Site icon Vistara News

Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

kids anger

ಪೋಷಕರಾಗಿ ಮಕ್ಕಳ ಕೋಪವನ್ನು (anger in kids) ನಿಯಂತ್ರಿಸುವುದು ಹೇಗೆ ಎಂಬುದು ಎಲ್ಲ ಹೆತ್ತವರ ಮಿಲಿಯನ್‌ ಡಾಲರ್‌ ಪ್ರಶ್ನೆ. ಮಕ್ಕಳಿಗೆ ತಮ್ಮ ಕೋಪವನ್ನು ನಿಯಂತ್ರಿಸುವುದು ಕಷ್ಟವೋ ಅಷ್ಟೇ ಕಷ್ಟ ಇಂಥ ಸಂದರ್ಭ ಪೋಷಕರು ಪ್ರತಿಕ್ರಿಯಿಸುವುದೂ ಆಗಿದೆ. ಕೆಲವು ಮಕ್ಕಳು ಬೇಗ ಮಾತು ಮಾತಿಗೂ ಕೋಪ ಪ್ರದರ್ಶಿಸಿದರೆ ಕೆಲವು ಮಕ್ಕಳು ಕೆಲವೇ ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವುದೂ ಇದೆ. ಮುಖ್ಯವಾಗಿ ನಿಮ್ಮ ಮಕ್ಕಳ ಕೋಪ ಅವರನ್ನು ನಿಯಂತ್ರಿಸುತ್ತಿದ್ದರೆ ಹಾಗೂ ಕೋಪದಿಂದ ಅವರ ಒಟ್ಟೂ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದರೆ ಅಂಥದನ್ನು ಹಾಗೆ ಬಿಡುವುದು ಒಳ್ಳೆಯದಲ್ಲ. ಅಂಥ ಸಂದರ್ಭ ಪೋಷಕರಾಗಿ ನಿಮ್ಮ ಕಾರ್ಯ (kids anger management) ಇಲ್ಲಿ ಬಹುಮುಖ್ಯವಾಗುತ್ತದೆ. ಹಾಗಾದರೆ ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬಹುದೆಂಬುದನ್ನು (parenting tips) ನೋಡೋಣ.

1. ಮಕ್ಕಳಿಗೆ ಭಾವನೆಗಳ ಬಗ್ಗೆ ವಿವರಿಸಿ: ಮಕ್ಕಳು ತಾವು ಏನೋ ಅಂದುಕೊಂಡಿದ್ದು ನಡೆಯದಿದ್ದಾಗ, ಬೇಕಾಗಿದ್ದು ಸಿಗದೇ ಇದ್ದಾಗ ಅದನ್ನು ತಮ್ಮ ಭಾವನೆಗಳಲ್ಲಿ ಶಬ್ದಗಳ ಮೂಲಕ ವಿವರಿಸುವಲ್ಲಿ ಸೋಲುತ್ತಾರೆ. ಹೀಗಾಗಿ ಅವರು ಕೋಪವನ್ನು ಪ್ರದರ್ಶಿಸುತ್ತಾರೆ. ಇಂಥ ಸಂದರ್ಭ ಮಕ್ಕಳಿಗೆ ಶಾಂತವಾಗಿ ಅವರ ಪಕ್ಕ ಕುಳಿತು ಅವರು ಪ್ರದರ್ಶಿಸುತ್ತಿರುವ ಭಾವನೆಯ ಬಗ್ಗೆ ತಿಳಿ ಹೇಳಿ. ವಿವಿಧ ಭಾವನೆಗಳ ಹೆಸರುಗಳು ಹಾಗೂ ಅವುಗಳ ಪ್ರತಿಕ್ರಿಯೆಗಳೂ ಹೇಗಿರುತ್ತದೆ ಎಂಬುದೂ, ಅವರೀಗ ಮಾಡುತ್ತಿರುವ ಬಗೆಯನ್ನೂ ವಿವರಿಸಿ. ಮಕ್ಕಳು ನಿಧಾನವಾಗಿ ತಮ್ಮ ಪ್ರತಿಕ್ರಿಯೆಯ ಸ್ವರೂಪವನ್ನು ಅರಿಯುತ್ತಾರೆ.

