Site icon Vistara News

Parenting Tips: ನಿಮ್ಮ ಮಕ್ಕಳ ಪ್ರತಿಭೆಯನ್ನು ಎಳವೆಯಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುವುದು ಹೇಗೆ?

children painting

ಪ್ರತಿ ತಂದೆ ತಾಯಿಯೂ (Parenting tips) ತನ್ನ ಮಗು ಅಥವಾ ಮಕ್ಕಳು ಪ್ರತಿಭಾವಂತರಾಗಲಿ (children talent) ಎಂದೇ ಬಯಸುತ್ತಾರೆ. ತಾನು ಆಸೆಪಟ್ಟ, ಈಡೇರಿಸಿಕೊಳ್ಳಲಾಗದ ಬಯಕೆಗಳು, ಕಲಿಯಲಾಗದ ಸಂಗತಿಗಳು ತನ್ನ ಮಕ್ಕಳಿಗೆ ದಕ್ಕಲಿ, ಅವರಾದರೂ ಕಲಿತು ಅಭಿವೃದ್ಧಿ ಹೊಂದಲಿ ಎಂಬ ನಿಸ್ವಾರ್ಥ ಆಸೆ (relationship tips) ಹೆತ್ತವರದ್ದು. ಈ ಆಸೆ, ಕನಸು ತಪ್ಪೇನಿಲ್ಲ. ಸಹಜ ಕೂಡಾ. ಆದರೆ, ತನ್ನ ಆಸೆ, ಕನಸುಗಳನ್ನು ಮಕ್ಕಳ ಮೇಲೆ ಆಸಕ್ತಿ ಇರಲಿ ಇಲ್ಲದಿರಲಿ ಹೇರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯಂತೂ ಇಲ್ಲಿ ಉದ್ಭವಿಸುತ್ತದೆ. ಮಕ್ಕಳಿಗೆ ಆಸಕ್ತಿಯೇ ಇಲ್ಲದ ವಿಚಾರವೊಂದನ್ನು ಕಲಿಯಬೇಕೆನ್ನುವ ಹೆತ್ತವರ ಒತ್ತಡ ಮಕ್ಕಳ ಮೇಲೆ ಎಂಥ ಪರಿಣಾಮ ಬೀರೀತು (parenting advice) ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಲೇ ಇರುತ್ತದೆ.

ವಿಷಯವೇನೆಂದರೆ, ಬಹಳಷ್ಟು ಸಾರಿ, ನಮ್ಮ ಮಕ್ಕಳ ಆಸಕ್ತಿಯೇನು ಎಂದು ಗುರುತಿಸುವಲ್ಲಿ ಬಹುತೇಕ ಹೆತ್ತವರು ಎಡವುತ್ತಾರೆ. ಮಕ್ಕಳಿಗೆ ಇಷ್ಟವಿರಲಿ ಇಲ್ಲದಿರಲಿ ಹಲವು ತರಬೇತಿಗಳಿಗೆ ಕಳಿಸುತ್ತಾರೆ. ನಮ್ಮ ಮಕ್ಕಳೂ ದೊಡ್ಡ ಸಂಗೀತಗಾರನಾಗಲಿ, ನೃತ್ಯವಿಶಾರದೆಯಾಗಲಿ ಎಂದು ಬಯಸುತ್ತಾರೆ. ಆಸಕ್ತಿಯಿದ್ದರೆ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಮಕ್ಕಳ ನಿಜವಾದ ಆಸಕ್ತಿ ಅಥವಾ ಪ್ರತಿಭೆಯನ್ನು ಗುರುತಿಸುವುದು ಹೇಗೆ (Parenting guide) ಎಂಬ ಸಂದಿಗ್ಧತೆ ನಿಮ್ಮಲ್ಲಿದ್ದರೆ ಖಂಡಿತಾ ಇತ್ತ ಕಡೆ ಗಮನ ಹರಿಸಿ. ಎಳವೆಯಲ್ಲಿಯೇ ಮಕ್ಕಳ ನಿಜವಾದ ಪ್ರತಿಭೆಯನ್ನು ಗುರುತಿಸಿ.

1. ಮಕ್ಕಳನ್ನು ಗಮನಿಸಿ. ಅವರು ನಿಧಾನವಾಗಿ ಒಂದು ವಿಚಾರದತ್ತ ಆಸಕ್ತಿ ಹೊರಳಿಸುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬನ್ನಿ. ಅದಕ್ಕೆ ಅವರದೇ ಆದ ಆಸಕ್ತಿಯನ್ನು ಮತ್ತಷ್ಟು ತಮ್ಮೊಳಗೇ ಬೆಳೆಸಿಕೊಳ್ಳಲು ಸಮಯಾವಕಾಶ ಕೊಡಿ. ಉದಾಹರಣೆಗೆ ಮಗು ಬಣ್ಣಗಳ ಜೊತೆ ಆಟವಾಡುತ್ತಾ ಆಡುತ್ತಾ ಚಿತ್ರಕಲೆಯತ್ತ ನಿಧಾನವಾಗಿ ಹೊರಳಬಹುದು. ಸಹಜವಾಗಿ ಅದು ತಾನಾಗಿಯೇ ಒಂದು ರೂಪವನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಿ. ಅವಸರ ಮಾಡಬೇಡಿ.

