Site icon Vistara News

Turning 30 | ವಯಸ್ಸು ಮೂವತ್ತು, ಇದು ಈ 6 ಸತ್ಯಗಳನ್ನು ತಿಳಿಯಬೇಕಾದ ಹೊತ್ತು

turning 30

ಜೀವನದಲ್ಲಿ ಹಲವಾರು ಅಡೆತಡೆಗಳ ಮೂಲಕ ನಾವು ಪಾಠ ಕಲಿಯುತ್ತಾ ಹೋಗುತ್ತೇವೆ. ಜೀವನದಲ್ಲಿ ಪಕ್ವವಾಗಿ ಮುಂದುವರಿಯಲು ಯಶಸ್ಸು ಗಳಿಸಲು ಸರಿಯಾದ ಸಮಯದಲ್ಲಿ ಸರಿಯಾದ ಫಾಠಗಳನ್ನು ಕಲಿಯುತ್ತಾ ಹೋಗಬೇಕು. ಅದನ್ನು ಜೀವನದಲ್ಲಿ ಆಳವಡಿಸುತ್ತಾ, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಮತ್ತೇ ಆ ತಪ್ಪುಗಳನ್ನು ಮಾಡದಿರುವಂತೆ ಎಚ್ಚರಿಕೆ ವಹಿಸುತ್ತಾ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು. ಆಗ ಬದುಕು ಸಹಜವಾಗಿ ಸುಂದರವಾಗಿ ಆರಳುತ್ತದೆ.

ಸಾಮಾನ್ಯವಾಗಿ ಹಿರಿಯರು ಹೇಳುವ ಮಾತಿದೆ. ಆಯಾ ವಯಸ್ಸಿಗೆ ನಡೆಯಬೇಕಾದ್ದು ಸಹಜವಾಗಿ ನಡೆಯಬೇಕು ಎಂಬುದು. ಅಂದರೆ, ಎಲ್ಲರ ಜೀವನದಲ್ಲಿ ಒಂದಾದ ನಂತರ ಮತ್ತೊಂದು ಮಜಲು ಸಹಜವಾಗಿ ನಡೆಯುತ್ತಾ ಹೋಗಬೇಕೆಂಬುದು. ಆಗಷ್ಟೆ ಆಯಾ ಸ್ಥಾನಗಳ ಮೂಲಕ ಬದುಕು ಕಲಿಸುವ ಪಾಠಗಳನ್ನು ಅಷ್ಟೇ ಸಹಜವಾಗಿ ಕಲಿಯಬೇಕು ಎಂಬುದು ಅನುಭವಿಗಳ ಮಾತು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಯಸ್ಸಿನ ಆಧಾರದ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಯಾವ ವಯಸ್ಸಿನಲ್ಲಿ ಏನು ನಡೆಯಬೇಕೆಂದು ಬೇರೆಯವರು ನಿರ್ಧರಿಸುಬ ಕಾಲ ಹೋಗಿದೆ. ಆದರೂ. ವಯಸ್ಸಿನ ಆಧಾರದಲ್ಲಿ ೩೦ ಎಂಬ ಬಹು ಮುಖ್ಯವಾದ ಘಟ್ಟದಲ್ಲಿ ಪ್ರತಿಯೊಬ್ಬನೂ ಅರಿತಿರಬೇಕಾದ ಬದುಕಿನ ಸತ್ಯಗಳು ಈ ಕೆಳಗಿವೆ.

೧. ಹಣವೇ ಎಲ್ಲವೂ ಅಲ್ಲ: ಹಣವೆಂಬುದು ಬದುಕಿಗೆ ಬಹುಮುಖ್ಯವಾದರೂ ಹಣವೇ ಎಲ್ಲವೂ ಅಲ್ಲ ಎಂಬ ಸತ್ಯ ೩೦ರೊಳಗೆ ಅರಿವಾದರೆ ಒಳ್ಳೆಯದು. ೨೦ ವಯಸ್ಸು ದಾಟುತ್ತಿದ್ದಂತೆ ಶಿಕ್ಷಣ ಒಂದು ಹಂತಕ್ಕೆ ಮುಗಿಯುತ್ತಿದ್ದಂತೆ ಹಣ ಉದ್ಯೋಗದ ರೂಪದಲ್ಲಿ ಹೊಸತೊಂದು ಜಗತ್ತನ್ನು ಪರಿಚಯಿಸುತ್ತದೆ ನಿಜ. ಉದ್ಯೋಗ, ಹಣ ಎಂದು ದಿನಂಪ್ರತಿ ಕೆಲಸದ ಹಿಂದೆ ಬಿದ್ದು, ಪ್ರೀತಿ, ಸಂಬಂಧ, ಗೆಳೆತನ ಮುಂತಾದ ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕೊಡುವ ಖುಷಿಯನ್ನು ಮರೆತರೆ, ಮುಂದೆ ಯಾವ ಹಣ ಕೊಟ್ಟರೂ ಇವು ಮರಳಿ ಬಾರವು!