2. ಸಿಟ್ಟಿಗೊಂದು ಥರ್ಮೋಮೀಟರ್‌ ಮಾಡಿ. ಇದೊಂದು ತಮಾಷೆಯ ವಿಧಾನ. ಮಕ್ಕಳು ತಮಾಷೆಯಾಗಿಯೇ ತಮ್ಮ ನಡಳಿಕೆಯನ್ನು ಅರಿಯಬಹುದು. ಒಂದು ಕಾಗದದಲ್ಲಿ ಥರ್ಪೋಮೀಟರಿನ ಚಿತ್ರ ಬಿಡಿಸಿ. ಅದರಲ್ಲಿ ಸೊನ್ನೆಯಿಂದ ೧೦ರವರೆಗೆ ನಂಬರ್‌ ಬರೆಯಿರಿ. ಮಕ್ಕಳು ಶಾಂತವಾಗಿ ಸಂತೋಷದಿಂದ ಇರುವಾಗ ಅದು ಸೊನ್ನೆಯಲ್ಲಿರುತ್ತದೆ ಎಂದೂ ತಿಳಿಸಿ. ಅವರ ಕೋಪ ಏರಿದ ಸಂದರ್ಭ, ಕೋಪದ ತೀವ್ರತೆಗೆ ಅನುಗುಣವಾಗಿ, ಈ ದಿನದ ಕೋಪ ನಂಬರ್‌ ಐದಕ್ಕೆ ತಲುಪಿತ್ತೆಂದೂ, ಅತಿ ಕೋಪ ತೋರಿಸಿದರೆ ೧೦ಕ್ಕೆ ತಲುಪಿತೆಂದೂ ವಿವರಿಸಿ. ಥರ್ಮಾಮೀಟರ್‌ ಮೇಲೇರಿದಂತೆಲ್ಲಾ ಕೆಟ್ಟದ್ದು ಎಂದೂ ಹೇಳಿ. ನಿಧಾನವಾಗಿ ಅವರ ಕೋಪದ ಸ್ವರೂಪ ಎಂಥದ್ದು ಎಂದು ಮಕ್ಕಳಿಗೆ ಅರಿವು ಮೂಡಿಸುವುದು ಇದರಿಂದ ಸಾಧ್ಯವಾಗಬಹುದು.

3. ಮಕ್ಕಳಿಗೊಂದು ಕಾಮ್-ಡೌನ್‌ ಕಿಟ್‌ ತಯಾರಿಸಿ. ಅದರೊಳಗೆ ಒಂದಿಷ್ಟು ಬಣ್ಣಗಳು, ಪೇಪರು, ಪುಸ್ತಕ ಇಡಿ. ಮಕ್ಕಳು ಕೋಪ ಪ್ರದರ್ಶಿಸಿದಾಗಲೆಲ್ಲ ಕಾಮ್‌ ಡೌನ್‌ ಕಿಟ್‌ ತೆಗೆದುಕೊಂಡು ಕಾಮಿಂಗ್‌ ಕಾರ್ನರಿನಲ್ಲಿ ಕೂತು ಒಂದಿಷ್ಟು ಚಿತ್ರ ಬಿಡಿಸುವುದು ಬಣ್ಣ ಹಾಕುವುದು ಮಾಡಿಸಬಹುದು. ಮೊದಮೊದಲು ಈ ಅಭ್ಯಾಸ ಕಷ್ಟವಾದರೂ ನಿಧಾನವಾಗಿ ಮಕ್ಕಳು ಈ ಆಕ್ಟಿವಿಟಿಗೆ ಹೊಂದಿಕೊಳ್ಳುತ್ತವೆ. ಚಂದದ ಚಿತ್ರ ರೆಡಿಯಾದಾಗ ಕೋಪ ತಾನೇ ತಾನಾಗಿ ಮಾಯವಾಗುತ್ತದೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳಿಂದ ಗೌರವ ಸಿಗಬೇಕಾದರೆ ನಿಮ್ಮ ಹೆತ್ತವರನ್ನು ಹೀಗೆ‌ ನಡೆಸಿಕೊಳ್ಳಿ!

