ಪಾಸಿಟಿವ್ ಪೇರೆಂಟಿಂಗ್ (positive parenting) ಎಂದರೆ ಮಕ್ಕಳನ್ನು ಎಲ್ಲಿಯೂ ಬೈಯದೆ, ಸದಾ ಅವರನ್ನು ರಮಿಸುತ್ತಾ ದಯೆಯಿಂದ ನೋಡಿಕೊಳ್ಳುವುದು ಎಂಬರ್ಥವಂತೂ ಖಂಡಿತಾ ಅಲ್ಲ. ಪಾಸಿಟಿವ್ ಪೇರೆಂಟಿಂಗ್‌ನಲ್ಲಿ ಮಕ್ಕಳನ್ನು ಶಿಸ್ತಿನಿಂದ (parenting discipline) ನೋಡಿಕೊಳ್ಳುವುದಷ್ಟೇ ಅಲ್ಲ, ಮಕ್ಕಳು ತಮ್ಮ ಕಾಲ ಮೇಲೆ ತಾವು ಆತ್ಮವಿಶ್ವಾಸದಿಂದ ನಿಂತುಕೊಳ್ಳುವುದು, ಇತರರ ಜೊತೆಗೆ ಚಂದಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದೂ (Parenting tips) ಕೂಡಾ ಇದೆ. ಆದರೆ, ಮಕ್ಕಳ ಮೇಲೆ (relationship tips) ಮಾತು ಮಾತಿಗೂ ಅವರು ತಪ್ಪಿದಲ್ಲಿ ಹರಿಹಾಯುವುದರಿಂದ ಆಗುವ ತೊಂದರೆಗಳೇನು ಹಾಗೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸಬಹುದು (parenting guide) ಎಂಬುದನ್ನು ನೋಡೋಣ ಬನ್ನಿ.
1. ಮಕ್ಕಳಿಗೆ ಮೊದಲು ನೀವು ಪಾಸಿಟಿವ್ ಉದಾಹರಣೆಗಳನ್ನು ಸೆಟ್ ಮಾಡಬೇಕು. ಮಕ್ಕಳು ತಮ್ಮ ಹೆತ್ತವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿಕೊಂಡು ಬೆಳೆಯುತ್ತಾರೆ. ಹಾಗಾಗಿ ನೀವು ಹೇಗೆ ವರ್ತಿಸುತ್ತಿದ್ದೀರಿ ಎಂಬುದನ್ನು ನೀವೇ ಮೊದಲು ಗಮನಿಸಿ.
2. ಮಕ್ಕಳು ಯಾವಾಗಲೂ ತಾವು ಹೆತ್ತವರ ಮಡಿಲಲ್ಲಿ ಬೆಚ್ಚಗಿರುತ್ತೇವೆ ಎಂಬ ಸೇಫ್ ಭಾವವನ್ನು ಹೊಂದುವುದು ಹೆತ್ತವರು ಅವರನ್ನು ಆಗಾಗ ಅದನ್ನು ಅವರ ಮುಂದೆ ವ್ಯಕ್ತಪಡಿಸುವುದರ ಮೂಲಕ. ಅಂದರೆ, ಹೆತ್ತವರು ಆಗಾಗ ಮಕ್ಕಳನ್ನು ಅಪ್ಪಿಕೊಳ್ಳುವುದು, ಮುದ್ದು ಮಾಡುವುದರ ಮೂಲಕ ಮಕ್ಕಳಿಗೆ ಈ ಭಾವ ಮೊಳೆಯುತ್ತದೆ. ಹಾಗಾಗಿ ಹೆತ್ತವರ ದೈಹಿಕ ಸಾಂಗತ್ಯವೂ ಮಕ್ಕಳಿಗೆ ಅಗತ್ಯವೇ. ಇಲ್ಲದಿದ್ದರೆ ಮಕ್ಕಳು ಇದನ್ನು ಮನೆಯಿಂದ ಹೊರಗೆ ಪಡೆಯಲು ನೋಡುತ್ತಾರೆ.
3. ನಂಬಿಕೆ ಎಂಬುದು ಹೆತ್ತವರ ಮಕ್ಕಳ ನಡುವಿನ ಸಂದರ್ಭವೂ ಬಹಳ ಮುಖ್ಯ. ಮಕ್ಕಳ ಜೊತೆಗೆ ವಿಚಾರಗಳನ್ನು ಮುಚ್ಚಿಡುವುದು, ʻಏಯ್, ಬಾಯ್ಮಚ್ಚು. ಇದು ನಿನಗೆ ಸಂಬಂಧಿಸಿದ್ದಲ್ಲ, ದೊಡ್ಡವರ ವಿಷಯʼ ಇತ್ಯಾದಿ ಮಾತುಗಳು ಮಕ್ಕಳಲ್ಲಿ ಹೆತ್ತವರ ಬಳಿ ನಂಬಿಕೆಯನ್ನು ಬೆಳೆಸುವುದಿಲ್ಲ. ಹಾಗಾಗಿ ಮಕ್ಕಳ ಎದುರು, ಪ್ರಾಮಾಣಿಕವಾಗಿರಿ, ಪಾರದರ್ಶಕವಾಗಿರಿ. ನಂಬಿಕೆ ಬೆಳೆಸಿ.