ಇದನ್ನೂ ಓದಿ: Dream meaning: ಈ ಹದಿನಾರು ಕನಸುಗಳು ಆಗಾಗ ಬೀಳುತ್ತಿದ್ದರೆ ಇದೇ ಅರ್ಥ

೨. ದೇಹವೇ ದೇಗುಲ: ಸಣ್ಣ ವಯಸ್ಸಿನಲ್ಲಿ ಯಾವ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿ ಬಾಧಿಸುವುದಿಲ್ಲ. ದಿನಕಳೆದಂತೆ, ವಯಸ್ಸು ಒಂದೊಂದೇ ಮೆಟ್ಟಿಲೇರುತ್ತಿದ್ದಂತೆ ಆರೋಗ್ಯ ಬಹಳ ಮುಖ್ಯ ಎಂಬ ಸತ್ಯ ಅರಿವಾಗಲು ಶುರುವಾಗುತ್ತದೆ. ಅದಕ್ಕಾಗಿ ಆರಂಭದಿಂದಲೇ ಆರೋಗ್ಯದತ್ತ ಗಮನ ಹರಿಸಬೇಕು. ಉತ್ತಮ ಆಹಾರ ಉತ್ತಮ ಆರೋಗ್ಯದ ಕೀಲಿ ಕೈ ಎಂಬುದನ್ನು ನೆನಪಿಡಬೇಕು.

೩. ಸೋಲೇ ಗೆಲುವಿನ ಸೋಪಾನ: ಕಲಿಕೆಯ ಹಂತದಲ್ಲಿ ಸೋಲು ಬಹಳ ಮುಖ್ಯ. ಸೋಲಿಲ್ಲದ ಸರದಾಋ ಯಾರೂ ಇಲ್ಲ. ಒಮ್ಮೆ ಎಡವಿದರೇ ಮೆಟ್ಟಲಿನ ಮಹತ್ವ ತಿಳಿಯೋದು. ಹಾಗಾಗಿ ಸೋತು ಸೋತು ತನ್ನ ಹಾದಿ ಗಟ್ಟಿ ಮಾಡಿಕೊಳ್ಳುವ ಹಂಬಲ ಇರಬೇಕು. ಅದು ಜೀವನದ ದಾರಿದೀಪ.

೪. ಒಳಗಿನ ದನಿಗೆ ಕಿವಿಯಾಗಿ: ಇನ್ನೊಬ್ಬರ ಮಾತುಗಳನ್ನು ಕೇಳಿ. ಆದರೆ ನಿಮ್ಮ ಒಳಗಿನ ದನಿಗೆ ಧ್ವನಿಯಾಗಿ. ನಿಮ್ಮ ಒಳಗಿನ ಆಳವಾದ ವಿಚಾರಗಳಷ್ಟೆ ನಿಮ್ಮವು ಎಂದು ನೆನಪಿಡಿ. ಹಾಗಾಗಿ ಎಂದಿಗೂ ನಿಮ್ಮ ದನಿಗೆ ಗಟ್ಟಿಯಾಗಿ ನಿಲ್ಲುವ ಅಭ್ಯಾಸ ರೂಢಿಸಿಕೊಳ್ಳಿ. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಿ.

ಇದನ್ನೂ ಓದಿ: ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು!

೫. ಎಲ್ಲವೂ ಅವರವರ ದೃಷ್ಟಿಕೋನ: ಜೀವನದಲ್ಲಿ ಪ್ರತಿಯೊಂದೂ ಮುಖ್ಯ. ಒಳ್ಳೆಯ ಉದೋಗ, ಆ ಮೂಲಕ ಹಣ, ಆರೋಗ್ಯ, ನೆಮ್ಮದಿ ಇತ್ಯಾದಿ ಇತ್ಯಾದಿ. ಆದರೆ ಯಾವುದು ಹೇಗೆ ಯಾವಾಗ ಎಷ್ಟು ಮುಖ್ಯವಾಗುತ್ತದೆ ಎಂಬ ಯೋಚನೆ ಇದ್ದರೆ ಅಗತ್ಯಕ್ಕನುಗುಣವಾಗಿ, ನಮ್ಮ ಆಸಕ್ತಿಗನುಗುಣವಾಗಿ ಬದುಕನ್ನು ಸಮೃದ್ಧವಾಗಿಸಬಹುದು.

೬. ನೀವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ: ಮನುಷ್ಯನ ಗುಣವೇ ಆಂಥದ್ದು, ತಾನು ಹೇಳಿದ್ದನ್ನು ಎಲ್ಲರೂ ಅನುಮೋದಿಸಬೇಕು ಎಂಬ ಇಚ್ಛೆ ಸಹಜ. ಆದರೆ, ಒಂದು ಸತ್ಯ ಗೊತ್ತಿರಬೇಕು. ತನ್ನ ಮಾತನ್ನು ಎಲ್ಲರೂ ಒಪ್ಪಿಕೊಳ್ಳದಿದ್ದರೂ ತನ್ನ ನಿಲುವು ಇದೇ. ಎಲ್ಲರನ್ನೂ ಎಲ್ಲದಕ್ಕೂ ಮೆಚ್ಚಿಸಲು ಸಾಧ್ಯವಿಲ್ಲ. ಈ ಎಲ್ಲ ಸತ್ಯಗಳು ೩೦ರೊಳಗೆ ಅರಿವಾದಾತ ಬದುಕಿಕೊಂಡಾನು.

Exit mobile version