Site icon Vistara News

Turmeric Stains: ಬಟ್ಟೆಯ ಮೇಲಿನ ಅರಶಿನ ಕಲೆ ಹೋಗಲಾಡಿಸಲು ಇಲ್ಲಿದೆ ಸರಳ ಉಪಾಯ

Turmeric Stains

ಬಟ್ಟೆಯ ಮೇಲೆ ಕೆಲವೊಂದು ಕಲೆಗಳು (Stains on Clothes) ಎಷ್ಟು ಒಗೆದರೂ ಹೋಗುವುದಿಲ್ಲ. ಒಂದೋ ಬಟ್ಟೆ ಹಾಳು ಮಾಡಿ ಬಿಡುತ್ತದೆ ಇಲ್ಲವಾದರೆ ಕಲೆಯನ್ನು ಶಾಶ್ವತವಾಗಿರಿಸುತ್ತದೆ. ಮುಖ್ಯವಾಗಿ ಬಿಳಿ ಬಟ್ಟೆ (white clothes) ಮೇಲೆ ಅರಶಿನದ ಕಲೆಗಳು (Turmeric Stains). ಇದು ಸಾಕಷ್ಟು ತೊಂದರೆಯನ್ನು ಕೊಡುವಂತದ್ದು ಎಂದೇ ಹೇಳಬಹುದು. ಅರಿಶಿನ ಕಲೆಗಳು ಬಿಳಿ ಮತ್ತು ಬಣ್ಣದ ಬಟ್ಟೆಗಳ ಮೇಲೆ ಅಸಹ್ಯವಾದ ಗುರುತುಗಳನ್ನು ಬಿಡುತ್ತವೆ. ಇದು ಸೋಪ್ ಅಥವಾ ಡಿಟರ್ಜೆಂಟ್ ಹಾಕಿ ಒಗೆದಾಗ ಈ ಕಲೆಗಳು ಮತ್ತಷ್ಟು ಸ್ಪಷ್ಟವಾಗುತ್ತದೆ.

ಕಠಿಣ ರಾಸಾಯನಿಕಗಳ ಬಳಕೆ ಬಟ್ಟೆಯ ಜೀವ ತೆಗೆಯುತ್ತದೆ. ಬಟ್ಟೆಯಿಂದ ಅರಿಶಿನದ ಕಲೆಗಳನ್ನು ತೆಗೆದುಹಾಕಲು ಹಲವು ಮಾರ್ಗಗಳಿವೆ.

Turmeric Stains


ನಿಂಬೆ ರಸ

ನಿಂಬೆ ರಸವು ನೈಸರ್ಗಿಕ ಆಮ್ಲಗಳನ್ನು ಹೊಂದಿದ್ದು ಅದು ಅರಿಶಿನ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಕಲೆ ತೆಗೆಯಲು ಇದು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.

ತಾಜಾ ನಿಂಬೆ ರಸವನ್ನು ನೇರವಾಗಿ ಅರಿಶಿನ ಕಲೆಯ ಮೇಲೆ ಹಾಕಿ ನಿಧಾನವಾಗಿ ಕೈ ಬೆರಳು ಅಥವಾ ಮೃದುವಾದ ಬ್ರಷ್ ನಿಂದ ಉಜ್ಜಿ. ಸುಮಾರು 10-15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಈಗ ಕಲೆ ಹೋಗಿರುತ್ತದೆ. ಒಂದುವೇಳೆ ಅಲ್ಪಸ್ವಲ್ಪ ಉಳಿದಿದ್ದರೆ ಮತ್ತೆ ಹೀಗೆ ಪುನರಾವರ್ತಿಸಿ.

Turmeric Stains


ಬಿಳಿ ವಿನೆಗರ್

ಬಿಳಿ ವಿನೆಗರ್ ಮತ್ತೊಂದು ನೈಸರ್ಗಿಕ ಸ್ಟೇನ್ ರಿಮೂವರ್ ಆಗಿದ್ದು ವಿಶೇಷವಾಗಿ ಬಿಳಿ ಬಟ್ಟೆಗಳ ಮೇಲಿನ ಅರಿಶಿನ ಕಲೆಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಬಟ್ಟೆಯ ಕಲೆ ಇದ್ದ ಜಾಗವನ್ನು ಬಿಳಿ ವಿನೆಗರ್‌ನಲ್ಲಿ 15- 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ನಿಧಾನವಾಗಿ ಉಜ್ಜಿ ಸಂಪೂರ್ಣ ಬಟ್ಟೆಯನ್ನು ತಣ್ಣೀರಿನಿಂದ ತೊಳೆಯಿರಿ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ಬಣ್ಣದ ಬಟ್ಟೆಗಳ ಮೇಲೆ ವಿನೆಗರ್ ಬಳಸಬೇಡಿ.

