಗೆ ಇರುತ್ತಿತ್ತು. ಈಗೆಲ್ಲ ಅಷ್ಟು ಕಾಯುವ ಹಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಹಳೆಯ ನೇಲ್ ಪಾಲಿಷ್ ಅನ್ನು ನೇಲ್‌ ರಿಮೂವರ್‌ ಬಳಸಿ ಹೊಸದು ಹಾಕಿಕೊಂಡರೆ ಆಯಿತು.

ಪ್ರಾರಂಭದಲ್ಲಿ ರಾಷ್ಟ್ರೀಯ ನೇಲ್ ಪಾಲಿಷ್‌ ದಿನವನ್ನಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತಿತ್ತು. ಇದೀಗ ಕೆಲ ವರ್ಷಗಳಿಂದ ವಿಶ್ವದ ವಿವಿಧ ಭಾಗಗಳಲ್ಲಿ ನೇಲ್‌ ಪಾಲಿಷ್‌ ದಿನ ಆಚರಿಸಲಾಗುತ್ತಿದೆ.

ಅತ್ಯುತ್ತಮ ಭಾರತೀಯ ನೇಲ್ ಪಾಲಿಷ್ ಬ್ರಾಂಡ್‌ಗಳು:

*ಕಲರ್‌ಬಾರ್ U.S.A ನೇಲ್ ಪಾಲಿಷ್‌ಗಳಿಗೆ ಅತ್ಯಂತ ಒಳ್ಳೆ ಬ್ರಾಂಡ್ ಆಗಿದೆ. ಇದು ವಿಶಾಲವಾದ ಬಣ್ಣ ಶ್ರೇಣಿಯನ್ನು ಹೊಂದಿದೆ. ಕಲರ್‌ಬಾರ್‌ನಲ್ಲಿ ನೀವು soft shades ನಿಯಾನ್ shades ನ ಅನೇಕ ಬಣ್ಣಗಳನ್ನು ಕಾಣಬಹುದು.
ಇದು ಹಳೆಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈ ಬ್ರ್ಯಾಂಡ್ ಮೆಟಾಲಿಕ್ಸ್‌ನಿಂದ ಸಿದ್ಧವಾಗಿದೆ.

*Lakme ನೇಲ್ ಪಾಲಿಷ್ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತದೆ ಹಾಗು ನೇಲ್ ಪೇಂಟ್‌ಗಳಲ್ಲಿ ಒಂದಾಗಿದೆ.
*ರೆವ್ಲಾನ್ ಉತ್ತಮ ಬ್ರ್ಯಾಂಡ್ ಆಗಿದ್ದು, ಸ್ವಿಸ್ ಬ್ಯೂಟಿ ನೇಲ್ ಪಾಲಿಶ್‌ಗಳನ್ನು ಲಾಂಗ್-ವೇರ್ ನೀಡಲು ಕಲರ್ ಲಾಕ್ ತಂತ್ರಜ್ಞಾನದೊಂದಿಗೆ ರೂಪಿಸಲಾಗಿದೆ. ಅವರು ಸ್ಪಷ್ಟ ಮತ್ತು ನಿಖರವಾದ ಅಪ್ಲಿಕೇಶನ್‌ಗಾಗಿ ಪೇಟೆಂಟ್ ಪಡೆದ ಫ್ಲೆಕ್ಸಿ ಬ್ರಷ್‌ನೊಂದಿಗೆ ಬರುತ್ತದೆ.
ಸಾಕಷ್ಟು ದುಬಾರಿಯ ಬ್ರಾಂಡ್ ಅಂದ್ರೆ China glaze. ಇದ್ದಕ್ಕೆ ₹500. ಹಣಕ್ಕೆ ತಕ್ಕಂತೆ ಇದರ ಗುಣಮಟ್ಟವೂ ಉತ್ತಮವಾಗಿದೆ.

ಹೀಗೆಯೇ ಅಕ್ರಿಲಿಕ್, ಪಾಲಿಜೆಲ್, ಡಿಪ್ ಪೌಡರ್, ಶೆಲಾಕ್, NYKAA ಅಂತಹ ನಾವು ಮಾರ್ಕೆಟ್‌ನಲ್ಲಿ ಅನೇಕ ರೀತಿಯ ಬ್ರಾಂಡ್ ಮತ್ತು ಕಲರ್‌ಗಳನ್ನೂ ನೋಡಬಹುದು. ಈ ರೀತಿಯ ನೇಲ್‌ ಪಾಲಿಷ್‌ ಹಚ್ಚುವುದರಿಂದ ಬಹಳ ಕ್ರಿಯೇಟಿವ್ ಆಗಿ ಕಾಣಿಸುವುದಲ್ಲದೆ ಕೂಲ್ ಆಗಿ ಕೂಡ ಇರುತ್ತದೆ.

ಇದನ್ನೂ ಓದಿ| Bridal Lehenga | ಲೆಹೆಂಗ ಪರ್ಚೇಸ್‌ ಮಾಡುವ ಮುನ್ನ ಇಲ್ಲಿದೆ 7 ಟಿಪ್ಸ್‌

Exit mobile version