ಬೆಂಗಳೂರು: ಕಿಚನ್‌ನಲ್ಲಿ ಪ್ರತಿಯೊಬ್ಬರ ಸಮಸ್ಯೆ ಎಂದರೆ, ಸಿಂಕ್ ಬ್ಲಾಕ್ (Unblock A Kitchen Sink) ಆಗುವುದು. ಚೆನ್ನಾಗಿ ಕೆಲಸ ಮಾಡುತ್ತಿದ್ದ ಸಿಂಕ್ ಇದ್ದಕ್ಕಿದ್ದಂತೆ ಬ್ಲಾಕ್ ಆಗಿ ನೀರು ಹೋಗಲಾರದೆ, ಮನೆ ಸಮಸ್ಯೆಗಳ ಮಹಾಪೂರವೇ ಆಗಿಬಿಡುತ್ತದೆ. ಮನೆಯ ಬಹುಮುಖ್ಯವಾದ ಭಾಗ ಕಿಚನ್‌ನಲ್ಲಿ ಏನು ಸಮಸ್ಯೆಗಳಾದರೂ ಅದು ದೊಡ್ಡ ಸಮಸ್ಯೆಯೇ. ಮನೆಯ ಎಲ್ಲಾ ಕೆಲಸಗಳು ಅಡುಗೆ ಮನೆಯ ಕೆಲಸಗಳ ಆಧಾರದಲ್ಲಿ ನಿರ್ಧರಿತವಾಗುವುದರಿಂದ ಕಿಚನ್‌ನಲ್ಲಾದ ಸಣ್ಣ ಬ್ಲಾಕ್ ಕೂಡಾ ಮನೆಗೆ ದೊಡ್ಡ ತೊಂದರೆಯಾಗಿಯೇ ಕಾಣುತ್ತದೆ. ಹಾಗಾದರೆ, ಕಿಚನ್‌ನ ಸಿಂಕ್ ಬ್ಲಾಕ್ ಆಗದಂತೆ ತಡೆಯುವುದು ಹೇಗೆ? ಬ್ಲಾಕ್ ಆದರೂ ಒಡನೆಯೇ ಸರಿಪಡಿಸುವುದು ಹೇಗೆ? ಪ್ಲಂಬರ್ ಅಗತ್ಯಬಿದ್ದಾಗ ಕೈಕೊಟ್ಟರೆ, ಬೇಕೆಂದಾಗ ಸಿಗದೇ ಇದ್ದರೆ, ಬ್ಲಾಕ್ ಆದ ಸಿಂಕನ್ನು ಕಾರ್ಯ ನಿರ್ವಹಿಸುವಂತೆ ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ಕುದಿಯುವ ನೀರು
ಕೆಲವೊಮ್ಮೆ ಬಹಳ ಸಣ್ಣ ಸಣ್ಣ ಉಪಾಯಗಳು ದೊಡ್ಡ ಬದಲಾವಣೆಯನ್ನೇ ಮಾಡುತ್ತದೆ. ದೊಡ್ಡ ಸಮಸ್ಯೆಯೂ ಕೂಡ ಕೆಲವೊಮ್ಮೆ ಸಣ್ಣ ಉಪಾಯದಿಂದ ಬಗೆಹರಿಯುತ್ತದೆ. ನಾವು ಸಮಸ್ಯೆಗಳು ಎದುರಾದಾಗ ಅದನ್ನು ಹೇಗೆ ಬಗೆಹರಿಸಬಹುದು ಎಂದು ಬುದ್ಧಿವಂತಿಕೆಯಿಂದ ಯೋಚಿಸುವುದು ಬಹಳ ಮುಖ್ಯ ಅಷ್ಟೇ. ಇಲ್ಲಿ ಸಿಂಕ್ ಬ್ಲಾಕ್ ಆದಾಗ ನೀವು ಮೊದಲು ಮಾಡಬಹುದಾದ ಕೆಲಸ ಎಂದರೆ ಸ್ವಲ್ಪ ಕೊತ ಕೊತ ಕುದಿಯುವತೆ ನೀರನ್ನು ಬಿಸಿ ಮಾಡಿ, ಆ ನೀರನ್ನು ಸಿಂಕ್‌ಗೆ ಸುರಿಯಿರಿ. ಹೀರು ಹರಿದು ಹೋಗುವ ಔಟ್‌ಲೆಟ್‌ನ ಮೇಲೆ ಹೀಗೆ ಸುರಿದಾಗ ಪೈಪ್‌ನ ಬದಿಗಳಲ್ಲಿ ಅಂಟಿರುವ ಜಿಡ್ಡು, ಕೊಳೆ, ಸಿಕ್ಕಿಹಾಕಿಕೊಂಡಿರುವ ನಾರಿನಂಥ ಪದಾರ್ಥಗಳು ಬಿಸಿನೀರಿಗೆ ಕರಗಿಯೋ, ರಭಸಕ್ಕೆ ಕೊಚ್ಚಿಯೋ ಹೋಗುವುದರಿಂದ ಹಾದಿ ಸ್ವಚ್ಛವಾಗಿ ನೀರು ಹರಿಯತೊಡಗುತ್ತದೆ.
