–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದ್ಯಕ್ಕೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬಿಂದಾಸ್ ಸ್ಟೈಲ್‌ಮೆಂಟ್‌ಗೆ ಸೈ ಎಂದಿದ್ದಾರೆ.
ಹೌದು. ಹಾಲಿಡೇ ಎಂಜಾಯ್ ಮಾಡಲು ಯೂರೋಪ್‌ಗೆ ತೆರಳಿರುವ ಕಾರ್ತಿಕ್ ಸ್ಟಾರ್ ಸ್ಟೈಲ್‌ಗೆ ಅಲ್ಪವಿರಾಮ ಹಾಕಿ ಕಂಫರ್ಟಬಲ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಮೊರೆ ಹೋಗಿದ್ದಾರೆ.
ಇದು ಕಾರ್ತಿಕ್‌ಗೆ ರಿಲ್ಯಾಕ್ಸೆಷನ್ ನೀಡಿದೆಯಂತೆ. ಹೆಚ್ಚು ತಲೆ ಬಿಸಿಯಿಲ್ಲದ ಹೇರ್‌ಸ್ಟೈಲ್, ಸಿಂಪಲ್ ಜಾಗರ್ಸ್ ಹಾಗೂ ಟೀ ಶರ್ಟ್ ಗಳು ಹಾಲಿಡೇಯಲ್ಲಿ ನಿಜಕ್ಕೂ ಕಂಪರ್ಟಬಲ್ ಹಾಗೂ ಕೂಲ್ ಆಗಿರಿಸುತ್ತವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅವರು ಹೇಳಿಕೊಂಡಿದ್ದಾರೆ.
ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್
“ಆಯಾ ರಾಷ್ಟ್ರಕ್ಕೆ ತಕ್ಕಂತೆ ಸೀಸನ್‌ಗಳು ಬದಲಾಗುತ್ತವೆ. ಇಲ್ಲಿಗೂ ಅಲ್ಲಿಗೂ ಸೀಸನ್‌ವೇರ್‌ಗಳಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಹಾಗಾಗಿ ಧರಿಸುವ ಕಂಫರ್ಟಬಲ್ ಉಡುಪುಗಳು ಓಡಾಡಲು ಅನುವು ಮಾಡಿಕೊಡುತ್ತವೆ. ಕೆಲವೊಮ್ಮೆ ಸೀಸನ್‌ಗೆ ತಕ್ಕಂತೆ ಫ್ಯಾಷನ್ ಬದಲಿಸಲು ಸಾಧ್ಯವಾಗುವುದಿಲ್ಲ. ಕೇವಲ ಲೆಯರ್ ಲುಕ್ ನೀಡಬಹುದು. ಅದರಲ್ಲೂ ವಿದೇಶಕ್ಕೆ ಹೆಚ್ಚು ಲಗೇಜ್ ಕ್ಯಾರಿ ಮಾಡಲು ಆಗುವುದೂ ಇಲ್ಲ. ಅಂತಹ ಸಮಯದಲ್ಲಿ ಸಾಕಷ್ಟು ಬಾರಿ ಮಿಕ್ಸ್ ಮ್ಯಾಚ್ ಮಾಡಬೇಕಾಗುತ್ತದೆ. ಪುರುಷರ ವಿಷಯದಲ್ಲಿ ಇದು ತೀರಾ ಕಾಮನ್. ಸ್ತ್ರೀಯರಂತೆ ಉಡುಪುಗಳನ್ನು ಕ್ಯಾರಿ ಮಾಡುವ ವ್ಯವಧಾನ ಹುಡುಗರಿಗೆ ಕೂಡ ಇರುವುದಿಲ್ಲ. ಅಂತಹ ಸಮಯದಲ್ಲಿ ಹುಡುಗರು ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಮೊರೆ ಹೋಗುತ್ತಾರೆ. ಇದು ಒಳ್ಳೆಯ ಫಿಸಿಕ್ ಇರುವ ಯುವಕರಿಗೆ ಸೂಟ್ ಆಗುತ್ತದೆ “ ಎನ್ನುತ್ತಾರೆ ಬಾಲಿವುಡ್‌ನ ಸ್ಟೈಲಿಸ್ಟ್ ರೋಮಿ.
ಫುಲ್ ಓವರ್
ಕಾರ್ತಿಕ್ ಆರ್ಯನ್ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಫುಲ್ ಸ್ಲೀವ್ ಹೂಡಿ ಪುಲ್ ಓವರ್ ಮಸ್ಟ್ ಲಿಸ್ಟ್‌ನಲ್ಲಿದೆ. ಫಂಕಿ ಲುಕ್ ನೀಡುವ ಟೊರ್ನ್ ಜೀನ್ಸ್, ಸನ್‌ಗ್ಲಾಸ್ ಜತೆಯಾಗಿವೆ. ಧರಿಸಿರುವ ಸ್ಪೋರ್ಟ್ಸ್ ಶೂಗಳು ಹೆಚ್ಚು ತಿರುಗಾಡಲು ಅನುವು ಮಾಡಿಕೊಡುತ್ತವೆ. ಫೋಟೋಗಳಲ್ಲಿ ಇವರ ಲುಕ್ ಕಂಪ್ಲೀಟ್ ಸ್ಟೈಲಿಶ್ ಆಗಿವೆ ಎಂದು ಫ್ಯಾಷನ್ ವಿಮರ್ಶಕಿ ಶೈನಿ ಬಣ್ಣಿಸಿದ್ದಾರೆ.
ಮಾಸ್ ಲುಕ್
ಕಾರ್ತಿಕ್ ಏರ್‌ಪೋರ್ಟ್ ಲುಕ್ ಅಂತೂ ಎಷ್ಟೂ ಕೂಲ್ ಆಗಿದೆ ಎಂದರೇ ಫಂಕಿ ಸನ್‌ಗ್ಲಾಸ್ ಜೊತೆಗೆ ಲೂಸಾದ ಫುಲ್ ಟೀ ಶರ್ಟ್ ಜೊತೆಗೆ ಜಾಗರ್ಸ್ ಪ್ಯಾಂಟ್, ಶೂಗಳು ಕಂಫರ್ಟಬಲ್ ಫೀಲ್ ನೀಡುವಂತಿದೆ. ಸ್ನೇಹಿತರ ಜತೆ ಏರ್‌ಪೋರ್ಟ್ ನಲ್ಲಿ ಕ್ಲಿಕ್ಕಿಸಿರುವ ಫೋಟೋ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಎಲ್ಲರೂ ಜೊತೆಜೊತೆಯಲ್ಲಿ ಏರ್‌ಪೋರ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಮೆಚ್ಚುಗೆಗಳಿಸಿದೆ.
ಇದನ್ನೂ ಓದಿ: golden stare ganesh tv show