Site icon Vistara News

Vastu Tips: ಸಮೃದ್ಧಿಯ ಸಂಕೇತವಾದ ಮನಿ ಪ್ಲಾಂಟ್‌ ಹೀಗೆ ಬೆಳೆಸಿ

money plant main

money plant main

ಬೆಂಗಳೂರು: ಸಸ್ಯಗಳು ಮನೆಗೊಂದು ಕಳೆಯ ಜತೆಗೆ ಪಾಸಿಟಿವ್‌ ಎನರ್ಜಿ (Positive energy) ತಂದು ಕೊಡುತ್ತವೆ. ಗಾಳಿಯ ಶುದ್ಧೀಕರಣ, ಮನೆಯ ಅಂದ ಹೆಚ್ಚಿಸುವುದು ಮಾತ್ರವಲ್ಲ ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಸಸ್ಯಗಳ ಪಾತ್ರ ಮುಖ್ಯವಾದುದು. ಅದರಲ್ಲೂ ಮನಿ ಪ್ಲಾಂಟ್‌ (Money plant) ಈ ಎಲ್ಲ ಗುಣಗಳ ಜತೆಗೆ ಮನೆಯ ವಾಸ್ತು ದೃಷ್ಟಿಯಿಂದಲೂ ಪ್ರಭಾವ ಬೀರುತ್ತದೆ. ವಾಸ್ತು ತಜ್ಞರ ಪ್ರಕಾರ ಮನಿಪ್ಲಾಂಟ್‌ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಮಾನಸಿಕ ನೆಮ್ಮದಿ ಹೊಂದಲು ಕಾರಣವಾಗುತ್ತದೆ. ಮನಿಪ್ಲಾಂಟ್‌ನ ಗರಿಷ್ಠ ಪ್ರಯೋಜನ ಪಡೆಯಲು ಈ ಟಿಪ್ಸ್‌ ಫಾಲೋ ಮಾಡಿ (Vastu Tips).

ಇಡಬೇಕಾದ ಸ್ಥಳ

‘ಮನಿ ಪ್ಲಾಂಟ್’ ಎಂಬ ಹೆಸರು ಈ ಸಸ್ಯವು ಆಕರ್ಷಿಸಬಹುದಾದ ಸಂಪತ್ತಿನಿಂದ ಹುಟ್ಟಿಕೊಂಡಿದೆ. ಇದು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ನಿಮ್ಮ ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿ ಸೂಕ್ತ ಸ್ಥಳಗಳಲ್ಲಿ ಮನಿಪ್ಲಾಂಟ್‌ ಇಡುವುದು ಮುಖ್ಯ.

ಆಗ್ನೇಯ ದಿಕ್ಕು: ವಾಸ್ತು ಪ್ರಕಾರ ಮನಿ ಪ್ಲಾಂಟ್‌ ಇಡಬಹುದಾದ ಪರಿಪೂರ್ಣ ದಿಕ್ಕು ಆಗ್ನೇಯ. ಇದು ಶುಕ್ರ ಗ್ರಹದ ದಿಕ್ಕು. ಅಲ್ಲದೆ ಅಡೆತಡೆಗಳನ್ನು ನಿವಾರಿಸುವ ಗಣೇಶನು ಆಗ್ನೇಯ ದಿಕ್ಕಿನ ದೇವರು. ಹೀಗಾಗಿ ಇದು ಅಡೆತಡೆಗಳನ್ನು ತೊಡೆದು ಹಾಕುವ ಮತ್ತು ನಿಮ್ಮ ಆರ್ಥಿಕ ಯೋಗಕ್ಷೇಮವನ್ನು ಖಚಿತಪಡಿಸುವ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಗಣೇಶನ ಉಪಸ್ಥಿತಿ ಮತ್ತು ಶುಕ್ರ ಗ್ರಹ ಎರಡೂ ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುವ ಶುಭ ಚಿಹ್ನೆ.

ಉತ್ತರದ ಪ್ರವೇಶದ್ವಾರ: ನೀವು ಉತ್ತರದ ದಿಕ್ಕಿನಲ್ಲಿ ಪ್ರವೇಶದ್ವಾರ ಹೊಂದಿದ್ದರೆ ನಿಮ್ಮ ಮನಿ ಪ್ಲಾಂಟ್ ಅನ್ನು ಅಲ್ಲಿ ಇಡಿ. ಇದು ಮನೆಯ ಸದಸ್ಯರಿಗೆ ಅಪಾರ ವೃತ್ತಿ ಅವಕಾಶ ಮತ್ತು ಹೊಸ ಆದಾಯದ ಮೂಲಗಳನ್ನು ತರುತ್ತದೆ.