2. ಮಕ್ಕಳಿಗೆ ಒಂದೇ ಬಗೆಯ ಚಟುವಟಿಕೆಯನ್ನು ಮಾತ್ರ ನೀಡದೆ ಅವರು ಎಲ್ಲ ಬಗೆಯಲ್ಲೂ ಬೆಳೆಯಲು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ವಾತಾವರಣ ನಿರ್ಮಿಸಿ. ಅವರ ಪ್ರಶ್ನೆಗಳು, ಕುತೂಹಲಗಳು ಎಲ್ಲವಕ್ಕೂ ಉತ್ತರವೀಯುವ ಅವಕಾಶ ಒದಗಿಸಿ.

3. ಅತಿಯಾದ ಒತ್ತಡ ಬೇಡ. ಮಕ್ಕಳಿಗೆ ಎಂಥಾ ಆಸಕ್ತಿಯೇ ಇರಲಿ, ಎಷ್ಟೇ ಪ್ರತಿಭೆಯೇ ಇರಲಿ. ಆದರೆ ಆ ವಿಚಾರದಲ್ಲಿ ಅತಿಯಾದ ಒತ್ತಡ ಬೇಡ. ಅವರು ಸಾಧಿಸಬಲ್ಲ ಗುರಿಗಳನ್ನು ಹಾಕಿ ಅದರೆಡೆಗೆ ಮುನ್ನುಗ್ಗಲು ಅವಕಾಶ ಮಾಡಿಕೊಡಿ. ಅವರಿಂದ ಸಾಧ್ಯವಾಗದ ಅವಾಸ್ತವಿಕ ಕಲ್ಪನೆಗಳ ಗೋಪುರ ಅವರ ಮುಂದೆ ಕಟ್ಟಬೇಡಿ. ಅವರು, ತಮ್ಮ ಆಸಕ್ತಿಯ ನಿಜದ ಖುಷಿಯನ್ನು ಅನುಭವಿಸುತ್ತಾ, ಖುಷಿಯಿಂದ ಕಲಿಯಲು ಅನುವು ಮಾಡಿಕೊಡಿ.

ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

4. ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರಯತ್ನಪಡಿ. ಅವರಾಗಿಯೇ ಕಷ್ಟಪಟ್ಟು ಇಡುವ ಪುಟ್ಟ ಪುಟ್ಟ ಹೆಜ್ಜೆಗಳನ್ನು ಗುರುತಿಸಿ ಶಹಬ್ಬಾಸ್‌ ಎನ್ನಿ. ಹಾಗಂತ ಅತಿಯಾದ ಹೊಗಳಿಕೆಯ ತಪ್ಪನ್ನೂ ಮಾಡಬೇಡಿ. ಅವರ ಕಲಿಕೆಗೆ ಸರಿಯಾದ ಅಭಿಪ್ರಾಯ ವ್ಯಕ್ತಪಡಿಸಿ. ಇಷ್ಟವಾದಾಗ ಗುಡ್‌ ಎನ್ನಿ, ಸರಿಯಿಲ್ಲ ಎನಿಸಿದಾಗ ಪ್ರೀತಿಯಿಂದ ತಿದ್ದಿ. ಒಟ್ಟಾರೆಯಾಗಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸದೆ, ಮತ್ತಷ್ಟು ಹೆಚ್ಚಿಸಲು ಪೂರಕವಾಗಿರುವ ಅವಕಾಶ ಮಾಡಿಕೊಡಿ.

5. ಮಕ್ಕಳ ಆಸಕ್ತಿಗೆ ಅನುಗುಣವಾಗಿ, ಅವರ ಪ್ರತಿಭೆಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳನ್ನೂ ಒದಗಿಸಿ. ಮಗು ಓದುವುದನ್ನು ಇಷ್ಟಪಡುತ್ತಿದೆ ಎಂದಾದಲ್ಲಿ, ಒಂದೊಂದೇ ಪುಸ್ತಕಗಳನ್ನು ತಂದುಕೊಡಿ. ಆದರೆ, ಅತಿಯಾದ ಮುದ್ದಿನಿಂದ ಅತಿಯಾದ ಸೌಲಭ್ಯಗಳನ್ನೂ ಕೊಡಬೇಡಿ. ಇತಿಮಿತಿಯಲ್ಲಿರಲಿ.

6. ನಿಮ್ಮ ಮಕ್ಕಳ ಆಸಕ್ತಿಯಲ್ಲಿ ನಿಮ್ಮ ಪಾಲೂ ಇದೆ. ಅವರ ಕಲಿಕೆಯ ಜೊತೆಗೆ ನೀವೂ ಸಹಭಾಗಿಯಾಗಿ. ತಮ್ಮ ಹೆತ್ತವರು ತಮ್ಮ ಜೊತೆ ಕಲಿಯುವುದನ್ನು ಮಕ್ಕಳು ಬಹಳವೇ ಇಷ್ಟಪಡುತ್ತಾರೆ. ಇದು ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ, ಮಕ್ಕಳ ಆಸಕ್ತಿಯ ಕಲಿಕೆಯ ಜೊತೆಗೆ ನಿಮ್ಮ ಗುಣಮಟ್ಟ್ದ ಸಮಯವನ್ನು ಅವರಿಗೂ ಮೀಸಲಿಡಿ. ಮಕ್ಕಳು ತಾವೇತಾವಾಗಿ ಅಭಿವೃದ್ಧಿ ಹೊಂದುತ್ತಾರೆ.

ಇದನ್ನೂ ಓದಿ: Indian Parenting: ಭಾರತೀಯ ಹೆತ್ತವರ ಮಕ್ಕಳ ಪಾಲನೆಯ ಒಳಿತುಗಳಿವು!

Exit mobile version