4. ಹೆತ್ತವರ ಸತತ ಪ್ರೋತ್ಸಾಹದಿಂದ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ, ಆತ್ಮವಿಶ್ವಾಸ ಪ್ರದರ್ಶಿಸಿದಾಗ ಅವರ ಬೆನ್ನು ತಟ್ಟಿ. ಹಾಗಂತ ಅತಿಯಾದ ಹೊಗಳಿಕೆಯೂ ಒಳ್ಳೆಯದಲ್ಲ.
5. ಒತ್ತಡದಲ್ಲಿದ್ದಾಗ ಆದಷ್ಟೂ ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳುವುದನ್ನು ಕಲಿಯಿರಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ ಎಂಬುದನ್ನು ನೆನಪಿಡಿ.
6. ಮಕ್ಕಳ ಜೊತೆ ಸಂಬಂಧವನ್ನು (parent children relation) ಗಟ್ಟಿಗೊಳಿಸಿ. ಇದಾಗಬೇಕೆಂದರೆ ಪಾಸಿಟಿವ್ ಪೇರೆಂಟಿಂಗ್ ನಿಮ್ಮ ಕೀಲಿಕೈಯಾಗಬೇಕು. ಅಂದರೆ ಮಕ್ಕಳ ಜೊತೆಗೆ ನೀವು ಬೆಚ್ಚಗಿನ ಭಾವ ಕಟ್ಟಿಕೊಳ್ಳಬೇಕು.
7. ಮನೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯವಿರಬೇಕು. ಅಂದರೆ, ಆ ಸ್ವಾತಂತ್ರ್ಯ ಅತಿಯಾಗಬಾರದು. ಮಕ್ಕಳಿಗೆ ಮನೆಯಲ್ಲಿ ಮನಬಿಚ್ಚಿ ತಮ್ಮ ಹೆತ್ತವರ ಜೊತೆಗೆ ಏನನ್ನು ಬೇಕಾದರೂ ಹೇಳುವ ವಾತಾವರಣ ಕಟ್ಟಿಕೊಡುವುದು ಹೆತ್ತವರಾಗಿ ನಿಮ್ಮ ಕರ್ತವ್ಯ. ಮಕ್ಕಳ ಮನಸ್ಸಿನಲ್ಲಿ ಇದು ಬೇರೂರುದರೆ, ಹೆತ್ತವರು ಗೆದ್ದಂತೆ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!
8. ಸಂವಹನ ತುಂಬ ಮುಖ್ಯ. ಮಕ್ಕಳು ತಮ್ಮ ಭಾವನೆಗಳನ್ನು ನಿಮ್ಮ ಜೊತೆ ನೇರವಾಗಿ ಹಂಚಿಕೊಳ್ಳಬಹುದಾದ ವಾತಾವರಣ ಇರಬೇಕು. ನೀವು ಮಕ್ಕಳ ಮೇಲೆ ಹರಿಹಾಯುತ್ತಿದ್ದರೆ, ಸರಿಯಾಗಿ ಕೂತು ಮಕ್ಕಳ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ, ಮಕ್ಕಳನ್ನು ಮಕ್ಕಳಾಗಿ ಇರಲು ಬಿಡದಿದ್ದರೆ, ಮಕ್ಕಳ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಇರದಿದ್ದರೆ ಮಕ್ಕಳ ಹಾಗೂ ಪೋಷಕರ ನಡುವೆ ಪಾರದರ್ಶಕ ಸಂವಹನ ಸಾಧ್ಯವಾಗದು.
9. ಮಕ್ಕಳ ಮೇಲೆ ರೇಗಲೇಬಾರದು ಎಂದೇನಿಲ್ಲ. ಎಲ್ಲಿ ಹೇಗೆ ರೇಗಬೇಕು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಆಗ ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಗುಣ ಬೆಳೆಸಿಕೊಳ್ಳುತ್ತಾರೆ. ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ಅತಿಯಾದ ಹೊಗಳಿಕೆ ಹಾಗೂ ಮುದ್ದು, ಜೊತೆಗೆ ಅತಿಯಾದ ಬೈಗುಳ, ಶಿಸ್ತು ಎರಡೂ ಒಳ್ಳೆಯದಲ್ಲ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!