ಈಶಾನ್ಯ ದಿಕ್ಕು ತಪ್ಪಿಸಿ: ಗಮನಿಸಿ ಯಾವುದೇ ಕಾರಣಕ್ಕೂ ಮನಿ ಪ್ಲಾಂಟ್‌ ಅನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ. ಇದು ಹಣಕಾಸಿನ ಸಮಸ್ಯೆ ಸೇರಿದಂತೆ ಇತರ ತೊಂದರೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ ವೈವಾಹಿಕ ಸಮಸ್ಯೆಗಳೂ ಎದುರಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ನೆಲವನ್ನು ಸೋಕದಿರಲಿ

ಮನಿ ಪ್ಲಾಂಟ್‌ ಯಾವತ್ತೂ ಮೇಲ್ಮುಖವಾಗಿ ಬೆಳೆಯಬೇಕು. ಇದು ನೆಲದತ್ತ ಭಾಗದಂತೆ ನೋಡಿಕೊಳ್ಳುವುದು ಮುಖ್ಯ. ಮನಿ ಪ್ಲಾಂಟ್‌ ಅನ್ನು ಕೆಳ ಮುಖವಾಗಿ ಬೆಳೆಯಲು ಬಿಡುವುದು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮೇಲ್ಮುಖವಾಗಿ ಬೆಳೆಯುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ. ಕಾಂಡ ನೆಲವನ್ನು ಸ್ಪರ್ಶಿಸದಂತೆ ತಡೆಯಲು ಅದನ್ನು ನಿಯತಕಾಲಿಕವಾಗಿ ಕತ್ತರಿಸಬಹುದು.

ವಿಕಿರಣಗಳನ್ನು ಹೀರಿಕೊಳ್ಳುತ್ತದೆ

ನಾವು ಕಂಪ್ಯೂಟರ್‌, ಸೆಲ್ ಫೋನ್ ಮತ್ತು ವೈಫೈಗಳನ್ನು ವ್ಯಾಪಕವಾಗಿ ಬಳಸುತ್ತೇವೆ. ಇವು ಹೆಚ್ಚಿನ ಪ್ರಮಾಣದ ವಿಕಿರಣವನ್ನು ಹೊರಸೂಸುತ್ತವೆ. ಇವು ನಮ್ಮ ದೇಹ ಮತ್ತು ಮನಸ್ಸಿಗೆ ತುಂಬಾ ಹಾನಿಕಾರಕ. ಇದನ್ನು ಮನಿ ಪ್ಲಾಂಟ್‌ ತಡೆಯುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮನಿ ಪ್ಲಾಂಟ್ ವಿಕಿರಣ ಹೀರಿಕೊಂಡು ಗ್ಯಾಜೆಟ್‌ಗಳ ವಿಕಿರಣದಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಮನಿ ಪ್ಲಾಂಟ್ ಅನ್ನು ಟಿವಿ ಅಥವಾ ವೈಫೈ ರೂಟರ್ ಬಳಿ ಇರಿಸಿ. ಬೆಡ್‌ ರೂಮ್‌ನಲ್ಲಿ ಈ ಸಸ್ಯವನ್ನು ಇರಿಸುವುದು ಉತ್ತಮ ನಿದ್ದೆಗೆ ಸಹಾಯಕ ಮತ್ತು ಒತ್ತಡ ನಿವಾರಣೆಗೂ ಸಹಾಯ ಮಾಡುತ್ತದೆ. ಆದರೆ ತಲೆ ಮತ್ತು ಕಾಲ ಬಳಿ ಇರಿಸುವುದನ್ನು ತಪ್ಪಿಸಿ.

ಕೆಂಪು ಬಣ್ಣ ಅಪಾಯಕಾರಿ

ಉತ್ಕೃಷ್ಟ ಪ್ರೀತಿಯನ್ನು ಪ್ರತಿನಿಧಿಸುವ ಕೆಂಪು ಬಣ್ಣ ಅಪಾಯದ ಸಂಕೇತವೂ ಹೌದು. ಮನಿ ಪ್ಲಾಂಟ್ ವಿಚಾರದಲ್ಲೂ ಕೆಂಪು ಅಪಾಯಕಾರಿ. ಹೀಗಾಗಿ ಇದನ್ನು ಯಾವುದೇ ಕೆಂಪು ವಸ್ತು ಅಥವಾ ಕೆಂಪು ಮೇಲ್ಮೈ ಮೇಲೆ, ಬಳಿ ಇಡುವುದನ್ನು ತಪ್ಪಿಸಿ. ಇದು ದುರಾದೃಷ್ಟವನ್ನು ಸೆಳೆಯುವ ಪ್ರವೃತ್ತಿಯನ್ನು ಹೊಂದಿದೆ. ಇದು ನಿಮ್ಮ ಮನೆಯ ಒಟ್ಟಾರೆ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ನೀಲಿ ಬಣ್ಣಕ್ಕೆ ʼಗ್ರೀನ್‌ ಸಿಗ್ನಲ್‌ʼ