ಇದನ್ನೂ ಓದಿ: Malika Arora: ನೀನು ವರ್ಜಿನ್ನಾ? ಮಗನಿಗೆ ಬೋಲ್ಡ್ ಆಗಿ ಪ್ರಶ್ನಿಸಿದ ನಟಿ ಮಲೈಕಾ!
ಬೇಕಿಂಗ್ ಸೋಡಾ ಹಾಗೂ ವಿನೆಗರ್:
ಅಡುಗೆ ಮನೆಯಲ್ಲಿ ಬೇಕಿಂಗ್ ಸೋಡಾ ಹಾಘೂ ವಿನೆಗರ್ ಇದ್ದರೆ, ನಿಮ್ಮ ಈ ಸಮಸ್ಯೆ ಪರಿಹಾರವಾದಂತೆಯೇ.ಒಂದು ಕಪ್ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಔಟ್‌ಲೆಟ್‌ನ ಮೇಲೆ ಸುರಿಯಿರಿ. ನೀರಿನ ಜೊತೆ ವಿನೆಗರ್ ಬೆರೆಸಿಯೂ ಕೂಡಲೇ ಮತ್ತೆ ಇದರ ಮೇಲೆ ಸುರಿಯಿರಿ. ಸೋಡಾ ಸುರಿದ ಕೂಡಲೇ ವಿನೆಗರ್ ಅನ್ನೂ ಸುರಿಯಬೇಕು. ಹೀಗೆ ಸುರಿದಾಗ, ಪೈಪ್‌ನ ಒಳಗಿನಿಂದ ಹಿಸ್ ಶಬ್ದವೊಂದು ಕೇಳಿಸಬಹುದು. ೧೫ ನಿಮಿಷ ಹಾಗೆಯೇ ಬಿಡಿ. ನಂತರ ಬಿಸಿನೀರು ಸುರಿಯಿರಿ. ಇವು ಒಳಗಿನ ಗ್ರೀಸ್, ಅಂಟಿಕೊಂಡ ಕೊಳಕನ್ನು ಹೊಡೆದೋಡಿಸುತ್ತವೆ. ಇದರಿಂದ ಹಾದಿ ಸ್ವಚ್ಛವಾಗಿ ನೀರು ಸರಾಗವಾಗಿ ಹೋಗಲು ಆರಂಭವಾಗುತ್ತದೆ.
ಬೆಂಡಾದ ವೈರ್
ಮನೆಯಲ್ಲಿ ಯಾಕೂ ಬೇಡದ ವಸ್ತುವಾಗಿ ಬಿದ್ದಿರುವ ವೂರುಗಳು, ಕಡ್ಡಿಗಳು ನಳಿಗೆಗಳು ಬಳಕೆಗೆ ಬರುವುದು ಈಗಲೇ. ಬೆಂಡಾದ ಹಳೆಯ ಸಪೂರ ಹ್ಯಾಂಗರ್ ಅಥವಾ ವೈರಿದ್ದರೆ ಅದನ್ನು ಪೈಪಿನ ಒಳಗೆ ತೂರಿಸಿ. ನೀರು ಸುರಿಯಿರಿ. ವೈರನ್ನ ಒಳಗೆ ಅಲ್ಲಾಡಿಸಿ. ಸಿಕಿಹಾಕಿಕೊಂಡ ವಸ್ತುಗಳನ್ನು ದೂಡಿದಂತಾಗಿ ಅವು ಹೊರಹೋಗಿ ದಾರಿ ಆರಾಮವಾಗುತ್ತದೆ.
ಕಾಸ್ಟಿಕ್ ಸೋಡಾ(ಸೋಡಿಯಂ ಹೈಡ್ರಾಕ್ಸೈಡ್)
ತುಂಬ ಕೆಟ್ಟ ಪರಿಸ್ಥಿತಿಗಳಲ್ಲಿ, ಇನ್ನು ಬೇರೆ ಉಪಾಯವೇ ಇಲ್ಲ ಎಂಬಂಥ ಸಂದರ್ಭಗಳಲ್ಲಿ ಇದನ್ನು ಬಳಸಬಹುದು. ಇದು ಅತ್ಯಂತ ಶಕ್ತಿಯುತವಾದ ರಾಸಾಯನಿಕವಾಗಿದ್ದು, ಇದನ್ನು ಔಟ್‌ಲೆಟ್ ಪೈಪಿಗೆ ಸುರಿಯುವ ಮೂಲಕ ಪೈಪಿನೊಳಗೆ ಸಿಕ್ಕಿಹಾಕಿಕೊಂಡ ಕೊಳೆ, ಜಿಡ್ಡನ್ನು ಸ್ವಚ್ಛಗೊಳಿಸಬಹುದು. ಆದರೆ, ಯಾವಾಗಲೂ ಇದನ್ನು ಬಳಸುವುದು ಒಳ್ಳೆಯದಲ್ಲ. ಜೊತೆಗೆ ಅತ್ಯಂತ ಅಗ್ತಯದ ಸಂದರ್ಭಗಳಲ್ಲಷ್ಟೇ ಬಳಸಿ. ಮಕ್ಕಳಿಂದ ದೂರವಿಡಿ. ಅಷ್ಟೇ ಅಲ್ಲ, ಬಳಸುವಾಗಲೂ ಬಹಳ ಎಚ್ಚರಿಕೆಯಿಂದ ಬಳಸಿ.