Site icon Vistara News

Vastu Tips: ನಕಾರಾತ್ಮಕ ಶಕ್ತಿ ಹೊಡೆದೋಡಿಸಲು ಈ ವಾಸ್ತು ಟಿಪ್ಸ್‌ ಪಾಲಿಸಿ…

bath room

bath room

ಬೆಂಗಳೂರು: ಬಾತ್‌ರೂಮ್‌ (Bathroom) ನಮ್ಮ ಮನೆಯ ಬಹುಮುಖ್ಯ ಸ್ಥಳ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಹೊಸದನ್ನು ನಿರ್ಮಿಸುವ ಮೊದಲು ಅಥವಾ ಹಳೆಯದನ್ನು ನವೀಕರಿಸುವ ಮೊದಲು ಬಾತ್‌ರೂಮ್‌ನ ವಾಸ್ತು ಬಗ್ಗೆ ಗಮನ ಹರಿಸುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಬಾತ್‌ರೂಮ್‌ ಎಂದು ಮೂಗು ಮುರಿಯುವ ಮುನ್ನ ಈ ವಾಸ್ತು ಟಿಪ್ಸ್‌ (Vastu Tips)ಗಳನ್ನು ಪಾಲಿಸಿ.

ದಿಕ್ಕು

ಮನೆಯ ಇತರ ಜಾಗಗಳಂತೆ ಬಾತ್‌ರೂಮ್‌ ವಿಚಾರದಲ್ಲಿಯೂ ದಿಕ್ಕು ಪ್ರಧಾನ ಪಾತ್ರ ವಹಿಸುತ್ತದೆ. ವಾಸ್ತು ಪ್ರಕಾರ ಶೌಚಾಲಯವು ಮನೆಯ ವಾಯುವ್ಯ, ನೈಋತ್ಯ ದಿಕ್ಕಿನಲ್ಲಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ, ಬಾತ್‌ರೂಮ್‌ ಅನ್ನು ಮನೆಯ ಮಧ್ಯದಲ್ಲಿ ಇರಿಸಲಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಇದು ಹೆಚ್ಚು ನಕಾರಾತ್ಮಕ ಶಕ್ತಿಯನ್ನು ಹೊತ್ತು ತರುತ್ತದೆ. ಜತೆಗೆ ಬಳಕೆಯಲ್ಲಿಲ್ಲದಿದ್ದಾಗ ಬಾತ್‌ರೂಮ್‌ನ ಬಾಗಿಲು ಮುಚ್ಚಬೇಕು. ವಾಸ್ತು ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಬಾತ್‌ರೂಮ್‌ ಇಲ್ಲದಂತೆ ನೋಡಿಕೊಳ್ಳಿ. ಒಂದು ವೇಳೆ ಅದೇ ದಿಕ್ಕಿನಲ್ಲಿ ಇರುವುದು ಅನಿವಾರ್ಯ ಎಂದಾದರೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲು ಬಾತ್‌ರೂಮ್‌ನಲ್ಲಿ ಸ್ವಲ್ಪ ಉಪ್ಪನ್ನು ಇರಿಸಿ ಮತ್ತು ಪ್ರತಿ ವಾರ ಅದನ್ನು ಬದಲಾಯಿಸಿ.

ಮರದ ಬಾಗಿಲು

ವಾಸ್ತು ನಿಯಮಗಳ ಪ್ರಕಾರ ಶೌಚಾಲಯವು ಯಾವಾಗಲೂ ಮರದ ಬಾಗಿಲುಗಳನ್ನು ಹೊಂದಿರಬೇಕು. ಲೋಹದ ಬಾಗಿಲುಗಳು ಸಕಾರಾತ್ಮಕ ಸ್ಥಳದಲ್ಲಿ ನಕಾರಾತ್ಮಕತೆಯನ್ನು ಬೆಳೆಸುತ್ತವೆ. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರು ಸಾಧ್ಯತೆ ಇದೆ. ಹೀಗಾಗಿ ಇದರತ್ತ ಗಮನ ಹರಿಸಿ.

ಇಲ್ಲೆಲ್ಲ ಇರೋದೇ ಬೇಡ

ವಾಸ್ತು ನಿಯಮಗಳ ಪ್ರಕಾರ ಶೌಚಾಲಯದ ಗೋಡೆ ದೇವರ ಕೋಣೆ, ಅಡುಗೆಮನೆ ಅಥವಾ ಮಲಗುವ ಕೋಣೆಯೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ಇದ್ದರೂ ಮಂಚ ಅಥವಾ ಹಾಸಿಗೆ ಬಾತ್‌ರೂಮ್‌ನ ಗೋಡೆಗೆ ಒರಗಿಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇನ್ನು ವಾಶ್ ಬೇಸಿನ್, ಶವರ್‌ ಬಾತ್‌ರೂಮ್‌ನ ಪೂರ್ವ, ಈಶಾನ್ಯ ಅಥವಾ ಉತ್ತರ ಮೂಲೆಗಳಲ್ಲಿ ಇರಿಸಿ. ಬಾತ್ ಟಬ್ ಅನ್ನು ಸ್ಥಾಪಿಸಲು ಯೋಚಿಸುತ್ತಿದ್ದರೆ ವೃತ್ತಾಕಾರದ ಅಂಚುಗಳನ್ನು ಹೊಂದಿರುವುದನ್ನು ಆರಿಸಿ. ಇದನ್ನು ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿಕೊಳ್ಳಿ. ಕೊಳಚೆ ನೀರು ಹರಿದು ಹೋಗುವ ಪೈಪ್ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರುವುದು ಉತ್ತಮ.