Turmeric Stains


ಗ್ಲಿಸರಿನ್

ಗ್ಲಿಸರಿನ್ ಬಟ್ಟೆಯ ಮೇಲಿನ ಅರಿಶಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ತಣ್ಣನೆಯ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಕಲೆ ಇದ್ದ ಜಾಗಕ್ಕೆ ಗ್ಲಿಸರಿನ್ ಅನ್ನು ನೇರವಾಗಿ ಹಾಕಿ ಉಜ್ಜಿ. ಬಳಿಕ ಕನಿಷ್ಠ ಒಂದು ಗಂಟೆ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆಯಿರಿ.

Turmeric Stains


ಅಡುಗೆ ಸೋಡಾ

ಅಡುಗೆ ಸೋಡಾವು ಬಟ್ಟೆಗೆ ಹಾನಿಯಾಗದಂತೆ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಡುಗೆ ಸೋಡಾವನ್ನು ಸ್ವಲ್ಪ ಪ್ರಮಾಣದ ನೀರಿನಲ್ಲಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಬಳಿಕ ಅರಿಶಿನ ಕಲೆಯ ಮೇಲೆ ಪೇಸ್ಟ್ ಅನ್ನು ಹರಡಿ. ಬಳಿಕ ಒಣಗಲು ಬಿಡಿ. ಒಣಗಿದ ನಂತರ, ಬೇಕಿಂಗ್ ಸೋಡಾವನ್ನು ಬ್ರಷ್ ಮಾಡಿ ಮತ್ತು ತಣ್ಣೀರಿನಿಂದ ಆ ಪ್ರದೇಶವನ್ನು ತೊಳೆಯಿರಿ.

Turmeric Stains


ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್ ಬಿಳಿ ಅಥವಾ ಬಣ್ಣದ ಬಟ್ಟೆಗಳಿಂದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಇದನ್ನು ಹಾಕುವ ಮೊದಲು ಫ್ಯಾಬ್ರಿಕ್ ಅನ್ನು ಪರೀಕ್ಷಿಸಿ. ಹೈಡ್ರೋಜನ್ ಪೆರಾಕ್ಸೈಡ್ ಬಟ್ಟೆಯ ಬಣ್ಣ ಬದಲಾಯಿಸಬಹುದು.

ಇದನ್ನೂ ಓದಿ: Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಕಲೆ ಇರುವ ಜಗದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹಾಕಿ ಉಜ್ಜಿ. ಸುಮಾರು 30 ನಿಮಿಷಗಳ ಕಾಲ ಬಿಟ್ಟು ಬಟ್ಟೆಯನ್ನು ತಣ್ಣೀರಿನಿಂದ ತೊಳೆಯಿರಿ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಿಳಿ ಅಥವಾ ಬಣ್ಣ-ಸುರಕ್ಷಿತ ಬಟ್ಟೆಗಳಲ್ಲಿ ಮಾತ್ರ ಬಳಸಬಹುದು.

Turmeric Stains


ಉಪ್ಪು

ಬಟ್ಟೆಯಿಂದ ಅರಿಶಿನ ಕಲೆಗಳನ್ನು ಹೀರಿಕೊಳ್ಳಲು ಉಪ್ಪು ಕೂಡ ಸಹಾಯ ಮಾಡುತ್ತದೆ. ಬಟ್ಟೆಯ ಅರಿಶಿನ ಕಲೆಯ ಮೇಲೆ ಉಪ್ಪನ್ನು ಹಾಕಿ ನಿಧಾನವಾಗಿ ಉಜ್ಜಿ. 15-20 ನಿಮಿಷಗಳ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ಪ್ರದೇಶವನ್ನು ತೊಳೆಯಿರಿ. ಈ ವಿಧಾನವು ತಾಜಾ ಮತ್ತು ಹಳೆಯ ಕಲೆಗಳಿಗೆ ಉಪಯುಕ್ತವಾಗಿದೆ.

Exit mobile version