4. ಕೋಪದ ಸ್ವಯಂನಿಯಂತ್ರಣ ಕಲಿಸಿ. ಮಕ್ಕಳು ಕೋಪೋದ್ರಿಕ್ತರಾಗಿ ಮನೆಯಲ್ಲಿ ಗಲಾಟೆ ಮಾಡಿದಾಗ ನೀವೂ ಕೋಪಗೊಂಡು ಅವರ ಮೇಲೆ ರೇಗಬೇಡಿ. ಆಗತ್ಯವಿಲ್ಲದಲ್ಲಿ ಅತಿ ಮುದ್ದು ಮಾಡಿ ಅವರಿಗೆ ಬೇಕಾದ್ದು ಕೊಡಿಸಬೇಡಿ. ಅವರ ಕೋಪ ಒಳ್ಳೆಯದಲ್ಲ, ಅದನ್ನು ಅವರೇ ನಿಗ್ರಹಿಸಬೇಕು ಎಂಬ ಸತ್ಯವನ್ನು ತಿಳಿಹೇಳಲು ಪ್ರಯತ್ನಿಸಿ. ಬಂದ ಭಾವನೆಯನ್ನು ಶಮನಗೊಳಿಸಲು, ನಿಧಾನವಾಗಿ ದೀರ್ಘ ಉಸಿರೆಳೆದುಕೊಳ್ಳಲು ಹೇಳಿ. ಅಥವಾ ಒಂದರಿಂದ ೧೦ ಎಣಿಸುತ್ತಾ ದು ಮೂಲೆಯಿಂದ ಇನ್ನೊಂದರವರೆಗೆ ನಡೆಯಲು ಹೇಳಿ.

೫. ತಾತ್ಕಾಲಿಕ ಲಾಭ ಬೇಡ. ಮಕ್ಕಳು ಕೋಪಗೊಂಡಾಗ, ಹಠ ತೋರಿಸಿದಾಗ ಅವರನ್ನು ಸಮಾಧಾನ ಮಾಡಲು ಫೋನ್‌ ಕೊಟ್ಟು ಕೂರಿಸುವುದು, ಅವರಿಷ್ಟದ ಕಾರ್ಯಕ್ರಮ ಟಿವಿಯಲ್ಲಿ ಹಾಕಿಬಿಡುವುದು, ಅಥವಾ ಅವರಿಗೆ ಪ್ರಿಯವಾದ ಆಟಿಕೆ ಕೊಡಿಸುವುದು ಮತ್ತಿತರ ಸಂಗತಿಗಳನ್ನು ಮಾಡಬೇಡಿ. ಇದರಿಂದ ಮಗುವಿಗೆ ತಾನು ಕೋಪ ಪ್ರದರ್ಶಿಸಿದರೆ ತನಗೆ ಬಹಳಷ್ಟು ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಮತ್ತೆ ಮತ್ತೆ ತನಗೆ ಬೇಕಾದ್ದನ್ನು ಪಡೆಯಲು, ಕೋಪವನ್ನು, ಹಠವನ್ನು ಪ್ರದರ್ಶಿಸತೊಡಗುತ್ತದೆ.

ಇದನ್ನೂ ಓದಿ: Parenting Tips: ಗಂಡುಮಕ್ಕಳು ಟಫ್‌ ಆಗಿರಬೇಕಾ? ಈ ಪೇರೆಂಟಿಂಗ್ ಮಿಥ್‌ಗಳಿಂದ ಹೊರಬನ್ನಿ!

Exit mobile version