ನಿಮ್ಮ ಮನಿ ಪ್ಲಾಂಟ್ ಸುತ್ತ ಹಸುರು ಮತ್ತು ನೀಲಿ ಬಣ್ಣಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ಸಂಪತ್ತು ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸಬಹುದು. ಮನಿ ಪ್ಲಾಂಟ್‌ಗಳನ್ನು ನೀಲಿ ಅಥವಾ ಹಸುರು ಬಣ್ಣದ ಹೂದಾನಿ ಅಥವಾ ಬಾಟಲಿಗಳಲ್ಲಿ ಬೆಳೆಸಿ. ಕುಂಡದಲ್ಲಿ ಚಿತ್ರಕಲೆಯನ್ನು ಸಹ ಸೇರಿಸಬಹುದು.

ಉತ್ತಮ ಗಾಳಿ ಲಭಿಸಲಿ

ಮನಿ ಪ್ಲಾಂಟ್‌ಗಳಿಗೆ ಉತ್ತಮ ಬೆಳಕು, ಗಾಳಿ ಬೇಕು. ಆದರೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಅವು ಒಣಗುತ್ತವೆ. ನೀವು ಅವುಗಳನ್ನು ಹೊರಾಂಗಣದಲ್ಲಿ ಬೆಳೆಸುತ್ತಿದ್ದರೆ ಭಾಗಶಃ ನೆರಳು ಹೊಂದಿರುವ ಗಾಳಿಯ ಮೂಲೆಗಳನ್ನು ಆರಿಸಿ. ನೀವು ಅದನ್ನು ಸ್ನಾನಗೃಹದಲ್ಲಿ ಇರಿಸಲು ಯೋಚಿಸುತ್ತಿದ್ದರೆ ಆಗ್ನೇಯ ದಿಕ್ಕಿನಲ್ಲಿ ಕಿಟಕಿಯ ಬಳಿ ಇರಲಿ. ನಿಮ್ಮ ಮನಿ ಪ್ಲಾಂಟ್ ಅನ್ನು ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ಬೆಳೆಸುವುದು ಉತ್ತಮ ಎನ್ನುವುದು ವಾಸ್ತು ತಜ್ಞರ ಸಲಹೆ. ನಿಯಮಿತ ಆರೈಕೆಯೊಂದಿಗೆ ನೆರಳಿನಲ್ಲಿ ಅಥವಾ ಭಾಗಶಃ ಸೂರ್ಯನ ಬೆಳಕಿನಲ್ಲಿ ಇದನ್ನು ಬೆಳೆಸಿ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಸಸ್ಯವು ಆರೋಗ್ಯಕರವಾಗಿದ್ದರೆ ನಿಮ್ಮ ಅದೃಷ್ಟವು ಚೆನ್ನಾಗಿರುತ್ತದೆ.

ಹೃದಯಾಕಾರದ ಎಲೆ

ಮನಿ ಪ್ಲಾಂಟ್‌ನ ಹೃದಯಾಕಾರದ ಎಲೆಗಳು ಆರೋಗ್ಯ ಮತ್ತು ಸಂತಸವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ನೀವು ಹೃದಯಾಕಾರದ ಎಲೆ ಹೊಂದಿರುವ ಮನಿ ಪ್ಲಾಂಟ್‌ ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: Vastu Tips: ಹೊಸ ಮನೆ ನಿರ್ಮಿಸುವಾಗ ಈ ಅಂಶಗಳನ್ನು ಗಮನಿಸಿ

ಬೇರೆಯವರು ಕತ್ತರಿಸದಿರಲಿ

ಮನಿ ಪ್ಲಾಂಟ್ ವಾಸ್ತು ಹೇಳುವಂತೆ ನಿಮ್ಮ ಸಸ್ಯದ ಕಾಂಡಗಳನ್ನು ಕತ್ತರಿಸಲು ಬೇರೆ ಯಾರಿಗಾದರೂ ಅವಕಾಶ ನೀಡುವುದು ದುರಾದೃಷ್ಟವನ್ನು ತರುತ್ತದೆಯಂತೆ. ಸ್ನೇಹಿತರು, ಬಂಧುಗಳು ಅಥವಾ ನೆರೆಹೊರೆಯವರಿಗೆ ಎಲೆ, ಕಾಂಡ ಅಥವಾ ತುದಿಗಳನ್ನು ಕತ್ತರಿಸಲು ಅವಕಾಶ ನೀಡಬೇಡಿ.

ಹೀಗೆ ಆರೈಕೆ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version