ಬೆಂಗಳೂರು: ಮನೆ ನಿರ್ಮಿಸುವಾಗ ಅಥವಾ ಕೊಂಡುಕೊಳ್ಳುವಾಗ ಭಾರತೀಯರು ಮುಖ್ಯವಾಗಿ ವಾಸ್ತು ಶಾಸ್ತ್ರದ ಮೊರೆ ಹೋಗುತ್ತಾರೆ. ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ಪ್ರತಿಯೊಂದು ಅಂಶ ಹೀಗೆಯೇ ಇರಬೇಕು ಎನ್ನುವುದನ್ನು ಸೂಚಿಸುತ್ತದೆ. ವಾಸ್ತು ದೋಷದಿಂದ ಯಾವೆಲ್ಲ ತೊಂದರೆ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನೂ ವಿವರಿಸುತ್ತದೆ. ಇದು ಪ್ರಕೃತಿ, ಗ್ರಹಗಳು ಮತ್ತು ಇತರ ಶಕ್ತಿಗಳನ್ನು ಸಮತೋಲನಗೊಳಿಸುವ ಭಾರತೀಯ ಮೂಲದ ವಿಜ್ಞಾನ ಇದು ಎಂದು ತಜ್ಞರು ವಿವರಿಸುತ್ತಾರೆ. ಹಾಗಾದರೆ ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿ ಸಂಪತ್ತು ವೃದ್ಧಿಗಾಗಿ ನಾವು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರ ನೋಡೋಣ.
ಭಗವಾನ್ ಕುಬೇರ ಸಂಪತ್ತಿನ ದೇವರು. ಆತನನ್ನು ತೃಪ್ತಿಪಡಿಸಿದರೆ ನೀವು ಬಯಸುವ ಎಲ್ಲ ಸಂಪತ್ತು ಮತ್ತು ಸಮೃದ್ಧಿ ಒಲಿಯುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮುಖ್ಯ ಪ್ರಶ್ನೆ ಎಂದರೆ ಹಾಗಾದರೆ ಭಗವಾನ್ ಕುಬೇರನನ್ನು ಸಂತೋಷವಾಗಿಡುವುದು ಹೇಗೆ? ನಿಮ್ಮ ಸಂದೇಹವನ್ನು ನಾವು ಪರಿಹರಿಸುತ್ತೇವೆ.
- ನೈಋತ್ಯ ಮೂಲೆಯಲ್ಲಿ ಈಜುಕೊಳ, ಜಲಮೂಲಗಳನ್ನು ಸಾಮಾನ್ಯ ನೆಲ ಮಟ್ಟಕ್ಕಿಂತ ಕೆಳಗೆ ಇರಿಸಬೇಡಿ. ಈ ನಿಯಮ ಮನೆ, ಕಚೇರಿ ಅಥವಾ ಇತರ ಯಾವುದೇ ಕಟ್ಟಡಕ್ಕೆ ಅನ್ವಯವಾಗುತ್ತದೆ.
- ಕ್ಯಾಶ್ ಲಾಕರ್ ಅಥವಾ ಕ್ಯಾಶ್ ಕವಾಟು ದಕ್ಷಿಣ ಅಥವಾ ನೈಋತ್ಯ ಗೋಡೆಗೆ ಹತ್ತಿರದಲ್ಲಿ ಇರಿಸಿ. ಇದರಿಂದ ಕಪಾಟು ಉತ್ತರ ದಿಕ್ಕಿನಲ್ಲಿ ತೆರೆಯುತ್ತದೆ. ಉತ್ತರವು ಕುಬೇರನ ದಿಕ್ಕಾಗಿದ್ದು, ಇದರಿಂದ ಆತನಿಗೆ ಅದನ್ನು ಮತ್ತೆ ಮತ್ತೆ ತುಂಬಲು ಅನುವು ಮಾಡಿಕೊಟ್ಟಂತಾಗುತ್ತದೆ.
- ಕ್ಯಾಶ್ ಲಾಕರ್ ಅನ್ನು ಯಾವುದೇ ಬೀಮ್ ಅಡಿಯಲ್ಲಿ ಇರಿಸಬೇಡಿ. ಇದು ಕುಟುಂಬ ಅಥವಾ ವ್ಯವಹಾರದ ಮೇಲೆ ಸಾಕಷ್ಟು ಆರ್ಥಿಕ ಒತ್ತಡವನ್ನುಂಟು ಮಾಡುವ ಸಾಧ್ಯತೆ ಇದೆ.
