Site icon Vistara News

Yoga for Relaxation: ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಈ ಯೋಗ ಮಾಡಬೇಕು; ಬಾಲಿವುಡ್ ಯೋಗ ಮಾಸ್ಟರ್ ವಿಡಿಯೊ

#image_title

ಮುಂಬೈ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಅದಕ್ಕೆಂದೇ ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗುತ್ತದೆ. ಈ ಯಾಂತ್ರಿಕ ಯುಗದಲ್ಲಿ ಮನಸ್ಸು ಚಂಚಲವಾಗುವುದು ಅಥವಾ ಒತ್ತಡ ಉಂಟಾಗುವುದು ಸಾಮಾನ್ಯ. ಅದನ್ನು ನಿಯಂತ್ರಿಸುವುಕ್ಕೆ ಯೋಗದಿಂದ ಸಾಧ್ಯ. ಯಾವ ಯೋಗ (Yoga for Relaxation) ಮಾಡಿದರೆ ಮನಸ್ಸನ್ನು ಶಾಂತಗೊಳಿಸಬಹುದು ಎಂದು ಬಾಲಿವುಡ್ ಮಂದಿಗೆ ಯೋಗಾಭ್ಯಾಸ ಹೇಳಿಕೊಡುವ ಅಂಶುಕಾ ಅವರೇ ತಿಳಿಸಿದ್ದಾರೆ. ಅಲಿಯಾ ಭಟ್, ಕರೀನಾ ಕಪೂರ್ ಅಂತಹ ಪ್ರಸಿದ್ಧ ನಟಿಯರಿಗೆ ಯೋಗ ಹೇಳಿಕೊಡುತ್ತಿರುವ ಅಂಶುಕಾ ಅವರ ವಿಡಿಯೊ ಇಲ್ಲಿದೆ.

ಇದನ್ನೂ ಓದಿ: ವಿಸ್ತಾರ TOP 10 NEWS : 7ನೇ ವೇತನ ಆಯೋಗದ ಜಾರಿ ಭರವಸೆಯಿಂದ ಹಿಡಿದು ಸಿಂಧೂರಿಗೆ ಬಿಗ್​ ರಿಲೀಫ್​ ತನಕದ ಪ್ರಮುಖ ಸುದ್ದಿಗಳಿವು
ಹಲವು ಆಸನಗಳಿರುವ ವಿಡಿಯೊವನ್ನು ಅಂಶುಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ, “ಶಾಂತ ಮನಸ್ಸು ಜಗತ್ತನ್ನು ಗೆಲ್ಲಬಲ್ಲದು. ನಾವೆಲ್ಲರೂ ವೇಗದ ಜೀವನವನ್ನು ನಡೆಸುತ್ತೇವೆ ಮತ್ತು ಅದರೊಂದಿಗೆ ಒತ್ತಡ ಮತ್ತು ಆತಂಕದ ಸಮಸ್ಯೆಗಳು ಬರುತ್ತವೆ. ಹೆಚ್ಚಿನ ಒತ್ತಡವು ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಸಹ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಯಾವುದೇ ರೀತಿಯ ದೈಹಿಕ ಚಲನೆಯು ತುಂಬಾ ಚಿಕಿತ್ಸಕವಾಗಿದೆ. ಈ ಯೋಗ ಭಂಗಿಗಳು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ನಿಮ್ಮ ದೇಹದ ಅರಿವು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ.


ಅಂಶುಕಾ ಪ್ರದರ್ಶಿಸಿದ ಯೋಗ ಆಸನಗಳಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಮಗುವಿನ ಭಂಗಿಯು (ಚೈಲ್ಡ್ ಪೋಸ್) ಬೆನ್ನುಮೂಳೆಯನ್ನು ಹಗುರಗೊಳಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸೈಡ್ ಟ್ವಿಸ್ಟ್‌ಗಳು ಕೆಳ ಮತ್ತು ಮೇಲಿನ ಹೊಟ್ಟೆಯ ನೋವನ್ನು ಕಡಿಮೆಯಾಗಿಸುತ್ತದೆ. ಬಟರ್‌ಫ್ಲೈ ಪೋಸ್ ಬೆನ್ನು, ಸೊಂಟ ಮತ್ತು ತೊಡೆಯ ಒಳಭಾಗವನ್ನು ಸಡಿಲಗೊಳಿಸುತ್ತದೆ. ವಿಂಡ್ ರಿಲೀವಿಂಗ್ ಪೋಸ್ ಗ್ಯಾಸ್ ಮತ್ತು ಹೊಟ್ಟೆ ಉಬ್ಬರಿಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾರ್ಪ್ಸ್ ಪೋಸ್ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

“ಯೋಗವು ಮನಸ್ಸನ್ನು ಶಾಂತಗೊಳಿಸುವ ಮೂಲಕ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಆಸನಗಳು ನಿಮ್ಮ ದೇಹವನ್ನು ಹೆಚ್ಚು ಶಾಂತಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಹಗುರಾಗಿಸುವ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅಂಶುಕಾ ತಿಳಿಸಿದ್ದಾರೆ.

Exit mobile version