ಎಲೆಕ್ಟ್ರಿಕ್‌ ಉಪಕರಣಗಳು

ಆಗ್ನೇಯ ದಿಕ್ಕಿನಲ್ಲಿ ಹೇರ್ ಡ್ರೈಯರ್‌ ಮತ್ತು ಗೀಸರ್‌ ಅಳವಡಿಸಿ. ವಾಷಿಂಗ್ ಮೆಷಿನ್ ಅನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಬಾತ್‌ರೂಮ್‌ ಒಳಾಂಗಣಕ್ಕೆ ಬೀಜ್, ಕೆನೆ ಮತ್ತು ಕಂದು ಬಣ್ಣಗಳನ್ನು ನೀಡಿ. ಜತೆಗೆ ಮಣ್ಣಿನ ಬಣ್ಣವೂ ಉತ್ತಮ. ಗಾಢ ಬಣ್ಣಗಳಿಂದ, ವಿಶೇಷವಾಗಿ ಕಪ್ಪು ಬಣ್ಣಗಳಿಂದ ದೂರವಿರುವುದು ಉತ್ತಮ. ಇವು ನಕಾರಾತ್ಮಕ ಶಕ್ತಿಯನ್ನು ಒಳನುಗ್ಗಲು ಅನುಮತಿಸುವುದಲ್ಲದೆ ಸ್ಥಳವನ್ನು ಚಿಕ್ಕದಾಗಿ ಮತ್ತು ಹೆಚ್ಚು ಇಕ್ಕಟ್ಟಾಗಿ ಕಾಣುವಂತೆ ಮಾಡುತ್ತದೆ.

ಕನ್ನಡಿ ಇಲ್ಲಿರಲಿ

ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಕನ್ನಡಿಯನ್ನು ಇರಿಸುವ ಸ್ಥಾನವೂ ಮುಖ್ಯ. ಇದನ್ನು ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಇಡುವುದು ಉತ್ತಮ. ಚೌಕ ಮತ್ತು ಆಯತಾಕಾರದ ಕನ್ನಡಿಗಳು ಅತ್ಯುತ್ತಮ ಆಯ್ಕೆ. ಜತೆಗೆ ಇವುಗಳನ್ನು ನೆಲದಿಂದ ಕನಿಷ್ಠ 4ರಿಂದ 5 ಅಡಿ ಎತ್ತರದಲ್ಲಿ ಇರಿಸಬೇಕು.

ಅಲಂಕಾರ

ಧಾರ್ಮಿಕತೆಗೆ ಸಂಬಂಧಿಸಿದ ಯಾವುದೇ ಚಿಹ್ನೆಗಳು ಬಾತ್‌ರೂಮ್‌ನಲ್ಲಿ ಇರಿಸುವುದು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ. ಅಲಂಕಾರಕ್ಕಾಗಿ ಕೆಲವು ಕಡಲ ಚಿಪ್ಪುಗಳನ್ನು ಇರಿಸಬಹುದು. ಹೆಚ್ಚು ಮೇಣದ ಬತ್ತಿಗಳನ್ನು ಇರಿಸಬೇಡಿ. ನೆಲಕ್ಕೆ ಮಾರ್ಬಲ್‌ ಹಾಸಬೇಡಿ. ಲೈಟ್‌ ಬಣ್ಣದ ಟೈಲ್ಸ್‌ ಉಪಯೋಗಿಸಬಹುದು. ಚಿಕ್ಕ ಗಿಡಗಳನ್ನು ಬಾತ್‌ರೂಮ್‌ ಒಳಗೆ ಇರಿಸಬಹುದು. ಇದಕ್ಕಾಗಿ ಮನಿ ಪ್ಲಾಂಟ್, ಅಲೋವೆರಾ, ಸ್ನೇಕ್‌ ಪ್ಲಾಂಟ್‌ ಬಳಸಬಹುದು.

ಈ ಅಂಶಗಳನ್ನು ಗಮನಿಸಿ

ಇದನ್ನೂ ಓದಿ: Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್‌ ಎನರ್ಜಿ ತುಂಬಲು ಆಫೀಸ್‌ನಲ್ಲಿ ಈ ಗಿಡಗಳನ್ನು ಇಡಿ

Exit mobile version