- ಸಂಪತ್ತನ್ನು ಆಕರ್ಷಿಸುವ ಒಂದು ತಂತ್ರವೆಂದರೆ ನಿಮ್ಮ ಕ್ಯಾಶ್ ಲಾಕರ್ನ ಮುಂದೆ ಕನ್ನಡಿಯನ್ನು ಇಡುವುದು. ಇದರಿಂದ ಕನ್ನಡಿ ಕ್ಯಾಶ್ ಲಾಕರ್ ಅನ್ನು ಪ್ರತಿಬಿಂಬಿಸುತ್ತದೆ. ಇದು ನಿಮ್ಮ ಸಂಪತ್ತು ದ್ವಿಗುಣಗೊಳ್ಳುತ್ತಿದೆ ಎಂಬುದರ ಸಂಕೇತ ಎನ್ನಲಾಗಿದೆ.
- ಈಶಾನ್ಯ ಭಾಗವನ್ನು ಎಲ್ಲ ಸಮಯದಲ್ಲಿಯೂ ಗೊಂದಲ ಮುಕ್ತವಾಗಿಡಬೇಕು. ಈ ಭಾಗದಲ್ಲಿ ಮೆಟ್ಟಿಲು ಅಳವಡಿಸುವುದನ್ನು ತಪ್ಪಿಸಿ. ಯಂತ್ರೋಪಕರಣಗಳು ಸೇರಿದಂತೆ ಯಾವುದೇ ಭಾರವಾದ ವಸ್ತುಗಳನ್ನು ಈಶಾನ್ಯ ಮೂಲೆಯಲ್ಲಿ ಇಡಬೇಡಿ.
- ಮನೆಯ ನೈಋತ್ಯ ಭಾಗದಲ್ಲಿ ದೊಡ್ಡ ಮರಗಳನ್ನು ಹೊಂದುವುದು ಹಣಕಾಸು ಸ್ಥಿರತೆಗೆ ಕಾರಣವಾಗುತ್ತದೆ. ಇದು ಕುಟುಂಬ ಮತ್ತು ವ್ಯವಹಾರದಲ್ಲಿ ದುರದೃಷ್ಟ ಮತ್ತು ಅಪಘಾತಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
- ಯಾವಾಗಲೂ ಮನೆಯ ಕೇಂದ್ರ ಭಾಗವನ್ನು ಮುಕ್ತ ಪ್ರದೇಶವಾಗಿರಿಸಿಕೊಳ್ಳಿ. ಇದು ಬ್ರಹ್ಮಸ್ಥಾನವಾಗಿರುವುದರಿಂದ ಮನೆಯ ಈ ಭಾಗದಲ್ಲಿ ದೇವರ ಕೋಣೆ ಹೊರತುಪಡಿಸಿ ಯಾವುದೇ ನಿರ್ಮಾಣವನ್ನು ಎಂದಿಗೂ ಮಾಡಬೇಡಿ.
- ಎಲ್ಲ ಬಾಗಿಲುಗಳು ಮತ್ತು ಕಿಟಕಿಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ. ಅವು ಕೊಳಕಾಗಿದ್ದರೆ ಹಣದ ಹರಿವಿಗೆ ಅಡ್ಡಿಯಾಗುತ್ತದೆ.
- ಸೋರಿಕೆಯಾಗುವ ಯಾವುದೇ ನಳ್ಳಿಗಳನ್ನು ತಕ್ಷಣ ಬದಲಾಯಿಸಿ. ನೀರು ಸೋರಿಕೆಯಾಗುವುದು ಆರ್ಥಿಕ ನಷ್ಟವನ್ನು ಸೂಚಿಸುತ್ತದೆ.
- ಅಂಗಳದಲ್ಲಿ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ಇರಿಸಿ. ಇದು ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.
- ನೇರಳೆ ಬಣ್ಣ ಸಂಪತ್ತನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ನೇರಳೆ ಹೂವು ಬಿಡುವ ಸಸ್ಯವನ್ನು ಇರಿಸಿ. ಇಲ್ಲದಿದ್ದರೆ ನೇರಳೆ ಬಣ್ಣದ ಮಡಕೆಯಲ್ಲಿ ಮನಿ ಪ್ಲಾಂಟ್ ಅನ್ನು ಇರಿಸಬಹುದು.
ಇದನ್ನೂ ಓದಿ: Vastu Tips: ನಕಾರಾತ್ಮಕ ಶಕ್ತಿ ಹೊಡೆದೋಡಿಸಲು ಈ ವಾಸ್ತು ಟಿಪ್ಸ್ ಪಾಲಿಸಿ…